Just In
- 7 hrs ago
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- 9 hrs ago
ಜಪಾನ್ನಲ್ಲಿ ಬಿಡುಗಡೆಯಾಯ್ತು ಮೇಡ್ ಇನ್ ಇಂಡಿಯಾ 2021ರ ಸುಜುಕಿ ಜಿಕ್ಸರ್ 250 ಬೈಕ್
- 9 hrs ago
ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ
- 10 hrs ago
ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್
Don't Miss!
- Lifestyle
ಗುರುವಾರದ ದಿನ ಭವಿಷ್ಯ: ಈ ದಿನ ಹೇಗಿದೆ ನಿಮ್ಮ ರಾಶಿಫಲ
- News
ಬೆಂಗಳೂರಿನಲ್ಲಿ ಭೀತಿ: ಕೊರೊನಾ ಹೆಚ್ಚು ರೆಮ್ಡೆಸಿವಿರ್ ಔಷಧಿ ಕಡಿಮೆ!
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Movies
40, 50, 60ರ ಸೀಕ್ರೆಟ್ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾಹನಗಳ ಬೆಲೆ ನಿಯಂತ್ರಣಕ್ಕೆ ಸ್ಥಳೀಯ ಉತ್ಪಾದನೆ ಹೆಚ್ಚಳ ಅತ್ಯಗತ್ಯ- ನಿತಿನ್ ಗಡ್ಕರಿ
ದಿನಂಪ್ರತಿ ಹೆಚ್ಚುತ್ತಿರುವ ಇಂಧಗಳ ಬೆಲೆಯಿಂದಾಗಿ ಹೊಸ ವಾಹನಗಳ ಮಾರಾಟದಲ್ಲಿ ಕುಸಿತ ಭೀತಿ ಎದುರಾಗಿರುವ ಬೆನ್ನಲ್ಲೇ ವಾಹನ ಉತ್ಪಾದನೆಯ ವೆಚ್ಚ ನಿರ್ವಹಣೆಗಾಗಿ ವಾಹನ ತಯಾರಕ ಕಂಪನಿಗಳು ಬೆಲೆ ಹೆಚ್ಚಳಕ್ಕೆ ಮುಂದಾಗಿರುವುದು ಹೊಸ ವಾಹನಗಳ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ.

ಈ ವರ್ಷದ ಆರಂಭದಲ್ಲೇ ವಿವಿಧ ವಾಹನ ಮಾದರಿಗಳ ಬೆಲೆ ಹೆಚ್ಚಳ ಮಾಡಿದ್ದ ಬಹುತೇಕ ಆಟೋ ಕಂಪನಿಗಳು ಇದೀಗ ಮತ್ತೆ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಲೆಗೆ ಅನುಗುಣವಾಗಿ ಶೇ.1 ರಿಂದ ಶೇ. 3 ರಷ್ಟು ಹೆಚ್ಚಳ ಮಾಡಲಾಗುತ್ತಿದೆ. ಹೆಚ್ಚಳವಾಗಲಿರುವ ದರ ಪಟ್ಟಿಯಲ್ಲಿ ಪ್ರಯಾಣಿಕ ಬಳಕೆಯ ಕಾರುಗಳಷ್ಟೇ ಅಲ್ಲದೆ ದ್ವಿಚಕ್ರ ವಾಹನ ಮತ್ತು ವಾಣಿಜ್ಯ ವಾಹನಗಳ ದುಬಾರಿಯಾಗಲಿದ್ದು, ಹೊಸ ದರ ಮಾರ್ಚ್ ಆರಂಭದಲ್ಲೇ ಪ್ರಕಟವಾಗುವ ಸಾಧ್ಯತೆಗಳಿವೆ.

ಉತ್ಪಾದನಾ ವೆಚ್ಚದಲ್ಲಿ ನಿರಂತರವಾಗಿ ಹೆಚ್ಚಳ ಮತ್ತು ಹೊಸ ಮಾದರಿಯ ತಾಂತ್ರಿಕ ಅಂಶಗಳ ಜೋಡಣೆಯಿಂದ ಬೆಲೆ ಏರಿಕೆ ಅನಿವಾರ್ಯ ಎಂದಿರುವ ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ದರ ಪ್ರಕಟಿಸುವ ಸಿದ್ದತೆಯಲ್ಲಿವೆ.

ಜೊತೆಗೆ ಕೇಂದ್ರ ಸರ್ಕಾರದ ಬಜೆಟ್ ನಂತರ ವಾಹನ ತಯಾರಿಕೆ ಬೇಕಿರುವ ಪ್ರಮುಖ ಬಿಡಿಭಾಗಗಳು ಮತ್ತು ಸ್ಟೀಲ್ ದರದಲ್ಲಿ ಸಾಕಷ್ಟು ಹೆಚ್ಚಳವಾಗಿದ್ದು, ಐಷಾರಾಮಿ ಕಾರುಗಳ ಬಿಡಿಭಾಗಗಳ ಆಮದು ಮೇಲೂ ಹೆಚ್ಚಿನ ಆಮದು ಸುಂಕ ವಿಧಿಸಲಾಗುತ್ತಿದೆ.

ಈ ಹಿನ್ನಲೆ ವಾಹನ ಬೆಲೆ ಹೆಚ್ಚಳಕ್ಕಾಗಿ ಈಗಾಗಲೇ ಸಿದ್ದತೆ ನಡೆಸಿರುವ ಆಟೋ ಕಂಪನಿಗಳು ಶೀಘ್ರದಲ್ಲೇ ಹೊಸ ವಾಹನಗಳನ್ನು ಹೊಸ ದರದಲ್ಲಿ ಮಾರಾಟ ಮಾಡುವ ಸಿದ್ದತೆಯಲ್ಲಿದ್ದು, ಹೊಸ ವಾಹನ ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಮತ್ತಷ್ಟು ಹೊರೆಯಾಗಿ ಪರಿಣಮಿಸಲಿದೆ. ಒಂದು ಕಡೆ ಹೆಚ್ಚುತ್ತಿರುವ ಇಂಧನ ದರಗಳು ಮತ್ತು ದುಬಾರಿ ಬೆಲೆಯ ವಾಹನಗಳ ನಿರ್ವಹಣೆಯು ಆರ್ಥಿಕ ಸಂಕಷ್ಟ ಉಂಟು ಮಾಡುವ ಸಾಧ್ಯತೆಗಳಿದ್ದು, ಇದರ ನಡುವೆ ಜಾಗತಿಕ ಮಾರುಕಟ್ಟೆಯಲ್ಲಿ ವಾಹನಗಳ ಬಿಡಿಭಾಗಗಳ ಕೊರೆತೆ ಕೂಡಾ ಆಟೋ ಉದ್ಯಮ ಮೇಲೆ ದೊಡ್ಡ ಹೊಡೆತ ನೀಡುವ ಮುನ್ಸೂಚನೆ ನೀಡಿದೆ.

ಸೆಮಿ ಕಂಡಕ್ಟರ್ ಕೊರತೆಯು ಸದ್ಯ ಹೊಸ ವಾಹನಗಳ ಮೇಲೆ ಪರಿಣಾಮ ಬೀರುತ್ತಿದ್ದು, ಇದು ಕೂಡಾ ವಾಹನ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಈ ಎಲ್ಲಾ ಬೆಳವಣಿಗೆ ಕುರಿತು ಮಾತನಾಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ವಾಹನ ಉತ್ಪಾದನಾ ಕಂಪನಿಗಳು ಬಿಡಿಭಾಗಗಳಾಗಿ ವಿದೇಶಿ ಮಾರುಕಟ್ಟೆಗಳನ್ನು ನೆಚ್ಚಿಕೊಂಡಿರುವುದನ್ನು ಮೊದಲು ತಗ್ಗಿಸಬೇಕಿದೆ ಎಂದಿದ್ದಾರೆ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!

ವಾಹನ ಬಿಡಿಭಾಗಗಳನ್ನು ಸ್ಥಳೀಯವಾಗಿ ಅಭಿವೃದ್ದಿಗೊಳಿಸುವುದರಿಂದ ಆಮದು ಸುಂಕ ತಗ್ಗಿಸುವುದರೊಂದಿಗೆ ಸ್ವಾವಲಂಬನೆಯೊಂದಿಗೆ ವಾಹನಗಳ ಬೆಲೆ ನಿಯಂತ್ರಣ ಮಾಡಬಹುದಾಗಿದೆ ಎಂದಿರುವ ಕೇಂದ್ರ ಸಚಿವರು ಭವಿಷ್ಯಕ್ಕಾಗಿ ಭಾರತದಲ್ಲಿ ಪೂರ್ಣ ಪ್ರಮಾಣದಲ್ಲಿ ವಾಹನಗಳನ್ನು ಉತ್ಪಾದನೆ ಮಾಡುವುದು ಉತ್ತಮ ಎನ್ನುವ ಸಲಹೆ ನೀಡಿದ್ದಾರೆ.

ಸಾಧ್ಯವಾದಷ್ಟು ಸ್ಥಳೀಯ ಬಿಡಿಭಾಗಗಳನ್ನು ಬಳಕೆ ಮಾಡಿದ್ದಲ್ಲಿ ಸ್ಥಳೀಯ ಉತ್ಪಾದನಾ ಪ್ರಮಾಣ ಕೂಡಾ ಸುಧಾರಿಸಲಿದ್ದು, ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವುದರಿಂದ ದೇಶೀಯ ಕಂಪನಿಗಳ ಅಭಿವೃದ್ಧಿಗೆ ಸಹಾಯ ಮಾಡಬಹುದಾಗಿದೆ ಎಂದಿದ್ದಾರೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಮುಂದಿನ ಐದು ವರ್ಷಗಳಲ್ಲಿ ದೇಶವನ್ನು ಜಾಗತಿಕ ವಾಹನ ತಯಾರಿಕೆಯ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕೆಲಸ ಮಾಡುತ್ತಿದ್ದು, ಇದಕ್ಕಾಗಿ ಹೊಸ ನೀತಿಯನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಮಾಹಿತಿ ನೀಡಿರುವ ಸಚಿವರು ಮೇಕ್ ಇನ್ ಇಂಡಿಯಾ ಯೋಜನೆಗೆ ಇದು ಪ್ರಮುಖ ಕೊಡುಗೆ ನೀಡಲಿದೆ ಎಂದಿದ್ದಾರೆ.