Just In
- 9 hrs ago ಜಿಮ್ನಿಗೆ ಸೆಡ್ಡು ಹೊಡೆಯಲು ಎಂಜಿ ಮಾಸ್ಟರ್ ಪ್ಲಾನ್: ಸದ್ಯದಲ್ಲೇ ಕಾಮೆಟ್ ಆಧರಿಸಿ 5 ಡೋರ್ ಕಾರು ಭಾರತಕ್ಕೆ?
- 9 hrs ago KWID: ಜನಪ್ರಿಯ ರೆನಾಲ್ಟ್ ಕ್ವಿಡ್ ಕಾರು ಖರೀದಿಸಬೇಕೇ.. ಆನ್ - ರೋಡ್ ಬೆಲೆ ಏನು, EMI ಎಷ್ಟು?
- 10 hrs ago Citroen Basalt Vision: ಸಿಟ್ರನ್ ಹೊಸ ಕಾಂಪ್ಯಾಕ್ಟ್ ಎಸ್ಯುವಿ ಅನಾವರಣ... ಬಿಡುಗಡೆಗೆ ಸಜ್ಜು!
- 10 hrs ago ತಂದೆಯ ಪ್ರೀತಿ: ಮಗಳಿಗೆ ರೂ.2.44 ಕೋಟಿ ಬೆಲೆಯ ಮರ್ಸಿಡಿಸ್ ಕಾರು ಗಿಫ್ಟ್ ನೀಡಿದ ಬಿಜೆಪಿ ಲೀಡರ್
Don't Miss!
- Sports SRH vs MI IPL Match: ಹೈಲೈಟ್ಸ್ ನಂತೆ ಕಂಡ ಲೈವ್ ಮ್ಯಾಚ್: ಮುತ್ತಿನ ನಗರಿಯಲ್ಲಿ ಆರ್ಭಟಿಸಿ ಇತಿಹಾಸದ ಪುಟ ಸೇರಿದ SRH
- Lifestyle ಬೆಂಗಳೂರಿಗರೇ... ನೀರಿನ ಕೊರತೆ ತಪ್ಪಿಸಲು ಈ ಟ್ರಿಕ್ಸ್ ಹಾಗೂ ಟಿಪ್ಸ್ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ
- News Chitradurga Lok Sabha Constituency: ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ರಾಜಕೀಯ ಹಿನ್ನೆಲೆ ತಿಳಿಯಿರಿ-ಮಾಹಿತಿ, ವಿವರ
- Movies ಪುಷ್ಪ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಿರುತೆರೆ ನಟಿ ಅಮೂಲ್ಯ ಬೋಲ್ಡ್ ಫೋಟೋಶೂಟ್ ಹೇಗಿದೆ ನೋಡಿ!
- Finance ಐಟಿಆರ್ ಸಲ್ಲಿಸಿದ್ದರೂ, ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಇಮೇಲ್ ಬಂದಿದೆಯೇ?
- Technology ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೂಪರ್ ಸೀರಿಸ್‌ನ 60ನೇ ಆನಿವರ್ಸರಿ ಎಡಿಷನ್ ಪರಿಚಯಿಸಿದ ಮಿನಿ
ಮಿನಿ ಕಂಪನಿಯು ತನ್ನ ಕೂಪರ್ ಸೀರಿಸ್‌ನ 60ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದ ಭಾಗವಾಗಿ 3-ಡೋರಿನ ಆನಿವರ್ಸರಿ ಎಡಿಷನ್ ಅನ್ನು ಪರಿಚಯಿಸಿದೆ. ಇದನ್ನು ವಿಶ್ವಾದ್ಯಂತ 740 ಯುನಿಟ್‌ಗಳಿಗೆ ಸೀಮಿತವಾಗಲಿರುವ ಮೂರು-ಡೋರಿನ ಮಾದರಿಯಾಗಿದೆ.
60ನೇ ಕೂಪರ್ ಆನಿವರ್ಸರಿ ಎಡಿಷನ್ ಮೂಲಕ 2000 ರಲ್ಲಿ ನಿಧನರಾದ ಜಾನ್ ಕೂಪರ್‌ಗೆ ಗೌರವ ಸಲ್ಲಿಸಲಿದೆ. ಕೂಪರ್ ಸೀರಿಸ್ ನಲ್ಲಿ ಮಿನಿ ಕೂಪರ್, ಮಿನಿ ಕೂಪರ್ ಎಸ್ ಮತ್ತು ಮಿನಿ ಜಾನ್ ಕೂಪರ್ ವರ್ಕ್ಸ್ ಮಾದರಿಗಳನ್ನು ಒಳಗೊಂಡಿದೆ. ಆನಿವರ್ಸರಿ ಎಡಿಷನ್ ಬ್ರಿಟಿಷ್ ರೇಸಿಂಗ್ ಗ್ರೀನ್, ಮಿಡ್ನೈಟ್ ಬ್ಲ್ಯಾಕ್ ಮತ್ತು ರೆಬೆಲ್ ಗ್ರೀನ್ ಜೊತೆ ಪಿಯಾನೋಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.
ಕೂಪರ್ ಆನಿವರ್ಸರಿ ಎಡಿಷನ್ ಹುಡ್ ಸ್ಟ್ರೈಪ್ಸ್ ಮತ್ತು ಅದರ ಡೋರುಗಳಲ್ಲಿ '74' ಸಂಖ್ಯೆಯನ್ನು ಸಹ ಹೊಂದಿರುತ್ತದೆ. ಇದು ತನ್ನ ಮೊದಲ ರೇಸ್ ನಲ್ಲಿ ಗೆದ್ದಾಗ ಕಾಣಿಸಿಕೊಂಡ ಮೂಲ ಮಾದರಿಯ ಸಂಖ್ಯೆಯಾಗಿದೆ.
ಇನ್ನು ಈ ಹೊಸ ಕೂಪರ್ ಆನಿವರ್ಸರಿ ಎಡಿಷನ್ ಮುಖ್ಯಾಂಶಗಳು, ಆಕರ್ಷಕವಾದ 18-ಇಂಚಿನ ಅಲಾಯ್ ವ್ಹೀಲ್ ಗಳು, ಸೈಡ್ ಸ್ಕಟಲ್ಸ್ ಮತ್ತು ಸಿ-ಪಿಲ್ಲರ್‌ಗಳಲ್ಲಿ 'ಕೂಪರ್' ಬ್ಯಾಡ್ಜಿಂಗ್ ಅನ್ನು ಒಳಗೊಂಡಿದೆ.
ಈ ಕಾರಿನ ಒಳಭಾಗದಲ್ಲಿ, ಜಾನ್ ಕೂಪರ್ ವರ್ಕ್ಸ್ ಸ್ಪೋರ್ಟ್ಸ್ ಸೀಟುಗಳು ಡೈನಾಮಿಕಾ/ಲೆದರ್ ಕಾರ್ಬನ್ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ. ಸ್ಟೀಯರಿಂಗ್ ವ್ಹೀಲ್ ನಪ್ಪಾ ಲೆದರ್‌ನಲ್ಲಿ ಧರಿಸಲಾಗಿದೆ. ಇನ್ನು ಪಿಯಾನೋ ಬ್ಲ್ಯಾಕ್ ಹೈ-ಗ್ಲೋಸ್‌ನಲ್ಲಿ ಆಂಥ್ರಾಸೈಟ್ ಬಣ್ಣದ ಹೆಡ್‌ಲೈನರ್, ಸ್ಟೇನ್‌ಲೆಸ್ ಸ್ಟೀಲ್ ಪೆಡಲ್ ಸೆಟ್ ಮತ್ತು ಇಂಟಿರಿಯರ್ ಟ್ರಿಮ್ ಹೊಂದಿದೆ.
ಇದರ ಇಂಟಿರಿಯರ್ ನಲ್ಲಿ ಜಾನ್, ಮೈಕ್ ಮತ್ತು ಚಾರ್ಲಿ ಕೂಪರ್ ಅವರ ಸಹಿಯನ್ನು ಒಳಗೊಂಡಿದೆ. ಇದಲ್ಲದೆ ಡ್ರೈವರ್ ಡೋರ್ ಒಳಭಾಗದಲ್ಲಿ ಜಾನ್ ಕೂಪರ್ ಅವರ ಸಹಿ, 1 ಆಫ್ 740 ಎಂದು ಬರೆಯಲಾಗಿದೆ.
ಇನ್ನು ಮಿನಿ ಕಂಪನಿಯು ತನ್ನ 2022ರ ಜಾನ್ ಕೂಪರ್ ವರ್ಕ್ಸ್ ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪರಿಚಯಿಸಲಾಗಿದೆ. ಈ 2022ರ ಮಿನಿ ಜಾನ್ ಕೂಪರ್ ವರ್ಕ್ಸ್ ಕಾರು ವಿನ್ಯಾಸ ಬದಲಾವಣೆಗಳೊಂದಿಗೆ ಹೊಸ ಸಸ್ಪೆಂಕ್ಷನ್ ಸೆಟಪ್ ಅನ್ನು ಪಡೆದುಕೊಂಡಿದೆ.
2022ರ ಮಿನಿ ಜಾನ್ ಕೂಪರ್ ವರ್ಕ್ಸ್ ಫೇಸ್‌ಲಿಫ್ಟ್ ಕಾರಿನಲ್ಲಿ ದೇ 2.0-ಲೀಟರ್, ನಾಲ್ಕು-ಸಿಲಿಂಡರ್, ಟ್ವಿನ್-ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 231 ಬಿಹೆಚ್‍ಪಿ ಪವರ್ ಮತ್ತು 320 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಹೊಸದಾಗಿ ಈ ಕಾರಿನಲ್ಲಿ 8-ಸ್ಫೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಆಯ್ಕೆಯಾಗಿ ನೀಡಲಾಗಿದೆ.
ಇನ್ನು ಕೂಪರ್ ಆನಿವರ್ಸರಿ ಎಡಿಷನ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ ಕಾರಿನಲ್ಲಿರುವ ಪಿಯಾನೋ ಬ್ಲ್ಯಾಕ್ ಇದರ ಆಕರ್ಷಕಣೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹೊರಭಾಗದಲ್ಲಿರುವ ಬ್ಲ್ಯಾಕ್ ಮತ್ತು ಬೈಕ್ ಬಣ್ಣಗಳ ಅಂಶಗಳೊಂದಿಗೆ ಅಗ್ರೇಸಿವ್ ಮತ್ತು ಸ್ಪೋರ್ಟಿಯಾಗಿದೆ.