ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳನ್ನು ಮರುಬಳಕೆ ಮಾಡಲು ಅಟೆರೊ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ (MG Motor) ಕಂಪನಿಯು ಅಟೆರೊ (Attero) ಕಂಪನಿಯ ಸಹಯೋಗದೊಂದಿಗೆ ಇತ್ತೀಚೆಗೆ ಸಂಪೂರ್ಣ ಬ್ಯಾಟರಿ ಮರು ಬಳಕೆಯನ್ನು ಮಾಡಿದೆ. ಈ ಎರಡು ಕಂಪನಿಗಳು ಈ ವರ್ಷದ ಮೇ ತಿಂಗಳಿನಲ್ಲಿ ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳನ್ನು ಮರುಬಳಕೆ ಮಾಡಲು ಕೈಜೋಡಿಸಿದ್ದವು. ಅಟೆರೊ ಕಂಪನಿಯು ಎಂಜಿ ಮೋಟಾರ್‌ನ ಗುರುಗ್ರಾಮ ಡೀಲರ್‌ಶಿಪ್‌ನಿಂದ 310 ಕೆ.ಜಿ ತೂಕದ ಬ್ಯಾಟರಿ ಜಂಕ್ ಅನ್ನು ಸಂಗ್ರಹಿಸಿ ಮರುಬಳಕೆ ಮಾಡಿದೆ.

ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳನ್ನು ಮರುಬಳಕೆ ಮಾಡಲು ಅಟೆರೊ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದೆ. ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ZS ಎಲೆಕ್ಟ್ರಿಕ್ ಕಾರ್ ಅನ್ನು ಮಾಡುತ್ತಿದೆ. ಜೊತೆಗೆ ಅಟೆರೊ ಕಂಪನಿಯ ಜೊತೆಗೂಡಿ ಬ್ಯಾಟರಿಗಳನ್ನು ಮರುಬಳಕೆ ಮಾಡುತ್ತಿದೆ. ಬ್ಯಾಟರಿಗಳಲ್ಲಿರುವ ಲೋಹ ಹಾಗೂ ಅದರಿಂದ ಪಡೆದ ಇತರ ವಸ್ತುಗಳಿಂದ ಹೊಸ ಬ್ಯಾಟರಿಗಳನ್ನು ತಯಾರಿಸಬಹುದು.

ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳನ್ನು ಮರುಬಳಕೆ ಮಾಡಲು ಅಟೆರೊ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಇದರ ಜೊತೆಗೆ ಎಂಜಿ ಮೋಟಾರ್ ಕಂಪನಿಯು ತನ್ನ ಹಲೋಲ್ ಉತ್ಪಾದನಾ ಘಟಕದಲ್ಲಿ 50% ನಷ್ಟು ಶಕ್ತಿಯನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದ ಪಡೆಯುತ್ತಿದೆ. ಕಂಪನಿಯು ಹಸಿರು ಶಕ್ತಿಯನ್ನು ಪಡೆಯಲು ರಾಜ್‌ಕೋಟ್‌ನಲ್ಲಿರುವ ಕ್ಲೀನ್‌ಮ್ಯಾಕ್ಸ್ ವಿಂಡ್ ಸೋಲಾರ್ ಹೈಬ್ರಿಡ್ ಪಾರ್ಕ್‌ನೊಂದಿಗೆ ಕೈಜೋಡಿಸಿದೆ. ಎಂಜಿ ಮೋಟಾರ್ ಕಂಪನಿಯು ತನ್ನ ಹಲೋಲ್ ಉತ್ಪಾದನಾ ಘಟಕಕ್ಕಾಗಿ 4.85 ಮೆ.ವ್ಯಾ ವಿಂಡ್ ಸೋಲಾರ್ ಹೈಬ್ರಿಡ್ ಶಕ್ತಿಯನ್ನು ಪಡೆಯುವುದಾಗಿ ತಿಳಿಸಿದೆ.

ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳನ್ನು ಮರುಬಳಕೆ ಮಾಡಲು ಅಟೆರೊ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಈ ಮೂಲಕ 15 ವರ್ಷಗಳಲ್ಲಿ ಸುಮಾರು ಎರಡು ಲಕ್ಷ ಮೆಟ್ರಿಕ್ ಟನ್ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಎಂಜಿ ಮೋಟಾರ್ ಕಂಪನಿ ಹೇಳಿದೆ. ಈ ಪ್ರಮಾಣವು 13 ಲಕ್ಷ ಮರಗಳನ್ನು ನೆಡುವುದಕ್ಕೆ ಸಮನಾಗಿದೆ. ಈ ಯೋಜನೆಯ ಬಗ್ಗೆ ಮಾತನಾಡಿರುವ ಎಂಜಿ ಮೋಟಾರ್ ಇಂಡಿಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ರಾಜೀವ್ ಚಾಬಾರವರು, ಈ ಕ್ರಮವು ಸುಸ್ಥಿರ ಭವಿಷ್ಯದ ಕಡೆಗೆ ಕಂಪನಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳನ್ನು ಮರುಬಳಕೆ ಮಾಡಲು ಅಟೆರೊ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಕಂಪನಿಯು ಸುಸ್ಥಿರ ಭವಿಷ್ಯದ ಕಡೆಗೆ ತನ್ನ ಬದ್ಧತೆಯನ್ನು ಖಾತ್ರಿಪಡಿಸಿದೆ. ಇದು ಶೂನ್ಯ ಹೊರಸೂಸುವಿಕೆ ವಾಹನಗಳನ್ನು ಅಳವಡಿಸಿಕೊಳ್ಳಲು ಹಾಗೂ ಪರಿಸರವನ್ನು ರಕ್ಷಿಸಲು ಅನೇಕರಿಗೆ ಉತ್ತೇಜನ ನೀಡುತ್ತದೆ ಎಂದು ಅವರು ಹೇಳಿದರು. ಈ ಸಹಯೋಗದ ಕುರಿತು ವಿವರಿಸಿದ ಕ್ಲೀನ್‌ಮ್ಯಾಕ್ಸ್‌ನ ಸಂಸ್ಥಾಪಕ ಹಾಗೂ ಎಂಡಿ ಕುಲದೀಪ್ ಜೈನ್ ರವರು ಎಂಜಿ ಮೋಟಾರ್ ಕಂಪನಿಗೆ ತಮ್ಮ ಹೈಬ್ರಿಡ್ ಫಾರಂನಿಂದ 50% ನಷ್ಟು ವಿದ್ಯುತ್ ಅನ್ನು ಪೂರೈಸಲಾಗುತ್ತಿದೆ ಎಂದು ಹೇಳಿದರು.

ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳನ್ನು ಮರುಬಳಕೆ ಮಾಡಲು ಅಟೆರೊ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಇದರಿಂದ ಎಂಜಿ ಮೋಟಾರ್ ಇಂಡಿಯಾಗೆ ನಿರ್ವಹಣಾ ವೆಚ್ಚದಲ್ಲಿ ಗಮನಾರ್ಹ ಉಳಿತಾಯವನ್ನು ಮಾಡಲು ಸಾಧ್ಯವಾಗಲಿದೆ. ಇದೇ ವೇಳೆ ಕಂಪನಿಯ ಕಾರ್ಬನ್ ಆಕ್ಸೈಡ್ ಹೊರಸೂಸುವಿಕೆ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಲಿದೆ. ಇನ್ನು ಎಂಜಿ ಮೋಟಾರ್ ಇಂಡಿಯಾ ತನ್ನ ಎರಡನೇ ಎಲೆಕ್ಟ್ರಿಕ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ.

ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳನ್ನು ಮರುಬಳಕೆ ಮಾಡಲು ಅಟೆರೊ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಈ ಎಲೆಕ್ಟ್ರಿಕ್ ಕಾರಿನ ಬಿಡುಗಡೆಯ ಕುರಿತು ಕಂಪನಿಯು ಸದ್ಯಕ್ಕೆ ಯಾವುದೇ ಮಾಹಿತಿಯನ್ನು ನೀಡಿಲ್ಲವಾದರೂ, ಮುಂದಿನ ಹಣಕಾಸು ವರ್ಷದ ಅಂತ್ಯದ ವೇಳೆಗೆ ಎಂಜಿ ಮೋಟಾರ್ ಇಂಡಿಯಾ ಈ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ಹೇಳಲಾಗಿದೆ. ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಈ ಹೊಸ ಎಲೆಕ್ಟ್ರಿಕ್ ಕಾರ್ ಅನ್ನು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಖಚಿತಪಡಿಸಿದೆ.

ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳನ್ನು ಮರುಬಳಕೆ ಮಾಡಲು ಅಟೆರೊ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಈಗ ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ZS EV ಎಲೆಕ್ಟ್ರಿಕ್ ಎಸ್‌ಯುವಿಯನ್ನು ಮಾತ್ರ ಮಾರಾಟ ಮಾಡುತ್ತಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 21 ಲಕ್ಷಗಳಿಂದ ರೂ. 24.68 ಲಕ್ಷಗಳಾಗಿದೆ. ಎಂಜಿ ಮೋಟಾರ್ ಇಂಡಿಯಾ ಕಂಪನಿಯು ತನ್ನ ಹೊಸ ಎಲೆಕ್ಟ್ರಿಕ್ ಕಾರ್ ಅನ್ನು ಇನ್ನೂ ಕಡಿಮೆ ಬೆಲೆಗೆ ಮಾರಾಟ ಮಾಡಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳನ್ನು ಮರುಬಳಕೆ ಮಾಡಲು ಅಟೆರೊ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಕಂಪನಿಯ ಈ ಹೊಸ ಎಲೆಕ್ಟ್ರಿಕ್ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 10 ಲಕ್ಷಗಳಿಂದ ರೂ. 15 ಲಕ್ಷಗಳವರೆಗೆ ಇರಬಹುದು ಎಂದು ಹೇಳಲಾಗಿದೆ. ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ಇನ್ನಷ್ಟು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆಯೇ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಎಂಜಿ ಮೋಟಾರ್ ಕಂಪನಿಯು ತನ್ನ ಜಾಗತಿಕ ಪೋರ್ಟ್‌ಫೋಲಿಯೊದಲ್ಲಿರುವ ಮಾದರಿಗಳಲ್ಲಿ ಒಂದನ್ನು ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ಹೇಳಲಾಗಿದೆ.

ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳನ್ನು ಮರುಬಳಕೆ ಮಾಡಲು ಅಟೆರೊ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಇನ್ನು ಎಂಜಿ ಮೋಟಾರ್ ಇಂಡಿಯಾ ಇತ್ತೀಚಿಗೆ ನಾನ್ ಫಂಗಬಲ್ ಟೋಕನ್ (ಎನ್‌ಎಫ್‌ಟಿ) ಬಿಡುಗಡೆಗೊಳಿಸಿದೆ. ಈ ಮೂಲಕ ಬ್ರಿಟಿಷ್ ಮೂಲದ ಆಟೋಮೊಬೈಲ್ ಕಂಪನಿಯು ಭಾರತದಲ್ಲಿ ಎನ್‌ಎಫ್‌ಟಿ ಆರಂಭಿಸಿದ ಮೊದಲ ಕಾರು ತಯಾರಕ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಂಪನಿಯು ಹೇಳಿರುವಂತೆ ಎನ್‌ಎಫ್‌ಟಿಯಿಂದ ಸಂಗ್ರಹಿಸಲಾಗುವ ಹಣವನ್ನು ಸಮುದಾಯ ಸೇವೆಗಾಗಿ ಬಳಸಲಾಗುತ್ತದೆ.

ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳನ್ನು ಮರುಬಳಕೆ ಮಾಡಲು ಅಟೆರೊ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಇಂಡಿಯಾ ಡಿಸೆಂಬರ್ 28ರಿಂದ ಎನ್‌ಎಫ್‌ಟಿ ಮಾರಾಟವನ್ನು ಆರಂಭಿಸಲಿದೆ. ಕಂಪನಿಯು ಬಿಡುಗಡೆಯ ಭಾಗವಾಗಿ 1,111 ಯುನಿಟ್ ಗಳನ್ನುಪರಿಚಯಿಸಲಿದೆ. ಕಂಪನಿಯು ತನ್ನ ಮೊದಲ ಎನ್‌ಎಫ್‌ಟಿಯನ್ನು KoineArt ನ NgageN ಪ್ಲಾಟ್‌ಫಾರಂನಲ್ಲಿ ಬಿಡುಗಡೆಗೊಳಿಸಲಿದೆ. ಇದನ್ನು ಎಂಜಿ ಕಂಪನಿಯವಹಿವಾಟುಗಳಿಗಾಗಿ ವಿಶೇಷವಾಗಿ ಆಪ್ಟಿಮೈಸ್ ಮಾಡಲಾಗಿದೆ.

ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳನ್ನು ಮರುಬಳಕೆ ಮಾಡಲು ಅಟೆರೊ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಎನ್‌ಎಫ್‌ಟಿ ಎಂದರೇನು?

ಎನ್‌ಎಫ್‌ಟಿ ಎಂದರೆ ನಾನ್ ಫಂಗಿಬಲ್ ಟೋಕನ್. ಎನ್‌ಎಫ್‌ಟಿ ಬಿಟ್‌ಕಾಯಿನ್ ಅಥವಾ ಇತರ ಕ್ರಿಪ್ಟೋಕರೆನ್ಸಿಗಳಂತೆಯೇ ಕ್ರಿಪ್ಟೋ ಟೋಕನ್ ಆಗಿದೆ. ಎನ್‌ಎಫ್‌ಟಿ ಒಂದು ರೀತಿಯ ಡಿಜಿಟಲ್ ಆಸ್ತಿಯಾಗಿದ್ದು, ಮೌಲ್ಯವನ್ನು ಉತ್ಪಾದಿಸುತ್ತದೆ. ಉದಾಹರಣೆಗೆ, ಇಬ್ಬರು ವ್ಯಕ್ತಿಗಳು ಬಿಟ್‌ಕಾಯಿನ್‌ಗಳನ್ನು ಹೊಂದಿದ್ದರೆ, ಅವರು ಅವುಗಳನ್ನು ವಿನಿಮಯ ಮಾಡಿಕೊಳ್ಳಬಹುದು.

ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳನ್ನು ಮರುಬಳಕೆ ಮಾಡಲು ಅಟೆರೊ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಡಿಜಿಟಲ್ ಕಲೆ, ಸಂಗೀತ, ಚಲನಚಿತ್ರ, ಆಟಗಳು ಅಥವಾ ಯಾವುದೇ ಸಂಗ್ರಹಣೆಯಂತಹ ಡಿಜಿಟಲ್ ಸ್ವತ್ತುಗಳಲ್ಲಿ ಎನ್‌ಎಫ್‌ಟಿಗಳನ್ನು ಕಾಣಬಹುದು. ಇವು ಅನನ್ಯ ಕಲಾಕೃತಿಗಳಾಗಿರುವುದರಿಂದ, ಪ್ರತಿಯೊಂದು ಟೋಕನ್ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಅವುಗಳನ್ನು ವಿನಿಮಯ ಮಾಡಿಕೊಳ್ಳಲಾಗುವುದಿಲ್ಲ. ಈ ಡಿಜಿಟಲ್ ಟೋಕನ್ ಮಾಲೀಕತ್ವದ ಮಾನ್ಯ ಪ್ರಮಾಣಪತ್ರವನ್ನು ಪಡೆಯುತ್ತದೆ.

ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳನ್ನು ಮರುಬಳಕೆ ಮಾಡಲು ಅಟೆರೊ ಜೊತೆ ಕೈಜೋಡಿಸಿದ ಎಂಜಿ ಮೋಟಾರ್

ಯಾವುದೇ ವ್ಯಕ್ತಿಯ ಕಲೆಯು ಈ ವರ್ಗಕ್ಕೆ ಸೇರುತ್ತದೆ, ಅವನ ಕಲೆಯು ಮಾಲೀಕತ್ವದ ಪ್ರಮಾಣಪತ್ರವನ್ನು ಪಡೆಯುತ್ತದೆ. ಡಿಜಿಟಲ್ ಪ್ರಮಾಣಪತ್ರವು ಅದನ್ನು ನಕಲಿಸಲಾಗುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ. ಜೊತೆಗೆ ಮಾಲೀಕರಿಗೆ ಹಕ್ಕುಸ್ವಾಮ್ಯದ ಹಕ್ಕನ್ನು ನೀಡುತ್ತದೆ.

Most Read Articles

Kannada
English summary
Mg motor joins with attero for battery recycling details
Story first published: Tuesday, December 21, 2021, 19:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X