ಒಂದು ಸಾವಿರ ಯುನಿಟ್ HiLoad ಇವಿ ವಾಹನಗಳನ್ನು ಖರೀದಿಸಿದ MoEVing

ದೇಶಾದ್ಯಂತ ತೈಲ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚದಲ್ಲಿ ಭಾರೀ ಏರಿಕೆಯಾಗಿದೆ. ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿದ್ದು, ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ಕೂಡಾ ಜಾರಿಗೆ ತರಲಾಗಿದೆ.

ಒಂದು ಸಾವಿರ ಯುನಿಟ್ HiLoad ಇವಿ ವಾಹನಗಳನ್ನು ಖರೀದಿಸಿದ MoEVing

ತೈಲ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚವು ಕಳೆದ ತಿಂಗಳಿನಿಂದ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಿರುವಾಗ ಹೊಸ ವಾಹನ ಖರೀದಿದಾರರು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿದ್ದು, ಇತ್ತೀಚೆಗೆ ಮಾರುಕಟ್ಟೆ ಪ್ರವೇಶಿಸಿರುವ ಹಲವು ಹೊಸ ಇವಿ ವಾಹನಗಳು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ.

ಒಂದು ಸಾವಿರ ಯುನಿಟ್ HiLoad ಇವಿ ವಾಹನಗಳನ್ನು ಖರೀದಿಸಿದ MoEVing

ದೆಹಲಿ ಮೂಲದ ಯೂಲರ್ ಮೋಟಾರ್ಸ್ ಸಹ ತನ್ನ ಹೊಸ ಹೈಲೋಡ್ ಎಲೆಕ್ಟ್ರಿಕ್ ತ್ರಿ ಚಕ್ರವನ್ನು ಬಿಡುಗಡೆ ಮಾಡುವ ಮೂಲಕ ವಾಣಿಜ್ಯ ವಾಹನಗಳ ವಿಭಾಗದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು, ಕಂಪನಿಯು ಹೊಸ ಇವಿ ವಾಹನ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಾವಿರಾರು ಯುನಿಟ್‌ಗಳಿಗೆ ಬುಕ್ಕಿಂಗ್ ದಾಖಲಿಸಲಾಗಿದೆ.

ಒಂದು ಸಾವಿರ ಯುನಿಟ್ HiLoad ಇವಿ ವಾಹನಗಳನ್ನು ಖರೀದಿಸಿದ MoEVing

ಹೊಸ ಹೈಲೋಡ್(HiLoad) ವೈಶಿಷ್ಟ್ಯತೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಾಣಿಜ್ಯ ವಾಹನಗಳ ಫ್ಲೀಟ್ ಕಂಪನಿಯಾಗಿ ಮೊವಿಂಗ್(MoEVing) ಬರೋಬ್ಬರಿ 1 ಸಾವಿರ ಯುನಿಟ್‌ಗಳಿಗೆ ಬೇಡಿಕೆ ಸಲ್ಲಿಸಿದ್ದು, ಮೊವಿಂಗ್ ಕಂಪನಿಯು 2025ರ ವೇಳೆಗೆ ವಿವಿಧ ಸರಕು ಸಾಗಾಣಿಕೆಗಾಗಿ ಡೀಸೆಲ್ ಎಂಜಿನ್ ವಾಹನಗಳ ಬದಲಾಗಿ 1 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ಗುರಿಹೊಂದಿದೆ.

ಒಂದು ಸಾವಿರ ಯುನಿಟ್ HiLoad ಇವಿ ವಾಹನಗಳನ್ನು ಖರೀದಿಸಿದ MoEVing

ಸದ್ಯ ಹೈಲೋಡ್ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಿರುವ ಯೂಲರ್ ಮೋಟಾರ್ಸ್ ಕಂಪನಿಯು ಹೊಸ ವಾಹನವನ್ನು 2022ರ ಜನವರಿ 15ರಿಂದ ವಿತರಣೆ ಮಾಡುವುದಾಗಿ ಹೇಳಿಕೊಂಡಿದ್ದು, ಫೇಮ್ 2 ಯೋಜನೆ ಅಡಿ ಸಬ್ಸಡಿ ಹೊಂದಿರುವ ಹೊಸ ವಾಹನ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 3.50 ಲಕ್ಷ ಬೆಲೆ ಹೊಂದಿದೆ.

ಒಂದು ಸಾವಿರ ಯುನಿಟ್ HiLoad ಇವಿ ವಾಹನಗಳನ್ನು ಖರೀದಿಸಿದ MoEVing

ಹೊಸ ಇವಿ ವಾಣಿಜ್ಯ ವಾಹನದಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು ಗ್ರಾಹಕರ ಆಕರ್ಷಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಹೊಸ ಹೈಲೋಡ್ ಮಾದರಿಯು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.

ಒಂದು ಸಾವಿರ ಯುನಿಟ್ HiLoad ಇವಿ ವಾಹನಗಳನ್ನು ಖರೀದಿಸಿದ MoEVing

ಹೊಸ ಇವಿ ತ್ರಿ ಚಕ್ರ ವಾಹನವು ಬೆಸ್ಟ್ ಇನ್ ಕ್ಲಾಸ್ ಪ್ಲೇ ಲೋಡ್ ಸಾಮರ್ಥ್ಯದೊಂದಿಗೆ(680 ಕೆ.ಜಿ) ಉತ್ತಮ ಮೈಲೇಜ್ ಹಿಂದಿರುಗಿಸಲಿದ್ದು, ಸಿಂಗಲ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ 72V, 12.4kW ಲಿಕ್ವಿಡ್ ಕೂಲಿಂಗ್ ಬ್ಯಾಟರಿ ಪ್ಯಾಕ್ ಹೊಂದಿರಲಿದೆ.

ಒಂದು ಸಾವಿರ ಯುನಿಟ್ HiLoad ಇವಿ ವಾಹನಗಳನ್ನು ಖರೀದಿಸಿದ MoEVing

ಹೈಲೋಡ್ ಮಾದರಿಯಲ್ಲಿ ಯೂಲರ್ ಮೋಟಾರ್ಸ್ ಕಂಪನಿಯು ತನ್ನ ವಿನೂತನ 'ಆರ್ಕ್ ರಿಯಾಕ್ಟರ್ 100' ತಂತ್ರಜ್ಞಾನ ಬಳಕೆ ಮಾಡಿದ್ದು, ಇದು ಸರಕು ಸಾಗಾಣಿಕೆಯ ವೇಳೆ ಒತ್ತಡದಲ್ಲೂ ಇವಿ ವಾಹನದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗಲಿದೆ.

ಒಂದು ಸಾವಿರ ಯುನಿಟ್ HiLoad ಇವಿ ವಾಹನಗಳನ್ನು ಖರೀದಿಸಿದ MoEVing

ಹೊಸ ಹೈಲೋಡ್ ಇವಿ ವಾಹನವನ್ನು ಬಳಕೆದಾರರು ಸಾಮಾನ್ಯ ಬಳಕೆಯ ತ್ರಿ ಪಿನ್ ಸಾಕೆಟ್ ಮೂಲಕವು ಚಾರ್ಜ್ ಮಾಡಬಹುದು ಇಲ್ಲವೇ ಫಾಸ್ಟ್ ಡಿಸಿ ಚಾರ್ಜಿಂಗ್ ಸೌಲಭ್ಯವನ್ನು ಬಳಕೆ ಮಾಡಬಹುದಾಗಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯಕ್ಕೆ ಎರಡು ಮಾದರಿಯ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ.

ಒಂದು ಸಾವಿರ ಯುನಿಟ್ HiLoad ಇವಿ ವಾಹನಗಳನ್ನು ಖರೀದಿಸಿದ MoEVing

ಫಾಸ್ಟ್ ಚಾರ್ಜಿಂಗ್‌ನಲ್ಲೂ ಫ್ಲ್ಯಾಶ್ 6 ಮತ್ತು ಫ್ಲ್ಯಾಶ್ 27 ಎನ್ನುವ ಎರಡು ಮಾದರಿಯ ಚಾರ್ಜಿಂಗ್ ಸಾಕೆಟ್ ನೀಡಲಾಗಿದ್ದು, ಫ್ಲ್ಯಾಶ್ ಮೂಲಕ ಹೊಸ ವಾಹನವು ತುಸು ನಿಧಾನವಾಗಿ ಚಾರ್ಜ್ ಆಗಲಿದ್ದರೆ ಫ್ಲ್ಯಾಶ್ 27 ಮೂಲಕ ಅತಿ ಕಡಿಮೆ ಅವಧಿ ಹೆಚ್ಚಿನ ಮಟ್ಟದ ಚಾರ್ಜಿಂಗ್ ಮಾಡಬಹುದಾಗಿದೆ.

ಒಂದು ಸಾವಿರ ಯುನಿಟ್ HiLoad ಇವಿ ವಾಹನಗಳನ್ನು ಖರೀದಿಸಿದ MoEVing

ಗೃಹ ಬಳಕೆಯ ಚಾರ್ಜಿಂಗ್ ಸೌಲಭ್ಯದೊಂದಿಗೆ ಶೇ.80 ರಷ್ಟು ಆಗಲು ಮೂರು ಗಂಟೆ ಸಮಯ ತೆಗೆದುಕೊಳ್ಳುವ ಹೊಸ ವಾಹನವು ಫ್ಲ್ಯಾಶ್ 6 ಮೂಲಕ ಪೂರ್ತಿಯಾಗಿ ಚಾರ್ಜ್ ಆಗಲು ಕನಿಷ್ಠ ಎರಡು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಹಾಗೆಯೇ ಫ್ಲ್ಯಾಶ್ 27 ಮೂಲಕ ಕ್ವಿಕ್ ಚಾರ್ಜಿಂಗ್ ಮಾಡಬಹುದಾಗಿದ್ದು, ಫ್ಲ್ಯಾಶ್ 27 ಮೂಲಕ ಕೇವಲ 15 ನಿಮಿಷ ಚಾರ್ಜ್ ಮಾಡಿದರೂ ಕನಿಷ್ಠ 50 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಒಂದು ಸಾವಿರ ಯುನಿಟ್ HiLoad ಇವಿ ವಾಹನಗಳನ್ನು ಖರೀದಿಸಿದ MoEVing

ಗೃಹ ಬಳಕೆಯ ಚಾರ್ಜಿಂಗ್ ಸೌಲಭ್ಯದ ಮೂಲಕ 30 ನಿಮಿಷ ಚಾರ್ಜ್ ಮಾಡಿದರೆ ಕನಿಷ್ಠ 20 ಕಿ.ಮೀ ಮೈಲೇಜ್ ಹಿಂಪಡೆಯಬಹುದಾಗಿದ್ದು, ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ವಾಹನ ನಿರ್ವಹಣೆಗೆ ಸಾಕಷ್ಟು ಸಹಕಾರಿಯಾಗಿದೆ.

ಒಂದು ಸಾವಿರ ಯುನಿಟ್ HiLoad ಇವಿ ವಾಹನಗಳನ್ನು ಖರೀದಿಸಿದ MoEVing

ಹೊಸ ಹೈಲೋಡ್ ಇವಿ ವಾಹನವು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಕ್ಸ್ ಮತ್ತು ಎಕ್ಸ್ಆರ್ ಎನ್ನುವ ವೆರಿಯೆಂಟ್‌ಗಳನ್ನು ಹೊಂದಿರಲಿದ್ದು, ಎಕ್ಸ್ ವೆರಿಯೆಂಟ್ 680 ಕೆಜಿ ಪ್ಲೇ ಲೋಡ್ ಸಾಮರ್ಥ್ಯದೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 129 ಕಿ.ಮೀ ಮೈಲೇಜ್ ನೀಡುತ್ತದೆ.

ಒಂದು ಸಾವಿರ ಯುನಿಟ್ HiLoad ಇವಿ ವಾಹನಗಳನ್ನು ಖರೀದಿಸಿದ MoEVing

ಎಕ್ಸ್ಆರ್ ವೆರಿಯೆಂಟ್ ಕೂಡಾ ಎಕ್ಸ್ ಮಾದರಿಯಲ್ಲಿ ಪ್ರತಿ ಚಾರ್ಜ್‌ಗೆ 129 ಕಿ.ಮೀ ಮೈಲೇಜ್ ಹೊಂದಿದ್ದು, ಇದು 655 ಕೆಜಿ ಪ್ಲೇ ಲೋಡ್ ಸಾಮರ್ಥ್ಯ ಹೊಂದಿದೆ. ಎರಡು ಮಾದರಿಗಳು ಪ್ರತಿ ಗಂಟೆಗೆ 42 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, 9.1 ಬಿಎಚ್‌ಪಿ, 88.55 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಒಂದು ಸಾವಿರ ಯುನಿಟ್ HiLoad ಇವಿ ವಾಹನಗಳನ್ನು ಖರೀದಿಸಿದ MoEVing

ಹೈಲೋಡ್ ಇವಿ ವಾಹನವು ಒಟ್ಟು 2,100 ಎಂಎಂ ಉದ್ದಳತೆಯೊಂದಿಗೆ 190 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಅತ್ಯುತ್ತಮ ಪ್ಲೇ ಲೋಡ್ ಕಂಟನೈರ್ ಅಳವಡಿಸಲಾಗಿದೆ. ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಹಾಫ್ ಲೋಡ್ ಬಾಡಿ, ಡೆಲಿವರಿ ವ್ಯಾನ್, ಹೈ ಡೆಕ್ ಕಂಟನೈರ್ ಮತ್ತು ಫ್ಲ್ಯಾಟ್ ಡೆಕ್ ಆಯ್ಕೆಗಳನ್ನು ನೀಡಲಾಗಿದೆ.

ಒಂದು ಸಾವಿರ ಯುನಿಟ್ HiLoad ಇವಿ ವಾಹನಗಳನ್ನು ಖರೀದಿಸಿದ MoEVing

ಜೊತೆಗೆ ಹೊಸ ವಾಹನದಲ್ಲಿ ಹಲವಾರು ಹೊಸ ಫೀಚರ್ಸ್ ನೀಡಲಾಗಿದ್ದು, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಫ್ರಂಟ್ ಡಿಸ್ಕ್ ಬ್ರೇಕ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ರಿಯಲ್ ಟೈಮ್ ಡೆಟಾ, ತಾಂತ್ರಿಕ ಅಂಶಗಳ ನಿಯಂತ್ರಣಕ್ಕಾಗಿ ಶೇಫರ್ಡ್ ಆ್ಯಪ್(ಜಿಯೋ ಫೆನ್ಸ್, ಜಿಪಿಎಸ್ ಟ್ರ್ಯಾಕಿಂಗ್) ಹೊಂದಿದೆ.

ಒಂದು ಸಾವಿರ ಯುನಿಟ್ HiLoad ಇವಿ ವಾಹನಗಳನ್ನು ಖರೀದಿಸಿದ MoEVing

2018ರಿಂದ ಹೊಸ ಇವಿ ವಾಹನ ಬಿಡುಗಡೆಗಾಗಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ನಡೆಸಿರುವ ಯೂಲರ್ ಮೋಟಾರ್ಸ್ ಕಂಪನಿಯು ಇದುವರೆಗೆ ಹಲವು ವಾಹನಗಳೊಂದಿಗೆ ಒಟ್ಟು 10 ಲಕ್ಷ ಕಿ.ಮೀ ಟೆಸ್ಟಿಂಗ್ ನಡೆಸಿ ಹೊಸ ಉತ್ಪನ್ನವನ್ನು ಸಿದ್ದಪಡಿಸಿದ್ದು, ಹೊಸ ವಾಹನಕ್ಕಾಗಿ ಈಗಾಗಲೇ ಫ್ಲಿಪ್‌ಕಾರ್ಟ್, ಬಿಗ್‌ಬಾಸ್ಕೆಟ್ ಮತ್ತು ಉಡಾನ್ ಸೇರಿದಂತೆ ಪ್ರಮುಖ ಇ-ಕಾಮರ್ಸ್ ಕಂಪನಿಗಳಿಂದ ಹೆಚ್ಚಿನ ಮಟ್ಟದ ಬೇಡಿಕೆ ಸಲ್ಲಿಕೆಯಾಗುತ್ತಿದೆ.

Most Read Articles

Kannada
English summary
Moeving orders 1 000 units euler motors hiload evs details
Story first published: Saturday, December 4, 2021, 0:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X