ಫೋರ್ಟಮ್ ಚಾರ್ಜ್ ಸಹ ಭಾಗಿತ್ವದಲ್ಲಿ ಹೊಸ ಚಾರ್ಜಿಂಗ್ ಕೇಂದ್ರ ತೆರೆದ ಎಂಜಿ ಮೋಟಾರ್ ಇಂಡಿಯಾ

ಖ್ಯಾತ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ಇಂಡಿಯಾ, ಫೋರ್ಟಮ್ ಚಾರ್ಜ್ ಅಂಡ್ ಡ್ರೈವ್ ಇಂಡಿಯಾದೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಸಹಭಾಗಿತ್ವದಡಿಯಲ್ಲಿ ಎಂಜಿ ಮೋಟಾರ್ ಕಂಪನಿಯು ಪುಣೆಯಲ್ಲಿ 50 ಕಿ.ವ್ಯಾನ ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರವನ್ನು ತೆರೆದಿದೆ.

ಫೋರ್ಟಮ್ ಚಾರ್ಜ್ ಸಹ ಭಾಗಿತ್ವದಲ್ಲಿ ಹೊಸ ಚಾರ್ಜಿಂಗ್ ಕೇಂದ್ರ ತೆರೆದ ಎಂಜಿ ಮೋಟಾರ್ ಇಂಡಿಯಾ

ಈ ಚಾರ್ಜಿಂಗ್ ಕೇಂದ್ರವನ್ನು ಪುಣೆಯಲ್ಲಿರುವ ಎಂಜಿ ಪಿಂಪ್ರಿ ಚಿಂಚ್ವಾಡ್ ಶೋರೂಂನಲ್ಲಿ ತೆರೆಯಲಾಗಿದೆ. ಸಿಸಿಎಸ್ 2 (ಕಂಬೈನ್ಡ್ ಚಾರ್ಜಿಂಗ್ ಸಿಸ್ಟಂ) ಬೆಂಬಲಿಸುವ ಯಾವುದೇ ಎಲೆಕ್ಟ್ರಿಕ್ ಕಾರ್ ಅನ್ನು ಈ ಚಾರ್ಜಿಂಗ್ ನಿಲ್ದಾಣದಲ್ಲಿ ಚಾರ್ಜ್ ಮಾಡಬಹುದು.

ಫೋರ್ಟಮ್ ಚಾರ್ಜ್ ಸಹ ಭಾಗಿತ್ವದಲ್ಲಿ ಹೊಸ ಚಾರ್ಜಿಂಗ್ ಕೇಂದ್ರ ತೆರೆದ ಎಂಜಿ ಮೋಟಾರ್ ಇಂಡಿಯಾ

ವಾಹನಗಳನ್ನು ಚಾರ್ಜ್ ಮಾಡಲು ಕಾರು ಮಾಲೀಕರು ಫೋರ್ಟಮ್‌ನ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಬೇಕಾಗುತ್ತದೆ. ಈ ಚಾರ್ಜಿಂಗ್ ಕೇಂದ್ರದಲ್ಲಿ ಎಂಜಿ ಝಡ್‌ಎಸ್ ಎಲೆಕ್ಟ್ರಿಕ್ ಕಾರ್ ಅನ್ನು ಕೇವಲ 50 ನಿಮಿಷಗಳಲ್ಲಿ 80%ವರೆಗೂ ಚಾರ್ಜ್ ಮಾಡಬಹುದು.

ಫೋರ್ಟಮ್ ಚಾರ್ಜ್ ಸಹ ಭಾಗಿತ್ವದಲ್ಲಿ ಹೊಸ ಚಾರ್ಜಿಂಗ್ ಕೇಂದ್ರ ತೆರೆದ ಎಂಜಿ ಮೋಟಾರ್ ಇಂಡಿಯಾ

ಎಂಜಿ ಮೋಟಾರ್ ಕಂಪನಿಯು ಈ ಎಸ್‌ಯುವಿಯೊಂದಿಗೆ ಉಚಿತ ಎಸಿ ಚಾರ್ಜರ್, ಪ್ಲಗ್-ಅಂಡ್-ಚಾರ್ಜ್ ಕೇಬಲ್ ಆನ್‌ಬೋರ್ಡ್ ಒದಗಿಸುತ್ತದೆ. ಈ ಚಾರ್ಜರ್ ಸಹಾಯದಿಂದ ಎಂಜಿ ಝಡ್‌ಎಸ್ ಎಲೆಕ್ಟ್ರಿಕ್ ಕಾರನ್ನು ಮನೆ / ಕಚೇರಿಯಲ್ಲಿ ಸುಲಭವಾಗಿ ಚಾರ್ಜ್ ಮಾಡಬಹುದು.

ಫೋರ್ಟಮ್ ಚಾರ್ಜ್ ಸಹ ಭಾಗಿತ್ವದಲ್ಲಿ ಹೊಸ ಚಾರ್ಜಿಂಗ್ ಕೇಂದ್ರ ತೆರೆದ ಎಂಜಿ ಮೋಟಾರ್ ಇಂಡಿಯಾ

ಎಂಜಿ ಝಡ್‌ಎಸ್ ಕಾರನ್ನು ರೋಡ್ ಸೈಡ್ ಅಸಿಸ್ಟೆಂಟ್‌ನೊಂದಿಗೆ ಪ್ರಯಾಣದಲ್ಲಿರುವಾಗಲೂ ಚಾರ್ಜ್ ಮಾಡಬಹುದು. ಈ ಪಾಲುದಾರಿಕೆಯ ಬಗ್ಗೆ ಎಂಜಿ ಮೋಟಾರ್ ಇಂಡಿಯಾದ ಮುಖ್ಯ ವಾಣಿಜ್ಯ ಅಧಿಕಾರಿ ಗೌರವ್ ಗುಪ್ತಾ ಪ್ರತಿಕ್ರಿಯೆ ನೀಡಿದ್ದಾರೆ.

ಫೋರ್ಟಮ್ ಚಾರ್ಜ್ ಸಹ ಭಾಗಿತ್ವದಲ್ಲಿ ಹೊಸ ಚಾರ್ಜಿಂಗ್ ಕೇಂದ್ರ ತೆರೆದ ಎಂಜಿ ಮೋಟಾರ್ ಇಂಡಿಯಾ

ಫೋರ್ಟಮ್‌ನೊಂದಿಗಿನ ಸಹಭಾಗಿತ್ವದ ಮೂಲಕ ದೇಶದಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವುದಕ್ಕೆ ನಾವು ಬದ್ದರಾಗಿದ್ದೇವೆ ಎಂದು ಅವರು ಹೇಳಿದರು.

ಫೋರ್ಟಮ್ ಚಾರ್ಜ್ ಸಹ ಭಾಗಿತ್ವದಲ್ಲಿ ಹೊಸ ಚಾರ್ಜಿಂಗ್ ಕೇಂದ್ರ ತೆರೆದ ಎಂಜಿ ಮೋಟಾರ್ ಇಂಡಿಯಾ

ಎಂಜಿ ಝಡ್‌ಎಸ್ ಎಲೆಕ್ಟ್ರಿಕ್ ಕಾರ್ ಅನ್ನು ಹಂತ ಹಂತವಾಗಿ ದೇಶದ ಹಲವು ನಗರಗಳಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ. 2021ರಲ್ಲಿ ಎಂಜಿ ಝಡ್‌ಎಸ್ ಎಲೆಕ್ಟ್ರಿಕ್ ಕಾರ್ ಅನ್ನು ಆರು ಹೊಸ ನಗರಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಫೋರ್ಟಮ್ ಚಾರ್ಜ್ ಸಹ ಭಾಗಿತ್ವದಲ್ಲಿ ಹೊಸ ಚಾರ್ಜಿಂಗ್ ಕೇಂದ್ರ ತೆರೆದ ಎಂಜಿ ಮೋಟಾರ್ ಇಂಡಿಯಾ

ಈ ಮೂಲಕ ಎಂಜಿ ಝಡ್‌ಎಸ್ ಎಲೆಕ್ಟ್ರಿಕ್ ಕಾರು ಈಗ 37 ನಗರಗಳಲ್ಲಿ ಮಾರಾಟವಾಗಲಿದೆ ಎಂದು ಅವರು ಹೇಳಿದರು. ಎಂಜಿ ಮೋಟಾರ್ ಇಂಡಿಯಾ ಹಾಗೂ ಜಾಗತಿಕ ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಸೇವಾ ಪೂರೈಕೆದಾರರಲ್ಲಿ ಒಂದಾದ ಫೋರ್ಟಮ್ ಕಂಪನಿಗಳು 2019ರಲ್ಲಿ ಪಾಲುದಾರಿಕೆ ಮಾಡಿಕೊಂಡವು.

ಫೋರ್ಟಮ್ ಚಾರ್ಜ್ ಸಹ ಭಾಗಿತ್ವದಲ್ಲಿ ಹೊಸ ಚಾರ್ಜಿಂಗ್ ಕೇಂದ್ರ ತೆರೆದ ಎಂಜಿ ಮೋಟಾರ್ ಇಂಡಿಯಾ

ಅಂದಿನಿಂದ ಎಂಜಿ ಮೋಟಾರ್ ಹಾಗೂ ಫೋರ್ಟಮ್ ಜೊತೆಯಾಗಿ ಬೆಂಗಳೂರು, ದೆಹಲಿ ಎನ್‌ಸಿಆರ್, ಮುಂಬೈ, ಪುಣೆ, ಹೈದರಾಬಾದ್ ಹಾಗೂ ಅಹಮದಾಬಾದ್‌ ನಗರಗಳಲ್ಲಿ 11 ಡಿಸಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದಿವೆ.

ಫೋರ್ಟಮ್ ಚಾರ್ಜ್ ಸಹ ಭಾಗಿತ್ವದಲ್ಲಿ ಹೊಸ ಚಾರ್ಜಿಂಗ್ ಕೇಂದ್ರ ತೆರೆದ ಎಂಜಿ ಮೋಟಾರ್ ಇಂಡಿಯಾ

ಈ ಸಂದರ್ಭದಲ್ಲಿ ಮಾತನಾಡಿದ ಫೋರ್ಟಮ್ ಚಾರ್ಜ್ ಅಂಡ್ ಡ್ರೈವ್ ಇಂಡಿಯಾದ ಉಪಾಧ್ಯಕ್ಷರಾದ ಅವಧೇಶ್ ಕುಮಾರ್ ಝಾರವರು, ದೇಶದ ಸೂಪರ್-ಫಾಸ್ಟ್ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ಮತ್ತಷ್ಟು ಬಲಪಡಿಸಲು ಪ್ರಮುಖ ಆಟೋಮೋಟಿವ್ ಕಂಪನಿಗಳೊಂದಿಗಿನ ನಮ್ಮ ಸಹಭಾಗಿತ್ವವನ್ನು ವಿಸ್ತರಿಸಲು ನಾವು ಸಂತಸ ಪಡುತ್ತೇವೆ ಎಂದು ಹೇಳಿದರು.

ಫೋರ್ಟಮ್ ಚಾರ್ಜ್ ಸಹ ಭಾಗಿತ್ವದಲ್ಲಿ ಹೊಸ ಚಾರ್ಜಿಂಗ್ ಕೇಂದ್ರ ತೆರೆದ ಎಂಜಿ ಮೋಟಾರ್ ಇಂಡಿಯಾ

ಈ ಚಾರ್ಜಿಂಗ್ ಕೇಂದ್ರ ತೆರೆದಿರುವ ಕಾರಣ ಮುಂಬೈ ಹಾಗೂ ಪುಣೆ ನಗರಗಳ ನಡುವೆ ಪ್ರಯಾಣಿಸುವ ಪ್ರಯಾಣಿಕರು ಯಾವುದೇ ಆತಂಕವಿಲ್ಲದೆ ಪ್ರಯಾಣಿಸಬಹುದು ಎಂದು ಅವರು ಹೇಳಿದರು.

Most Read Articles

Kannada
English summary
MG Motor set up new EV charging station at Pune in collaboration with Fortum charge. Read in Kannada.
Story first published: Saturday, July 10, 2021, 14:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X