ಅಧಿಕ ರೇಂಜ್ ಹೊಂದಿರುವ Mitsubishi Airtrek ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಮಿಟ್ಸುಬಿಷಿ ಮೋಟಾರ್ಸ್ ಕಾರ್ಪೊರೇಷನ್ ತನ್ನ ಹೊಸ ಏರ್‌ಟ್ರೆಕ್ ಎಲೆಕ್ಟ್ರಿಕ್ ಕ್ರಾಸ್ಒವರ್ ಎಸ್‍ಯುವಿಯನ್ನು ಆಟೋ ಗುವಾಂಗ್‌ಝೌನಲ್ಲಿ ಅನಾವರಣಗೊಳಿಸಿದೆ. ಈ ಹೊಸ ಮಿಟ್ಸುಬಿಷಿ ಏರ್‌ಟ್ರೆಕ್ ಎಲೆಕ್ಟ್ರಿಕ್ ಕ್ರಾಸ್ಒವರ್ ಎಸ್‍ಯುವಿಯು ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ.

ಅಧಿಕ ರೇಂಜ್ ಹೊಂದಿರುವ Mitsubishi Airtrek ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಮಿಟ್ಸುಬಿಷಿ ಕಂಪನಿಯು ಏರ್‌ಟ್ರೆಕ್ ಹೆಸರನ್ನು ಹೊಂದಿದ್ದ ಕಾರಿನ ಕಾನ್ಸೆಪ್ಟ್ ಆವೃತ್ತಿಯನ್ನು ಏಪ್ರಿಲ್‌ನಲ್ಲಿ ಆಟೋ ಶಾಂಘೈನಲ್ಲಿ ಬಹಿರಂಗಪಡಿಸಿದ್ದಾರೆ ಮತ್ತು ಈಗ ಅಂತಿಮವಾಗಿ ಎಲೆಕ್ಟ್ರಿಕ್ ಎಸ್‍ಯುವಿಯ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಲಾಗಿದೆ. ಈ ಹೆಸರು ಸ್ವತಃ ಹೊಸದಲ್ಲ, ಏಕೆಂದರೆ 2001 ರಲ್ಲಿ ಏರ್‌ಟ್ರೆಕ್ ಸಾಮಾನ್ಯ ಮಾದರಿಯನ್ನು ಮಾರಾಟ ಮಾಡಲಾಗುತ್ತಿದೆ. ಕಂಪನಿಯು ಈಗ ತನ್ನ ಹೊಸ ಎಲೆಕ್ಟ್ರಿಕ್ ಎಸ್‍ಯುವಿಗಾಗಿ ಇದೇ ಹೆಸರನ್ನು ನೀಡಿದೆ. ಇದನ್ನು ಚೀನಾದಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡಲಾಗುವುದು.

ಅಧಿಕ ರೇಂಜ್ ಹೊಂದಿರುವ Mitsubishi Airtrek ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಹೊಸ ಮಿಟ್ಸುಬಿಷಿ ಏರ್‌ಟ್ರೆಕ್ ಎಲೆಕ್ಟ್ರಿಕ್ ಎಸ್‌ಯುವಿ ಕಾರು ತಯಾರಕರ ಜಂಟಿ ಉದ್ಯಮ ಕಂಪನಿ GAC ಮಿಟ್ಸುಬಿಷಿ ಮೋಟಾರ್ಸ್ ಅಭಿವೃದ್ಧಿಪಡಿಸಿದೆ. ಈ ಎಸ್‍ಯುವಿ ಅಗ್ರೇಸಿವ್ ವಿನ್ಯಾಸ ಮತ್ತು ಸ್ಟೈಲಿಂಗ್ ಜೊತೆಗೆ ತೀಕ್ಷ್ಣವಾದ ಮಸ್ಕಲರ್ ಲೈನ್ ಗಳು ಮತ್ತು ಭಾರೀ ಕ್ರೋಮ್ ಒಳಸೇರಿಸುವಿಕೆಯೊಂದಿಗೆ ಬರುತ್ತದೆ.

ಅಧಿಕ ರೇಂಜ್ ಹೊಂದಿರುವ Mitsubishi Airtrek ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಈ ಎಸ್‍ಯುವಿಯ ಗ್ರಿಲ್ ಮ್ಯಾಟ್ ಬ್ಲ್ಯಾಕ್ ಸ್ಲ್ಯಾಟ್‌ಗಳನ್ನು ಹೊಂದಿದೆ, ಇದು ಸ್ಪ್ಲಿಟ್ ಲೈಟಿಂಗ್ ಸೆಟಪ್‌ನಿಂದ ಸುತ್ತುವರೆದಿದೆ, ಅದು ಮೇಲ್ಭಾಗದಲ್ಲಿ ಎಲ್ಇಡಿ DRL ಗಳು ಮತ್ತು ಕೆಳಗೆ ಪ್ರತ್ಯೇಕ ಹೆಡ್‌ಲ್ಯಾಂಪ್ ಕ್ಲಸ್ಟರ್‌ನೊಂದಿಗೆ ಬರುತ್ತದೆ. ಎಸ್‌ಯುವಿ ವಿಶಾಲವಾದ ಏರ್‌ಡ್ಯಾಮ್, ವೀಲ್ ಆರ್ಚ್ ಕ್ಲಾಡಿಂಗ್‌ಗಳೊಂದಿಗೆ ದೊಡ್ಡದಾದ ಎರಡು-ಟೋನ್ ಅಲಾಯ್ ವ್ಹೀಲ್ ಗಳನ್ನು ಸಹ ಪಡೆಯುತ್ತದೆ,

ಅಧಿಕ ರೇಂಜ್ ಹೊಂದಿರುವ Mitsubishi Airtrek ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಆದರೆ ಹಿಂಭಾಗದಲ್ಲಿ ಟಿ- ಆಕಾರದ, ಸುತ್ತುವ ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ಬೀಫಿ ಬಂಪರ್ ಅನ್ನು ಪಡೆಯುತ್ತದೆ. ಎಸ್‍ಯುವಿ ಮುಂಭಾಗದ ಡೋರುಗಳು ಮತ್ತು ಟೈಲ್‌ಗೇಟ್‌ನಲ್ಲಿ ಇವಿ ಲೋಗೊಗಳನ್ನು ಸಹ ಹೊಂದಿದೆ.

ಅಧಿಕ ರೇಂಜ್ ಹೊಂದಿರುವ Mitsubishi Airtrek ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಈ ಮಿಟ್ಸುಬಿಷಿ ಏರ್‌ಟ್ರೆಕ್ ಎಲೆಕ್ಟ್ರಿಕ್ ಎಸ್‌ಯುವಿಯ ಒಳಭಾಗದಲ್ಲಿ, ಹೆಚ್ಚಿನ ಆಧುನಿಕ ಇವಿಗಳಂತೆ ಮಿಟ್ಸುಬಿಷಿ ಏರ್‌ಟ್ರೆಕ್ ಕೂಡ ಕನಿಷ್ಠ ಒಳಾಂಗಣದೊಂದಿಗೆ ಬರುತ್ತದೆ, ಅಲ್ಲಿ ಹೆಚ್ಚಿನ ಇನ್-ಕಾರ್ ಕಂಟ್ರೋಲ್ ಗಳನ್ನು ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ ಮೂಲಕ ನಿರ್ವಹಿಸಲಾಗುತ್ತದೆ.

ಅಧಿಕ ರೇಂಜ್ ಹೊಂದಿರುವ Mitsubishi Airtrek ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಡ್ಯಾಶ್‌ಬೋರ್ಡ್‌ನಲ್ಲಿರುವ ಏಕೈಕ ಬಟನ್ ಹಝರ್ಡ್ ಲೈಟ್ ಗಳಿಗೆ ಮಾತ್ರ, ಸೆಂಟ್ರಲ್ ಕನ್ಸೋಲ್ ಇವಿ ಚಿಹ್ನೆಯೊಂದಿಗೆ ಕಂಟ್ರೋಲ್ ನಾಬ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ಗಾಗಿ ಬಟನ್‌ಗಳನ್ನು ಹೊಂದಿದೆ. ಸ್ಟೀರಿಂಗ್‌ನ ಹಿಂದೆ, ನೀವು ಇನ್ನೊಂದು ಡಿಸ್‌ಪ್ಲೇಯನ್ನು ಹೊಂದಿದೆ. ಇದು ನ್ಯಾವಿಗೇಷನ್ ಸಿಸ್ಟಮ್‌ಗಾಗಿ ಅಗ್ಮೆಂಟೆಡ್ ರಿಯಾಲಿಟಿ ತಂತ್ರಜ್ಞಾನದೊಂದಿಗೆ ಬರುವ ಇನ್ಸ್ ಟ್ರೂಮೆಂಟ್ ಕನ್ಸೋಲ್ ಆಗಿದೆ.

ಅಧಿಕ ರೇಂಜ್ ಹೊಂದಿರುವ Mitsubishi Airtrek ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ತಾಂತ್ರಿಕ ವಿಶೇಷಣಗಳಿಗೆ ಸಂಬಂಧಿಸಿದಂತೆ, ಹೊಸ ಮಿತ್ಸುಬಿಷಿ ಏರ್‌ಟ್ರೆಕ್ 69.9-kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ, ಇದು ಎಲೆಕ್ಟ್ರಿಕ್ ಮೋಟಾರ್ 135kW ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ, ಇದು ಸುಮಾರು 181 bhp ಆಗಿದೆ. ಸ್ಥಳೀಯ CLTC ಸೈಕಲ್ ಪ್ರಕಾರ, 520 ಕಿಮೀ ವಿದ್ಯುತ್ ವ್ಯಾಪ್ತಿಯನ್ನು ನೀಡಲು ದೊಡ್ಡ ಬ್ಯಾಟರಿ ಸಾಕು.

ಅಧಿಕ ರೇಂಜ್ ಹೊಂದಿರುವ Mitsubishi Airtrek ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ತಾಂತ್ರಿಕ ವಿಶೇಷಣಗಳಿಗೆ ಸಂಬಂಧಿಸಿದಂತೆ, ಹೊಸ ಮಿಟ್ಸುಬಿಷಿ ಏರ್‌ಟ್ರೆಕ್ ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ 69.9-kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ, ಇದು ಎಲೆಕ್ಟ್ರಿಕ್ ಮೋಟಾರ್ 135kW ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ, ಇದು ಸುಮಾರು 181 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ಮಿಟ್ಸುಬಿಷಿ ಏರ್‌ಟ್ರೆಕ್ ಎಲೆಕ್ಟ್ರಿಕ್ ಎಸ್‌ಯುವಿಯು 520 ಕಿಮೀ ರೇಂಜ್ ನೀಡಬಹುದು ಎಂದು ಹೇಳಲಾಗುತ್ತದೆ.

ಅಧಿಕ ರೇಂಜ್ ಹೊಂದಿರುವ Mitsubishi Airtrek ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಇದರೊಂದಿಗೆ ಮಿಟ್ಸುಬಿಷಿ ಮೋಟಾರ್ಸ್ ಕಾರ್ಪೊರೇಷನ್ ತನ್ನ ನ್ಯೂ ಜನರೇಷನ್ ಔಟ್‌ಲ್ಯಾಂಡರ್ ಕ್ರಾಸ್ಒವರ್ ಎಸ್‌ಯುವಿಯ ಹೊಸ ಪ್ಲಗ್-ಇನ್ ಹೈಬ್ರಿಡ್ (ಪಿಹೆಚ್‌ಇವಿ) ಮಾದರಿಯನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಈ ಹೊಸ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಪಿಹೆಚ್‌ಇವಿ ಮಾದರಿಯು ಇದೇ ತಿಂಗಳ 28 ರಂದು ವರ್ಚುವಲ್ ಪ್ರೀಮಿಯರ್ ಮೂಲಕ ಜಾಗತಿಕ ಮಟ್ಟದಲ್ಲಿ ಪಾದಾರ್ಪಣೆಯಾಗಲಿದೆ. ವಾಹನ ತಯಾರಕರು ಜಪಾನ್‌ನಲ್ಲಿ ಡಿಸೆಂಬರ್ ಮಧ್ಯದಲ್ಲಿ ವಾಹನದ ಮಾರಾಟವನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ.

ಅಧಿಕ ರೇಂಜ್ ಹೊಂದಿರುವ Mitsubishi Airtrek ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಮಿಟ್ಸುಬಿಷಿ ತನ್ನ ಹೊಸ ವಿನ್ಯಾಸದ ಪರಿಕಲ್ಪನೆಯಡಿಯಲ್ಲಿ ಹೊಸ ಔಟ್‌ಲ್ಯಾಂಡರ್ ಅನ್ನು ಹೊಸ ತಲೆಮಾರಿನ ಖರೀದಿದಾರರನ್ನು ಗಮನದಲ್ಲಿಟ್ಟುಕೊಂಡು ಹೊರಗೆ ಆಕರ್ಷಕ ವಿನ್ಯಾಸನ್ನು ಹಂಚಿಕೊಂಡಿದೆ.ಮಿಟ್ಸುಬಿಷಿ ವಾಹನವು 10 ಬಣ್ಣ ಆಯ್ಕೆಗಳಲ್ಲಿ ಬರುತ್ತದೆ ಮತ್ತು ಈ ಸಂಖ್ಯೆಯು ಡೈಮಂಡ್ ಕಲರ್ ಸರಣಿಯನ್ನು ಒಳಗೊಂಡಿದೆ ಎಂದು ತಿಳಿಸಿದೆ. ಇವುಗಳು ರೆಡ್ ಡೈಮೆಂಡ್, ವೈಟ್ ಡೈಮೆಂಡ್ ನತ್ತು ಹೊಸ ಬ್ಲ್ಯಾಕ್ ಡೈಮೆಂಡ್ ಎಂಬ ಬಣ್ಣಗಳ ಆಯ್ಜೆಗಳನ್ನು ಹೊಂದಿರುತ್ತದೆ. ಔಟ್‌ಲ್ಯಾಂಡರ್ ಪಿಹೆಚ್‌ಇವಿ 2013ರಲ್ಲಿ ಜಾಗತಿಕ ಮಟ್ಟದಲ್ಲಿ ಪಾದಾರ್ಪಣೆ ಮಾಡಿತು. ಬ್ರ್ಯಾಂಡ್ ಇದನ್ನು ವಿಶ್ವದ ಮೊದಲ ಪ್ಲಗ್-ಇನ್ ಹೈಬ್ರಿಡ್ ಎಸ್‍ಯುವಿ ಎಂದು ಕರೆದಿದೆ.

ಅಧಿಕ ರೇಂಜ್ ಹೊಂದಿರುವ Mitsubishi Airtrek ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಕಂಪನಿಯು ಕಾರಿನ ತಾಂತ್ರಿಕ ವಿಶೇಷತೆಗಳ ಬಗ್ಗೆ ಹೆಚ್ಚು ಬಹಿರಂಗಪಡಿಸಿಲ್ಲ. ಆದರೆ ನ್ಯೂ ಜನರೇಷನ್ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಹೈಬ್ರಿಡ್ ಎಸ್‍ಯುವಿಯು ಸಂಪೂರ್ಣ ವಿಕಸನಗೊಂಡ ಹೊಸ ತಲೆಮಾರಿನ ಪಿಎಚ್‌ಇವಿ ಸಿಸ್ಟಂ ಅನ್ನು ಒಳಗೊಂಡಿರುತ್ತದೆ. ಸುಧಾರಿತ ಕಾರ್ಯಕ್ಷಮತೆ ಮತ್ತು ಹೆಚ್ಚಿನ ಚಾಲನಾ ಶ್ರೇಣಿಯೊಂದಿಗೆ ಹೈಬ್ರಿಡ್ ಮಾದರಿಯು ಹೆಚ್ಚು ಪವರ್ ಫುಲ್ ಮಾದರಿಯಾಗಿರುತ್ತದೆ ಎಂದು ಕಂಪನಿಯು ಹೇಳಿದೆ. ಇನ್ನು ಮಿಟ್ಸುಬಿಷಿ ಕಂಪನಿಯು ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳತ್ತ ಗಮನ ಹರಿಸುತ್ತಿದೆ.

Most Read Articles

Kannada
English summary
Mitsubishi introduced new airtrek electric crossover suv details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X