ಸಂಚಾರ ನಿಯಮಗಳ ಅರಿವಿರದೇ ಕಾರು ಚಾಲನೆ ಮಾಡುತ್ತಿದ್ದಾರೆ 95%ನಷ್ಟು ಕಾರು ಚಾಲಕರು

ಕಾರು ಚಾಲನೆ ಮಾಡುವ 95% ಜನರಿಗೆ ಸಂಚಾರ ನಿಯಮಗಳ ಬಗ್ಗೆ ಹಾಗೂ 50%ನಷ್ಟು ಜನರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಸಹ ತಿಳಿದಿಲ್ಲ. ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಕಾರು ಚಾಲಕರ ಬಗ್ಗೆ ಫೋರ್ಡ್ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಸಂಚಾರ ನಿಯಮಗಳ ಅರಿವಿರದೇ ಕಾರು ಚಾಲನೆ ಮಾಡುತ್ತಿದ್ದಾರೆ 95%ನಷ್ಟು ಕಾರು ಚಾಲಕರು

ಬೆಂಗಳೂರು, ದೆಹಲಿ ಸೇರಿದಂತೆ ಒಟ್ಟು ಆರು ನಗರಗಳ ಕಾರು ಚಾಲಕರು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು. ಬೆಂಗಳೂರು ಹಾಗೂ ದೆಹಲಿ ಚಾಲಕರು ಸಂಚಾರ ನಿಯಮಗಳ ಬಗ್ಗೆ ಕನಿಷ್ಠ ಮಾಹಿತಿ ಹೊಂದಿದ್ದರೆ, ಕೋಲ್ಕತಾ ಹಾಗೂ ಚೆನ್ನೈ ನಗರಗಳ ಕಾರು ಚಾಲಕರು ಸಂಚಾರ ನಿಯಮಗಳ ಬಗ್ಗೆ ಹೆಚ್ಚು ಮಾಹಿತಿ ಹೊಂದಿದ್ದಾರೆ.

ಸಂಚಾರ ನಿಯಮಗಳ ಅರಿವಿರದೇ ಕಾರು ಚಾಲನೆ ಮಾಡುತ್ತಿದ್ದಾರೆ 95%ನಷ್ಟು ಕಾರು ಚಾಲಕರು

ಆಟೋ ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಆರು ನಗರಗಳ 1,561 ಕಾರು ಚಾಲಕರನ್ನು ಫೋರ್ಡ್ ಇಂಡಿಯಾ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯಲ್ಲಿ ಈ ಚಾಲಕರಿಗೆ ಲೈಸೆನ್ಸ್ ಪಡೆಯುವ ವೇಳೆ ಕೇಳಲಾಗುವ 31 ಪ್ರಶ್ನೆಗಳನ್ನು ಕೇಳಲಾಯಿತು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಸಂಚಾರ ನಿಯಮಗಳ ಅರಿವಿರದೇ ಕಾರು ಚಾಲನೆ ಮಾಡುತ್ತಿದ್ದಾರೆ 95%ನಷ್ಟು ಕಾರು ಚಾಲಕರು

ಈ ಪ್ರಶ್ನೆಗಳಿಗೆ 60% ಸರಿಯಾದ ಉತ್ತರಗಳನ್ನು ನೀಡುವವವರಿಗೆ ಸಾರಿಗೆ ಕಚೇರಿಯಿಂದ ಚಾಲನಾ ಪರವಾನಗಿ ನೀಡಲಾಗುತ್ತದೆ. ಈ ಸಮೀಕ್ಷೆಯಲ್ಲಿದ್ದ 97%ನಷ್ಟು ಚಾಲಕರು ವಾಹನ ಚಾಲನೆ ಮಾಡುವ ವೇಳೆ ವಿವಿಧ ಕಾರಣಗಳಿಂದ ವಿಚಲಿತರಾಗುತ್ತೇವೆ ಎಂದು ಹೇಳಿದ್ದಾರೆ.

ಸಂಚಾರ ನಿಯಮಗಳ ಅರಿವಿರದೇ ಕಾರು ಚಾಲನೆ ಮಾಡುತ್ತಿದ್ದಾರೆ 95%ನಷ್ಟು ಕಾರು ಚಾಲಕರು

ಈ ಪೈಕಿ ಹೆಚ್ಚಿನ ಜನರು ಕಾರು ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವುದರಿಂದ ಗಮನವು ಬೇರೆಡೆ ಸೆಳೆಯುತ್ತದೆ. ಇದು ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸಂಚಾರ ನಿಯಮಗಳ ಅರಿವಿರದೇ ಕಾರು ಚಾಲನೆ ಮಾಡುತ್ತಿದ್ದಾರೆ 95%ನಷ್ಟು ಕಾರು ಚಾಲಕರು

ವೇಗವಾಗಿ ಕಾರು ಚಾಲನೆ ಮಾಡುವುದು ಸಹ ಅಪಘಾತಗಳಿಗೆ ಕಾರಣವಾಗಿದೆ. ದೆಹಲಿಯ ಕಾರು ಚಾಲಕರು ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸುವುದಿಲ್ಲ ಎಂದು ಹೇಳಿದರೆ, ಕೋಲ್ಕತಾದ 70% ಜನರು ಕಾರು ಚಲಾಯಿಸುವಾಗ ಮೊಬೈಲ್ ಫೋನ್ ಬಳಸುವುದಾಗಿ ತಿಳಿಸಿದ್ದಾರೆ.

ಸಂಚಾರ ನಿಯಮಗಳ ಅರಿವಿರದೇ ಕಾರು ಚಾಲನೆ ಮಾಡುತ್ತಿದ್ದಾರೆ 95%ನಷ್ಟು ಕಾರು ಚಾಲಕರು

ಕೋಲ್ಕತ್ತಾದ 65%ನಷ್ಟು ಕಾರು ಚಾಲಕರು ತಾವು ಕೆಲವೊಮ್ಮೆ ರಾಂಗ್ ಸೈಡಿನಲ್ಲಿ ಕಾರು ಚಾಲನೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ದೆಹಲಿಯ 70% ಚಾಲಕರು ಸಿಗ್ನಲ್ ಲೈಟ್'ಗಳನ್ನು ಪಾಲಿಸುವುದಿಲ್ಲವೆಂದು ಹೇಳಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಸಂಚಾರ ನಿಯಮಗಳ ಅರಿವಿರದೇ ಕಾರು ಚಾಲನೆ ಮಾಡುತ್ತಿದ್ದಾರೆ 95%ನಷ್ಟು ಕಾರು ಚಾಲಕರು

ದೆಹಲಿಯ ಕಾರು ಚಾಲಕರು ಟರ್ನ್ ಇಂಡಿಕೇಟರ್‌ಗಳನ್ನು ಬಳಸದಿರುವುದು ಹಾಗೂ ಪಥ ಬದಲಿಸುವಾಗ ಅಜಾಗರೂಕರಾಗಿರುವುದು ಸಹ ಪತ್ತೆಯಾಗಿದೆ. ದೆಹಲಿಯ 70% ಚಾಲಕರು ಅಧಿಕೃತ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ನಿಲ್ಲಿಸುವುದಿಲ್ಲವೆಂದು ಹೇಳಿದ್ದಾರೆ.

ಸಂಚಾರ ನಿಯಮಗಳ ಅರಿವಿರದೇ ಕಾರು ಚಾಲನೆ ಮಾಡುತ್ತಿದ್ದಾರೆ 95%ನಷ್ಟು ಕಾರು ಚಾಲಕರು

ದೆಹಲಿಯ ಹೆಚ್ಚಿನ ಕಾರು ಚಾಲಕರು ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸುವುದರಿಂದ ಕಾರಿನ ನಿಯಂತ್ರಣ ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಇದರ ಜೊತೆಗೆ ಆಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ದಳದಂತಹ ತುರ್ತು ವಾಹನಗಳಿಗೆ ದಾರಿ ಮಾಡಿಕೊಡದಿರುವುದನ್ನು ಸಹ ಅವರು ಒಪ್ಪಿಕೊಂಡಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸಂಚಾರ ನಿಯಮಗಳ ಅರಿವಿರದೇ ಕಾರು ಚಾಲನೆ ಮಾಡುತ್ತಿದ್ದಾರೆ 95%ನಷ್ಟು ಕಾರು ಚಾಲಕರು

ಮುಂಬೈ ಕಾರು ಚಾಲಕರು ರಸ್ತೆ ಸುರಕ್ಷತೆ ಹಾಗೂ ಸಂಚಾರಿ ನಿಯಮಗಳ ಬಗ್ಗೆ ಮಿಶ್ರ ಪ್ರಮಾಣದ ತಿಳುವಳಿಕೆ ಹೊಂದಿದ್ದಾರೆ. ಚೆನ್ನೈ ಕಾರು ಚಾಲಕರು ರಸ್ತೆ ಸುರಕ್ಷತೆ ಹಾಗೂ ನಿಯಮಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಹೊಂದಿರುವುದು ಸಮೀಕ್ಷೆಯಲ್ಲಿ ಕಂಡು ಬಂದಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
More than 95 percent car drivers unaware of traffic rules. Read in Kannada.
Story first published: Monday, January 18, 2021, 15:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X