ಐಷಾರಾಮಿ ಕಾರಿನಂತೆ ಮಾಡಿಫೈಗೊಂಡ ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ ‌ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಈ ಟಾಟಾ ನೆಕ್ಸಾನ್ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಖರೀದಿದಾರರಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿದೆ. ಅದಕ್ಕೆ ಒಂದು ಕಾರಣವೆಂದರೆ ವಾಹನದ ಸುರಕ್ಷತಾ ಅಂಶವಾಗಿದೆ.

ಐಷಾರಾಮಿ ಕಾರಿನಂತೆ ಮಾಡಿಫೈಗೊಂಡ ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ ಗ್ಲೋಬಲ್ ಎನ್‌ಸಿಎಪಿಯಿಂದ ವಯಸ್ಕರ ವಿಭಾಗದಲ್ಲಿ 5ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಹೊಂದಿದೆ ಮತ್ತು ಮಕ್ಕಳ ವಿಭಾಗದಲ್ಲಿ 3-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದ ರೇಟಿಂಗ್‌ ಅನ್ನು ಪಡೆದ ಭಾರತದ ಮೊದಲ ಕಾರು ಎಂಬ ಹೆಗ್ಗಳಿಕೆ ನೆಕ್ಸಾನ್ ಮಾದರಿಗೆ ಸಲ್ಲುತ್ತದೆ. ಇನ್ನು ಕಸ್ಟಮ್ ಬಿಲ್ಡರ್ ಗಳ ನಡುವೆಯು ಹ ಜನಪ್ರಿಯವಾಗಿದೆ, ಇದೇ ರೀತಿ ಟಾಟಾ ನೆಕ್ಸಾನ್ ಎಕ್ಸ್‌ಎಂ(ಎಸ್) ರೂಪಾಂತರವನ್ನು ಆಕರ್ಷಕವಾಗಿ ರೋಹಿತ್ ಮೆಹ್ತಾ ಸಾಯಿ ಆಟೋ ಆಕ್ಸೆಸರೀಸ್ ಮಾಡಿಫೈಗೊಳಿಸಿದದ್ದಾರೆ.

ಐಷಾರಾಮಿ ಕಾರಿನಂತೆ ಮಾಡಿಫೈಗೊಂಡ ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ ಕಾರಿಗೆ ಪ್ರೀಮಿಯಂ ಲುಕ್ ಅನ್ನು ನೀಡಲಾಗಿದೆ. ಮಾನ್ಸ್ಟರ್ ಎಡಿಷನ್ 2' ಎಂದು ಕರೆಯಲ್ಪಡುವ ಈ ಮಾಡಿಫೈ ಕಾರಿನ ಒಳಾಂಗಣ ಮತ್ತು ಹೊರಭಾಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಹೊಂದಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಐಷಾರಾಮಿ ಕಾರಿನಂತೆ ಮಾಡಿಫೈಗೊಂಡ ಟಾಟಾ ನೆಕ್ಸಾನ್

ಈ ಕಾರಿನಲ್ಲಿ ಹೆಡ್‌ಲ್ಯಾಂಪ್‌ಗಳು ಸ್ಟಾಕ್ ಪ್ರೊಜೆಕ್ಟರ್‌ಗಳ ಸುತ್ತಲೂ ದೈತ್ಯಾಕಾರದ ಎಲ್ಇಡಿ ರಿಂಗ್ ಅನ್ನು ಹೊಂದಿವೆ. ಈ ಲೈಟ್ ಕೆಂಪು ಬಣ್ಣದಲ್ಲಿ ಬೆಳಗುತ್ತದೆ ಮತ್ತು ಸಾಕಷ್ಟು ಆಕರ್ಷಕವಾಗಿದೆ. ಇನ್ನು ಈ ಕಾರಿನ ಮುಂಭಾಗದಲ್ಲಿರುವ ಬಾನೆಟ್‌ನಾದ್ಯಂತ ಎಲ್‌ಇಡಿ ಡಿಆರ್‌ಎಲ್ ಸ್ಟ್ರಿಪ್ ಅನ್ನು ಪಡೆಯುತ್ತದೆ,

ಐಷಾರಾಮಿ ಕಾರಿನಂತೆ ಮಾಡಿಫೈಗೊಂಡ ಟಾಟಾ ನೆಕ್ಸಾನ್

ಇನ್ನು ನೆಕ್ಸಾನ್ ಎಂಬ ಹೆಸರಿನ ಅಕ್ಷರಗಳ ಮೇಲೆ ರೆಕ್ಕೆಯ ಚಿಹ್ನೆಯನ್ನು ನೀಡಲಾಗಿದೆ. ಕೆಳಭಾಗದ ಮುಂಭಾಗದ ಗ್ರಿಲ್ ಈಗ ಟಾಪ್-ಎಂಡ್ ರೂಪಾಂತರಗಳಂತೆಯೇ ಸಿಲ್ವರ್ ಟ್ರೈ-ಏರೋ ಅಂಶಗಳನ್ನು ಪಡೆಯುತ್ತದೆ. ಆಫ್ಟರ್ ಮಾರ್ಕೆಟ್ ಎಲ್ಇಡಿ ಫಾಗ್ ಲ್ಯಾಂಪ್ ಗಳನ್ನು ಸಹ ಸೇರಿಸಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಐಷಾರಾಮಿ ಕಾರಿನಂತೆ ಮಾಡಿಫೈಗೊಂಡ ಟಾಟಾ ನೆಕ್ಸಾನ್

ಇನ್ನು ಸೈಡ್ ಪ್ರೊಫೈಲ್‌ಗೆ 16 ಇಂಚಿನ ಅಲಾಯ್ ವ್ಹೀಲ್ ಗಳಿಗೆ ವ್ಹೀಲ್ ಕ್ಯಾಪ್‌ಗಳನ್ನು ನೀಡಲಾಗಿದೆ. ಮುಂಭಾಗದ ಫೆಂಡರ್‌ಗಳಿಗಿಂತ ಫೇಕ್ ವೆಂಟ್ಸ್ ಗಳನ್ನು ಸೇರಿಸಲಾಗಿದೆ, ಮತ್ತು ಎಸ್‌ಯುವಿ ಡೋರಿನಗಾರ್ಡ್‌ಗಳ ಜೊತೆಗೆ ಕ್ರೋಮ್ ಮತ್ತು ಡೋರ್ ಮೋಲ್ಡಿಂಗ್‌ಗಳನ್ನು ಸಹ ಪಡೆಯುತ್ತದೆ

ಐಷಾರಾಮಿ ಕಾರಿನಂತೆ ಮಾಡಿಫೈಗೊಂಡ ಟಾಟಾ ನೆಕ್ಸಾನ್

ಇನ್ನು ಹಿಂಭಾಗದಲ್ಲಿ ಹಿಂದಿನ ಡಿಫ್ಯೂಸರ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಇನ್ನು ಕ್ಯಾಬಿನ್‌ನಲ್ಲಿ ಡ್ಯಾಶ್‌ಬೋರ್ಡ್ ಮತ್ತು ಡೋರುಗಳಲ್ಲಿ ಲೆದರ್ ಮತ್ತು ಕಾರ್ಬನ್ ಫೈಬರ್ ಇದೆ. ಒಳಭಾಗದಲ್ಲಿ ಆರ್ಮ್ ರೆಸ್ಟ್ ಅನ್ನು ಸೇರಿಸಲಾಗಿದೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಐಷಾರಾಮಿ ಕಾರಿನಂತೆ ಮಾಡಿಫೈಗೊಂಡ ಟಾಟಾ ನೆಕ್ಸಾನ್

ಇನ್ನು ಕಾರಿನ ಒಳಭಾಗದಲ್ಲಿ ಮಲ್ಟಿ-ಕಲರ್ ಕ್ಯಾಬಿನ್ ಆಂಬಿಯೆಂಟ್ ಲೈಟಿಂಗ್, ಪ್ರಕಾಶಿತ ಸ್ಕಫ್ ಪ್ಲೇಟ್‌ಗಳು, ಫ್ಲೋರ್ ಮ್ಯಾಟ್ಸ್ ಮತ್ತು ಆಫ್ಟರ್ ಮಾರ್ಕೆಟ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಸಹ ಹೊಂದಿದೆ. ಆಡಿಯೊ ಸಿಸ್ಟಂ ಅನ್ನು ನವೀಕರಿಸಲಾಗಿದೆ,

ಐಷಾರಾಮಿ ಕಾರಿನಂತೆ ಮಾಡಿಫೈಗೊಂಡ ಟಾಟಾ ನೆಕ್ಸಾನ್

ಮ್ಯಾಕನಿಕಲ್ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಟಾಟಾ ನೆಕ್ಸಾನ್ ಕಾರಿನ ಎಂಜಿನ್ ಬಗ್ಗೆ ಹೇಳುವುದಾದರೆ, ಇದರಲ್ಲಿ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 118 ಬಿಹೆಚ್‍ಪಿ ಪವರ್ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುಸುವ ಸಾಮರ್ಥ್ಯವನ್ನು ಹೊಂದಿದೆ.

ಐಷಾರಾಮಿ ಕಾರಿನಂತೆ ಮಾಡಿಫೈಗೊಂಡ ಟಾಟಾ ನೆಕ್ಸಾನ್

ಇನ್ನು ಇದರೊಂದಿಗೆ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಈ ಎಂಜಿನ್ 108 ಬಿಹೆಚ್‍ಪಿ ಪವರ್ ಮತ್ತು 260 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾಆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಐಷಾರಾಮಿ ಕಾರಿನಂತೆ ಮಾಡಿಫೈಗೊಂಡ ಟಾಟಾ ನೆಕ್ಸಾನ್

ಕಳೆದ ತಿಂಗಳು ಟಾಟಾ ನೆಕ್ಸಾನ್ ಮಾದರಿಯ 8,683 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ತಿಂಗಳು ಟಾಟಾ ನೆಕ್ಸಾನ್ ಮಾದರಿಯು ಅತಿ ಹೆಚ್ಚು ಮಾರಾಟವಾಗುವ ಕಾಂಪ್ಯಾಕ್ಟ್ ಎಸ್‍ಯುವಿ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡುವಲ್ಲಿ ಯಶಸ್ವಿಯಾಗಿದೆ.

Image Courtesy: Rohit Mehta Sai Auto Accessories

Most Read Articles

Kannada
English summary
This Modified Tata Nexon Gets A Premium Makeover Inside-Out. Read In kananda.
Story first published: Friday, April 23, 2021, 21:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X