ಸ್ಕ್ರ್ಯಾಪೇಜ್ ನೀತಿ: ಕಾರು ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಅವಧಿ ಮೀರಿದ ಹಳೆಯ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲು ಹೊಸ ಸ್ಕ್ರ್ಯಾಪೇಜ್ ನೀತಿಯನ್ನು ಕಡ್ಡಾಯ ಜಾರಿಗೆ ತರುವ ಮಹತ್ವದ ನಿರ್ಣಯ ಕೈಗೊಂಡಿದ್ದು, ಹೊಸ ಸ್ಕ್ರ್ಯಾಪೇಜ್ ನೀತಿಯನ್ನು ಪ್ರಕಟಗೊಳಿಸಲು ಅಂತಿಮ ಹಂತದ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ.

ಸ್ಕ್ರ್ಯಾಪೇಜ್ ನೀತಿ: ಕಾರು ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ

ಹಳೆಯ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲು ಸ್ವಯಂ ಪ್ರೇರಿತ ಸ್ಕ್ರ್ಯಾಪೇಜ್ ನೀತಿಯನ್ನು ಕಡ್ಡಾಯ ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರವು ಮಹತ್ವದ ನಿರ್ಣಯ ಪ್ರಕಟಿಸಿದ್ದು, ಹಸಿರು ತೆರಿಗೆ ಸೇರಿದಂತೆ ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುತ್ತಿದೆ.

ಸ್ಕ್ರ್ಯಾಪೇಜ್ ನೀತಿ: ಕಾರು ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ

ಹೊಸ ಸ್ಕ್ರ್ಯಾಪೇಜ್ ನೀತಿಯು 2022ರ ಅಕ್ಟೋಬರ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿದ್ದು, 20 ವರ್ಷ ಮೇಲ್ಪಟ್ಟ ವ್ಯಯಕ್ತಿಕ ಬಳಕೆಯ ವಾಹನಗಳು ಮತ್ತು 15 ವರ್ಷ ಮೇಲ್ಪಟ್ಟ ವಾಣಿಜ್ಯ ಬಳಕೆಯ ವಾಹನಗಳನ್ನು ಹೊಸ ನೀತಿಯಡಿಯಲ್ಲಿ ಸ್ಕ್ರ್ಯಾಪ್‌ಗೊಳ್ಳಲಿವೆ.

ಸ್ಕ್ರ್ಯಾಪೇಜ್ ನೀತಿ: ಕಾರು ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ

ಜೊತಗೆ 8 ವರ್ಷಗಳ ಮೇಲ್ಪಟ್ಟ ವಾಣಿಜ್ಯ ವಾಹನಗಳು ಮತ್ತು 15 ವರ್ಷ ಮೇಲ್ಪಟ್ಟ ವ್ಯಯಕ್ತಿಕ ವಾಹನಗಳ ಮೇಲೆ ಹಸಿರು ತೆರಿಗೆ ವಿಧಿಸಲು ನಿರ್ಧರಿಸಲಾಗಿದ್ದು, ಹೊಸ ಸ್ಕ್ರ್ಯಾಪೇಜ್ ನೀತಿಯಿಂದಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಸಾಕಷ್ಟು ಸಹಕಾರಿಯಾಗಲಿದೆ.

ಸ್ಕ್ರ್ಯಾಪೇಜ್ ನೀತಿ: ಕಾರು ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ

ಹಸಿರು ತೆರಿಗೆ ವ್ಯಾಪ್ತಿಗೆ ಬರುವ ವಾಹನಗಳನ್ನು ಹೊರತುಪಡಿಸಿ ಅವಧಿ ಮೀರಿದ ಹಳೆಯ ವಾಹನಗಳನ್ನು ಸ್ವಯಂಪ್ರೇರಿತವಾಗಿ ಗುಜುರಿಗೆ ಹಾಕುವ ಮಾಲೀಕರಿಗೆ ಹಲವಾರು ಹೊಸ ಕ್ರಮಗಳನ್ನು ಪ್ರಕಟಿಸುತ್ತಿರುವ ಕೇಂದ್ರ ಸರ್ಕಾರವು ಹೊಸ ವಾಹನ ಖರೀದಿಗಾಗಿ ರಸ್ತೆ ತೆರಿಗೆಯಲ್ಲಿ ವಿನಾಯ್ತಿ ನೀಡುವುದಾಗಿ ಹೇಳಿಕೊಂಡಿದೆ.

ಸ್ಕ್ರ್ಯಾಪೇಜ್ ನೀತಿ: ಕಾರು ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ

ಹಳೆಯ ವಾಹನವನ್ನು ಅಧಿಕೃತ ಸ್ಕ್ರ್ಯಾಪಿಂಗ್ ಕೇಂದ್ರದಲ್ಲಿ ಸ್ಕಾರ್ಪ್‌ಗೊಳಿಸುವ ಮೂಲಕ ಹೊಸ ವಾಹನ ಖರೀದಿಗಾಗಿ ವ್ಯಯಕ್ತಿಕ ವಾಹನಗಳಿಗಾಗಿ ಶೇ.25 ರಷ್ಟು ಮತ್ತು ಶೇ. 15ರಷ್ಟು ವಾಣಿಜ್ಯ ವಾಹನಗಳಿಗಾಗಿ ರಸ್ತೆ ತೆರಿಗೆ ವಿನಾಯ್ತಿ ನೀಡಲು ನಿರ್ಧರಿಸಿದೆ.

ಸ್ಕ್ರ್ಯಾಪೇಜ್ ನೀತಿ: ಕಾರು ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ

ಜೊತೆಗೆ ಹಸಿರು ತೆರಿಗೆಯನ್ನು 8 ವರ್ಷದ ಮೇಲ್ಪಟ್ಟ ಸಾರಿಗೆ ವಾಹನಗಳ ಫಿಟ್‌ನೆಸ್ ಪ್ರಮಾಣ ಪತ್ರ ನವೀಕರಿಸುವ ಸಂದರ್ಭದಲ್ಲಿ ಮತ್ತು 15 ವರ್ಷ ಮೇಲ್ಪಟ್ಟ ವೈಯಕ್ತಿಕ ಬಳಕೆಯ ವಾಹನಗಳ ಆರ್‌ಸಿ(ನೋಂದಣಿ ಪ್ರಮಾಣಪತ್ರ) ನವೀಕರಿಸುವ ಸಂದರ್ಭದಲ್ಲಿ ಶೇ.15 ರಿಂದ ಶೇ. 25 ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗುತ್ತಿದೆ.

ಸ್ಕ್ರ್ಯಾಪೇಜ್ ನೀತಿ: ಕಾರು ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ವಿಧಿಸಲು ನಿರ್ಧರಿಸಿರುವ ಹಸಿರು ತೆರಿಗೆ ಪಟ್ಟಿಗೆ ದೇಶಾದ್ಯಂತ ಸುಮಾರು ನಾಲ್ಕೂವರೆ ಕೋಟಿ ವಾಹನಗಳು ಹಸಿರು ತೆರಿಗೆ ವ್ಯಾಪ್ತಿಯಲ್ಲಿ ಬರಲಿದ್ದು, ಇದರಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಹಳೆಯ ವಾಹನಗಳಿರುವುದನ್ನು ಕೇಂದ್ರ ಸಾರಿಗೆ ಇಲಾಖೆಯ ಡೇಟಾದಲ್ಲಿ ಬಹಿರಂಗವಾಗಿದೆ.

ಸ್ಕ್ರ್ಯಾಪೇಜ್ ನೀತಿ: ಕಾರು ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ

ವಾಹನ ಸಂಖ್ಯೆಗಳ ಡಿಜಿಟಲೀಕರಣದ ಪ್ರಕಾರ, ಕರ್ನಾಟಕದಲ್ಲಿ ಸುಮಾರು 75 ಲಕ್ಷ ಹಳೆಯ ವಾಹನಗಳು ಚಾಲನೆಯಲ್ಲಿದ್ದು, ನಿಗದಿತ ಅವಧಿ ಮೀರಿದ ವಾಹನಗಳಿಂದ ಭಾರೀ ಪ್ರಮಾಣದ ತೆರಿಗೆ ಸಂಗ್ರಹವಾಗಲಿದೆ.

ಸ್ಕ್ರ್ಯಾಪೇಜ್ ನೀತಿ: ಕಾರು ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ

ಈ ಮೂಲಕ 15 ವರ್ಷ ಮೇಲ್ಪಟ್ಟ ಹಳೆಯ ವಾಹನ ಮಾಲೀಕರಿಗೆ ಮತ್ತು 8 ವರ್ಷ ಮೇಲ್ಪಟ್ಟ ವಾಣಿಜ್ಯ ಮತ್ತು ಸಾರಿಗೆ ವಾಹನಗಳ ಮಾಲೀಕರಿಗೆ ಹಸಿರು ತೆರಿಗೆ ಹೊರೆ ಬೀಳಲಿದ್ದರೆ 20 ವರ್ಷ ಮೇಲ್ಪಟ್ಟ ಹಳೆಯ ಖಾಸಗಿ ವಾಹನಗಳು ಮತ್ತು 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳು ಕಡ್ಡಾಯವಾಗಿ ಗುಜುರಿ ಸೇರಲಿವೆ.

ಸ್ಕ್ರ್ಯಾಪೇಜ್ ನೀತಿ: ಕಾರು ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ

ಹೊಸ ಸ್ಕ್ರ್ಯಾಪಿಂಗ್ ನೀತಿಯಿಂದಾಗಿ ಸಂಗ್ರಹವಾಗುವ ಬಿಡಿಭಾಗಗಳ ಮರುಬಳಕೆಯ ಪ್ರಕ್ರಿಯೆ ಹೆಚ್ಚಳವಾಗುವುದರಿಂದ ಹೊಸ ವಾಹನಗಳ ಬೆಲೆ ಕೂಡಾ ಕಡಿತವಾಗುವ ನೀರಿಕ್ಷೆಗಳಿದ್ದು, ಸಾರಿಗೆ ಇಲಾಖೆಯ ಸಚಿವರ ಮಾಹಿತಿಯೆಂತೆ ಹೊಸ ವಾಹನಗಳ ಉತ್ಪಾದನಾ ವೆಚ್ಚವು ಪ್ರಸ್ತುತ ಮಾರುಕಟ್ಟೆಗಿಂತಲೂ ಶೇ. 20ರಿಂದ ಶೇ.30 ರಷ್ಟು ಇಳಿಕೆಯಾಗುವ ನೀರಿಕ್ಷೆಯಿಟ್ಟುಕೊಳ್ಳಲಾಗಿದೆ.

Most Read Articles

Kannada
English summary
MORTH Issued New Draft Notification For Old Vehicle Scrappage Policy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X