ಹೆಕ್ಟರ್ ಫೇಸ್‌ಲಿಫ್ಟ್ ಮತ್ತು ಹೆಕ್ಟರ್ ಪ್ಲಸ್ 7 ಸೀಟ್ ಮಾದರಿಗಳನ್ನು ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ತನ್ನ ಹೆಕ್ಟರ್ ಫೇಸ್‌ಲಿಫ್ಟ್ ಹಾಗೂ ಹೆಕ್ಟರ್ ಪ್ಲಸ್ 7 ಸೀಟುಗಳ ಮಾದರಿಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೆಕ್ಟರ್ ಫೇಸ್‌ಲಿಫ್ಟ್ ಬೆಲೆ ಎಕ್ಸ್ ಶೋರೂಂ ದರದಂತೆ ರೂ.12.89 ಲಕ್ಷಗಳಾದರೆ, ಹೆಕ್ಟರ್ ಪ್ಲಸ್ 7 ಸೀಟುಗಳ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.13.34 ಲಕ್ಷಗಳಾಗಿದೆ.

ಹೆಕ್ಟರ್ ಫೇಸ್‌ಲಿಫ್ಟ್ ಮತ್ತು ಹೆಕ್ಟರ್ ಪ್ಲಸ್ 7 ಸೀಟ್ ಮಾದರಿಗಳನ್ನು ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಎಂಜಿ ಹೆಕ್ಟರ್ ಫೇಸ್‌ಲಿಫ್ಟ್‌ನ ಹೊರಭಾಗ, ಶೈಲಿ ಹಾಗೂ ಇಂಟಿರಿಯರ್'ನಲ್ಲಿ ಹಲವಾರು ಫೀಚರ್ ಹಾಗೂ ಎಕ್ವಿಪ್ ಮೆಂಟ್'ಗಳ ಮೂಲಕ ಅಪ್​ಡೇಟ್ ಮಾಡಲಾಗಿದೆ. ಇಂದಿನಿಂದ ದೇಶಾದ್ಯಂತವಿರುವ ಕಂಪನಿಯ ಡೀಲರ್'ಗಳು ಹಾಗೂ ಕಂಪನಿಯ ವೆಬ್‌ಸೈಟ್‌ ಮೂಲಕ ಎಂಜಿ ಹೆಕ್ಟರ್ ಫೇಸ್‌ಲಿಫ್ಟ್‌ನ ಬುಕ್ಕಿಂಗ್ ಅನ್ನು ಆರಂಭಿಸಲಾಗಿದೆ.

ಹೆಕ್ಟರ್ ಫೇಸ್‌ಲಿಫ್ಟ್ ಮತ್ತು ಹೆಕ್ಟರ್ ಪ್ಲಸ್ 7 ಸೀಟ್ ಮಾದರಿಗಳನ್ನು ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಎಂಜಿ ಹೆಕ್ಟರ್ ಫೇಸ್‌ಲಿಫ್ಟ್‌ ಎಸ್‌ಯುವಿಯನ್ನು ನಾಲ್ಕು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಇದರ ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.18.32 ಲಕ್ಷಗಳಾಗಿದೆ. ಈ ಎಸ್‌ಯುವಿಯು ಡೀಲರ್'ಗಳನ್ನು ತಲುಪಿರುವ ಕಾರಣಕ್ಕೆ ವಿತರಣೆಯನ್ನು ಶೀಘ್ರದಲ್ಲಿಯೇ ಆರಂಭಿಸುವ ಸಾಧ್ಯತೆಗಳಿವೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹೆಕ್ಟರ್ ಫೇಸ್‌ಲಿಫ್ಟ್ ಮತ್ತು ಹೆಕ್ಟರ್ ಪ್ಲಸ್ 7 ಸೀಟ್ ಮಾದರಿಗಳನ್ನು ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಹೊಸ ಎಂಜಿ ಹೆಕ್ಟರ್‌ನಲ್ಲಿ ಹೊಸ ಗ್ರಿಲ್ ಅಳವಡಿಸಲಾಗಿದೆ. ಹಳೆಯ ಮಾದರಿಗೆ ಹೋಲಿಸಿದರೆ ಹೊಸ ವಿನ್ಯಾಸದ 18 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ನೀಡಲಾಗಿದೆ. ಮುಂಭಾಗದಲ್ಲಿ ಎಲ್ಇಡಿ ಡಿಆರ್ ಎಲ್, ಫಾಗ್ ಲ್ಯಾಂಪ್, ಎಲ್ಇಡಿ ಹೆಡ್ ಲ್ಯಾಂಪ್ ಹೊಂದಿರುವ ದೊಡ್ಡ ಏರ್ ಡ್ಯಾಮ್'ಗಳನ್ನು ನೀಡಲಾಗಿದೆ.

ಹೆಕ್ಟರ್ ಫೇಸ್‌ಲಿಫ್ಟ್ ಮತ್ತು ಹೆಕ್ಟರ್ ಪ್ಲಸ್ 7 ಸೀಟ್ ಮಾದರಿಗಳನ್ನು ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಇಂಟಿರಿಯರ್ ಹಾಗೂ ಫೀಚರ್

ಹೊಸ ಎಸ್‌ಯುವಿಯ ಇಂಟಿರಿಯರ್ ಬಗ್ಗೆ ಹೇಳುವುದಾದರೆ, ಹಳೆಯ ಮಾದರಿಯಲ್ಲಿರುವ ಕಪ್ಪು ಥೀಮ್‌ನ ಬದಲಿಗೆ ಹೊಸ ಡ್ಯುಯಲ್ ಟೋನ್ ಇಂಟಿರಿಯರ್ ನೀಡಲಾಗಿದೆ. ಇದರಲ್ಲಿ ವೈರ್‌ಲೆಸ್ ಚಾರ್ಜಿಂಗ್, ಅಪ್​ಡೇಟ್ ಮಾಡಲಾದ ಐ-ಸ್ಮಾರ್ಟ್ ಕನೆಕ್ಟಿವಿಟಿ ಟೆಕ್ನಾಲಜಿಯನ್ನು ನೀಡಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೆಕ್ಟರ್ ಫೇಸ್‌ಲಿಫ್ಟ್ ಮತ್ತು ಹೆಕ್ಟರ್ ಪ್ಲಸ್ 7 ಸೀಟ್ ಮಾದರಿಗಳನ್ನು ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಈ ಅಪ್‌ಡೇಟ್‌ನಿಂದಾಗಿ ಈಗ ಎಕ್ಸ್ ಟಿರಿಯರ್ ಅನ್ನು ಸಂಪರ್ಕಿಸಿ, ಹವಾಮಾನ ಮಾಹಿತಿಯನ್ನು ಪಡೆಯಬಹುದು. ಈಗ ಹಿಂದಿ ಕಮಾಂಡ್ ಫೀಚರ್ ಜೊತೆಗೆ ಇಂಗ್ಲಿಷ್ ಕಮಾಂಡ್ ಅನ್ನು ಸಹ ಸೇರಿಸಲಾಗಿದೆ.

ಹೆಕ್ಟರ್ ಫೇಸ್‌ಲಿಫ್ಟ್ ಮತ್ತು ಹೆಕ್ಟರ್ ಪ್ಲಸ್ 7 ಸೀಟ್ ಮಾದರಿಗಳನ್ನು ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಹೊಸ ಹೆಕ್ಟರ್ ಆಟೋ ಡಿಮ್ಮಿಂಗ್ ಐಆರ್ ವಿಎಂ, 10.4-ಇಂಚಿನ ಇನ್ಫೋಟೇನ್ ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಈ ಸಿಸ್ಟಂ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪವರ್ಡ್ ಟೇಲ್‌ಗೇಟ್, ರೇರ್ ಎಸಿ ವೆಂಟ್, ಡ್ಯುಯಲ್-ಪೆನ್ ಸನ್‌ರೂಫ್, ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಹಲವಾರು ಫೀಚರ್'ಗಳನ್ನು ಹೊಂದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೆಕ್ಟರ್ ಫೇಸ್‌ಲಿಫ್ಟ್ ಮತ್ತು ಹೆಕ್ಟರ್ ಪ್ಲಸ್ 7 ಸೀಟ್ ಮಾದರಿಗಳನ್ನು ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಎಂಜಿ ಹೆಕ್ಟರ್ ಪ್ಲಸ್ 7 ಸೀಟರ್

ಹೊಸ ಹೆಕ್ಟರ್ ಪ್ಲಸ್ 7 ಸೀಟರ್ ಮಾದರಿಯು, 6 ಸೀಟರ್ ಮಾದರಿಯಲ್ಲಿರುವಂತಹ ಇಂಟಿರಿಯರ್ ಹಾಗೂ ಎಕ್ಸ್ ಟಿರಿಯರ್ ಅನ್ನು ಹೊಂದಿದೆ. ಆದರೆ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟಿನ ಬದಲಿಗೆ ಬೆಂಚ್ ಸೀಟನ್ನು ನೀಡಲಾಗಿದೆ.

ಹೆಕ್ಟರ್ ಫೇಸ್‌ಲಿಫ್ಟ್ ಮತ್ತು ಹೆಕ್ಟರ್ ಪ್ಲಸ್ 7 ಸೀಟ್ ಮಾದರಿಗಳನ್ನು ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಹೆಕ್ಟರ್ ಪ್ಲಸ್ 7 ಸೀಟರ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.13.34 ಲಕ್ಷಗಳಿಂದ ರೂ.18.32 ಲಕ್ಷಗಳಾದರೆ, 6 ಸೀಟರ್ ಗಳ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.15.99 ಲಕ್ಷಗಳಿಂದ ರೂ.19.12 ಲಕ್ಷಗಳಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೆಕ್ಟರ್ ಫೇಸ್‌ಲಿಫ್ಟ್ ಮತ್ತು ಹೆಕ್ಟರ್ ಪ್ಲಸ್ 7 ಸೀಟ್ ಮಾದರಿಗಳನ್ನು ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಹೊಸ ಎಂಜಿನ್

ಹೊಸ ಹೆಕ್ಟರ್ ಪ್ಲಸ್ 7 ಸೀಟರ್ ಮಾದರಿಯಲ್ಲಿ ಹೆಕ್ಟರ್‌ನಲ್ಲಿರುವಂತಹ ಎಂಜಿನ್ ಅಳವಡಿಸಲಾಗಿದೆ. ಇವುಗಳಲ್ಲಿ 1.5 ಲೀಟರ್ ಪೆಟ್ರೋಲ್ ಹಾಗೂ 2.0 ಲೀಟರ್ ಡೀಸೆಲ್ ಎಂಜಿನ್ ಗಳು ಸೇರಿವೆ.

ಹೆಕ್ಟರ್ ಫೇಸ್‌ಲಿಫ್ಟ್ ಮತ್ತು ಹೆಕ್ಟರ್ ಪ್ಲಸ್ 7 ಸೀಟ್ ಮಾದರಿಗಳನ್ನು ಬಿಡುಗಡೆಗೊಳಿಸಿದ ಎಂಜಿ ಮೋಟಾರ್

1.5 ಲೀಟರ್ ಪೆಟ್ರೋಲ್ ಎಂಜಿನ್ 141 ಬಿಹೆಚ್‌ಪಿ ಪವರ್ ಹಾಗೂ 250 ಎನ್ಎಂ ಟಾರ್ಕ್ ಉತ್ಪಾದಿಸಿದರೆ, 2.0 ಲೀಟರ್ ಡೀಸೆಲ್ ಎಂಜಿನ್ 168 ಬಿಹೆಚ್‌ಪಿ ಪವರ್ ಹಾಗೂ 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೆಕ್ಟರ್ ಫೇಸ್‌ಲಿಫ್ಟ್ ಮತ್ತು ಹೆಕ್ಟರ್ ಪ್ಲಸ್ 7 ಸೀಟ್ ಮಾದರಿಗಳನ್ನು ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಸೌಮ್ಯ ಹೈಬ್ರಿಡ್ ಮಾದರಿಯನ್ನು ಪೆಟ್ರೋಲ್ ಎಂಜಿನ್'ನೊಂದಿಗೆ ನೀಡಲಾಗುವುದು. ಇದರಲ್ಲಿ 6 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ. 6 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆಯ್ಕೆಯನ್ನು ಹೊಂದಿದೆ.

ಹೆಕ್ಟರ್ ಫೇಸ್‌ಲಿಫ್ಟ್ ಮತ್ತು ಹೆಕ್ಟರ್ ಪ್ಲಸ್ 7 ಸೀಟ್ ಮಾದರಿಗಳನ್ನು ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ಎಲ್ಲಾ ಮೂರು ಮಾದರಿಗಳ ಮಾರಾಟವನ್ನು ಇಂದಿನಿಂದ ಆರಂಭಿಸಿದೆ. ಗ್ರಾಹಕರು ತಮ್ಮ ಹತ್ತಿರದ ಡೀಲರ್'ಗಳನ್ನು ಸಂಪರ್ಕಿಸಿ ಈ ಮಾದರಿಗಳನ್ನು ಬುಕ್ಕಿಂಗ್ ಮಾಡಬಹುದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೆಕ್ಟರ್ ಫೇಸ್‌ಲಿಫ್ಟ್ ಮತ್ತು ಹೆಕ್ಟರ್ ಪ್ಲಸ್ 7 ಸೀಟ್ ಮಾದರಿಗಳನ್ನು ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ಸಂಪೂರ್ಣ ಸಿದ್ಧತೆಗಳೊಂದಿಗೆ ಹೊಸ ವರ್ಷಕ್ಕೆ ಕಾಲಿಟ್ಟಿದೆ. ಈಗ ಹೆಕ್ಟರ್ ಎಸ್‌ಯುವಿಯು ಗ್ರಾಹಕರಿಂದ ಹೇಗೆ ಪ್ರತಿಕ್ರಿಯೆಯನ್ನು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
MG Motor launched new Hector Facelift and Hector Plus 7 seater in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X