ಹೆಚ್ಚಿದ ಬೇಡಿಕೆ: ಎಂಜಿ ಕಾರುಗಳ ಖರೀದಿಗೆ ಗ್ರಾಹಕರು ಇಷ್ಟು ದಿನಗಳ ಕಾಲ ಕಾಯಲೇಬೇಕು!

ಕೋವಿಡ್ ಪರಿಣಾಮ ಸ್ವಂತ ವಾಹನಗಳ ಬಳಕೆಯಲ್ಲಿ ಸಾಕಷ್ಟು ಏರಿಕೆಯಾಗಿದ್ದು, ಇದೇ ಕಾರಣಕ್ಕೆ ಹೊಸ ವಾಹನ ಮಾರಾಟವು ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿವೆ. ಮಧ್ಯಮ ಕ್ರಮಾಂಕದ ಕಾರು ಮಾರಾಟದಲ್ಲಿ ಎಂಜಿ ಮೋಟಾರ್ ಕೂಡಾ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದು, ಹೊಸ ಕಾರುಗಳಿಗೆ ಬುಕ್ಕಿಂಗ್ ನಂತರ ಹೆಚ್ಚಿನ ಅವಧಿಗೆ ಕಾಯಬೇಕಾಗುತ್ತದೆ.

ಹೆಚ್ಚಿದ ಬೇಡಿಕೆ: ಎಂಜಿ ಕಾರುಗಳ ಖರೀದಿಗೆ ಗ್ರಾಹಕರು ಇಷ್ಟು ದಿನಗಳ ಕಾಲ ಕಾಯಲೇಬೇಕು!

ಹೊಸ ವಾಹನ ಖರೀದಿಗಾಗಿ ಬುಕ್ಕಿಂಗ್ ಸಲ್ಲಿಸಿದ ನಂತರ ಗ್ರಾಹಕರು ವಾಹನಗಳ ಬೇಡಿಕೆ ಮತ್ತು ಉತ್ಪಾದನಾ ಪ್ರಮಾಣದ ಆಧಾರದ ಮೇಲೆ ಇಂತಿಷ್ಟು ದಿನಗಳ ಕಾಯಲೇಬೇಕಿದ್ದು, ಎಂಜಿ ಕಾರುಗಳನ್ನು ಖರೀದಿಸುವ ಗ್ರಾಹಕರು ಕನಿಷ್ಠ 2 ರಿಂದ 3 ತಿಂಗಳು ಕಾಲ ಕಾಯಬೇಕಾಗುತ್ತದೆ. ಗ್ರಾಹಕರ ಕಾಯುವಿಕೆ ಅವಧಿಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ನಿರ್ಧಾರವಾಗಲಿದ್ದು, ಟಾಪ್ ಎಂಡ್ ಮಾದರಿಗಳು ಕಡಿಮೆ ಅವಧಿಯಲ್ಲಿ ವಿತರಣೆಯಾಗಲಿದ್ದರೆ ಬೆಸ್ ವೆರಿಯೆಂಟ್‌ಗಳ ಖರೀದಿಗೆ ಹೆಚ್ಚು ಕಾಯಬೇಕಾಗುತ್ತದೆ.

ಹೆಚ್ಚಿದ ಬೇಡಿಕೆ: ಎಂಜಿ ಕಾರುಗಳ ಖರೀದಿಗೆ ಗ್ರಾಹಕರು ಇಷ್ಟು ದಿನಗಳ ಕಾಲ ಕಾಯಲೇಬೇಕು!

ಬೇಡಿಕೆಗೆ ಅನುಗುಣವಾಗಿ ಪೂರೈಕೆ ಹೆಚ್ಚಿಸಿರುವ ಎಂಜಿ ಮೋಟಾರ್ ಕಂಪನಿಯು ಕಾರುಗಳ ಖರೀದಿಗೆ ಕನಿಷ್ಠ 2 ರಿಂದ 3 ತಿಂಗಳು ಕಾಯಬೇಕಿರುವುದು ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಹೊಸ ಕಾರುಗಳ ಮೂಲಕ ಕಂಪನಿಯು ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಹೆಚ್ಚಿದ ಬೇಡಿಕೆ: ಎಂಜಿ ಕಾರುಗಳ ಖರೀದಿಗೆ ಗ್ರಾಹಕರು ಇಷ್ಟು ದಿನಗಳ ಕಾಲ ಕಾಯಲೇಬೇಕು!

ಇನ್ನು ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ಕಾರು ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯನ್ನು ಆರಂಭಿಸಿ ಎರಡು ವರ್ಷ ಪೂರ್ಣಗೊಳ್ಳುತ್ತಿದ್ದು, ಕಾರು ಮಾರಾಟದಲ್ಲಿ ತನ್ನದೆ ಆದ ವೈಶಿಷ್ಟ್ಯತೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಹೆಚ್ಚಿದ ಬೇಡಿಕೆ: ಎಂಜಿ ಕಾರುಗಳ ಖರೀದಿಗೆ ಗ್ರಾಹಕರು ಇಷ್ಟು ದಿನಗಳ ಕಾಲ ಕಾಯಲೇಬೇಕು!

ಗುಜರಾತ್‌ನಲ್ಲಿರುವ ಹೊಲಾಲ್ ಕಾರು ಉತ್ಪಾದನಾ ಘಟಕದಲ್ಲಿ ಕಾರು ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸುತ್ತಿರುವ ಎಂಜಿ ಮೋಟಾರ್ ಕಂಪನಿಯು ವಿವಿಧ ಕಾರು ಉತ್ಪನ್ನಗಳೊಂದಿಗೆ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಹೊಂದಿರುವ ಹೊಸ ಕಾರು ಉತ್ಪಾದನಾ ಘಟಕದೊಂದಿಗೆ ಹೆಚ್ಚಿನ ಮಟ್ಟದಲ್ಲಿ ಕಾರು ಉತ್ಪಾದನೆ ಕೈಗೊಳ್ಳುತ್ತಿದೆ.

ಹೆಚ್ಚಿದ ಬೇಡಿಕೆ: ಎಂಜಿ ಕಾರುಗಳ ಖರೀದಿಗೆ ಗ್ರಾಹಕರು ಇಷ್ಟು ದಿನಗಳ ಕಾಲ ಕಾಯಲೇಬೇಕು!

ಭಾರತದಲ್ಲಿ ಆರಂಭಿಕವಾಗಿ ರೂ. 3 ಸಾವಿರ ಕೋಟಿ ಆರಂಭಿಕ ಬಂಡವಾಳದೊಂದಿಗೆ ಆರಂಭವಾದ ಎಂಜಿ ಮೋಟಾರ್ ಹೊಸ ಕಾರು ಉತ್ಪಾದನಾ ಘಟಕವು ಇದುವರೆಗೆ 50 ಸಾವಿರಕ್ಕೂ ಹೆಚ್ಚು ಯುನಿಟ್ ಹೆಕ್ಟರ್ ಕಾರುಗಳನ್ನು ಉತ್ಪಾದನೆ ಕೈಗೊಂಡಿದ್ದು, ಆರಂಭದಲ್ಲಿ ಪ್ರತಿ ತಿಂಗಳು 2 ಸಾವಿರ ಯುನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದ ಹೊಸ ಉತ್ಪಾದನಾ ಘಟಕವು ಇದೀಗ 3 ಸಾವಿರಕ್ಕೆ ತಲುಪಿದೆ.

ಹೆಚ್ಚಿದ ಬೇಡಿಕೆ: ಎಂಜಿ ಕಾರುಗಳ ಖರೀದಿಗೆ ಗ್ರಾಹಕರು ಇಷ್ಟು ದಿನಗಳ ಕಾಲ ಕಾಯಲೇಬೇಕು!

ಭಾರತದಲ್ಲಿ ಸದ್ಯ ಹೆಕ್ಟರ್, ಹೆಕ್ಟರ್ ಪ್ಲಸ್, ಜೆಡ್ಎಸ್ ಎಲೆಕ್ಟ್ರಿಕ್ ಮತ್ತು ಗ್ಲೊಸ್ಟರ್ ಎಸ್‌ಯುವಿ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಹೆಚ್ಚಿದ ಬೇಡಿಕೆ: ಎಂಜಿ ಕಾರುಗಳ ಖರೀದಿಗೆ ಗ್ರಾಹಕರು ಇಷ್ಟು ದಿನಗಳ ಕಾಲ ಕಾಯಲೇಬೇಕು!

ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿರುವ ಎಂಜಿ ಮೋಟಾರ್ ಕಂಪನಿಯು ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟಕ್ಕಾಗಿ ಭರ್ಜರಿ ಸಿದ್ದತೆ ನಡೆಸಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೆಚ್ಚಿದ ಬೇಡಿಕೆ: ಎಂಜಿ ಕಾರುಗಳ ಖರೀದಿಗೆ ಗ್ರಾಹಕರು ಇಷ್ಟು ದಿನಗಳ ಕಾಲ ಕಾಯಲೇಬೇಕು!

ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ತನ್ನ ಐದನೇ ಕಾರು ಮಾದರಿಯಾಗಿ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯೊಂದನ್ನು ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರು ಸೆಗ್ಮೆಂಟ್ ಕಾರು ಮಾದರಿಯಲ್ಲೇ ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಪವರ್‌ಫುಲ್ ಎಂಜಿನ್ ಆಯ್ಕೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಹೆಚ್ಚಿದ ಬೇಡಿಕೆ: ಎಂಜಿ ಕಾರುಗಳ ಖರೀದಿಗೆ ಗ್ರಾಹಕರು ಇಷ್ಟು ದಿನಗಳ ಕಾಲ ಕಾಯಲೇಬೇಕು!

ಹೊಸ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯ ಮೂಲಕ ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿರುವ ಎಂಜಿ ಮೋಟಾರ್ ಕಂಪನಿಯು ಸದ್ಯ ಹೊಸ ಕಾರನ್ನು ಜೆಡ್ಎಸ್ ಪೆಟ್ರೋಲ್ ಮಾದರಿಯಾಗಿ ಪರೀಕ್ಷೆ ಕೈಗೊಂಡಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಹೆಚ್ಚಿದ ಬೇಡಿಕೆ: ಎಂಜಿ ಕಾರುಗಳ ಖರೀದಿಗೆ ಗ್ರಾಹಕರು ಇಷ್ಟು ದಿನಗಳ ಕಾಲ ಕಾಯಲೇಬೇಕು!

ಸ್ಟ್ಯಾಂಡರ್ಡ್ ಹೆಕ್ಟರ್ ಮಾದರಿಗಿಂತಲೂ ಕೆಳ ದರ್ಜೆಯ ಕಾರು ಮಾದರಿಯಾಗಿ ಮಾರಾಟಗೊಳ್ಳಲಿರುವ ಹೊಸ ಕಾರು ಮಾರುತಿ ಎಸ್-ಕ್ರಾಸ್, ರೆನಾಲ್ಟ್ ಡಸ್ಟರ್, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಹೊಸ ಕಾರು ಆರಂಭಿಕವಾಗಿ ರೂ.10 ಲಕ್ಷದೊಳಗೆ ಬೆಲೆ ಹೊಂದಿರಲಿದೆ.

Most Read Articles

Kannada
English summary
MG Motor India Officially Announces Waiting Period For All Models.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X