Just In
Don't Miss!
- News
ರಾಜ್ಯ ಬಜೆಟ್ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದೇನು?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Finance
30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಕ್ಯಾಪ್ಜೆಮಿನಿ
- Movies
ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2020ರ ಅವಧಿಯ ಕಾರು ಮಾರಾಟ ವರದಿಯನ್ನು ಬಹಿರಂಗಪಡಿಸಿದ ಮಿನಿ ಇಂಡಿಯಾ
ಜನಪ್ರಿಯ ಮಿನಿ ಇಂಡಿಯಾ ಕಂಪನಿಯು 2020ರ ಅವಧಿಯ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷದಲ್ಲಿ ಮಿನಿ ಇಂಡಿಯಾ ಕಂಪನಿಯು 512 ಕಾರುಗಳನ್ನು ಮಾರಾಟಗೊಳಿಸಿವೆ.

ಕರೋನಾ ಸೋಂಕಿನ ಆರ್ಭಟ ಇಳಿಮುಖವಾದ ಬಳಿಕ 2020ರ ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳಲ್ಲಿನ ಕಾರು ಮಾರಾಟದಲ್ಲಿ ಮಿನಿ ಬ್ರ್ಯಾಂಡ್ ಉತ್ತಮ ಬೆಳವಣಿಗೆಯನ್ನು ಪಡೆದುಕೊಂಡಿತ್ತು. 2019ರಲ್ಲಿ ಇದೇ ಅವಧಿಗೆ ಹೋಲಿಸಿದರೆ ಶೇ.34 ರಷ್ಟು ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದೆ. ಸ್ಥಳೀಯವಾಗಿ ಉತ್ಪಾದಿಸಲಾದ ಮಿನಿ ಕಂಟ್ರಿಮ್ಯಾನ್ ಮಾರಾಟದಲ್ಲಿ ಶೇ.40 ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದೆ.

ಇನ್ನು ಐಕಾನಿಕ್ ಮಿನಿ ಹ್ಯಾಚ್ ಶೇ.3 ರಷ್ಟು ಕೊಡುಗೆ ನೀಡಿದರೆ, ಅತ್ಯಂತ ಜನಪ್ರಿಯ ಮಿನಿ ಕನ್ವರ್ಟಿಬಲ್ ಶೇ.23 ಕ್ಕಿಂತ ಹೆಚ್ಚು ಕೊಡುಗೆ ನೀಡಿದೆ. ಒಟ್ಟಾರೆ ಮಿನಿ ಬ್ರ್ಯಾಂಡ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೆಳವಣಿಗೆಯನ್ನು ಸಾಧಿಸುವಲ್ಲಿ ಯಶ್ವಸಿಯಾಗಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300

ಮಿನಿ ಇಂಡಿಯಾ ಕಂಪನಿಯು ಮಿನಿ ಕ್ಲಬ್ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಎಡಿಷನ್, ಮಿನಿ 60 ಇಯರ್ಸ್ ಎಡಿಷನ್, ಮಿನಿ ಕನ್ವರ್ಟಿಬಲ್ ಸೈಡ್ವಾಕ್ ಎಡಿಷನ್ ಮತ್ತು ಮಿನಿ ಜಾನ್ ಕೂಪರ್ ವರ್ಕ್ಸ್ ಜಿಪಿ ಎಂಬ ನಾಲ್ಕು ಲಿಮಿಟೆಡ್ ಎಡಿಷನ್ ಗಳನ್ನು ಬಿಡುಗಡೆಗೊಳಿಸಿತ್ತು.

ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಅಧ್ಯಕ್ಷ ವಿಕ್ರಮ್ ಪವಾಹ್ ಅವರು ಮಾತನಾಡಿ, ಮಿನಿ ಆನ್ಲೈನ್ ಸ್ಟ್ರೋರ್ ಪರಿಚಯದೊಂದಿಗೆ ತನ್ನ ಗ್ರಾಹಕರಿಗೆ ಸಂಪೂರ್ಣ ಆನ್ಲೈನ್ ವ್ಯವಹರಿಸುವ ಮೂಲಕ ಹೊಸತನವನ್ನು ಮತ್ತು ತ್ವರಿತವಾಗಿ ಹೊಂದಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಮಿನಿ ತನ್ನ ಕೂಪರ್ನ ಸ್ಪೆಷಲ್ ಎಡಿಷನ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಈ ಹೊಸ ಮಿನಿ ಜಾನ್ ಕೂಪರ್ ವರ್ಕ್ಸ್ ಹ್ಯಾಚ್ ಲಿಮಿಟೆಡ್ ಎಡಿಷನ್ ಮಿನಿ ಕೂಪರ್ ವರ್ಕ್ಸ್ ಜಿಪಿಯಿಂದ ಪ್ರೇರಿತವಾಗಿದೆ.

ಮಿನಿ ತನ್ನ ಕ್ಲಬ್ಮ್ಯಾನ್ ಕೂಪರ್ ಎಸ್ ಕಾರನ್ನು ಕೂಡ ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಇದರಲ್ಲಿ 2.0-ಲೀಟರ್, ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 189 ಬಿಹೆಚ್ಪಿ ಪವರ್ ಮತ್ತು 280 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7-ಸ್ಫೀಡ್ ಡಬಲ್-ಕ್ಲಚ್ ಸ್ಟೆಪ್ಟ್ರಾನಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಮಿನಿ ಕ್ಲಬ್ಮ್ಯಾನ್ ಕೂಪರ್ ಎಸ್ ಕಾರು 7.2 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಮಿನಿ ಕ್ಲಬ್ಮ್ಯಾನ್ ಕೂಪರ್ ಎಸ್ ಕಾರು ಪ್ರತಿ ಲೀಟರ್ಗೆ 13.79 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

2020ರಲ್ಲಿ ಮಿನಿ ಇಂಡಿಯಾ ಮಿನಿ ಆನ್ಲೈನ್ ಶಾಪ್ ಪ್ರಾರಂಭಿಸಿ ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಟ್ಟರು. ಆನ್ಲೈನ್ ನಲ್ಲೇ ನಿಮ್ಮ ಆಯ್ಕೆಯ ಮಾದರಿಯನ್ನು ಕಾನ್ಫಿಗರ್ ಮಾಡಲು, ಹತ್ತಿರದ ಡೀಲರ್ ಅನ್ನು ಪತ್ತೆ ಮಾಡಲು, ಟೆಸ್ಟ್ ಡ್ರೈವ್ ಮತ್ತು ಇತರ ಮಾಹಿತಿಗಳನ್ನು ಪಡೆಯಬಹುದಾಗಿದೆ. ಇದು ಮಿನಿ ಕಾರು ಮಾರಾಟದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿತು.