ಎಂಜಿ ಮೋಟಾರ್ ಕಂಪನಿಯ ಹೊಸ ಕಾರಿನಲ್ಲಿ ಇಂಟರ್ ನೆಟ್ ಸೌಲಭ್ಯ ಒದಗಿಸಲಿದೆ ರಿಲಯನ್ಸ್ ಜಿಯೋ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಭಾರತದ ಜನಪ್ರಿಯ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ ಜೊತೆ ಕೈಜೋಡಿಸಿದೆ ಎಂದು ವರದಿಯಾಗಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹೊಸ ಎಸ್‌ಯುವಿಯ ಸಲುವಾಗಿ ಈ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಎಂಜಿ ಮೋಟಾರ್ ಕಂಪನಿಯ ಹೊಸ ಕಾರಿನಲ್ಲಿ ಇಂಟರ್ ನೆಟ್ ಸೌಲಭ್ಯ ಒದಗಿಸಲಿದೆ ರಿಲಯನ್ಸ್ ಜಿಯೋ

ಹೊಸ ಎಸ್‌ಯುವಿಯಲ್ಲಿ ಇಂಟರ್ ನೆಟ್ ಕನೆಕ್ಟಿವಿಟಿ ಸೌಲಭ್ಯ ಒದಗಿಸಲು ಇಂಗ್ಲೆಂಡ್ ಮೂಲದ ಎಂಜಿ ಮೋಟಾರ್ ಕಂಪನಿಯು ಭಾರತೀಯ ಮೂಲದ ರಿಲಯನ್ಸ್ ಜಿಯೋ ಜೊತೆ ಪಾಲುದಾರಿಕೆ ಮಾಡಿ ಕೊಂಡಿದೆ. ಎಂಜಿ ಮೋಟಾರ್ ಇಂಡಿಯಾ ಇಂದು ಈ ಸಹಭಾಗಿತ್ವದ ಕುರಿತು ಅಧಿಕೃತವಾಗಿ ಘೋಷಿಸಿದೆ.

ಎಂಜಿ ಮೋಟಾರ್ ಕಂಪನಿಯ ಹೊಸ ಕಾರಿನಲ್ಲಿ ಇಂಟರ್ ನೆಟ್ ಸೌಲಭ್ಯ ಒದಗಿಸಲಿದೆ ರಿಲಯನ್ಸ್ ಜಿಯೋ

ಎಂಜಿ ಮೋಟಾರ್ ಕಂಪನಿಯು ಹೊಸ ಮಧ್ಯಮ ಗಾತ್ರದ ಎಸ್‌ಯುವಿಯನ್ನು ಅಭಿವೃದ್ಧಿಪಡಿಸುತ್ತಿದೆ. ಈಗ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ರೂಪದಲ್ಲಿ ಮಾರಾಟವಾಗುತ್ತಿರುವ ಝಡ್‌ಎಸ್ ಎಸ್‌ಯುವಿಯನ್ನು ಶೀಘ್ರದಲ್ಲಿಯೇ ಪೆಟ್ರೋಲ್ ಎಂಜಿನ್ ನಲ್ಲಿ ಬಿಡುಗಡೆಗೊಳಿಸಲಾಗುವುದು.

ಎಂಜಿ ಮೋಟಾರ್ ಕಂಪನಿಯ ಹೊಸ ಕಾರಿನಲ್ಲಿ ಇಂಟರ್ ನೆಟ್ ಸೌಲಭ್ಯ ಒದಗಿಸಲಿದೆ ರಿಲಯನ್ಸ್ ಜಿಯೋ

ಈ ಎಸ್‌ಯುವಿಯಲ್ಲಿ ಇಂಟರ್ ನೆಟ್ ಸೌಲಭ್ಯವನ್ನು ಒದಗಿಸುವ ಸಲುವಾಗಿಯೇ ಎಂಜಿ ಕಂಪನಿ ರಿಲಯನ್ಸ್ ಜಿಯೋ ಜೊತೆ ಪಾಲುದಾರಿಕೆ ಮಾಡಿ ಕೊಂಡಿದೆ. ರಿಲಯನ್ಸ್ ಜಿಯೋ 5 ಜಿ ಸೇವೆಯನ್ನು ಭಾರತದಲ್ಲಿ ಶೀಘ್ರವೇ ಆರಂಭಿಸಲು ಸಜ್ಜಾಗಿದೆ. ಕಂಪನಿಯು ಸದ್ಯಕ್ಕೆ ವೇಗದ 4 ಜಿ ಸೇವೆಯನ್ನು ನೀಡುತ್ತಿದೆ.

ಎಂಜಿ ಮೋಟಾರ್ ಕಂಪನಿಯ ಹೊಸ ಕಾರಿನಲ್ಲಿ ಇಂಟರ್ ನೆಟ್ ಸೌಲಭ್ಯ ಒದಗಿಸಲಿದೆ ರಿಲಯನ್ಸ್ ಜಿಯೋ

ಈ ಸಹಭಾಗಿತ್ವದ ಮೂಲಕ ಹೊಸ ಎಸ್‌ಯುವಿಯಲ್ಲಿ ಈ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ. ಇದರಿಂದ ದೂರದ ಪ್ರಯಾಣದ ಸಮಯದಲ್ಲಿ ನಿರಂತರ ಇಂಟರ್ ನೆಟ್ ಸೇವೆಯನ್ನು ಒದಗಿಸಲು ಸಾಧ್ಯವಾಗುತ್ತದೆ.

ಎಂಜಿ ಮೋಟಾರ್ ಕಂಪನಿಯ ಹೊಸ ಕಾರಿನಲ್ಲಿ ಇಂಟರ್ ನೆಟ್ ಸೌಲಭ್ಯ ಒದಗಿಸಲಿದೆ ರಿಲಯನ್ಸ್ ಜಿಯೋ

ಈ ಸಹಭಾಗಿತ್ವದ ನಂತರ ಜಿಯೋ ಕಂಪನಿಯು ಹೊಸ ಎಸ್‌ಯುವಿಗಾಗಿ ಇನ್ಫೋಟೈನ್ಮೆಂಟ್ ಸಿಸ್ಟಂ ಅಭಿವೃದ್ಧಿಪಡಿಸಲು ನಿರ್ಧರಿಸಿದೆ. ಇದು ನೈಜ-ಸಮಯದ ಟೆಲಿಮ್ಯಾಟಿಕ್ಸ್ ಸೌಲಭ್ಯವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ.

ಎಂಜಿ ಮೋಟಾರ್ ಕಂಪನಿಯ ಹೊಸ ಕಾರಿನಲ್ಲಿ ಇಂಟರ್ ನೆಟ್ ಸೌಲಭ್ಯ ಒದಗಿಸಲಿದೆ ರಿಲಯನ್ಸ್ ಜಿಯೋ

ಜಿಯೋ ಸೇವೆಯು ಕೇವಲ ಝಡ್‌ಎಸ್ ಎಸ್‌ಯುವಿಯಲ್ಲಿ ಮಾತ್ರವಲ್ಲದೆ ಎಂಜಿ ಮೋಟಾರ್ ಕಂಪನಿಯು ಭವಿಷ್ಯದಲ್ಲಿ ಬಿಡುಗಡೆಗೊಳಿಸಲಿರುವ ಬಹುತೇಕ ಎಲ್ಲಾ ಕಾರುಗಳಲ್ಲಿಯೂ ಕಾಣಿಸಿಕೊಳ್ಳುವ ನಿರೀಕ್ಷೆಗಳಿವೆ.

ಎಂಜಿ ಮೋಟಾರ್ ಕಂಪನಿಯ ಹೊಸ ಕಾರಿನಲ್ಲಿ ಇಂಟರ್ ನೆಟ್ ಸೌಲಭ್ಯ ಒದಗಿಸಲಿದೆ ರಿಲಯನ್ಸ್ ಜಿಯೋ

ಐಷಾರಾಮಿ ವಾಹನಗಳ ರೀತಿಯಲ್ಲಿಯೇ ಭಾರತೀಯ ಗ್ರಾಹಕರು ಹೈಟೆಕ್ ವಾಹನಗಳತ್ತ ಒಲವು ಹೊಂದಿದ್ದಾರೆ. ಈ ಕಾರಣಕ್ಕೆ ಪ್ರಮುಖ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳಲ್ಲಿ ಇಂಟರ್ ನೆಟ್ ಕನೆಕ್ಟಿವಿಟಿ ನೀಡಲು ನಿರ್ಧರಿಸಿವೆ.

ಎಂಜಿ ಮೋಟಾರ್ ಕಂಪನಿಯ ಹೊಸ ಕಾರಿನಲ್ಲಿ ಇಂಟರ್ ನೆಟ್ ಸೌಲಭ್ಯ ಒದಗಿಸಲಿದೆ ರಿಲಯನ್ಸ್ ಜಿಯೋ

ಈ ಸೌಲಭ್ಯದ ಮೂಲಕ ವಾಹನದ ಬಗ್ಗೆ ಪ್ರಪಂಚದ ಯಾವುದೇ ಮೂಲೆಯಿಂದಲೂ ವಿವಿಧ ಮಾಹಿತಿಗಳನ್ನು ಪಡೆಯಬಹುದು ಎಂಬುದು ಗಮನಾರ್ಹ. ಎಂಜಿ ಮೋಟಾರ್ ಕಂಪನಿಯು 2019 ರಲ್ಲಿ ದೇಶಿಯ ಮಾರುಕಟ್ಟೆಗೆ ಕಾಲಿಟ್ಟಿತು.

ಎಂಜಿ ಮೋಟಾರ್ ಕಂಪನಿಯ ಹೊಸ ಕಾರಿನಲ್ಲಿ ಇಂಟರ್ ನೆಟ್ ಸೌಲಭ್ಯ ಒದಗಿಸಲಿದೆ ರಿಲಯನ್ಸ್ ಜಿಯೋ

ಇಂಗ್ಲೆಂಡ್ ಮೂಲದ ಎಂಜಿ ಮೋಟಾರ್ ಕಂಪನಿಯು ಚೀನಾದ ಒಡೆತನದ ಕಂಪನಿಯಾಗಿದೆ. ಕಂಪನಿಯು ಹೆಕ್ಟರ್, ಹೆಕ್ಟರ್ ಪ್ಲಸ್, ಝಡ್‌ಎಸ್ ಇವಿ ಎಸ್‌ಯುವಿ ಹಾಗೂ ಗ್ಲೋಸೆಸ್ಟರ್ ಕಾರುಗಳನ್ನು ಮಾರಾಟ ಮಾಡುತ್ತದೆ.

ಎಂಜಿ ಮೋಟಾರ್ ಕಂಪನಿಯ ಹೊಸ ಕಾರಿನಲ್ಲಿ ಇಂಟರ್ ನೆಟ್ ಸೌಲಭ್ಯ ಒದಗಿಸಲಿದೆ ರಿಲಯನ್ಸ್ ಜಿಯೋ

ಇವುಗಳಲ್ಲಿ ಝಡ್‌ಎಸ್ ಇವಿ ಎಸ್‌ಯುವಿಯನ್ನು ಹೊರತುಪಡಿಸಿ ಉಳಿದೆಲ್ಲ ಕಾರುಗಳು ಪೆಟ್ರೋಲ್ ಚಾಲಿತವಾಗಿವೆ. ಝಡ್‌ಎಸ್ ಇವಿ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿರುವ ಪ್ರೀಮಿಯಂ ಎಲೆಕ್ಟ್ರಿಕ್ ಕಾರ್ ಆಗಿದೆ.

ಎಂಜಿ ಮೋಟಾರ್ ಕಂಪನಿಯ ಹೊಸ ಕಾರಿನಲ್ಲಿ ಇಂಟರ್ ನೆಟ್ ಸೌಲಭ್ಯ ಒದಗಿಸಲಿದೆ ರಿಲಯನ್ಸ್ ಜಿಯೋ

ಈ ಕಾರಿನ ಬೆಲೆ ರೂ. 20.99 ಲಕ್ಷಗಳಾಗಿದೆ. ಈ ಎಲೆಕ್ಟ್ರಿಕ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹುಂಡೈ ಕೋನಾ ಎಲೆಕ್ಟ್ರಿಕ್ ಕಾರು ಹಾಗೂ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಎಂಜಿ ಮೋಟಾರ್ ಕಂಪನಿಯ ಹೊಸ ಕಾರಿನಲ್ಲಿ ಇಂಟರ್ ನೆಟ್ ಸೌಲಭ್ಯ ಒದಗಿಸಲಿದೆ ರಿಲಯನ್ಸ್ ಜಿಯೋ

ಝಡ್‌ಎಸ್ ಇವಿ ಎಸ್‌ಯುವಿಯ ಆಧಾರದ ಮೇಲೆ ಹೊಸ ಮಧ್ಯಮ ಗಾತ್ರದ ಎಸ್‌ಯು‌ವಿಯನ್ನು ಬಿಡುಗಡೆಗೊಳಿಸಲಾಗುತ್ತದೆ. ಈ ಎಸ್‌ಯುವಿಯನ್ನು ಆಸ್ಟರ್ ಹೆಸರಿನಲ್ಲಿ ಮಾರಾಟ ಮಾಡುವ ನಿರೀಕ್ಷೆಗಳಿವೆ. ಈ ಎಸ್‌ಯುವಿಯು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

Most Read Articles

Kannada
English summary
Mg motor partners with reliance jio for upcoming new car details
Story first published: Tuesday, August 3, 2021, 21:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X