ಮಾರಾಟದಲ್ಲಿ ಹ್ಯಾಚ್‌ಬ್ಯಾಕ್‌ ಕಾರುಗಳನ್ನು ಹಿಂದಿಕ್ಕಿದ ಎಸ್‌ಯುವಿಗಳು

ಭಾರತದಲ್ಲಿ ಕಾಂಪ್ಯಾಕ್ಟ್ ಹಾಗೂ ಮಿಡ್ ಸೈಜ್ ಎಸ್‌ಯುವಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತೀಯ ಗ್ರಾಹಕರು ಈಗ ಎಸ್‌ಯುವಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿರುವುದನ್ನು ಅರಿತಿರುವ ಕಾರು ತಯಾರಕ ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಎಸ್‌ಯುವಿಗಳನ್ನು ಬಿಡುಗಡೆಗೊಳಿಸುತ್ತಿವೆ.

ಮಾರಾಟದಲ್ಲಿ ಹ್ಯಾಚ್‌ಬ್ಯಾಕ್‌ ಕಾರುಗಳನ್ನು ಹಿಂದಿಕ್ಕಿದ ಎಸ್‌ಯುವಿಗಳು

ಪ್ರತಿ ತಿಂಗಳು ಮಾರಾಟವಾಗುವ ಹೊಸ ಎಸ್‌ಯುವಿಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದೆ. 20201ರ ಸೆಪ್ಟೆಂಬರ್ ತಿಂಗಳ ಕಾರುಗಳ ಮಾರಾಟ ಅಂಕಿ ಅಂಶಗಳಿಂದ ಇದು ಸಾಬೀತಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ 38,199 ಯುನಿಟ್ ಮಧ್ಯಮ ಗಾತ್ರದ ಎಸ್‌ಯುವಿಗಳನ್ನು ಮಾರಾಟ ಮಾಡಲಾಗಿದೆ. ಈ ಮಾರಾಟ ಪ್ರಮಾಣವು 2020ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಸುಮಾರು 16% ನಷ್ಟು ಹೆಚ್ಚಾಗಿದೆ.

ಮಾರಾಟದಲ್ಲಿ ಹ್ಯಾಚ್‌ಬ್ಯಾಕ್‌ ಕಾರುಗಳನ್ನು ಹಿಂದಿಕ್ಕಿದ ಎಸ್‌ಯುವಿಗಳು

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 32,930 ಯುನಿಟ್ ಮಧ್ಯಮ ಗಾತ್ರದ ಎಸ್‌ಯುವಿಗಳನ್ನು ಮಾರಾಟ ಮಾಡಲಾಗಿತ್ತು. ಆದರೆ ವಾಸ್ತವವಾಗಿ ಕಾಂಪ್ಯಾಕ್ಟ್ ಎಸ್‌ಯುವಿಗಳ ಮಾರಾಟ ಪ್ರಮಾಣವು ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಿಗೆ ಹೋಲಿಸಿದರೆ ಕಳೆದ ತಿಂಗಳು ಅಲ್ಪ ಪ್ರಮಾಣದಲ್ಲಿ ಕುಸಿದಿದೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ 41,277 ಯುನಿಟ್ ಕಾಂಪ್ಯಾಕ್ಟ್ ಎಸ್‌ಯುವಿಗಳನ್ನು ಮಾರಾಟ ಮಾಡಲಾಗಿತ್ತು.

ಮಾರಾಟದಲ್ಲಿ ಹ್ಯಾಚ್‌ಬ್ಯಾಕ್‌ ಕಾರುಗಳನ್ನು ಹಿಂದಿಕ್ಕಿದ ಎಸ್‌ಯುವಿಗಳು

ಕಳೆದ ತಿಂಗಳು 33,301 ಯುನಿಟ್ ಕಾಂಪ್ಯಾಕ್ಟ್ ಎಸ್‌ಯುವಿಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿದೆ. ಕಾಂಪ್ಯಾಕ್ಟ್ ಎಸ್‌ಯುವಿಗಳ ಮಾರಾಟ ಪ್ರಮಾಣವು 2020ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಕಳೆದ ತಿಂಗಳು 19% ನಷ್ಟು ಕಡಿಮೆಯಾಗಿದೆ. ಎಸ್‌ಯುವಿಗಳ ನಂತರ Maruti Suzuki Ertiga ದಂತಹ ಎಂಪಿವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.

ಮಾರಾಟದಲ್ಲಿ ಹ್ಯಾಚ್‌ಬ್ಯಾಕ್‌ ಕಾರುಗಳನ್ನು ಹಿಂದಿಕ್ಕಿದ ಎಸ್‌ಯುವಿಗಳು

ಎಂಪಿವಿ ಕಾರುಗಳು ಕಳೆದ ತಿಂಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ. ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು 24,119 ಎಂಪಿವಿ ಕಾರುಗಳನ್ನು ಮಾರಾಟ ಮಾಡಲಾಗಿದೆ. 2020ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಕಳೆದ ತಿಂಗಳು ಎಂಪಿವಿ ಕಾರುಗಳ ಮಾರಾಟ ಪ್ರಮಾಣವು ಕೆಲವು ಸಾವಿರ ಯುನಿಟ್‌ಗಳಷ್ಟು ಕಡಿಮೆಯಾಗಿದೆ. ಪ್ರೀಮಿಯಂ ಗುಣಮಟ್ಟದ ಹ್ಯಾಚ್‌ಬ್ಯಾಕ್‌ ಕಾರುಗಳು 22,232 ಯುನಿಟ್‌ಗಳ ಮಾರಾಟದೊಂದಿಗೆ ನಾಲ್ಕನೇ ಸ್ಥಾನದಲ್ಲಿವೆ.

ಮಾರಾಟದಲ್ಲಿ ಹ್ಯಾಚ್‌ಬ್ಯಾಕ್‌ ಕಾರುಗಳನ್ನು ಹಿಂದಿಕ್ಕಿದ ಎಸ್‌ಯುವಿಗಳು

4ನೇ ಸ್ಥಾನದಲ್ಲಿದ್ದರೂ, ಕಳೆದ ತಿಂಗಳು ಮಾರಾಟವಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳ ಸಂಖ್ಯೆ 2020ರ ಸೆಪ್ಟೆಂಬರ್ ತಿಂಗಳಿಗಿಂತ 46% ನಷ್ಟು ಕಡಿಮೆಯಾಗಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 40,903 ಯುನಿಟ್ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳನ್ನು ಮಾರಾಟ ಮಾಡಲಾಗಿತ್ತು. ಇನ್ನು ಕಳೆದ ತಿಂಗಳು ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್‌ ಕಾರುಗಳ ಮಾರಾಟವು ಸಹ ಕಡಿಮೆಯಾಗಿದೆ.

ಮಾರಾಟದಲ್ಲಿ ಹ್ಯಾಚ್‌ಬ್ಯಾಕ್‌ ಕಾರುಗಳನ್ನು ಹಿಂದಿಕ್ಕಿದ ಎಸ್‌ಯುವಿಗಳು

ಕಳೆದ ತಿಂಗಳು 21,768 ಯುನಿಟ್ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್‌ ಕಾರುಗಳು ಮಾರಾಟವಾಗಿವೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ 70,559 ಯುನಿಟ್ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್‌ ಕಾರುಗಳು ಮಾರಾಟವಾಗಿದ್ದವು. ಕಳೆದ ತಿಂಗಳು ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್‌ ಕಾರುಗಳ ಮಾರಾಟವೂ ಸಹ ಸುಮಾರು 45% ನಷ್ಟು ಕುಸಿದಿದೆ. ಕಳೆದ ತಿಂಗಳು 17,724 ಯುನಿಟ್ ಬಜೆಟ್ ಹ್ಯಾಚ್‌ಬ್ಯಾಕ್‌ ಕಾರುಗಳನ್ನು ಮಾರಾಟ ಮಾಡಲಾಗಿದೆ.

ಮಾರಾಟದಲ್ಲಿ ಹ್ಯಾಚ್‌ಬ್ಯಾಕ್‌ ಕಾರುಗಳನ್ನು ಹಿಂದಿಕ್ಕಿದ ಎಸ್‌ಯುವಿಗಳು

ದೇಶಿಯ ಮಾರುಕಟ್ಟೆಯಲ್ಲಿ ಹ್ಯಾಚ್ ಬ್ಯಾಕ್ ಕಾರುಗಳ ಮಾರಾಟದಲ್ಲಿ ಕುಸಿತ ಕಂಡು ಬರಲು ಪ್ರಮುಖ ಕಾರಣ ಸೆಮಿ ಕಂಡಕ್ಟರ್'ಗಳ ಕೊರತೆ. ಸೆಮಿಕಂಡಕ್ಟರ್'ಗಳ ಕೊರತೆಯಿಂದಾಗಿ ಕಳೆದ ಕೆಲವು ತಿಂಗಳುಗಳಿಂದ Maruti Suzuki ಕಂಪನಿಯ ಉತ್ಪಾದನೆಗೆ ಅಡಚಣೆಯಾಗುತ್ತಿದೆ. ಇದರಿಂದ Maruti Suzuki ಕಂಪನಿಯು ಹೆಚ್ಚು ಕಾರುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.

ಮಾರಾಟದಲ್ಲಿ ಹ್ಯಾಚ್‌ಬ್ಯಾಕ್‌ ಕಾರುಗಳನ್ನು ಹಿಂದಿಕ್ಕಿದ ಎಸ್‌ಯುವಿಗಳು

Maruti Suzuki ಕಂಪನಿಯ ಕಾರುಗಳು ದೇಶಿಯ ಮಾರುಕಟ್ಟೆಯ ಕಾರುಗಳ ಮಾರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹ್ಯಾಚ್ ಬ್ಯಾಕ್ ಕಾರುಗಳ ಮಾರಾಟ ಕುಸಿತವು ಅಕ್ಟೋಬರ್ ತಿಂಗಳಿನಲ್ಲಿಯೂ ಮುಂದುವರಿಯುವ ಸಾಧ್ಯತೆಗಳಿವೆ. Maruti Suzuki ಕಂಪನಿಯು ತನ್ನ ಅಕ್ಟೋಬರ್ ತಿಂಗಳ ಉತ್ಪಾದನೆಯನ್ನು 40% ನಷ್ಟು ಕಡಿತಗೊಳಿಸುವುದಾಗಿ ಘೋಷಿಸಿದೆ.

ಮಾರಾಟದಲ್ಲಿ ಹ್ಯಾಚ್‌ಬ್ಯಾಕ್‌ ಕಾರುಗಳನ್ನು ಹಿಂದಿಕ್ಕಿದ ಎಸ್‌ಯುವಿಗಳು

ಒಂದು ಕಾಲದಲ್ಲಿ ಸೆಡಾನ್ ಕಾರುಗಳು ಭಾರತವೂ ಸೇರಿದಂತೆ ಪ್ರಪಂಚದ ಎಲ್ಲಾ ದೇಶಗಳಲ್ಲೂ ಪ್ರಾಬಲ್ಯವನ್ನು ಹೊಂದಿದ್ದವು. ಈಗ ದೇಶಿಯ ಮಾರುಕಟ್ಟೆಯಲ್ಲಿ ಸೆಡಾನ್ ಕಾರುಗಳ ಪ್ರಾಬಲ್ಯ ಬಹುತೇಕ ಮುಗಿದಿದೆ ಎಂದೇ ಹೇಳಬಹುದು. ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ 8,370 ಯುನಿಟ್ ಕಾಂಪ್ಯಾಕ್ಟ್ ಸೆಡಾನ್‌ ಕಾರುಗಳು ಮಾರಾಟವಾಗಿವೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ 25,000 ಯುನಿಟ್ ಸೆಡಾನ್ ಕಾರುಗಳು ಮಾರಾಟವಾಗಿದ್ದವು.

ಮಾರಾಟದಲ್ಲಿ ಹ್ಯಾಚ್‌ಬ್ಯಾಕ್‌ ಕಾರುಗಳನ್ನು ಹಿಂದಿಕ್ಕಿದ ಎಸ್‌ಯುವಿಗಳು

ಕಳೆದ ತಿಂಗಳು ಕಾಂಪ್ಯಾಕ್ಟ್ ಸೆಡಾನ್‌ ಕಾರುಗಳು ಸುಮಾರು 8,000 ಯುನಿಟ್‌ಗಳಷ್ಟು ಮಾರಾಟವಾಗಿದ್ದರೆ, ಎಕ್ಸಿಕ್ಯುಟಿವ್ ಸೆಡಾನ್ ಕಾರುಗಳ ಒಟ್ಟು 5,842 ಯುನಿಟ್ ಗಳು ಮಾರಾಟವಾಗಿವೆ. ಇನ್ನು ಕಳೆದ ತಿಂಗಳು ಕೇವಲ 269 ಯುನಿಟ್ ಐಷಾರಾಮಿ ಸೆಡಾನ್ ಕಾರುಗಳು ಹಾಗೂ 227 ಯುನಿಟ್ ಪ್ರೀಮಿಯಂ ಸೆಡಾನ್ ಕಾರುಗಳು ಮಾರಾಟವಾಗಿವೆ.ಹಬ್ಬದ ಋುತುವಿನಲ್ಲಿ ವಿವಿಧ ಕಾರು ಉತ್ಪಾದನಾ ಕಂಪನಿಗಳು ತಮ್ಮ ಬಹು ನಿರೀಕ್ಷಿತ ಕಾರುಗಳನ್ನು ಬಿಡುಗಡೆಗೊಳಿಸಲು ಮುಂದಾಗಿದ್ದು, ದಸರಾ ವೇಳೆಗೆ ಪ್ರಮುಖ ಕಾರು ತಯಾರಕ ಕಂಪನಿಗಳು ವಿವಿಧ ಕಾರುಗಳನ್ನು ರಸ್ತೆಗಿಳಿಸಲು ಸಜ್ಜಾಗಿವೆ.ಕೋವಿಡ್ ಹಿನ್ನೆಲೆಯಲ್ಲಿ ಕಾರುಗಳ ಬಿಡುಗಡೆಯನ್ನು ಮುಂದೂಡಿದ್ದ ಪ್ರಮುಖ ಕಾರು ಕಂಪನಿಗಳು ಈಗ ತಮ್ಮ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಮುಂದಾಗಿವೆ. ಹೊಸ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಹಬ್ಬದ ಸಂದರ್ಭದಲ್ಲಿ ಹೊಸ ಕಾರುಗಳು ಬಿಡುಗಡೆಯಾಗಲಿವೆ. ಇದೇ ವೇಳೆ ಎಲ್ಲಾ ಕಾರು ತಯಾರಕ ಕಂಪನಿಗಳು ತಮ್ಮ ಹೊಸ ಕಾರುಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ನೀಡಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು ಹೇಳಿದ್ದಾರೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Mid size suv sales overtakes hatchback car sales in september 2021 details
Story first published: Thursday, October 14, 2021, 11:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X