ಮಾಡಿಫೈಗೊಂಡು ಮಿಂಚುತ್ತಿರುವ ಎರಡು ಡೋರಿನ ಟಾಟಾ ಇಂಡಿಕಾ ಕಾರು

ಟಾಟಾ ಇಂಡಿಕಾ ಭಾರತದ ಮೊದಲ ಡೀಸೆಲ್ ಎಂಜಿನ್ ಹೊಂದಿದ್ದ ಪ್ರಯಾಣಿಕ ಕಾರು. ಭಾರತದ ಆಟೋಮೊಬೈಲ್ ಇತಿಹಾಸದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಕಾರು ಇದಾಗಿದೆ. ಟಾಟಾ ಮೋಟಾರ್ಸ್ ಕಂಪನಿಯು ಈ ಇಂಡಿಕಾ ಕಾರನ್ನು ಭಾರತದಲ್ಲಿ 1998ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತು.

ಮಾಡಿಫೈಗೊಂಡ ಮಿಂಚುತ್ತಿರುವ ಎರಡು ಡೋರಿನ ಟಾಟಾ ಇಂಡಿಕಾ ಕಾರು

ಟಾಟಾ ಇಂಡಿಕಾ ಕಾರು 2018ರವರೆಗೆ ಮಾರಾಟದಲ್ಲಿತ್ತು ಮತ್ತು ಆದ್ದರಿಂದ ಸುಮಾರು 2 ದಶಕಗಳ ದೀರ್ಘಾವಧಿಯವರೆಗೆ ಮಾರಾಟದಲ್ಲಿತ್ತು. ಈ ಕಾರು ಇಂದಿಗೂ ಹೆಚ್ಚಾಗಿ ಸಿಟಿಗಳಲ್ಲಿ ಟ್ಯಾಕ್ಸಿಗಳಾಗಿ ಓಡಾಡುತ್ತಿದೆ. ಈ ಕಾರನ್ನು ಹಲವರು ಸಣ್ಣದಾಗಿ ಮಾಡಿಫೈ ಮಾಡುತ್ತಾರೆ. ಆದರೆ ಇತ್ತೀಚೆಗೆ ವಾಸಿಮ್ ಕ್ರಿಯೇಷನ್‌ ಯೂಟ್ಯೂಬ್ ಚಾನಲ್‌ ನಲ್ಲಿ ಟಾಟಾ ಇಂಡಿಕಾ ಕಾರನ್ನು ವಿಭಿನ್ನವಾಗಿ ಮಾಡಿಫೈಗೊಳಿಸಿದ ವೀಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ಎರಡೂ ಡೋರಿನ ಕಾರು ಮಾದರಿಯಾಗಿ ಇಂಡಿಕಾವನ್ನು ಮಾಡಿಫೈಗೊಳಿಸಿದ್ದಾರೆ.

ಮಾಡಿಫೈಗೊಂಡ ಮಿಂಚುತ್ತಿರುವ ಎರಡು ಡೋರಿನ ಟಾಟಾ ಇಂಡಿಕಾ ಕಾರು

ಈ ಮಾಡಿಫೈಗೊಂಡ ಟಾಟಾ ಇಂಡಿಕಾ ಕಾರು ಗಮನಾರ್ಹ ಬದಲಾವಣೆಗಳನ್ನು ಹೊಂದಿದೆ. ಎಲ್ಲಕ್ಕಿಂತ ಮೊದಲನೆಯದು ಇದು ಕೇವಲ ಎರಡೂ ಡೋರುಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ಟ್ಯೂನರ್ ಬಾನೆಟ್ನಲ್ಲಿ ಹುಡ್ ಸ್ಕೂಪ್, ಮೇಲ್ಭಾಗದಲ್ಲಿ ರೂಫ್ ರೈಲ್ ಮತ್ತು ಹಿಂಭಾಗದಲ್ಲಿ ಸ್ಪಾಯ್ಲರ್ ಅನ್ನು ಸೇರಿಸಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮಾಡಿಫೈಗೊಂಡ ಮಿಂಚುತ್ತಿರುವ ಎರಡು ಡೋರಿನ ಟಾಟಾ ಇಂಡಿಕಾ ಕಾರು

ಇದಲ್ಲದೆ, ಕಾರಿನ ಉದ್ದವನ್ನು ಕೂಡ ಕಡಿಮೆ ಮಾಡಲಾಗಿದೆ. ಇದು ಈಗ ಸಾಮಾನ್ಯ ಇಂಡಿಕಾಕ್ಕಿಂತ ಮೂರೂವರೆ ಅಡಿ ಚಿಕ್ಕದಾಗಿದೆ. ಅಲ್ಲದೆ, ಟ್ಯೂನರ್ ಕಪ್ಪು ಬಣ್ಣದ ಸೈಡ್ ಕ್ಲಾಡಿಂಗ್‌ಗಳನ್ನು ಸೇರಿಸಿದೆ.

ಮಾಡಿಫೈಗೊಂಡ ಮಿಂಚುತ್ತಿರುವ ಎರಡು ಡೋರಿನ ಟಾಟಾ ಇಂಡಿಕಾ ಕಾರು

ಇನ್ನು ಮಾಡಿಫೈಗೊಂಡ ಟಾಟಾ ಇಂಡಿಕಾ ಕಾರಿನ ಒಳಭಾಗದಲ್ಲಿ, ಬದಲಾವಣೆಗಳು ಸ್ಪಷ್ಟವಾಗಿ ಕಂಡುಬರುತ್ತವೆ. ಇದು ಈಗ ಹಿಂದಿನ ಸೀಟುಗಳನ್ನು ಹೊಂದಿಲ್ಲ. ಇನ್ನು ಬ್ಲ್ಯಾಕ್ ಮತ್ತು ಸಿಲ್ವರ್ ಡ್ಯುಯಲ್-ಟೋನ್ ಬಣ್ಣಗಳ ಅಂಶಗಳೊಂದಿಗೆ ಇಂಟಿರಿಯರ್ ಒಳಗೊಂಡಿದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಮಾಡಿಫೈಗೊಂಡ ಮಿಂಚುತ್ತಿರುವ ಎರಡು ಡೋರಿನ ಟಾಟಾ ಇಂಡಿಕಾ ಕಾರು

ಉಳಿದಂತೆ ಸಾಮಾನ್ಯ ಟಾಟಾ ಇಂಡಿಕಾ ಕಾರಿನಲ್ಲಿರುವ ಫೀಚರ್ ಗಳನ್ನು ಒಳಗೊಂಡಿದೆ. ಪೀಚರ್ ಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಇನ್ನು ಮಾಡಿಫೈಗೊಳಿಸಲು ತಗುಲಿದ ವೆಚ್ಚವನ್ನು ಬಹಿರಂಗಪಡಿಸಿಲ್ಲ.

ಮಾಡಿಫೈಗೊಂಡ ಮಿಂಚುತ್ತಿರುವ ಎರಡು ಡೋರಿನ ಟಾಟಾ ಇಂಡಿಕಾ ಕಾರು

ಇನ್ನು ಮಾಡಿಫೈ ಟಾಟಾ ಇಂಡಿಕಾ ಕಾರಿನ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇಂಡಿಕಾ ಕಾರಿನಲ್ಲಿ 1.4 ಎಲ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 71 ಬಿಹೆಚ್‍ಪಿ ಪವರ್ ಮತ್ತು 135 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಮಾಡಿಫೈಗೊಂಡ ಮಿಂಚುತ್ತಿರುವ ಎರಡು ಡೋರಿನ ಟಾಟಾ ಇಂಡಿಕಾ ಕಾರು

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ಇಂಡಿಕಾ ಕಾರಿನಲ್ಲಿ 1.2 ಎಲ್ ಪೆಟ್ರೋಲ್ ಮತ್ತು 1.4 ಎಲ್ ಪೆಟ್ರೋಲ್ ಎಂಜಿನ್ ಜೊತೆಗೆ 1.3 ಎಲ್ ಫಿಯೆಟ್ ಮೂಲದ ಆಯಿಲ್ ಬರ್ನರ್ ಆಯ್ಕೆಗಳನ್ನು ನೀಡಿತು.

ಮಾಡಿಫೈಗೊಂಡ ಮಿಂಚುತ್ತಿರುವ ಎರಡು ಡೋರಿನ ಟಾಟಾ ಇಂಡಿಕಾ ಕಾರು

1998ರಲ್ಲಿ ಬಿಡುಗಡೆಯಾಗಿದ್ದ ಇಂಡಿಕಾ ಕಾರು ಉತ್ತಮ ಬೇಡಿಕೆಯೊಂದಿಗೆ ಹೊಂದಿದ್ದಲ್ಲದೇ ಭಾರತೀಯ ಆಟೋ ಉದ್ಯಮದಲ್ಲಿ ತಮ್ಮದೇ ಅಧಿಪತ್ಯ ಸಾಧಿಸಿತ್ತು. ಆದರೆ ಬದಲಾದ ಮಾರುಕಟ್ಟೆಯಲ್ಲಿ ಸನ್ನಿವೇಶಗಳು ಇಂಡಿಕಾ ಕಾರನ್ನು ಮೂಲೆಗುಂಪಾಗುವಂತೆ ಮಾಡಿದೆ.

Image Courtesy: Wasim Creation

Most Read Articles

Kannada
English summary
Modified Tata Indica Now Sports Only 2 Door. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X