Just In
- 42 min ago
ಫೋಕ್ಸ್ವ್ಯಾಗನ್ ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ
- 43 min ago
ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್
- 2 hrs ago
ಹೆರ್ಮೆಸ್ 75 ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕಬೀರಾ ಮೊಬಿಲಿಟಿ
- 2 hrs ago
ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿ ಖರೀದಿಸಿದ ನಟ ಅರ್ಜುನ್ ಕಪೂರ್
Don't Miss!
- News
ಸುಳ್ಳು ಹೇಳಿದ್ದು ಸಾಬೀತಾದರೆ ಮೋದಿ ಬಸ್ಕಿ ಹೊಡೆಯಬೇಕು; ಮಮತಾ ಬ್ಯಾನರ್ಜಿ
- Sports
ಸ್ವಿಗ್ಗಿಯಿಂದ ರೋಹಿತ್ ಶರ್ಮಾಗೆ ಅವಮಾನ ; ಕಿಡಿಕಾರಿದ ಫ್ಯಾನ್ಸ್
- Lifestyle
ರಕ್ತದಲ್ಲಿ ಕಬ್ಬಿಣದಂಶ ಹೆಚ್ಚಾದರೆ ಆಯುಸ್ಸು ಕಡಿಮೆಯಾಗುವುದು
- Education
NEET PG Admit Card 2021: ನೀಟ್ ಪಿಜಿ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Finance
ಸುಮಾರು 5,550 ಕೋಟಿ ರು ಡಿವಿಡೆಂಡ್ ಘೋಷಿಸಿದ ಟಿಸಿಎಸ್
- Movies
'ಅಮಿತಾಭ್ ಮಗಳ ಪಾತ್ರ ಮಾಡ್ತಿದ್ದೇನೆ' ಎಂದಾಗ ರಶ್ಮಿಕಾ ಪೋಷಕರ ಪ್ರತಿಕ್ರಿಯೆ ಹೇಗಿತ್ತು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
17 ನಗರಗಳಲ್ಲಿ 22 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆದ ಎಂಜಿ ಮೋಟಾರ್
ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಎಂಜಿ ಮೋಟಾರ್ ಕಂಪನಿಯು ಸೂಪರ್ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ದೇಶದ ಪ್ರಮುಖ ನಗರಗಳಲ್ಲಿ ತೆರೆಯುತ್ತಿದ್ದು, ಇತ್ತೀಚೆಗೆ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಪ್ರಕ್ರಿಯೆಯನ್ನು ತೀವ್ರಗೊಳಿಸಿದೆ.

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ಬೇಡಿಕೆಯಿದ್ದರೂ ಚಾರ್ಜಿಂಗ್ ನಿಲ್ದಾಣಗಳ ಕೊರತೆಯು ಇವಿ ವಾಹನ ಬೇಡಿಕೆ ಹಿನ್ನಡೆ ಉಂಟು ಮಾಡುತ್ತಿದ್ದು, ಇದೇ ಕಾರಣಕ್ಕೆ ಸರ್ಕಾರಿ ವಲಯದಲ್ಲಿ ಮಾತ್ರವಲ್ಲದೆ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಸಹ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಮೇಲೆ ಭಾರೀ ಹೂಡಿಕೆಯೊಂದಿಗೆ ಅಗತ್ಯ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಯೋಜನೆಗಳನ್ನು ಕೈಗೆತ್ತಿಗೊಂಡಿವೆ.

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುವತ್ತ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದರೂ ಸಹ ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಕೊರೆತೆಯು ಇವಿ ವಾಹನಗಳ ಮಾರಾಟಕ್ಕೆ ಹಿನ್ನಡೆ ಉಂಟು ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ಇದರಿಂದಾಗಿ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಜಂಟಿ ಯೋಜನೆಗಳ ಅಡಿಯಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣದ ಮೂಲಕ ಗ್ರಾಹಕರ ಸೆಳೆಯಲು ಯೋಜನೆಯಲ್ಲಿದ್ದು, ಎಂಜಿ ಕಂಪನಿಯ ಸೂಪರ್ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಫಾಸ್ಟ್ ಚಾರ್ಜಿಂಗ್ ನಿಲ್ದಾಣ ಲಭ್ಯತೆಯಿದ್ದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಸುಧಾರಿಸಬಹುದು ಎನ್ನುವ ಯೋಜನೆಯಲ್ಲಿರುವ ಎಂಜಿ ಮೋಟಾರ್ ಕಂಪನಿಯು ಟಾಟಾ ಪವರ್ ಕಂಪನಿಯೊಂದಿಗೆ ಜೊತೆಗೂಡಿ ವಿದ್ಯುತ್ ಪೂರೈಕೆಯ ಆಧಾರದ ಮೇಲೆ 50kW ಹಾಗೂ 60kW ಸಾಮರ್ಥ್ಯದ ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ವಿಸ್ತರಣೆ ಮಾಡುತ್ತಿದೆ. ಎಂಜಿ ಮೋಟಾರ್ ಕಂಪನಿಯು ಇದುವರೆಗೆ ದೇಶದ ಪ್ರಮುಖ 17 ನಗರಗಳಲ್ಲಿ 22 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆದಿದ್ದು, ಇತ್ತೀಚೆಗೆ ಚೆನ್ನೈನಲ್ಲೂ ಕೂಡಾ 50kW ಸಾಮರ್ಥ್ಯದ ಚಾರ್ಜಿಂಗ್ ನಿಲ್ದಾಣಕ್ಕೆ ಚಾಲನೆ ನೀಡಲಾಯ್ತು.

ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಬ್ಯಾಟರಿ ಜೋಡಣೆಯ ಆಧಾರದ ಮೇಲೆ ಕೇವಲ 50 ನಿಮಿಷದಲ್ಲಿ ಶೇ.80 ರಷ್ಟು ಚಾರ್ಜಿಂಗ್ ಮಾಡಿಕೊಳ್ಳಬಹುದಾಗಿದ್ದು, ಎಂಜಿ ಮತ್ತು ಟಾಟಾ ಪವರ್ ಕಂಪನಿಗಳು ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡುತ್ತಿರುವುದು ಇವಿ ವಾಹನಗಳ ಬೇಡಿಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ.

ಎಂಜಿ ಮೋಟಾರ್ ಕಂಪನಿಯು 2021ರ ಜೆಡ್ಎಸ್ ಇವಿ ಬಿಡುಗಡೆಗೊಂದಿಗೆ ಎಲೆಕ್ಟ್ರಿಕ್ ಕಾರು ಮಾರಾಟವನ್ನು ಹತ್ತು ನಗರಗಳಿಂದ ಇದೀಗ 31 ನಗರಗಳಲ್ಲಿ ಎಲೆಕ್ಟ್ರಿಕ್ ಕಾರು ಮಾರಾಟವನ್ನು ವಿಸ್ತರಿಸಿದ್ದು, ಅಧಿಕೃತ ಕಾರು ಮಾರಾಟ ಮಳಿಗೆಗಳಲ್ಲೂ ಈಗಾಗಲೇ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಿಗೆ ಚಾಲನೆ ನೀಡಲಾಗಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಡೀಲರ್ಸ್ ಯಾರ್ಡ್ಗಳಲ್ಲಿರುವ ಚಾರ್ಜಿಂಗ್ ಪಾಯಿಂಟ್ಗಳು ಕೇವಲ ಎಂಜಿ ಜೆಡ್ಎಸ್ ಇವಿ ಗ್ರಾಹಕರಿಗೆ ಮಾತ್ರ ಬಳಕೆಗೆ ಲಭ್ಯವಿದ್ದು, ಇದೀಗ ಪ್ರತ್ಯೇಕವಾಗಿ ನಿರ್ಮಾಣ ಮಾಡಲಾಗುತ್ತಿರುವ ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಎಲ್ಲಾ ಬಗೆಯ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಟಾಟಾ ಪವರ್ ಜೊತೆಗೂಡಿ ಡಿಸಿ ಫಾಸ್ಟ್ ಚಾರ್ಜರ್ ನಿಲ್ದಾಣಗಳನ್ನು ನಿರ್ಮಾಣ ಮಾಡುತ್ತಿರುವ ಎಂಜಿ ಮೋಟಾರ್ ಕಂಪನಿಯು ಇದುವರೆಗೆ ವಿವಿಧ ನಗರಗಳಲ್ಲಿ ಒಟ್ಟು 22 ಡಿಸಿ ಫಾಸ್ಟ್ ಚಾರ್ಜರ್ಗಳನ್ನು ಸೇವೆಗೆ ಮುಕ್ತಗೊಳಿಸಿದ್ದು, ಈ ವರ್ಷಾಂತ್ಯಕ್ಕೆ ಡಿಸಿ ಫಾಸ್ಟ್ ಚಾರ್ಜರ್ಗಳ ಸಂಖ್ಯೆ 50ಕ್ಕೆ ಏರಿಕೆ ಮಾಡುವ ಗುರಿಹೊಂದಲಾಗಿದೆ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!

ಇನ್ನು ಎಂಜಿ ಕಂಪನಿಯು ಎರಡನೇ ಹಂತದ ವೇಳೆ ಕರ್ನಾಟಕದಲ್ಲಿ ಹೊಸದಾಗಿ ಮೈಸೂರು ಮತ್ತು ಮಂಗಳೂರಿನಲ್ಲಿ ಜೆಡ್ಎಸ್ ಇವಿ ಮಾರಾಟದ ಆರಂಭಿಸಿದ್ದು, ಇವಿ ಕಾರುಗಳಿಗೆ ಪೂರಕವಾಗಿ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣದ ಮೇಲೆ ಹೆಚ್ಚಿನ ಗಮನಹರಿಸಲಾಗಿದೆ.