ವಿಂಡ್ ಸೋಲಾರ್ ಹೈಬ್ರಿಡ್ ಎನರ್ಜಿ ಅಳವಡಿಕೆ ಮೂಲಕ ವಿಶಿಷ್ಟ ದಾಖಲೆ ಬರೆದ MG Motor

ಎಂಜಿ ಮೋಟಾರ್ (MG Motor) ಇಂಡಿಯಾ ಕಂಪನಿಯು ವಿಂಡ್ ಸೋಲಾರ್ ಹೈಬ್ರಿಡ್ ಶಕ್ತಿಯನ್ನು ಅಳವಡಿಸಿಕೊಂಡಿರುವ ದೇಶದ ಮೊದಲ ಕಾರು ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬಗ್ಗೆ ಸ್ವತಃ ಕಂಪನಿಯೇ ಮಾಹಿತಿ ನೀಡಿದೆ. ತನ್ನ ಹಲೋಲ್ ಉತ್ಪಾದನಾ ಘಟಕದಲ್ಲಿ ಬಳಸಲಾಗುವ 50% ನಷ್ಟು ಶಕ್ತಿಯು ನವೀಕರಿಸಬಹುದಾದ ಇಂಧನ ಮೂಲಗಳಿಂದ ಬರುತ್ತದೆ ಎಂದು ಕಂಪನಿ ಹೇಳಿದೆ.

ವಿಂಡ್ ಸೋಲಾರ್ ಹೈಬ್ರಿಡ್ ಎನರ್ಜಿ ಅಳವಡಿಕೆ ಮೂಲಕ ವಿಶಿಷ್ಟ ದಾಖಲೆ ಬರೆದ MG Motor

ಕಂಪನಿಯು ಗ್ರೀನ್ ಎನರ್ಜಿ ಪಡೆಯಲು ರಾಜ್‌ಕೋಟ್‌ನಲ್ಲಿರುವ ಕ್ಲೀನ್‌ಮ್ಯಾಕ್ಸ್ ವಿಂಡ್ ಸೋಲಾರ್ ಹೈಬ್ರಿಡ್ ಪಾರ್ಕ್‌ನೊಂದಿಗೆ ಕೈಜೋಡಿಸಿದೆ. ಎಂಜಿ ಮೋಟಾರ್ ತನ್ನ ಹಲೋಲ್ ಉತ್ಪಾದನಾ ಘಟಕಕ್ಕಾಗಿ 4.85 ಮೆ.ವ್ಯಾ ವಿಂಡ್ ಸೋಲಾರ್ ಹೈಬ್ರಿಡ್ ಶಕ್ತಿಯನ್ನು ಪಡೆಯುವುದಾಗಿ ತಿಳಿಸಿದೆ. ಇದರಿಂದ 15 ವರ್ಷಗಳಲ್ಲಿ ಸುಮಾರು ಎರಡು ಲಕ್ಷ ಮೆಟ್ರಿಕ್ ಟನ್ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಎಂಜಿ ಮೋಟಾರ್ ಕಂಪನಿ ಹೇಳಿಕೊಂಡಿದೆ.

ವಿಂಡ್ ಸೋಲಾರ್ ಹೈಬ್ರಿಡ್ ಎನರ್ಜಿ ಅಳವಡಿಕೆ ಮೂಲಕ ವಿಶಿಷ್ಟ ದಾಖಲೆ ಬರೆದ MG Motor

ಈ ಪ್ರಮಾಣವು 13 ಲಕ್ಷ ಮರಗಳನ್ನು ನೆಡುವುದಕ್ಕೆ ಸಮವಾಗಿದೆ. ಈ ಯೋಜನೆಯ ಬಗ್ಗೆ ಮಾತನಾಡಿರುವ ಎಂಜಿ ಮೋಟಾರ್ ಇಂಡಿಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ರಾಜೀವ್ ಚಾಬಾ, ಈ ಕ್ರಮವು ಸುಸ್ಥಿರ ಭವಿಷ್ಯದ ಕಡೆಗೆ ಕಂಪನಿಯು ಹೊಂದಿರುವ ಬದ್ದತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಕಂಪನಿಯು ಸುಸ್ಥಿರ ಭವಿಷ್ಯಕ್ಕಾಗಿ ತನ್ನ ಬದ್ಧತೆಯನ್ನು ಖಾತ್ರಿಪಡಿಸಿದೆ.

ವಿಂಡ್ ಸೋಲಾರ್ ಹೈಬ್ರಿಡ್ ಎನರ್ಜಿ ಅಳವಡಿಕೆ ಮೂಲಕ ವಿಶಿಷ್ಟ ದಾಖಲೆ ಬರೆದ MG Motor

ಇದರಿಂದ ಶೂನ್ಯ ಹೊರಸೂಸುವಿಕೆ ವಾಹನಗಳನ್ನು ಅಳವಡಿಸಿಕೊಳ್ಳಲು ಹಾಗೂ ಪರಿಸರವನ್ನು ರಕ್ಷಿಸಲು ಕೊಡುಗೆ ನೀದುವಂತೆ ಹಲವರನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು. ಕ್ಲೀನ್‌ಮ್ಯಾಕ್ಸ್‌ನೊಂದಿಗಿನ ನಮ್ಮ ಒಡನಾಟವು ಶುದ್ಧ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ರಾಜೀವ್ ಛಾಬಾ ಹೇಳಿದರು.

ವಿಂಡ್ ಸೋಲಾರ್ ಹೈಬ್ರಿಡ್ ಎನರ್ಜಿ ಅಳವಡಿಕೆ ಮೂಲಕ ವಿಶಿಷ್ಟ ದಾಖಲೆ ಬರೆದ MG Motor

ಈ ಯೋಜನೆಯೊಂದಿಗೆ ನಮ್ಮ ಶಕ್ತಿಯ ವೆಚ್ಚವನ್ನು ಕಡಿಮೆ ಮಾಡುವಾಗ ಸುಸ್ಥಿರ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ನಮ್ಮ ಪಾತ್ರವನ್ನು ಹೆಚ್ಚಿಸುವುದಾಗಿ ನಾವು ಭಾವಿಸುತ್ತೇವೆ ಎಂದು ಅವರು ತಿಳಿಸಿದರು. ಈ ಸಹಯೋಗದ ಬಗ್ಗೆ ಮಾತನಾಡಿದ ಕ್ಲೀನ್‌ಮ್ಯಾಕ್ಸ್‌ನ ಸಂಸ್ಥಾಪಕ ಹಾಗೂ ಎಂಡಿ ಕುಲದೀಪ್ ಜೈನ್, ಎಂಜಿ ಮೋಟಾರ್ ಹೈಬ್ರಿಡ್ ಫಾರಂನಿಂದ ತನ್ನ 50% ನಷ್ಟು ವಿದ್ಯುತ್ ಅಗತ್ಯವನ್ನು ಪೂರೈಸುತ್ತಿದೆ ಎಂದು ಹೇಳಿದರು.

ವಿಂಡ್ ಸೋಲಾರ್ ಹೈಬ್ರಿಡ್ ಎನರ್ಜಿ ಅಳವಡಿಕೆ ಮೂಲಕ ವಿಶಿಷ್ಟ ದಾಖಲೆ ಬರೆದ MG Motor

ಇದರಿಂದ ಎಂಜಿ ಮೋಟಾರ್ ಇಂಡಿಯಾ ಕಂಪನಿಗೆ ನಿರ್ವಹಣಾ ವೆಚ್ಚದಲ್ಲಿ ಗಮನಾರ್ಹ ಉಳಿತಾಯ ಮಾಡಲು ಸಾಧ್ಯವಾಗಲಿದೆ. ಇದರ ಜೊತೆಗೆ ಕಂಪನಿಯ ಕಾರ್ಬನ್ ಡೈ ಆಕ್ಸೈಡ್ ಹೊರಸೂಸುವಿಕೆ ಪ್ರಮಾಣವು ಗಣನೀಯವಾಗಿ ಕಡಿಮೆಯಾಗುತ್ತದೆ. ಕಂಪನಿಗೆ ತೊಂದರೆಯಿಲ್ಲದ ಪರಿಹಾರವನ್ನು ನೀಡಲು ನಾವು ಕಡಿಮೆ ವೆಚ್ಚದಲ್ಲಿ ವಿದ್ಯುತ್ ಸರಬರಾಜು ಮಾಡುತ್ತಿದ್ದೇವೆ.

ವಿಂಡ್ ಸೋಲಾರ್ ಹೈಬ್ರಿಡ್ ಎನರ್ಜಿ ಅಳವಡಿಕೆ ಮೂಲಕ ವಿಶಿಷ್ಟ ದಾಖಲೆ ಬರೆದ MG Motor

ಸ್ವತಂತ್ರವಾದ ಸೋಲಾರ್ ಅಥವಾ ಪವನ ಶಕ್ತಿಗಿಂತ ಭಿನ್ನವಾಗಿ, ವಿಂಡ್ ಸೋಲಾರ್ ಹೈಬ್ರಿಡ್ ಶಕ್ತಿಯು ನಿರಂತರವಾಗಿ ವಿದ್ಯುತ್ ಸರಬರಾಜು ನೀಡುತ್ತದೆ. ಗ್ರಾಹಕರು ತಮ್ಮ ದೈನಂದಿನ ವಿದ್ಯುತ್ ಅಗತ್ಯಗಳಲ್ಲಿ ಹೆಚ್ಚಿನ ಪ್ರಮಾಣವನ್ನು ನವೀಕರಿಸಬಹುದಾದ ಶಕ್ತಿಯೊಂದಿಗೆ ಪೂರೈಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ವಿಂಡ್ ಸೋಲಾರ್ ಹೈಬ್ರಿಡ್ ಎನರ್ಜಿ ಅಳವಡಿಕೆ ಮೂಲಕ ವಿಶಿಷ್ಟ ದಾಖಲೆ ಬರೆದ MG Motor

ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಇತ್ತೀಚೆಗಷ್ಟೇ ಗುರುಗ್ರಾಮದ ಸೆಕ್ಟರ್ 30ರಲ್ಲಿ ವಸತಿ ಸಮುದಾಯ ಚಾರ್ಜಿಂಗ್ ಸ್ಟೇಷನ್ ಗಳನ್ನು ತೆರೆದಿದೆ. ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಸಲುವಾಗಿ ಕಂಪನಿಯು ವಸತಿ ಸ್ಥಳಗಳಲ್ಲಿ ಸುಲಭವಾಗಿ ಬಳಸಬಹುದಾದ ಚಾರ್ಜಿಂಗ್ ಕೇಂದ್ರಗಳನ್ನು ಹಾಗೂ ಚಾರ್ಜಿಂಗ್ ಪಾಯಿಂಟ್ ನೆಟ್‌ವರ್ಕ್‌ಗಳನ್ನು ತೆರೆಯುತ್ತಿದೆ.

ವಿಂಡ್ ಸೋಲಾರ್ ಹೈಬ್ರಿಡ್ ಎನರ್ಜಿ ಅಳವಡಿಕೆ ಮೂಲಕ ವಿಶಿಷ್ಟ ದಾಖಲೆ ಬರೆದ MG Motor

ಚಾರ್ಜಿಂಗ್ ಮೂಲಸೌಕರ್ಯಗಳ ಲಭ್ಯತೆಯು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ದೇಶದಲ್ಲಿ ಚಾರ್ಜಿಂಗ್ ಮೂಲಸೌಕರ್ಯವನ್ನು ಎಷ್ಟು ಬೇಗ ಅಭಿವೃದ್ಧಿಪಡಿಸಲಾಗುತ್ತದೆಯೋ ಅಷ್ಟು ಬೇಗ ದೇಶದಲ್ಲಿ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ. ಮುಂದಿನ ಕೆಲವು ವರ್ಷಗಳಲ್ಲಿ ಭಾರತವು ಪರಿಸರ ಸ್ನೇಹಿ ಮೊಬಿಲಿಟಿಯನ್ನು ಪ್ರತಿನಿಧಿಸುತ್ತದೆ.

ವಿಂಡ್ ಸೋಲಾರ್ ಹೈಬ್ರಿಡ್ ಎನರ್ಜಿ ಅಳವಡಿಕೆ ಮೂಲಕ ವಿಶಿಷ್ಟ ದಾಖಲೆ ಬರೆದ MG Motor

ಜೊತೆಗೆ ಎಲೆಕ್ಟ್ರಿಕ್ ವಾಹನ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕಂಪನಿ ಹೇಳಿದೆ. ಎಂಜಿ ಮೋಟಾರ್ ಕಂಪನಿಯು ತನ್ನ ಚಾರ್ಜಿಂಗ್ ಕೇಂದ್ರಗಳಲ್ಲಿ ವೇಗವಾಗಿ ಚಾರ್ಜಿಂಗ್ ಮಾಡಲು ಟಾಟಾ ಪವರ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಕಂಪನಿಯು ತನ್ನ ZS ಎಲೆಕ್ಟ್ರಿಕ್ ಎಸ್‌ಯುವಿ ಹೊಂದಿರುವ ಗ್ರಾಹಕರ ಮನೆಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸುತ್ತದೆ.

ವಿಂಡ್ ಸೋಲಾರ್ ಹೈಬ್ರಿಡ್ ಎನರ್ಜಿ ಅಳವಡಿಕೆ ಮೂಲಕ ವಿಶಿಷ್ಟ ದಾಖಲೆ ಬರೆದ MG Motor

ಎಂಜಿ ಮೋಟಾರ್ ZS ಎಲೆಕ್ಟ್ರಿಕ್ ಎಸ್‌ಯುವಿಗಾಗಿ ರೋಡ್ ಸೈಡ್ ಅಸಿಸ್ಟೆನ್ಸ್ ಸಹ ನೀಡುತ್ತದೆ. MG ಮೋಟಾರ್ ಕಂಪನಿಯ ZS ಎಲೆಕ್ಟ್ರಿಕ್ ಎಸ್‌ಯುವಿಯ ಹೊಸಮಾದರಿಯನ್ನು ಈ ವರ್ಷದ ಫೆಬ್ರವರಿಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು - ಎಕ್ಸೈಟ್ ಹಾಗೂ ಎಕ್ಸ್‌ಕ್ಲೂಸಿವ್ - ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ವಿಂಡ್ ಸೋಲಾರ್ ಹೈಬ್ರಿಡ್ ಎನರ್ಜಿ ಅಳವಡಿಕೆ ಮೂಲಕ ವಿಶಿಷ್ಟ ದಾಖಲೆ ಬರೆದ MG Motor

ಎಕ್ಸೈಟ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 20.99 ಲಕ್ಷಗಳಾದರೆ, ಎಕ್ಸ್‌ಕ್ಲೂಸಿವ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 24.18 ಲಕ್ಷಗಳಾಗಿದೆ. MG ZS ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ 44.5 ಕಿ.ವ್ಯಾ IP6 ಪ್ರಮಾಣೀಕೃತ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿಯನ್ನು 6 - 8 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.

ವಿಂಡ್ ಸೋಲಾರ್ ಹೈಬ್ರಿಡ್ ಎನರ್ಜಿ ಅಳವಡಿಕೆ ಮೂಲಕ ವಿಶಿಷ್ಟ ದಾಖಲೆ ಬರೆದ MG Motor

ಈ ಎಲೆಕ್ಟ್ರಿಕ್ ಎಸ್‌ಯುವಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ 419 ಕಿ.ಮೀಗಳವರೆಗೆ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯು 8 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯು ಮೂರು ಡ್ರೈವಿಂಗ್ ಮೋಡ್‌ಗಳೊಂದಿಗೆ ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ಹೊಂದಿದೆ.

Most Read Articles

Kannada
English summary
Mg motors becomes first car company to adopt wind solar hybrid energy details
Story first published: Thursday, November 25, 2021, 18:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X