ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಪಿಹೆಚ್‌ಇವಿ ಎಸ್‍ಯುವಿ

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಮಿಟ್ಸುಬಿಷಿ ಮೋಟಾರ್ಸ್ ಕಾರ್ಪೊರೇಷನ್ ತನ್ನ ನ್ಯೂ ಜನರೇಷನ್ ಔಟ್‌ಲ್ಯಾಂಡರ್ ಕ್ರಾಸ್ಒವರ್ ಎಸ್‌ಯುವಿಯ ಹೊಸ ಪ್ಲಗ್-ಇನ್ ಹೈಬ್ರಿಡ್ (ಪಿಹೆಚ್‌ಇವಿ) ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಪಿಹೆಚ್‌ಇವಿ ಎಸ್‍ಯುವಿ

ನ್ಯೂ ಜನರೇಷನ್ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಹೈಬ್ರಿಡ್ ಎಸ್‍ಯುವಿಯು ಸಂಪೂರ್ಣ ವಿಕಸನಗೊಂಡ ಹೊಸ ತಲೆಮಾರಿನ ಪಿಎಚ್‌ಇವಿ ಸಿಸ್ಟಂ ಅನ್ನು ಒಳಗೊಂಡಿರುತ್ತದೆ. ಈ ವಾಹನವನ್ನು ಮೊದಲು ಕಂಪನಿಯ ತಾಯಿನಾಡು ಜಪಾನ್‌ನಲ್ಲಿ ಬಿಡುಗಡೆ ಮಾಡಲಾಗುವುದು. ಸುಧಾರಿತ ಕಾರ್ಯಕ್ಷಮತೆ ಮತ್ತು ಹೆಚ್ಚಿನ ಚಾಲನಾ ಶ್ರೇಣಿಯೊಂದಿಗೆ ಹೈಬ್ರಿಡ್ ಮಾದರಿಯು ಹೆಚ್ಚು ಪವರ್ ಫುಲ್ ಮಾದರಿಯಾಗಿರುತ್ತದೆ ಎಂದು ಕಂಪನಿಯು ಹೇಳಿದೆ.

ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಪಿಹೆಚ್‌ಇವಿ ಎಸ್‍ಯುವಿ

ಎಸ್‌ಯುವಿಯು ಅಪ್‌ಗ್ರೇಡ್ ಮೋಟಾರ್ ಉತ್ಪಾದನೆ ಮತ್ತು ಹೆಚ್ಚಿದ ಬ್ಯಾಟರಿ ಸಾಮರ್ಥ್ಯದೊಂದಿಗೆ ನ್ಯೂ ಜನರೇಷನ್ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಹೈಬ್ರಿಡ್ ಎಸ್‍ಯುವಿ ಬರುತ್ತದೆ. ಔಟ್‌ಲ್ಯಾಂಡರ್ ಆಪ್ಟಿಮೈಸ್ಡ್ ವಿನ್ಯಾಸದೊಂದಿಗೆ ಬರಲಿದೆ.

ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಪಿಹೆಚ್‌ಇವಿ ಎಸ್‍ಯುವಿ

ಔಟ್‌ಲ್ಯಾಂಡರ್ ಪಿಹೆಚ್‌ಇವಿ 2013ರಲ್ಲಿ ಜಾಗತಿಕ ಮಟ್ಟದಲ್ಲಿ ಪಾದಾರ್ಪಣೆ ಮಾಡಿತು. ಬ್ರ್ಯಾಂಡ್ ಇದನ್ನು ವಿಶ್ವದ ಮೊದಲ ಪ್ಲಗ್-ಇನ್ ಹೈಬ್ರಿಡ್ ಎಸ್‍ಯುವಿ ಎಂದು ಕರೆದಿದೆ. ಇದು ಟ್ವಿನ್ ಮೋಟಾರ್ 4 ಡಬ್ಲ್ಯೂಡಿ ಸಿಸ್ಟಂ ಮತ್ತು 100ವಿ ಎಸಿ ಎಲೆಕ್ಟ್ರಿಕ್ ಸರಬರಾಜನ್ನು ಒಳಗೊಂಡಿರುವ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿತ್ತು.

ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಪಿಹೆಚ್‌ಇವಿ ಎಸ್‍ಯುವಿ

ಇದು 1,500ಡಬ್ಲ್ಯು ವರೆಗಿನ ಪವರ್ ಅನ್ನು ತಲುಪಿಸುವ ಸಾಮರ್ಥ್ಯವನ್ನು ಹೊಂದಿತ್ತು. ಈ ಎಸ್‍ಯುವಿಯ ಬ್ಯಾಟರಿ ಚಾರ್ಜ್ ಮೋಡ್ ಕಾರು ಸ್ಥಿರವಾಗಿದ್ದಾಗ ಅಥವಾ ಚಲಿಸುತ್ತಿರುವಾಗ ಬ್ಯಾಟರಿಯನ್ನು ಎಂಜಿನ್‌ನಿಂದ ಚಾರ್ಜ್ ಮಾಡಲು ಅನುಮತಿಸುತ್ತದೆ.

ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಪಿಹೆಚ್‌ಇವಿ ಎಸ್‍ಯುವಿ

ಬಿಡುಗಡೆಯಾದಾಗಿನಿಂದ ಔಟ್‌ಲ್ಯಾಂಡರ್ ಪಿಹೆಚ್‌ಇವಿ ವಿಶ್ವದ 60 ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟವಾಗಿದೆ ಎಂದು ವಾಹನ ತಯಾರಕರು ಹೇಳಿದ್ದಾರೆ. ಹೊಸ ತಲೆಮಾರಿನ ಔಟ್‌ಲ್ಯಾಂಡರ್ ಪಿಹೆಚ್‌ಇವಿಯ ಹೆಚ್ಚಿನ ತಾಂತ್ರಿಕ ಅಂಶವನ್ನು ಕಂಪನಿಯು ಬಹಿರಂಗಪಡಿಸಿಲ್ಲ.

ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಪಿಹೆಚ್‌ಇವಿ ಎಸ್‍ಯುವಿ

ಇನ್ನು ಸಾಮಾನ್ಯ ನ್ಯೂ ಜನರೇಷನ್ ಔಟ್‌ಲ್ಯಾಂಡರ್ ಎಸ್‍ಯುವಿಯು 2021ರ ರೋಗ್‌ನಿಂದ ಪ್ಲಾಟ್‌ಫಾರ್ಮ್, ಎಂಜಿನ್ ಮತ್ತು ಹಲವಾರು ಆಂತರಿಕ ಭಾಗಗಳನ್ನು ಹಂಚಿಕೊಳ್ಳುತ್ತದೆ. ಈ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಎಸ್‍ಯುವಿಯು ಡೈನಾಮಿಕ್ ಶೀಲ್ಡ್ ಸ್ಟೈಲಿಂಗ್ ಅನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯು ಎಂಗಲ್ಬರ್ಗ್ ಟೂರರ್ ಕಾನ್ಸೆಪ್ಟ್ ನಿಂದ ಸ್ಫೂರ್ತಿ ಪಡೆದಿದೆ.

ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಪಿಹೆಚ್‌ಇವಿ ಎಸ್‍ಯುವಿ

ಈ ಹೊಸ ಫ್ರಂಟ್ ಗ್ರಿಲ್ ಮತ್ತು ಸ್ಪ್ಲಿಟ್ ಹೆಡ್‌ಲ್ಯಾಂಪ್ ಅನ್ನು ಅಳವಡಿಸಿದ್ದಾರೆ. ರೇಜರ್-ತೆಳುವಾದ ಎಲ್ಇಡಿಗಳನ್ನು ಮೇಲೆ ಇರಿಸಲಾಗಿದ್ದು ಅದು ಡಿಆರ್ಎಲ್ ಮತ್ತು ಟರ್ನ್ ಸಿಗ್ನಲ್ ಗಳಾಗಿ ಕಾರ್ಯನಿರ್ವಹಿಸುತ್ತದೆ. ಆದರೆ 3-ಜೋನ್ ಲೈಟಿಂಗ್ ಎಲಿಮೆಂಟ್ ಹೊಂದಿರುವ ಮೈನ್ ಹೆಡ್ ಲ್ಯಾಂಪ್ ಅನ್ನು ಬಂಪರ್ ಮೇಲೆ ಕಡಿಮೆ ಇರಿಸಲಾಗಿದೆ. ಕೆಳಗಿನ ಹೆಡ್‌ಲ್ಯಾಂಪ್ ಯುನಿಟ್ ಎಲ್ಇಡಿ ಫಾಗ್ ಲ್ಯಾಂಪ್ ಗಳನ್ನು ಮತ್ತು ಹೈ,ಲೋ ಬೀಮ್ ಗಳನ್ನು ಹೊಂದಿವೆ.

ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಪಿಹೆಚ್‌ಇವಿ ಎಸ್‍ಯುವಿ

ನ್ಯೂ ಜನರೇಷನ್ ಮಿಟ್ಸುಬಿಷಿ ಔಟ್‌ಲ್ಯಾಂಡರ್ ಪಿಹೆಚ್‌ಇವಿ ಎಸ್‍ಯುವಿಯ ಹೆಚ್ಚಿನ ತಾಂತ್ರಿಕ ಅಂಶವನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಇನ್ನು ಮಿಟ್ಸುಬಿಷಿ ಕಂಪನಿಯು ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳತ್ತ ಗಮನ ಹರಿಸಲಿದೆ.

Most Read Articles

Kannada
English summary
Mitsubishi Announces New-generation Outlander PHEV SUV. Read In Kannada.
Story first published: Friday, July 30, 2021, 15:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X