ಉದ್ಯೋಗಿಗಳಿಗಾಗಿ ಉಚಿತ ಲಸಿಕೆ ಅಭಿಯಾನ ಆರಂಭಿಸಿದ ಎಂಜಿ ಮೋಟಾರ್

18ರಿಂದ 44 ವರ್ಷದೊಳಗಿನ ಜನರಿಗೆ ದೇಶಾದ್ಯಂತ ಹಲವು ಸ್ಥಳಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ವಾಹನ ತಯಾರಕ ಕಂಪನಿಗಳು ತಮ್ಮ ಉದ್ಯೋಗಿಗಳಿಗಾಗಿ ಲಸಿಕೆ ಅಭಿಯಾನವನ್ನು ಆರಂಭಿಸಿವೆ.

ಉದ್ಯೋಗಿಗಳಿಗಾಗಿ ಉಚಿತ ಲಸಿಕೆ ಅಭಿಯಾನ ಆರಂಭಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಸಹ ದೇಶಾದ್ಯಂತ ತನ್ನ ಉದ್ಯೋಗಿಗಳಿಗೆ ಕೋವಿಡ್ ಲಸಿಕೆ ಅಭಿಯಾನವನ್ನು ಆರಂಭಿಸಿದೆ. ಕಂಪನಿಯು ತನ್ನ ಗುರುಗ್ರಾಮ ಹಾಗೂ ಹ್ಯಾಲೊಲ್ ಉತ್ಪಾದನಾ ಘಟಕಗಳ ಜೊತೆಗೆ ಕಂಪನಿಯ ಎಲ್ಲಾ ಸ್ಥಳೀಯ ಕಚೇರಿಗಳಲ್ಲಿ ತನ್ನ ಉದ್ಯೋಗಿಗಳಿಗೆ ಉಚಿತ ಲಸಿಕೆ ನೀಡುತ್ತಿದೆ.

ಉದ್ಯೋಗಿಗಳಿಗಾಗಿ ಉಚಿತ ಲಸಿಕೆ ಅಭಿಯಾನ ಆರಂಭಿಸಿದ ಎಂಜಿ ಮೋಟಾರ್

ಅಭಿಯಾನ ಆರಂಭಿಸಿದ ಮೊದಲ ದಿನವೇ ಕಂಪನಿಯು 400 ಉದ್ಯೋಗಿಗಳಿಗೆ ಕೋವಿಡ್ ಲಸಿಕೆ ನೀಡಿದೆ. ಈ ಅಭಿಯಾನಕ್ಕಾಗಿ ಕಂಪನಿಯು ಸ್ಥಳೀಯ ಪ್ರಾಧಿಕಾರಗಳೊಂದಿಗೆ ಕೈಜೋಡಿಸಿದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಉದ್ಯೋಗಿಗಳಿಗಾಗಿ ಉಚಿತ ಲಸಿಕೆ ಅಭಿಯಾನ ಆರಂಭಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಇತ್ತೀಚೆಗಷ್ಟೇ ತನ್ನ ಉತ್ಪಾದನಾ ಘಟಕದಲ್ಲಿ 7 ದಿನಗಳ ಕಾಲ ವಾಹನ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿತ್ತು. ಈ ಅವಧಿಯಲ್ಲಿ ಕಂಪನಿಯು ತನ್ನ ಉತ್ಪಾದನಾ ಘಟಕದಲ್ಲಿ ಆಕ್ಸಿಜನ್ ಉತ್ಪಾದಿಸಿ ಆಸ್ಪತ್ರೆಗಳಿಗೆ ನೀಡಲಿದೆ.

ಉದ್ಯೋಗಿಗಳಿಗಾಗಿ ಉಚಿತ ಲಸಿಕೆ ಅಭಿಯಾನ ಆರಂಭಿಸಿದ ಎಂಜಿ ಮೋಟಾರ್

ಆಕ್ಸಿಜನ್ ಉತ್ಪಾದನೆಗಾಗಿ ಕಂಪನಿಯು ದೇವ ನಂದನ್ ಗ್ಯಾಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಆಶ್ರಯಿಸಿದೆ. ಕಂಪನಿಯು ಗಂಟೆಗೆ ಸಾಮರ್ಥ್ಯಕ್ಕಿಂತ 15%ನಷ್ಟು ಹೆಚ್ಚು ಆಕ್ಸಿಜನ್ ಉತ್ಪಾದಿಸುತ್ತಿದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಉದ್ಯೋಗಿಗಳಿಗಾಗಿ ಉಚಿತ ಲಸಿಕೆ ಅಭಿಯಾನ ಆರಂಭಿಸಿದ ಎಂಜಿ ಮೋಟಾರ್

ಈ ಪ್ರಮಾಣವನ್ನು ಮುಂದಿನ ಕೆಲವು ದಿನಗಳಲ್ಲಿ 50%ಗೆ ಹೆಚ್ಚಿಸಲು ಕಂಪನಿಯು ನಿರ್ಧರಿಸಿದೆ. ಎಂಜಿ ಮೋಟಾರ್ಸ್ ಕರೋನಾ ಸಂತ್ರಸ್ತರ ಕುಟುಂಬಗಳಿಗೆ ನೆರವಾಗುತ್ತಿದೆ. ಕಂಪನಿಯು ಸಾಮಾಜಿಕ ಸೇವೆಗಳಿಗಾಗಿ ಸೆವಾ ಎಂಬ ವಿಭಾಗವನ್ನು ಹೊಂದಿದೆ.

ಉದ್ಯೋಗಿಗಳಿಗಾಗಿ ಉಚಿತ ಲಸಿಕೆ ಅಭಿಯಾನ ಆರಂಭಿಸಿದ ಎಂಜಿ ಮೋಟಾರ್

ಜಿಎಂಇಆರ್‌ಎಸ್ ಆಸ್ಪತ್ರೆಯಲ್ಲಿ ಕರೋನಾದಿಂದ ಬಳಲುತ್ತಿರುವವರ ಕುಟುಂಬಗಳಿಗೆ ಕಂಪನಿಯು ಆಹಾರ ಪ್ಯಾಕೆಟ್‌ಗಳನ್ನು ಒದಗಿಸುತ್ತಿದೆ. ಇದಲ್ಲದೆ ಸೋಂಕಿತರ ಚಲನೆಗಾಗಿ ಕಂಪನಿಯು ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೆಕ್ಟರ್ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಿದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಉದ್ಯೋಗಿಗಳಿಗಾಗಿ ಉಚಿತ ಲಸಿಕೆ ಅಭಿಯಾನ ಆರಂಭಿಸಿದ ಎಂಜಿ ಮೋಟಾರ್

ಇದರ ಜೊತೆಗೆ ಎಂಜಿ ಮೋಟಾರ್ ಕಂಪನಿಯು ಕರೋನಾ ವೈರಸ್ ಸೋಂಕಿಗೆ ತುತ್ತಾಗಿರುವ ನೌಕರರ ಕುಟುಂಬಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್'ಗಳನ್ನು ಒದಗಿಸುತ್ತಿದೆ.

ಉದ್ಯೋಗಿಗಳಿಗಾಗಿ ಉಚಿತ ಲಸಿಕೆ ಅಭಿಯಾನ ಆರಂಭಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಇಂಡಿಯಾ ಬಗ್ಗೆ:

1924ರಲ್ಲಿ ಇಂಗ್ಲೆಂಡಿನಲ್ಲಿ ಸ್ಥಾಪನೆಯಾದ ಮೋರಿಸ್ ಗ್ಯಾರೇಜ್ ಕಂಪನಿಯ ಸ್ಪೋರ್ಟ್ಸ್ ಕಾರುಗಳು, ರೋಡ್ಸ್ಟರ್‌ಗಳು ಹಾಗೂ ಕ್ಯಾಬ್ರಿಯೊಲೆಟ್'ಗಳು ವಿಶ್ವಾದ್ಯಂತ ಜನಪ್ರಿಯವಾಗಿವೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಉದ್ಯೋಗಿಗಳಿಗಾಗಿ ಉಚಿತ ಲಸಿಕೆ ಅಭಿಯಾನ ಆರಂಭಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯ ವಾಹನಗಳನ್ನು ಬ್ರಿಟಿಷ್ ಪ್ರಧಾನ ಮಂತ್ರಿಗಳು, ಬ್ರಿಟಿಷ್ ರಾಜ ಮನೆತನದವರು ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಬಳಸಿದ್ದಾರೆ.ಎಂಜಿ ಮೋಟಾರ್ ಕಂಪನಿಯು ಕಳೆದ 97 ವರ್ಷಗಳಲ್ಲಿ ಆಟೋ ಮೊಬೈಲ್ ಉದ್ಯಮದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.

ಉದ್ಯೋಗಿಗಳಿಗಾಗಿ ಉಚಿತ ಲಸಿಕೆ ಅಭಿಯಾನ ಆರಂಭಿಸಿದ ಎಂಜಿ ಮೋಟಾರ್

ಗುಜರಾತ್‌ನ ಹ್ಯಾಲೊಲ್‌ನಲ್ಲಿರುವ ಎಂಜಿ ಮೋಟಾರ್ ಕಂಪನಿಯ ಅತ್ಯಾಧುನಿಕ ಉತ್ಪಾದನಾ ಘಟಕವು ವರ್ಷಕ್ಕೆ 80,000 ವಾಹನಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಈ ಘಟಕದಲ್ಲಿ ಸುಮಾರು 2,500 ಉದ್ಯೋಗಿಗಳಿದ್ದಾರೆ.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಉದ್ಯೋಗಿಗಳಿಗಾಗಿ ಉಚಿತ ಲಸಿಕೆ ಅಭಿಯಾನ ಆರಂಭಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ಎಂಜಿ ಹೆಕ್ಟರ್, ಹೆಕ್ಟರ್ ಪ್ಲಸ್, ಎಂಜಿ ಝಡ್‌ಎಸ್ ಇವಿ, ಹಾಗೂ ಎಂಜಿ ಗ್ಲೋಸ್ಟರ್ ಕಾರುಗಳನ್ನು ಮಾರಾಟ ಮಾಡುತ್ತದೆ. ಈ ಕಾರುಗಳು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿವೆ.

Most Read Articles

Kannada
English summary
MG Motor launches free vaccination drive for its employees. Read in Kannada.
Story first published: Thursday, May 6, 2021, 17:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X