ಹೊಸ ಕಾರು ಮಾದರಿಗಾಗಿ ಹೊಸ ಯೋಜನೆಯೊಂದನ್ನು ಆರಂಭಿಸಿದ MG Motor

ಎಂಜಿ ಮೋಟಾರ್ ಕಂಪನಿಯು ಹೊಸ ಕಾರುಗಳ ಉತ್ಪಾದನೆಯಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸುವ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಲಾದ ಆಸ್ಟರ್ ಕಾರು ಮಾದರಿಯಾಗಿ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ.

ಹೊಸ ಕಾರು ಮಾದರಿಗಾಗಿ ಹೊಸ ಯೋಜನೆಯೊಂದನ್ನು ಆರಂಭಿಸಿದ MG Motor

ಇತ್ತೀಚೆಗೆ ಬಿಡುಗಡೆಯಾಗಿರುವ ಆಸ್ಟರ್ ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಾಗಿ ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಕಾರ್-ಎ-ಪ್ಲಾಟ್‌ಫಾರ್ಮ್ (ಸಿಎಎಪಿ) ಚಂದಾದಾರಿಕೆ ಮಾದರಿಯನ್ನು ಪ್ರಕಟಿಸಿದ್ದು, ಕಾರು ಮಾಲೀಕರು ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಹಲವಾರು ಗ್ರಾಹಕ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಹೊಸ ಕಾರು ಮಾದರಿಗಾಗಿ ಹೊಸ ಯೋಜನೆಯೊಂದನ್ನು ಆರಂಭಿಸಿದ MG Motor

ಎಂಜಿ ಕಂಪನಿಯು ತನ್ನ ದೃಷ್ಟಿಯನ್ನು ವಾಸ್ತವಕ್ಕೆ ಪರಿವರ್ತಿಸಿದಂತೆ ಕಾರ್-ಎ-ಪ್ಲಾಟ್‌ಫಾರ್ಮ್‌ ಉದ್ಯಮದ ಮೊದಲ ಪರಿಕಲ್ಪನೆಯಾಗಿದ್ದು, ಒಂದೇ ಪ್ಲ್ಯಾಟ್‌ಫಾರ್ಮ್ ಮೂಲಕ ಸೇವಾ ಪಾಲುದಾರರೊಂದಿಗೆ ವಿವಿಧ ಸೇವೆಗಳನ್ನು ನೀಡುತ್ತದೆ.

ಹೊಸ ಕಾರು ಮಾದರಿಗಾಗಿ ಹೊಸ ಯೋಜನೆಯೊಂದನ್ನು ಆರಂಭಿಸಿದ MG Motor

ಕಾರ್-ಎ-ಪ್ಲಾಟ್‌ಫಾರ್ಮ್ (ಸಿಎಎಪಿ) ಚಂದಾದಾರಿಕೆಯಲ್ಲಿ ಉಪಯುಕ್ತತೆ, ಮನರಂಜನೆ, ಭದ್ರತೆ, ಗ್ರಾಹಕರ ಪಾವತಿ ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿ ಗ್ರಾಹಕರ ಸೇವೆಗಳು ಲಭ್ಯವಿರಲಿದ್ದು, ಎಸ್‌ಯುವಿಯು ಬೇಡಿಕೆಯ ಮೇರೆಗೆ ಕಾರ್ ಸೇವೆಗಳು ಮತ್ತು ಚಂದಾದಾರಿಕೆಗಳನ್ನು ಒಳಗೊಂಡಿರುತ್ತದೆ.

ಹೊಸ ಕಾರು ಮಾದರಿಗಾಗಿ ಹೊಸ ಯೋಜನೆಯೊಂದನ್ನು ಆರಂಭಿಸಿದ MG Motor

ಇನ್ನು ಎಂಜಿ ಮೋಟಾರ್ ಕಂಪನಿಯು ಕಳೆದ ವಾರವಷ್ಟೇ ತನ್ನ ಹೊಚ್ಚ ಹೊಸ ಆಸ್ಟರ್ ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳು ಮತ್ತು ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ವಿವಿಧ ವೆರಿಯೆಂಟ್‌ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.78 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16.78 ಲಕ್ಷ ಬೆಲೆ ಹೊಂದಿದೆ.

ಹೊಸ ಕಾರು ಮಾದರಿಗಾಗಿ ಹೊಸ ಯೋಜನೆಯೊಂದನ್ನು ಆರಂಭಿಸಿದ MG Motor

ಹೊಸ ಕಾರಿನಲ್ಲಿ ಸ್ಟೈಲ್, ಸೂಪರ್, ಸ್ಮಾರ್ಟ್, ಶಾರ್ಪ್ ವೆರಿಯೆಂಟ್ ಬಿಡುಗಡೆ ಮಾಡಿದ್ದ ಎಂಜಿ ಕಂಪನಿಯು ಇದೀಗ ಹೊಸದಾಗಿ ಸ್ಯಾವಿ ಎನ್ನುವ ಟಾಪ್ ವೆರಿಯೆಂಟ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ಸ್ಮಾರ್ಟ್ ಮತ್ತು ಶಾರ್ಪ್ ನಡುವಿನ ಸ್ಥಾನದೊಂದಿಗೆ ಎಕ್ಸ್‌ಶೋರೂಂ ಪ್ರಕಾರ ರೂ. 15.78 ಲಕ್ಷ ಬೆಲೆ ಹೊಂದಿದೆ.

ಹೊಸ ಕಾರು ಮಾದರಿಗಾಗಿ ಹೊಸ ಯೋಜನೆಯೊಂದನ್ನು ಆರಂಭಿಸಿದ MG Motor

ಸ್ಯಾವಿ ಮಾದರಿಯು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಹೈ ಎಂಡ್ ಮಾದರಿಯಲ್ಲಿ ನೀಡಲಾಗುತ್ತಿರುವ ಎಡಿಎಎಸ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದ್ದು, ಹೊಸ ಆವೃತ್ತಿಯು ಹಲವಾರು ಐಷಾರಾಮಿ ಫೀಚರ್ಸ್‌ಗಳನ್ನು ಹೊಂದಿದೆ.

ಹೊಸ ಕಾರು ಮಾದರಿಗಾಗಿ ಹೊಸ ಯೋಜನೆಯೊಂದನ್ನು ಆರಂಭಿಸಿದ MG Motor

ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಆಕರ್ಷಕ ಬೆಲೆಯಲ್ಲಿ ಹೆಚ್ಚಿನ ಮಟ್ಟದ ತಂತ್ರಜ್ಞಾನ ಪ್ರೇರಣೆಯನ್ನು ಪಡೆದುಕೊಂಡಿರುವ ಆಸ್ಟರ್ ಕಾರು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೊಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಸ್ಪೋರ್ಟಿ ವಿನ್ಯಾಸದೊಂದಿಗೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಜೋಡಣೆ ಹೊಂದಿದೆ.

ಹೊಸ ಕಾರು ಮಾದರಿಗಾಗಿ ಹೊಸ ಯೋಜನೆಯೊಂದನ್ನು ಆರಂಭಿಸಿದ MG Motor

ಹೊಸ ಕಾರಿನಲ್ಲಿರುವ 1.5-ಲೀಟರ್ ಪೆಟ್ರೋಲ್ ಮಾದರಿಯು 5 ಸ್ಪೀಡ್ ಮ್ಯಾನುವಲ್ ಅಥವಾ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 108-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.3-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 138-ಬಿಎಚ್‌ಪಿ, 220-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹೊಸ ಕಾರು ಮಾದರಿಗಾಗಿ ಹೊಸ ಯೋಜನೆಯೊಂದನ್ನು ಆರಂಭಿಸಿದ MG Motor ಇಂಡಿಯಾ ಕಂಪನಿ

ಹೊಸ ಕಾರು ಭಾರತದ ಮೊದಲ ವ್ಯಯಕ್ತಿಕರಣಗೊಳಿಸಿದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸೌಲಭ್ಯ ಹೊಂದಿರುವ ಆಸ್ಟರ್ ಕಾರು ರಿಲಯನ್ಸ್ ಜಿಯೋದಿಂದ ಎರವಲು ಪಡೆಯಲಾದ ರಿಯಲ್-ಟೈಮ್ ಇನ್ಫೋಟೈನ್‌ಮೆಂಟ್ ಮತ್ತು ಟೆಲಿಮ್ಯಾಟಿಕ್ಸ್‌ಗಾಗಿ ಇ-ಸಿಮ್, ಐಒಟಿ ಟೆಕ್ ಅನ್ನು ಒಳಗೊಂಡಿರುವ ಹೊಸ ಕಾರು ಗರಿಷ್ಠ ಸುರಕ್ಷತೆ ಖಚಿತಪಡಿಸಲಿದೆ.

ಹೊಸ ಕಾರು ಮಾದರಿಗಾಗಿ ಹೊಸ ಯೋಜನೆಯೊಂದನ್ನು ಆರಂಭಿಸಿದ MG Motor ಇಂಡಿಯಾ ಕಂಪನಿ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಸೌಲಭ್ಯದೊಂದಿಗೆ ಮನರಂಜನೆ, ಕಾರಿನ ತಾಂತ್ರಿಕ ಅಂಶಗಳ ನ್ಯೂನತೆಗಳ ಪತ್ತೆ ಹಚ್ಚುವಲ್ಲಿ ಸಹಕಾರಿಯಾಗುವುದರ ಜೊತೆ ವಾಯ್ಸ್ ಅಸಿಸ್ಟ್ ಮೂಲಕ ಕಾರು ಚಾಲನೆಯನ್ನು ಸರಳಗೊಳಿಸುತ್ತದೆ.

ಹೊಸ ಕಾರು ಮಾದರಿಗಾಗಿ ಹೊಸ ಯೋಜನೆಯೊಂದನ್ನು ಆರಂಭಿಸಿದ MG Motor ಇಂಡಿಯಾ ಕಂಪನಿ

ಹೊಸ ಕಾರಿನಲ್ಲಿರುವ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ(ಎಡಿಎಎಸ್)ನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವಡ್ ಕೂಲಿಷನ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್, ಲೈನ್ ಡಿಫಾರ್ಚರ್ ಪ್ರಿವೆಷನ್, ಸ್ಪೀಡ್ ವಾರ್ನಿಂಗ್, ಇಂಟೆಲಿಜೆಂಟ್ ಮೋಡ್ ಹೊಂದಿರುವ ಸ್ಪಿಡ್ ಅಸಿಸ್ಟ್ ಸಿಸ್ಟಂ, ಮ್ಯಾನುವಲ್ ಮೋಡ್ ಹೊಂದಿರುವ ಸ್ಪೀಡ್ ಅಸಿಸ್ಟ್ ಸಿಸ್ಟಂ, ರಿಯರ್ ಡ್ರೈವ್ ಅಸಿಸ್ಟ್, ಲೈನ್ ಚೆಂಜ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ಇಂಟೆಲಿಜೆಂಟ್ ಹೆಡ್‌ಲ್ಯಾಂಪ್ ಲೈಟಿಂಗ್ಸ್ ಕಂಟ್ರೋಲ್‌ಗಳಲಿವೆ.

ಹೊಸ ಕಾರು ಮಾದರಿಗಾಗಿ ಹೊಸ ಯೋಜನೆಯೊಂದನ್ನು ಆರಂಭಿಸಿದ MG Motor ಇಂಡಿಯಾ ಕಂಪನಿ

ಆಕ್ಟಿವ್ ಸೇಫ್ಟಿ ಫೀಚರ್ಸ್‌ಗಳಲ್ಲಿ ಎಡಿಎಎಸ್ ತಂತ್ರಜ್ಞಾನವು ಅಗತ್ಯ ಸಂದರ್ಭಗಳಲ್ಲಿ ಅಟೊನೊಮಸ್ ಬ್ರೇಕಿಂಗ್ ಸೌಲಭ್ಯವಾಗಿಯೂ ಕಾರ್ಯ ನಿರ್ವಹಣೆ ಮಾಡಲಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಆರು ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್(ಇಎಸ್‌ಪಿ), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಹಿಲ್ ಡಿಸೆಂಟ್ ಮತ್ತು 360 ಡಿಗ್ರಿ ವ್ಯೂ ಕ್ಯಾಮೆರಾ ಸೌಲಭ್ಯಗಳಿವೆ.

ಹಾಗೆಯೇ ಕಾರು ಚಾಲನೆಗೆ ಪೂರಕವಾಗಿ ಹೊಸ ಆಸ್ಟರ್‌ನಲ್ಲಿ ಅರ್ಬನ್, ನಾರ್ಮಲ್ ಮತ್ತು ಡೈನಾಮಿಕ್ ಡ್ರೈವ್ ಮೋಡ್ ನೀಡಲಾಗಿದ್ದು, ವೆರಿಯೆಂಟ್‌ಗಳಿಗೆ ಅನುಗುಣವಾಗಿ ಕಾರಿನ ಫೀಚರ್ಸ್ ಮತ್ತು ಬೆಲೆ ನಿರ್ಧಾರವಾಗಲಿದೆ.

Most Read Articles

Kannada
English summary
Mg motor introduced industry first services under car as a platform
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X