ಬಿಡುಗಡೆಯಾಗಲಿದೆ ಪವರ್‌ಫುಲ್ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ವಿಆರ್ ಎಸ್‍ಯುವಿ

ಜಾಗ್ವಾರ್ ಲ್ಯಾಂಡ್ ರೋವರ್ ತನ್ನ 2021ರ ಲ್ಯಾಂಡ್ ರೋವರ್ 90 ಎಸ್‍ಯುವಿಯನ್ನು ಈ ತಿಂಗಳ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು. ಈ ಲ್ಯಾಂಡ್ ರೋವರ್ 90 ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.76.57 ಲಕ್ಷಗಳಾಗಿದೆ.

ಬಿಡುಗಡೆಯಾಗಲಿದೆ ಪವರ್‌ಫುಲ್ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ವಿಆರ್ ಎಸ್‍ಯುವಿ

ಜಾಗತಿಕ ಮಾಧ್ಯಮ ವರದಿಯ ಪ್ರಕಾರ, ಲ್ಯಾಂಡ್ ರೋವರ್ ಜನಪ್ರಿಯ ಆಫ್-ರೋಡರ್ ಹೆಚ್ಚು ಹಾರ್ಡ್‌ಕೋರ್ ಮಾದರಿಯನ್ನು ಅಭಿವೃದ್ಧಿಪಡಿಸುತ್ತಿದೆ. ಈ ವರ್ಷದ ಆರಂಭದಲ್ಲಿ ಬ್ರಿಟಿಷ್ ತಯಾರಕರು ಡಿಫೆಂಡರ್‌ನ ವಿ8 ಆವೃತ್ತಿಯನ್ನು ಪರಿಚಯಿಸಿದರು. ಸಾಮಾನ್ಯ ಮಾದರಿಗಳ ಎಸ್‌ವಿಆರ್ ಸೊಗಸಾದ ಮತ್ತು ಪವರ್ ಫುಲ್ ಎಸ್‍ಯುವಿಯಾಗಿದೆ. ಸ್ಟ್ಯಾಂಡರ್ಡ್ ಲ್ಯಾಂಡ್ ರೋವರ್ ಡಿಫೆಂಡರ್‌ನಂತೆಯೇ ಈ ಮಾದರಿಯು ಉತ್ತಮ ಪರ್ಫಾಮೆನ್ಸ್ ಮಾದರಿಯಾಗಿದೆ.

ಬಿಡುಗಡೆಯಾಗಲಿದೆ ಪವರ್‌ಫುಲ್ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ವಿಆರ್ ಎಸ್‍ಯುವಿ

ಡಿಫೆಂಡರ್ ಎಸ್‌ವಿಆರ್ ಎಸ್‍ಯುವಿಯು ವಿ8 ರೂಪಾಂತರಕ್ಕಿಂತ ಭಿನ್ನವಾಗಿರುತ್ತದೆ ಎಂದು ವರದಿಯಾಗಿದೆ. ಈ ಹೊಸ ಎಸ್‍ಯುವಿಯಲ್ಲಿ 5.0-ಲೀಟರ್ ವಿ 8 ಸೂಪರ್‌ಚಾರ್ಜ್ಡ್ ಎಂಜಿನ್ ಅನ್ನು 4.4-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ವಿ8 ಎಂಜಿನ್ ಅನ್ನು ಹೊಂದಿರುತ್ತದೆ.

ಬಿಡುಗಡೆಯಾಗಲಿದೆ ಪವರ್‌ಫುಲ್ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ವಿಆರ್ ಎಸ್‍ಯುವಿ

ಇದು 600ಕ್ಕೂ ಹೆಚ್ಚು ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ ಎಂದು ಹೇಳಲಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾದರಿಯ ವಿ8 ಎಂಜಿನ್ 518 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಗಲಿದೆ ಪವರ್‌ಫುಲ್ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ವಿಆರ್ ಎಸ್‍ಯುವಿ

ಎಸ್‌ವಿಆರ್ ಕಾರ್ಯಕ್ಷಮತೆಯ ದೃಷ್ಟಿಯಿಂದ ಗಣನೀಯ ಸುಧಾರಣೆಯಾಗಿದೆ. ವಿ8 ಸಹ 625 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಬಂದ ನಂತರ ಡಿಫೆಂಡರ್ ಎಸ್‌ವಿಆರ್ ಎಸ್‍ಯುವಿಯ ನಿಖರವಾದ ಟಾರ್ಕ್ ಅಂಕಿ ಅಂಶವು ಬಹಿರಂಗವಾಗುತ್ತದೆ,

ಬಿಡುಗಡೆಯಾಗಲಿದೆ ಪವರ್‌ಫುಲ್ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ವಿಆರ್ ಎಸ್‍ಯುವಿ

ಲ್ಯಾಂಡ್ ರೋವರ್ ಡಿಫೆಂಡರ್ ವಿ8 ಕೇವಲ 4.9 ಸೆಕೆಂಡುಗಳಲ್ಲಿ ಶೂನ್ಯದಿಂದ 96 ಮೈಲ್ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಡಿಫೆಂಡರ್ ಎಸ್‌ವಿಆರ್ ಎಸ್‍ಯುವಿಯು ಇದಕ್ಕಿಂತ ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿರಬಹುದು.

ಬಿಡುಗಡೆಯಾಗಲಿದೆ ಪವರ್‌ಫುಲ್ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ವಿಆರ್ ಎಸ್‍ಯುವಿ

ಸುಧಾರಿತ ಚಾಲನಾ ಗುಣಲಕ್ಷಣಗಳನ್ನು ಸಕ್ರಿಯಗೊಳಿಸಲು ಡಿಫೆಂಡರ್ ಎಸ್‌ವಿಆರ್ ಸ್ಪೋರ್ಟಿಯರ್ ಸ್ಟೈಲಿಂಗ್ ಅಂಶಗಳನ್ನು ಮತ್ತು ಉತ್ತಮ ಸಸ್ಪೆಂಕ್ಷನ್ ಸೆಟಪ್ ಹೊಂದಿರುತ್ತದೆ. ಸುಧಾರಿತ ಚುರುಕುತನ ಮತ್ತು ಉತ್ತಮ ರೆಸ್ಪಾನ್ಸ್ ಡೈನಾಮಿಕ್ ಮೋಡ್ ಹೊಂದಿರುವ ಟೆರೈನ್ ರೆಸ್ಪಾನ್ಸ್ ಸಿಸ್ಟಂನಂತೆ ಡಿಫೆಂಡರ್ ವಿ8 ಸಾಕಷ್ಟು ಅಪ್‌ಡೇಟ್‌ಗಳೊಂದಿಗೆ ಬರುತ್ತದೆ.

ಬಿಡುಗಡೆಯಾಗಲಿದೆ ಪವರ್‌ಫುಲ್ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ವಿಆರ್ ಎಸ್‍ಯುವಿ

ಕಾರ್ನರಿಂಗ್ ಮಾಡುವಾಗ ಕಡಿಮೆ ಬಾಡಿ ರೋಲ್ ಗಾಗಿ ದೊಡ್ಡ ಆಂಟಿ-ರೋಲ್ ಬಾರ್ ಗಳೊಂದಿಗೆ ಟ್ವೀಕ್ಡ್ ಸೆಟಪ್ ಸಹ ಇದು ಹೊಂದಿದೆ. ಇನ್ನು ಟಾರ್ಕ್ ವೆಕ್ಟರಿಂಗ್, ಯಾವ್ ಕಂಟ್ರೋಲ್ ನೊಂದಿಗೆ ಎಲೆಕ್ಟ್ರಾನಿಕ್ ಆಕ್ಟಿವ್ ರಿಯರ್ ಡಿಫ್, 22 ಇಂಚಿನ ಚಕ್ರಗಳು, ಕ್ವಾಡ್ ಎಕ್ಸಾಸ್ಟ್ ಮತ್ತು ಇತ್ಯಾದಿ ಇತರ ಪ್ರಮುಖ ಅಂಶಗಳನ್ನು ಹೊಂದಿರುತ್ತದೆ.

ಬಿಡುಗಡೆಯಾಗಲಿದೆ ಪವರ್‌ಫುಲ್ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ವಿಆರ್ ಎಸ್‍ಯುವಿ

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ವಿಆರ್ ಮಾದರಿಗೆ ಸುಮಾರು 125,000 ಯುಎಸ್ ಡಾಲರ್ (ಅಂದಾಜು 93 ಲಕ್ಷ ರೂ.) ಬೆಲೆಯನ್ನು ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ, ಇದು ಮಾರುಕಟ್ಟೆಯಲ್ಲಿರುವ ಡಿಫೆಂಡರ್ ವಿ8 ಗಿಂತ ದೊಡ್ಡ ಪ್ರೀಮಿಯಂ ಆಗಿದೆ. ಮುಂದಿನ ವರ್ಷದಲ್ಲಿ ಈ ಡಿಫೆಂಡರ್ ಎಸ್‌ವಿಆರ್ ಎಸ್‍ಯುವಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
600 HP Land Rover Defender SVR In The Development. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X