ಅಕ್ಟೋಬರ್ ತಿಂಗಳಿನಲ್ಲಿ 2,863 ಕಾರುಗಳನ್ನು ಮಾರಾಟಗೊಳಿಸಿದ MG Motor

ಜನಪ್ರಿಯ ಕಾರು ತಯಾರಕ ಕಂಪನಿಯಾದ ಮೋರಿಸ್ ಗ್ಯಾರೇಜಸ್ ಇಂಡಿಯಾ 2021ರ ಅಕ್ಟೋಬರ್ ತಿಂಗಳ ಮಾಸಿಕ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ವರದಿಗಳ ಪ್ರಕಾರ ಎಂಜಿ ಕಂಪನಿಯು ಕಳೆದ ತಿಂಗಳು ಒಟ್ಟು 2,863 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಅಕ್ಟೋಬರ್ ತಿಂಗಳಿನಲ್ಲಿ 2,863 ಕಾರುಗಳನ್ನು ಮಾರಾಟಗೊಳಿಸಿದ MG Motor

ಕಳೆದ ವರ್ಷದ ಅಕ್ಟೋಬರ್ ತಿಂಗಳ ಅವಧಿಯಲ್ಲಿ ಎಂಜಿ ಮೋಟಾರ್ ಕಂಪನಿಯು 3,750 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.24 ರಷ್ಟು ಕುಸಿತವನ್ನು ಕಂಡಿದೆ. ಕಂಪನಿಯು ಈ ಕುಸಿತಕ್ಕೆ ವಿಶ್ವಾದ್ಯಂತ ಸೆಮಿಕಂಡಕ್ಟರ್ ಚಿಪ್‌ಗಳ ತೀವ್ರ ಕೊರತೆ ಕಾರಣವೆಂದು ಹೇಳಿದೆ, ಇದು ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ, ಇದರ ಪರಿಣಾಮವಾಗಿ ಅದರ ಡೀಲರ್‌ಶಿಪ್‌ಗಳಲ್ಲಿ ಸೀಮಿತ ಸ್ಟಾಕ್‌ಗಳಿವೆ. ಇನ್ನು ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 3,241 ಕಾರುಗಳನ್ನು ಮಾಡಿದೆ. ಇದನ್ನು ಕಳೆದ ತಿಂಗಳ ಮಾರಾಟಕ್ಕ ಹೋಲಿಸಿದರೆ ಶೇ.12 ರಷ್ಟು ಕುಸಿತವನ್ನು ಕಂಡಿದೆ.

ಅಕ್ಟೋಬರ್ ತಿಂಗಳಿನಲ್ಲಿ 2,863 ಕಾರುಗಳನ್ನು ಮಾರಾಟಗೊಳಿಸಿದ MG Motor

ಎಂಜಿ ಮೋಟಾರ್ ಇಂಡಿಯಾ ಹೇಳುವಂತೆ ಜಾಗತಿಕ ಚಿಪ್ ಕೊರತೆಯು ಉತ್ಪಾದನೆಗೆ ಅಡ್ಡಿಯುಂಟುಮಾಡಿದೆ, ಇದರ ಪರಿಣಾಮವಾಗಿ ಮಾರಾಟವು ಕಡಿಮೆಯಾಗಿದೆ, ಬೇಡಿಕೆಯು ಮೇಲ್ಮುಖವಾಗಿ ಮುಂದುವರಿಯುತ್ತದೆ. ಹಬ್ಬದ ಸೀಸನ್ ನಿಂದಾಗಿ ಬೇಡಿಕೆಯು ಹೆಚ್ಚಾಗುತ್ತಿದೆ.

ಅಕ್ಟೋಬರ್ ತಿಂಗಳಿನಲ್ಲಿ 2,863 ಕಾರುಗಳನ್ನು ಮಾರಾಟಗೊಳಿಸಿದ MG Motor

2021ರ ಅಕ್ಟೋಬರ್ ತಿಂಗಳಿನಲ್ಲಿ 4,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಮತ್ತು ಝಡ್ ಇವಿ ಮತ್ತು ಗ್ಲೋಸ್ಟರ್‌ಗಾಗಿ 600 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದುಕೊಂಡಿದೆ ಎಂದು ಕಾರು ತಯಾರಕರು ಹೇಳಿದ್ದಾರೆ. ಎಂಜಿ ತನ್ನ ಹೊಸದಾಗಿ ಬಿಡುಗಡೆಯಾದ ಕಾಂಪ್ಯಾಕ್ಟ್ ಎಸ್‍ಯುವಿ ಎಂಜಿ ಆಸ್ಟರ್ ಸಹ ಗ್ರಾಹಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದಿದೆ ಎಂದು ಹೇಳಲಾಗುತ್ತಿದೆ, ಇನ್ನು ಈ ಕಾಂಪ್ಯಾಕ್ಟ್ ಎಸ್‍ಯುವಿಯ ಬುಕ್ಕಿಂಗ್ಗ್‌ಗಳನ್ನು ತೆರೆದ 20 ನಿಮಿಷಗಳಲ್ಲಿ 2021ಕ್ಕೆ ಇರುವ ಎಲ್ಲಾ ಯುನಿಟ್ ಗಳು ಮಾರಾಟವಾಯಿತು.

ಅಕ್ಟೋಬರ್ ತಿಂಗಳಿನಲ್ಲಿ 2,863 ಕಾರುಗಳನ್ನು ಮಾರಾಟಗೊಳಿಸಿದ MG Motor

ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೆಕ್ಟರ್, ಹೆಕ್ಟರ್ ಪ್ಲಸ್ ಮತ್ತು ಗ್ಲೋಸ್ಟರ್ ಎಸ್‌ಯುವಿಗಳ ಆಯ್ದ ರೂಪಾಂತರಗಳ ಬೆಲೆಯನ್ನು ಕಳೆದ ತಿಂಗಳು ಹೆಚ್ಚಿಸಿತ್ತು. ಎಂಜಿ ಮೋಟಾರ್ ಇಂಡಿಯಾ ಕಂಪನಿಯು ತನ್ನ ಕಾರುಗಳ ಬೆಲೆಯನ್ನು ಈ ವರ್ಷದಲ್ಲಿ ನಾಲ್ಕನೇ ಭಾರೀ ಹೆಚ್ಚಿಸಿದೆ.

ಅಕ್ಟೋಬರ್ ತಿಂಗಳಿನಲ್ಲಿ 2,863 ಕಾರುಗಳನ್ನು ಮಾರಾಟಗೊಳಿಸಿದ MG Motor

ಈ ವರ್ಷದ ಏಪ್ರಿಲ್‌ನಲ್ಲಿ ಈ ಹಿಂದಿನ ದರವನ್ನು ಏರಿಸಲಾಗಿತ್ತು. ಮೊದಲಿಗೆ ಎಂಜಿ ಗ್ಲೋಸ್ಟರ್ ಎಸ್‌ಯುವಿಯ ಮೂಲ ಸೂಪರ್ ರೂಪಾಂತರವನ್ನು ಹೊರತುಪಡಿಸಿ, ಉಳಿದ ಎಲ್ಲಾ ಟ್ರಿಮ್‌ಗಳು ರೂ.40,000 ವರೆಗೆ ಬೆಲೆ ಏರಿಕೆಯನ್ನು ಪಡೆಯುತ್ತವೆ. ಎಂಜಿ ಗ್ಲೋಸ್ಟರ್ ಎಸ್‌ಯುವಿಯ ಸ್ಮಾರ್ಟ್, ಶಾರ್ಪ್ ಮತ್ತು ಸ್ಯಾವಿ ರೂಪಾಂತರಗಳು ಬೆಲೆ ಏರಿಕೆಯನ್ನು ಪಡೆದಿದೆ. ಈ ಗ್ಲೊಸ್ಟರ್ ಎಸ್‍ಯುವಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಲಭ್ಯವಿದೆ. ಈ ಎಸ್‍ಯುವಿಯು ಅತಿ ಹೆಚ್ಚು ವೀಲ್ಹ್ ಬೆಸ್ ಹೊಂದಿದೆ.

ಅಕ್ಟೋಬರ್ ತಿಂಗಳಿನಲ್ಲಿ 2,863 ಕಾರುಗಳನ್ನು ಮಾರಾಟಗೊಳಿಸಿದ MG Motor

ಎಂಜಿ ಗ್ಲೊಸ್ಟರ್ ಎಸ್‌ಯುವಿಯಲ್ಲಿ 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದ್ದು, ಇದರೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ. ಈ ಎಂಜಿನ್ 160 ಬಿಹೆಚ್‌ಪಿ, 375-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಟಾಪ್-ಎಂಡ್ ಮಾದರಿಯಲ್ಲಿರುವ 2.0-ಲೀಟರ್ ಟ್ವಿನ್-ಟರ್ಬೊ ಎಂಜಿನ್ ಮಾದರಿಯು 216 ಬಿಹೆಚ್‌ಪಿ ಪವರ್ ಮತ್ತು 480 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ,

ಅಕ್ಟೋಬರ್ ತಿಂಗಳಿನಲ್ಲಿ 2,863 ಕಾರುಗಳನ್ನು ಮಾರಾಟಗೊಳಿಸಿದ MG Motor

ಎಂಜಿ ಹೆಕ್ಟರ್ ಎಸ್‍ಯುವಿ ಮಾದರಿಯು ಆಯ್ದ ರೂಪಾಂತರಗಳು ರೂ.8,000 ದಿಂದ ರೂ.50,000 ವರೆಗೆ ಬೆಲೆ ಏರಿಕೆಯನ್ನು ಪಡೆದಿವೆ. ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳ ಡ್ಯುಯಲ್-ಟೋನ್ ಶಾರ್ಪ್ ರೂಪಾಂತರಗಳು ಈಗ ರೂ.50,000 ವರೆಗೆ ದುಬಾರಿಯಾಗಿದೆ. ಇನ್ನು ಸ್ಮಾರ್ಟ್ ಮತ್ತು ಶಾರ್ಪ್ ರೂಪಾಂತರಗಳ ಬೆಲೆಯು ರೂ,8,000 ವರೆಗೆ ಬೆಲೆಯನ್ನು ಹೆಚ್ಚಿಸಲಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ 2,863 ಕಾರುಗಳನ್ನು ಮಾರಾಟಗೊಳಿಸಿದ MG Motor

ಈ ಎಂಜಿ ಹೆಕ್ಟರ್ ಎಸ್‍ಯುವಿಯಲ್ಲಿ 1.5 ಲೀಟರ್ ಟಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 143 ಬಿಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇನ್ನು ಈ ಎಸ್‍ಯುವಿಯ 2.0 ಲೀಟರ್ 143 ಬಿಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಅಕ್ಟೋಬರ್ ತಿಂಗಳಿನಲ್ಲಿ 2,863 ಕಾರುಗಳನ್ನು ಮಾರಾಟಗೊಳಿಸಿದ MG Motor

ಕೊನೆಯದಾಗಿ ಎಂಜಿ ಹೆಕ್ಟರ್ ಪ್ಲಸ್‌ ಎಸ್‍ಯುವಿಯು ಕೂಡ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಈ ಎಂಜಿ ಹೆಕ್ಟರ್ ಪ್ಲಸ್‌ ಎಸ್‍ಯುವಿ ಡ್ಯುಯಲ್-ಟೋನ್ ರೂಪಾಂತರಗಳು ರೂ.42,000 ವರೆಗೆ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಇನ್ನು ಸ್ಮಾರ್ಟ್ ಮತ್ತು ಮೊನೊ-ಟೋನ್ ಶಾರ್ಪ್ ರೂಪಾಂತರಗಳ ಬೆಲೆಯು ರೂ.15,000 ವರೆಗೆ ಹೆಚ್ಚಿಸಲಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ 2,863 ಕಾರುಗಳನ್ನು ಮಾರಾಟಗೊಳಿಸಿದ MG Motor

ಇತ್ತೀಚೆಗೆ ಎಂಜಿ ಹೆಕ್ಟರ್ ಪ್ಲಸ್‌ ಎಸ್‍ಯುವಿಯ ಎರಡು ರೂಪಾಂತರಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಎಂಜಿ ಹೆಕ್ಟರ್ ಪ್ಲಸ್‌ ಎಸ್‍ಯುವಿಯಲ್ಲಿ 2+2+2 ಆಸನ ವಿನ್ಯಾಸವನ್ನು ಪಡೆದುಕೊಂಡಿದೆ. ಈ ಕಾರಿನ ಮಧ್ಯದ ಸಾಲಿನಲ್ಲಿರುವ ಕ್ಯಾಪ್ಟನ್ ಸೀಟ್ ಕಾರಿನ ಪ್ರಮುಖ ಆಕರ್ಷಣೆಯಾಗಿದ್ದು, ಬ್ರೌನ್ ಲೆದರ್ ಆಸನವು ಹೆಡ್ ರೆಸ್ಟ್ ಮತ್ತು ಸೆಂಟರ್ ಆರ್ಮ್ ರೆಸ್ಟ್ ಫೀಚರ್ಸ್ ಪಡೆದುಕೊಂಡಿದೆ. ಜೊತೆಗೆ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ.

ಅಕ್ಟೋಬರ್ ತಿಂಗಳಿನಲ್ಲಿ 2,863 ಕಾರುಗಳನ್ನು ಮಾರಾಟಗೊಳಿಸಿದ MG Motor

ಎಂಜಿ ಕಾರುಗಳ ಉತ್ಪಾದನೆಯ ಮೇಲೆ ಸೆಮಿಕಂಡಕ್ಟರ್ ಚಿಪ್‌ಗಳ ತೀವ್ರ ಕೊರತೆ ಎದುರಾಗಿದೆ. ಇದು ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಇದರಿಂದ ಅದರ ಡೀಲರ್‌ಶಿಪ್‌ಗಳಲ್ಲಿ ಸೀಮಿತ ಸ್ಟಾಕ್‌ಗಳಿವೆ. ಆದರೆ ಕಂಪನಿಯ ಪ್ರಕಾರ ಎಂಜಿ ಕಾರುಗಳ ಬೇಡಿಕೆಯು ಕುಸಿದಿಲ್ಲ,

Most Read Articles

Kannada
English summary
Mg motor sold 2863 units in october 2021 global chip shortage details
Story first published: Monday, November 1, 2021, 15:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X