3 ಡೋರುಗಳ, 5 ಡೋರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಪರಿಚಯಿಸಿದ ಮಿನಿ

ಮಿನಿ ಕಂಪನಿಯು ತನ್ನ 3 ಡೋರ್, 5 ಡೋರ್ ಹಾಗೂ ಕನ್ವರ್ಟಿಬಲ್ ಹ್ಯಾಚ್‌ಬ್ಯಾಕ್‌ಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಪರಿಚಯಿಸಿದೆ. ಮಿನಿ ಫೇಸ್‌ಲಿಫ್ಟ್ ಮಾದರಿಗಳನ್ನು ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಾಗುವುದು.

3 ಡೋರುಗಳ, 5 ಡೋರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಪರಿಚಯಿಸಿದ ಮಿನಿ

ಈ ಮಾದರಿಗಳ ಇಂಟಿರಿಯರ್ ಹಾಗೂ ಎಕ್ಸ್ ಟಿರಿಯರ್'ಗಳನ್ನು ಅಪ್ ಡೇಟ್ ಮಾಡಲಾಗಿದೆ. ಮುಂಭಾಗ, ಇಂಟಿರಿಯರ್ ವಿನ್ಯಾಸ, ಕ್ಯಾಬಿನ್, ಅಲಾಯ್ ವ್ಹೀಲ್, ಸೀಟ್ ಹಾಗೂ ಬಣ್ಣಗಳನ್ನು ಬದಲಿಸಲಾಗಿದೆ. ಮಿನಿ 3-ಡೋರ್, 5-ಡೋರ್ ಹಾಗೂ ಕನ್ವರ್ಟಿಬಲ್'ಗಳ ಮುಂಭಾಗದದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.

3 ಡೋರುಗಳ, 5 ಡೋರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಪರಿಚಯಿಸಿದ ಮಿನಿ

ಈ ಕಾರುಗಳ ಮುಂಭಾಗದ ಹೆಕ್ಸಾಗನಲ್ ಗ್ರಿಲ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ. ಹೆಡ್‌ಲೈಟ್ ವಿನ್ಯಾಸವನ್ನು ಸಹ ನವೀಕರಿಸಲಾಗಿದೆ. ಕಾರಿನ ರೇಡಿಯೇಟರ್ ಗ್ರಿಲ್ ಈಗ ಮೊದಲಿಗಿಂತ ದೊಡ್ಡದಾಗಿದೆ ಎಂದು ಹೇಳಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

3 ಡೋರುಗಳ, 5 ಡೋರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಪರಿಚಯಿಸಿದ ಮಿನಿ

ಕಾರಿನ ಹೆಡ್‌ಲೈಟ್ ಎಲ್‌ಇಡಿ ಹೈಬೀಮ್ ಹಾಗೂ ಲೋಬೀಮ್ ಅನ್ನು ಹೊಂದಿದ್ದು ಇದರಿಂದ ರಾತ್ರಿ ವೇಳೆಯಲ್ಲಿ ಎದುರಿಗಿರುವ ವಸ್ತುಗಳು ಸ್ಪಷ್ಟವಾಗಿ ಕಾಣುತ್ತವೆ. ಕಾರಿನ ಅಲಾಯ್ ವ್ಹೀಲ್'ಗಳಲ್ಲಿಯೂ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ.

3 ಡೋರುಗಳ, 5 ಡೋರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಪರಿಚಯಿಸಿದ ಮಿನಿ

ಕಾರಿನಲ್ಲಿ ಡ್ಯುಯಲ್ ಟೋನ್ 7-ಸ್ಪೋಕ್ ಅಲಾಯ್ ವ್ಹೀಲ್, ಹೆಡ್‌ಲೈಟ್‌ನ ಬದಿಯಲ್ಲಿ ಎಲ್‌ಇಡಿ ಟರ್ನ್ ಇಂಡಿಕೇಟರ್ ಅಳವಡಿಸಲಾಗಿದೆ. ಕಾರಿನ ಹಿಂಭಾಗದ ಏಪ್ರನ್ ಎಲ್ಇಡಿ ಡಿಫಾಗರ್ ಹೊಂದಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

3 ಡೋರುಗಳ, 5 ಡೋರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಪರಿಚಯಿಸಿದ ಮಿನಿ

ಮಿನಿ ಕಾರುಗಳು ರೂಫ್ ಟಾಪ್ ಗ್ರೇ, ಐಲ್ಯಾಂಡ್ ಬ್ಲೂ ಹಾಗೂ ಜೀಟಿ ಯೆಲ್ಲೋ ಬಣ್ಣಗಳಲ್ಲಿ ಮಾರಾಟವಾಗಲಿವೆ. ಈ ಕಾರುಗಳಲ್ಲಿ ಮಲ್ಟಿಟೋನ್ ರೂಫ್ ಆಯ್ಕೆಯನ್ನು ಸಹ ನೀಡಲಾಗಿದೆ.

3 ಡೋರುಗಳ, 5 ಡೋರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಪರಿಚಯಿಸಿದ ಮಿನಿ

ಇದರ ಜೊತೆಗೆ ಅಲಾಯ್ ವ್ಹೀಲ್'ಗಳ ವಿನ್ಯಾಸವನ್ನು ಸಹ ಬದಲಿಸುವ ಸಾಧ್ಯತೆಗಳಿವೆ. ಕಾರಿನ ಇಂಟಿರಿಯರ್ ಅನ್ನು ಮೊದಲಿಗಿಂತ ಹೆಚ್ಚು ಪ್ರೀಮಿಯಂ ಮಾಡಲಾಗಿದೆ. ಕಾರಿನ ಫಿನಿಷಿಂಗ್ ಅನ್ನು ಸುಧಾರಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

3 ಡೋರುಗಳ, 5 ಡೋರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಪರಿಚಯಿಸಿದ ಮಿನಿ

ಈ ಕಾರಿನೊಳಗೆ ಹೊಸ ಸ್ಪೋರ್ಟ್ಸ್ ಸೀಟುಗಳನ್ನು ಅಳವಡಿಸಲಾಗಿದೆ. ಕಾರಿನ ಕ್ಯಾಬಿನ್‌ನಲ್ಲಿ ಹೊಸ 8.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ನೀಡಲಾಗಿದೆ. ಇದರ ಜೊತೆಗೆ ಹೊಸ ಏರ್ ವೆಂಟ್ಸ್, ಹೊಸ ಸ್ವಿಚ್, ಹೊಸ ಲೆದರ್ ಕವರ್ಡ್ ಸ್ಟೀಯರಿಂಗ್ ವ್ಹೀಲ್, ಎಲ್ಇಡಿ ಆಂಬಿಯೆಂಟ್ ಲೈಟಿಂಗ್'ಗಳನ್ನು ನೀಡಲಾಗಿದೆ.

3 ಡೋರುಗಳ, 5 ಡೋರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಪರಿಚಯಿಸಿದ ಮಿನಿ

ಈಗ ಈ ಮಿನಿ ಕಾರುಗಳಲ್ಲಿ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸಹ ನೀಡಲಾಗುತ್ತದೆ. ಸುರಕ್ಷತೆಗಾಗಿ ಆಕ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಚೇಂಜ್ ವಾರ್ನಿಂಗ್, ವೆದರಿಂಗ್ ಸಿಸ್ಟಂಗಳನ್ನು ನೀಡಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

3 ಡೋರುಗಳ, 5 ಡೋರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಪರಿಚಯಿಸಿದ ಮಿನಿ

ಈಗ ಇರುವ ಎಂಜಿನ್'ಗಳನ್ನೇ ಹೊಸ ಮಿನಿ ಕಾರುಗಳಲ್ಲಿಯೂ ನೀಡಲಾಗುವುದು. ಮಿನಿ ಇಂಡಿಯಾ ಕಂಪನಿಯು ಕಳೆದ ವರ್ಷ ಭಾರತದಲ್ಲಿ ಮಾರಾಟದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ.

3 ಡೋರುಗಳ, 5 ಡೋರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಪರಿಚಯಿಸಿದ ಮಿನಿ

2020ರ ಕೊನೆಯ ತ್ರೈಮಾಸಿಕದಲ್ಲಿ (ಅಕ್ಟೋಬರ್-ಡಿಸೆಂಬರ್) ಕಂಪನಿಯು 34%ನಷ್ಟು ಬೆಳವಣಿಗೆ ಸಾಧಿಸಿರುವುದಾಗಿ ವರದಿಯಾಗಿದೆ. 2020ರಲ್ಲಿ ಭಾರತದಲ್ಲಿ 512 ಮಿನಿ ಕಾರುಗಳು ಮಾರಾಟವಾಗಿವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

3 ಡೋರುಗಳ, 5 ಡೋರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಪರಿಚಯಿಸಿದ ಮಿನಿ

ಈ ಮೂಲಕ ಡಿಸೆಂಬರ್‌ನಲ್ಲಿ ಇದುವರೆಗಿನ ಅತಿ ಹೆಚ್ಚು ಮಾರಾಟವನ್ನು ದಾಖಲಿಸಿದೆ. ಮಿನಿ ಬಿಎಂಡಬ್ಲ್ಯು ಒಡೆತನದ ಕಂಪನಿಯಾಗಿದ್ದು ಭಾರತದಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳನ್ನು ಮಾರಾಟ ಮಾಡುತ್ತದೆ.

3 ಡೋರುಗಳ, 5 ಡೋರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಪರಿಚಯಿಸಿದ ಮಿನಿ

ಕಂಪನಿಯು ಭಾರತದಲ್ಲಿ ಮಿನಿ ಕಾರುಗಳನ್ನು ಅಸೆಂಬಲ್ ಮಾಡುತ್ತದೆ. ಮಿನಿ ಕಂಟ್ರಿಮ್ಯಾನ್ ಕಾರು ಮಿನಿ ಮಾರಾಟದಲ್ಲಿ 40%ನಷ್ಟು ಪಾಲನ್ನು ಹೊಂದಿದ್ದರೆ, ಮಿನಿ ಹ್ಯಾಚ್‌ಬ್ಯಾಕ್ ಕಾರುಗಳು 33% ಹಾಗೂ ಮಿನಿ ಕನ್ವರ್ಟಿಬಲ್ 23%ನಷ್ಟು ಪಾಲನ್ನು ಹೊಂದಿವೆ.

Most Read Articles

Kannada
English summary
Mini company introduces facelifted version of 3 door 5 door and convertible cars. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X