ಎಂಜಿ ಹೊಸ ಜೆಡ್ಎಸ್ ಪೆಟ್ರೋಲ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಹೊಚ್ಚ ಹೊಸ ಜೆಡ್ಎಸ್ ಪೆಟ್ರೋಲ್ ಮಾದರಿಯ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಮಧ್ಯಮ ಕ್ರಮಾಂಕದ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯಲ್ಲೇ ಅತಿ ಹೆಚ್ಚು ಐಷಾರಾಮಿ ಫೀಚರ್ಸ್‌ಗಳನ್ನು ಪಡೆದುಕೊಳ್ಳಲಿರುವ ಹೊಸ ಕಾರು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಲಿದೆ.

ಎಂಜಿ ಹೊಸ ಜೆಡ್ಎಸ್ ಪೆಟ್ರೋಲ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ದೇಶಿಯ ಮಾರುಕಟ್ಟೆಯಲ್ಲಿ ಹೆಕ್ಟರ್, ಹೆಕ್ಟರ್ ಪ್ಲಸ್, ಜೆಡ್ಎಸ್ ಎಲೆಕ್ಟ್ರಿಕ್ ಮತ್ತು ಗ್ಲೊಸ್ಟರ್ ಎಸ್‌ಯುವಿ ಕಾರುಗಳನ್ನು ಬಿಡುಗಡೆಗೊಳಿಸಿ ಅತ್ಯುತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಇದೇ ವರ್ಷಾಂತ್ಯಕ್ಕೆ ಜೆಡ್ಎಸ್ ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡಲಿದೆ. ಹೊಸ ಕಾರು ಬಿಡುಗಡೆಗಾಗಿ ಈಗಾಗಲೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿರುವ ಎಂಜಿ ಕಂಪನಿಯು ಹೊಸ ಕಾರನ್ನು ಪ್ರತಿ ಸ್ಪರ್ಧಿ ಕಾರು ಮಾದರಿಗಳಿಂತಸೂ ಭಿನ್ನವಾಗಿ ಗುರುತಿಸುವಂತಹ ಫೀಚರ್ಸ್‌ಗಳನ್ನು ಅಳವಡಿಸುತ್ತಿದೆ.

ಎಂಜಿ ಹೊಸ ಜೆಡ್ಎಸ್ ಪೆಟ್ರೋಲ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಹೆಕ್ಟರ್ ಮಾದರಿಗಿಂತಲೂ ಕೆಳ ದರ್ಜೆಯ ಕಾರು ಮಾದರಿಯಾಗಿ ಮಾರಾಟಗೊಳ್ಳಲಿರುವ ಹೊಸ ಜೆಡ್ಎಸ್ ಕಾರು ಮಾರುತಿ ಎಸ್-ಕ್ರಾಸ್, ರೆನಾಲ್ಟ್ ಡಸ್ಟರ್, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಕಾರುಗಳಿಗೂ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಎಂಜಿ ಹೊಸ ಜೆಡ್ಎಸ್ ಪೆಟ್ರೋಲ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಉತ್ತಮ ಬೆಲೆ ಆಯ್ಕೆಯೊಂದಿಗೆ ಕ್ರ್ಯಾಶ್ ಟೆಸ್ಟಿಂಗ್‌ನಲ್ಲೂ ಉತ್ತಮ ರೇಟಿಂಗ್ಸ್ ಪಡೆದುಕೊಳ್ಳುವ ಮೂಲಕ ಗ್ರಾಹಕರ ಸೆಳೆಯುವ ನೀರಿಕ್ಷೆಯಲ್ಲಿರುವ ಹೊಸ ಕಾರು ಐಷಾರಾಮಿ ಕಾರುಗಳಲ್ಲಿ ಅಳವಡಿಸಲಾಗುವ ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ(ಎಡಿಎಎಸ್) ಪಡೆದುಕೊಂಡಿರುವುದು ಕಾರಿನ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸುವ ನೀರಿಕ್ಷೆಯಿದೆ.

ಎಂಜಿ ಹೊಸ ಜೆಡ್ಎಸ್ ಪೆಟ್ರೋಲ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಎಡಿಎಎಸ್ ಸೌಲಭ್ಯ ಅಳವಡಿಕೆಯಿಂದ ಕಾರು ಚಾಲನೆ ವೇಳೆ ರಸ್ತೆಗುಂಡಿಗಳನ್ನು ಸುಲಭವಾಗಿ ಪತ್ತೆಹಚ್ಚಲು ರಡಾರ್ ಬಳಕೆಯಾಗಲಿದ್ದು, ಇದು ಅಗತ್ಯ ಸಂದರ್ಭಗಳಲ್ಲಿ ಅಟೊನೊಮಸ್ ಬ್ರೇಕಿಂಗ್ ಸಿಸ್ಟಂನೊಂದಿಗೆ ಕಾರ್ಯ ನಿರ್ವಹಣೆ ಮಾಡುವ ರಸ್ತೆಗುಂಡಿಯಿಂದಾಗುವ ಅಪಾಯವನ್ನು ತಡೆಯಬಲ್ಲದು. ಜೊತೆಗೆ ಚಾಲಕನಿಗೆ ಧ್ವನಿ ಸಂದೇಶ ಮೂಲಕ ಎಚ್ಚರಿಕೆ ನೀಡಲಿದ್ದು, ರಿವರ್ಸ್ ಸಂದರ್ಭದಲ್ಲಿ 3ಡಿ ಪನೊರಮಿಕ್ ವ್ಯೂ ಸೌಲಭ್ಯ ಒದಗಿಸುತ್ತದೆ.

ಎಂಜಿ ಹೊಸ ಜೆಡ್ಎಸ್ ಪೆಟ್ರೋಲ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಇದರೊಂದಿಗೆ ಹೊಸ ಕಾರು ಪ್ರೀಮಿಯಂ ಫೀಚರ್ಸ್‌ಗಳಲ್ಲಿ ಮಾತ್ರವಲ್ಲ ಸುರಕ್ಷತೆಯಲ್ಲೂ ಗಮನಸೆಳೆಯಲಿರುವ ಹೊಸ ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಕಿಯಾ ಸೆಲ್ಟೊಸ್ ಮತ್ತು ಹ್ಯುಂಡೈ ಕ್ರೆಟಾ ಕಾರುಗಳಿಂತಲೂ ಉತ್ತಮ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿರಲಿದೆ ಎನ್ನಲಾಗಿದೆ.

ಎಂಜಿ ಹೊಸ ಜೆಡ್ಎಸ್ ಪೆಟ್ರೋಲ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಕಾರು ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಮಾದರಿಯಲ್ಲೇ ತುಸು ವಿಭಿನ್ನ ವಿನ್ಯಾಸವನ್ನು ಹೊಂದಿರುವ ಜೆಡ್ಎಸ್ ಪೆಟ್ರೋಲ್ ಕಾರು ಎರಡು ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರಲಿದೆ ಎನ್ನಲಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಯೆಂತೆ ಸಾಮಾನ್ಯ ಪೆಟ್ರೋಲ್ ಮಾದರಿಯನ್ನು ಮತ್ತು ಪರ್ಫಾಮೆನ್ಸ್ ಬಯಸುವ ಗ್ರಾಹಕರು ಟರ್ಬೊ ಪೆಟ್ರೋಲ್ ಮಾದರಿಯನ್ನು ಖರೀದಿಸಬಹುದು.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಎಂಜಿ ಹೊಸ ಜೆಡ್ಎಸ್ ಪೆಟ್ರೋಲ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಜೆಡ್ಎಸ್ ಕಾರಿನಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡುವ ಸಾಧ್ಯತೆಗಳಿದ್ದು, ಹೊಸ ಕಾರು 4,314-ಎಂಎಂ ಉದ್ದ, 1,890-ಎಂಎಂ ಅಗಲ, 1,611-ಎಂಎಂ ಎತ್ತರ ಮತ್ತು 2,589-ಎಂಎಂ ವೀಲ್ಹ್‌ಬೆಸ್ ಪಡೆದುಕೊಂಡಿದೆ.

ಎಂಜಿ ಹೊಸ ಜೆಡ್ಎಸ್ ಪೆಟ್ರೋಲ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಕಾರನ್ನು ಈ ವರ್ಷದ ಮಾರ್ಚ್ ಅಥವಾ ಎಪ್ರಿಲ್ ಹೊತ್ತಿಗೆ ಬಿಡುಗಡೆಯ ಸಿದ್ದತೆಯಲ್ಲಿದ್ದ ಎಂಜಿ ಕಂಪನಿಯು ಕಾರಣಾಂತರಗಳಲ್ಲಿ ಮುಂಬರುವ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಎಂಜಿ ಹೊಸ ಜೆಡ್ಎಸ್ ಪೆಟ್ರೋಲ್ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ

ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ.9 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿದ್ದು, ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಾಗಿ ಟೆಸ್ಟಿಂಗ್ ಪ್ರಕ್ರಿಯೆಗಳು ಮುಂದುವರಿಸಲಾಗಿದೆ.

Most Read Articles

Kannada
English summary
MG ZS Petrol SUV Expected To Be Launched In Diwali 2021. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X