ಜುಲೈ ತಿಂಗಳ ಕಾರು ಮಾರಾಟದಲ್ಲಿ ಶೇ.101ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಇಂಡಿಯಾ 2021ರ ಜುಲೈ ತಿಂಗಳ ಮಾರಾಟ ವರದಿಯನ್ನು ಪ್ರಕಟಿಸಿದೆ. ಈ ಮಾರಾಟ ವರದಿಯ ಪ್ರಕಾರ, ಕಳೆದ ತಿಂಗಳು ಎಂಜಿ ಮೋಟಾರ್ ಕಂಪನಿಯು 4225 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಜುಲೈ ತಿಂಗಳ ಕಾರು ಮಾರಾಟದಲ್ಲಿ ಶೇ.101ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಎಂಜಿ ಮೋಟಾರ್ ಕಂಪನಿಯು 2105 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.101 ರಷ್ಟು ಬೆಳವಣೆಗೆಯನ್ನು ಸಾಧಿಸಿದೆ. ಇದುವರೆಗೆ ಎಂಜಿ ಝಡ್ಎಸ್ ಇವಿ ಮಾದರಿಯು ಅತ್ಯಧಿಕ ಬುಕ್ಕಿಂಗ್ ಮತ್ತು ಚಿಲ್ಲರೆ ಮಾರಾಟವನ್ನು ದಾಖಲಿಸಿದೆ ಎಂದು ಎಂಜಿ ಹೇಳಿದೆ. ಇಂಧನ ಬೆಲೆ ಏರಿಕೆಯ ಪರಿಣಾಮ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಜುಲೈ ತಿಂಗಳ ಕಾರು ಮಾರಾಟದಲ್ಲಿ ಶೇ.101ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಇನ್ನು 2021ರ ಜೂನ್ ತಿಂಗಳಿನಲ್ಲಿ ಎಂಜಿ ಕಂಪನಿಯು 3558 ಯುನಿಟ್‌ಗಳನ್ನು ಮಾರಾಟಗೊಳಿಸಿತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.18.7 ರಷ್ಟು ಬೆಳವಣಿಗೆಯನ್ನು ಸಾಧಿಸುವಲ್ಲಿ ಎಂಜಿ ಕಂಪನಿಯು ಯಶಸ್ವಿಯಾಗಿದೆ.

ಜುಲೈ ತಿಂಗಳ ಕಾರು ಮಾರಾಟದಲ್ಲಿ ಶೇ.101ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಇಂಡಿಯಾದ ಮಾರಾಟ ನಿರ್ದೇಶಕ ರಾಕೇಶ್ ಸಿದಾನಾ ಅವರು ಮಾತನಾಡಿ, ಹೆಕ್ಟರ್ ಮತ್ತು ಝಡ್ಇವಿ ಮಾದರಿಗಳು ಮಾರಾಟದಲ್ಲಿ ಮತ್ತಷ್ಟು ವೇಗವನ್ನು ಪಡೆದುಕೊಂಡಿವೆ. ಆದರೆ ಚಿಪ್‌ಗಳ ತೀವ್ರ ಕೊರತೆಯು ಸ್ವಲ್ಪ ಸಮಯದವರೆಗೆ ಮುಂದುವರಿಯುತ್ತದೆ .

ಜುಲೈ ತಿಂಗಳ ಕಾರು ಮಾರಾಟದಲ್ಲಿ ಶೇ.101ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಒಟ್ಟಾರೆ ಗ್ರಾಹಕರ ಬೇಡಿಕೆ ಏರಿಕೆಯಾಗಬಹುದೆಂದು ನಾವು ನಿರೀಕ್ಷಿಸುತ್ತಿರುವಾಗ, ಕರೋನಾ ಮೂರನೇ ಅಲೆಯ ಆತಂಕದ ಬಗ್ಗೆಯು ನಾವು ಜಾಗರೂಕರಾಗಿರಬೇಕು. ಪ್ರಬಲ ಬೆಳವಣಿಗೆಯ ಜೊತೆಗೆ, ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್ (FADA) ನಡೆಸಿದ ಡೀಲರ್ ತೃಪ್ತಿ ಅಧ್ಯಯನದಲ್ಲಿ ಎಂಜಿನ್ ಎರಡನೇ ಸ್ಥಾನವನ್ನು ಗಳಿಸಿದೆ ಎಂದರು.

ಜುಲೈ ತಿಂಗಳ ಕಾರು ಮಾರಾಟದಲ್ಲಿ ಶೇ.101ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಎಂಜಿ ಕಂಪನಿಯು ತನ್ನ ಇವಿ(ಎಲೆಕ್ಟ್ರಿಕ್ ವೆಹಿಕಲ್) ಪೋರ್ಟ್ಫೋಲಿಯೊವನ್ನು ಹೊಸ ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ವಿಸ್ತರಿಸಲು ಮುಂದಾಗಿದೆ. ವರದಿಗಳ ಪ್ರಕಾರ, ಮುಂದಿನ ಎರಡು ವರ್ಷಗಳಲ್ಲಿ ಹೊಸ ಎಂಜಿ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟಯನ್ನು ಪ್ರವೇಶಿಸಲಿದೆ

ಜುಲೈ ತಿಂಗಳ ಕಾರು ಮಾರಾಟದಲ್ಲಿ ಶೇ.101ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಕರೋನಾ ಮತ್ತು ಉತ್ಪಾದನಾ ಸಾಮಗ್ರಿಗಳ (ವಿಶೇಷವಾಗಿ ಚಿಪ್ಸ್) ಕೊರತೆಯನ್ನು ಗಮನಿಸಿ ಹೊಸ ಎಂಜಿ ಎಲೆಕ್ಟ್ರಿಕ್ ಕಾರು ಎರಡು ವರ್ಷಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ ಎಂದು ಹೇಳಿದ್ದಾರೆ. ಉಳಿದಂತೆ ಹೊಸ ಎಲೆಕ್ಟ್ರಿಕ್ ಎಸ್‍ಯುವಿಯ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ.

ಜುಲೈ ತಿಂಗಳ ಕಾರು ಮಾರಾಟದಲ್ಲಿ ಶೇ.101ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಪ್ರಸ್ತುತ ಎಂಜಿ ಝಡ್ಎಸ್ ಇವಿ ಮಾದರಿಯಲ್ಲಿ 4.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿ. ಇದನ್ನು ಮೂರು-ಹಂತದ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟರ್‌ಗೆ ಜೋಡಿಸಲಾಗಿದೆ. ಇದು ಒಟ್ಟು 142.7 ಬಿಹೆಚ್‍ಪಿ ಮತ್ತು ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿ ಝಡ್ಎಸ್ ಇವಿ ಎಸ್‍ಯುವಿಯು 419 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಹೊಸ ಎಂಜಿ ಕಾರು ಕೂಡ ಉತ್ತಮ ರೇಂಜ್ ಅನ್ನು ಹೊಂದಿರಬಹುದು.

ಜುಲೈ ತಿಂಗಳ ಕಾರು ಮಾರಾಟದಲ್ಲಿ ಶೇ.101ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಹೊಸ ಒನ್ ಮಿಡ್ ಸೈಜ್ ಎಸ್‍ಯುವಿಯನ್ನು ಇತ್ತೀಚೆಗೆ ಜಾಗತಿಕವಾಗಿ ಅನಾವರಣಗೊಳಿಸಿತ್ತು. ಈ ಹೊಸ ಎಂಜಿ ಒನ್ ಎಸ್‍ಯುವಿಯು ಯುರೋಪಿಯನ್ ಸ್ಪೋರ್ಟಿ ಶೈಲಿಯ ವಿನ್ಯಾಸ ಮತ್ತು ಆಕರ್ಷಕ ಫೀಚರ್ಸ್ ಗಳನ್ನು ಒಳಗೊಂಡಿದೆ. ಹೊಸ ಎಂಜಿ ಒನ್ ಎಸ್‍ಯುವಿಯು ಆಲ್-ಇನ್-ಒನ್ ಮಾಡ್ಯುಲರ್ ಪ್ಲಾಟ್‌ಫಾರ್ಮ್‌ನ ಬ್ರ್ಯಾಂಡ್‌ನ ಹೊಸ ಸಿಗ್ಮಾ ಆರ್ಕಿಟೆಕ್ಚರ್ ಅನ್ನು ಆಧರಿಸಿದೆ.

ಜುಲೈ ತಿಂಗಳ ಕಾರು ಮಾರಾಟದಲ್ಲಿ ಶೇ.101ರಷ್ಟು ಬೆಳವಣಿಗೆ ಸಾಧಿಸಿದ ಎಂಜಿ ಮೋಟಾರ್

ಕಳೆದ ತಿಂಗಳಿನ ಕಾರು ಮಾರಾಟದಲ್ಲಿ ಎಂಜಿ ಮೋಟಾರ್ ಉತ್ತಮ ಬೆಳವಣಿಗೆಯನ್ನು ಕಂಡಿದೆ. ಮುಂದಿನ ದಿನಗಳಲ್ಲಿ ಎಂಜಿ ಕಾರುಗಳ ಮಾರಾಟವು ಮತ್ತಷ್ಟು ಹೆಚ್ಚಾಗಬಹುದು. ಆದರೆ ಕರೋನಾ ಮೂರನೇ ಅಲೆ ಮತ್ತು ಕಾರು ಉತ್ಪಾದನೆ ಸಾಮಾಗ್ರಿಗಳ ಕೊರತೆ ಎಂಜಿ ಕಂಪನಿಗೆ ದೊಡ್ಡ ಸವಾಲಾಗಿದೆ.

Most Read Articles

Kannada
English summary
MG Motor India Registers 101 Percent Growth Car Sales In July 2021. Read In Kannada.
Story first published: Monday, August 2, 2021, 10:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X