ಹೊಸ ವಾಹನಗಳ ಇಂಧನ ಕಾರ್ಯಕ್ಷಮತೆ ಮತ್ತು ಸುಧಾರಿತ ಬ್ರೇಕಿಂಗ್ ಸೌಲಭ್ಯಕ್ಕಾಗಿ ಜಾರಿಯಾಗಲಿದೆ ಹೊಸ ನಿಯಮ

ಹೊಸ ವಾಹನಗಳ ಉತ್ಪಾದನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಕೇಂದ್ರ ಸಾರಿಗೆ ಇಲಾಖೆಯು ಕಳೆದ ಕೆಲ ವರ್ಷಗಳಿಂದ ಆಟೋ ಉದ್ಯಮದಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಇದೀಗ ವಾಹನ ಇಂಧನಗಳ ಕಾರ್ಯಕ್ಷಮತೆ ಮತ್ತು ಸುಧಾರಿಕ ಬ್ರೇಕಿಂಗ್ ಸೌಲಭ್ಯಕ್ಕಾಗಿ ಹೊಸ ನಿಯಮವನ್ನು ಕಡ್ಡಾಯಗೊಳಿಸಲು ಮುಂದಾಗಿದೆ.

ಸುಧಾರಿತ ಬ್ರೇಕಿಂಗ್ ಸೌಲಭ್ಯಕ್ಕಾಗಿ ಜಾರಿಯಾಗಲಿದೆ ಹೊಸ ನಿಯಮ

ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಇಲಾಖೆಯು ಹೊಸ ನಿಯಮಗಳೊಂದಿಗೆ ವಾಹನಗಳ ಮಾಲಿನ್ಯ ತಗ್ಗಿಸುವಲ್ಲಿ ಸಾಕಷ್ಟು ಬದಲಾವಣೆಗಳೊಳಿಸಿದ್ದು, ಹೊಸ ಎಮಿಷನ್ ಜಾರಿ ನಂತರ ಇದೀಗ ಸುರಕ್ಷತೆಯತ್ತ ಹೆಚ್ಚಿನ ಗಮನಹರಿಸಲಾಗುತ್ತಿದೆ. ಕಳೆದ ಏಪ್ರಿಲ್‌ನಲ್ಲಿ ಹೊಸ ಕಾರುಗಳಲ್ಲಿ ಕಡ್ಡಾಯವಾಗಿ ಡ್ಯುಯಲ್ ಏರ್‌ಬ್ಯಾಗ್ ನಿಯಮ ಜಾರಿಗೆ ತಂದಿರುವ ಕೇಂದ್ರ ಸಾರಿಗೆ ಇಲಾಖೆಯು ಇದೀಗ ವಾಹನಗಳ ಟೈರ್ ಬಳಕೆಗೆ ಕೆಲವು ಮಾನದಂಡಗಳನ್ನು ಕಡ್ಡಾಯಗೊಳಿಸುತ್ತಿದೆ.

ಸುಧಾರಿತ ಬ್ರೇಕಿಂಗ್ ಸೌಲಭ್ಯಕ್ಕಾಗಿ ಜಾರಿಯಾಗಲಿದೆ ಹೊಸ ನಿಯಮ

ಹೊಸ ಮಾನದಂಡಗಳ ಮೂಲಕ ಗುಣಮಟ್ಟದ ಟೈರ್ ಬಳಕೆಯನ್ನು ಕಡ್ಡಾಯಗೊಳಿಸಲಿರುವ ಕೇಂದ್ರ ಸಾರಿಗೆ ಇಲಾಖೆಯು ಹೊಸ ಟೈರ್ ಟೆಕ್ನಾಲಜಿಯೊಂದಿಗೆ ವಾಹನ ಇಂಧನ ಕಾರ್ಯಕ್ಷಮತೆ ಹೆಚ್ಚಿಸುವುದರ ಜೊತೆಗೆ ಬ್ರೇಕಿಂಗ್ ಕಾರ್ಯಕ್ಷಮತೆಯನ್ನು ಸಹ ಹೆಚ್ಚಿಸಲು ಯೋಜನೆ ಹೊಂದಲಾಗಿದೆ.

ಸುಧಾರಿತ ಬ್ರೇಕಿಂಗ್ ಸೌಲಭ್ಯಕ್ಕಾಗಿ ಜಾರಿಯಾಗಲಿದೆ ಹೊಸ ನಿಯಮ

ಹೊಸ ಮಾನದಂಡಗಳಿಂದಾಗಿ ಹೊಸ ಟೈರ್ ಮಾದರಿಗಳು ತುಸು ದುಬಾರಿಯಾಗಲಿದ್ದರೂ ಉತ್ತಮ ಇಂಧನ ಕಾರ್ಯಕ್ಷಮತೆ ಮತ್ತು ಬ್ರೇಕಿಂಗ್ ಕಾರ್ಯಕ್ಷಮತೆಯಿಂದಾಗಿ ನಿರ್ವಹಣಾ ವೆಚ್ಚದಲ್ಲಿ ಸಾಕಷ್ಟು ಉಳಿತಾಯವಾಗುವುದಲ್ಲದೆ ಸುರಕ್ಷತೆಗೂ ಆದ್ಯತೆ ನೀಡಿದಂತಾಗುತ್ತದೆ.

ಸುಧಾರಿತ ಬ್ರೇಕಿಂಗ್ ಸೌಲಭ್ಯಕ್ಕಾಗಿ ಜಾರಿಯಾಗಲಿದೆ ಹೊಸ ನಿಯಮ

ಹೊಸ ಮಾನದಂಡಗಳನ್ನು ಕಡ್ಡಾಯವಾಗಿ ಜಾರಿಗೆ ತರುವುದಕ್ಕೂ ಮುನ್ನ ಟೈರ್ ಉತ್ಪಾದನಾ ಕಂಪನಿಗಳ ಸಲಹೆಗಳನ್ನು ಕೇಳಿರುವ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಯಲವು ಉತ್ಪಾದನಾ ಕಂಪನಿಗಳ ಸಲಹೆಗಳನ್ನು ಆಧಾರಿಸಿ ಹೊಸ ಮಾನದಂಡಗಳನ್ನು ಪರಿಷ್ಕರಣೆ ಮಾಡಲಿದ್ದು, ಮುಂಬರುವ ಕೆಲವೇ ತಿಂಗಳುಗಳಲ್ಲಿ ಹೊಸ ನಿಯಮ ಅಳವಡಿಕೆಯನ್ನು ಜಾರಿಗೆ ತರಲಾಗುತ್ತದೆ.

ಸುಧಾರಿತ ಬ್ರೇಕಿಂಗ್ ಸೌಲಭ್ಯಕ್ಕಾಗಿ ಜಾರಿಯಾಗಲಿದೆ ಹೊಸ ನಿಯಮ

ಟೈರ್ ಉತ್ಪಾದನೆ ಹೊಸ ಮಾನದಂಡ ಜಾರಿಗೆ ಬಂದಲ್ಲಿ ವ್ಯಯಕ್ತಿಕ ವಾಹನಗಳಿಂತಲೂ ವಾಣಿಜ್ಯ ವಾಹನಗಳ ಟೈರ್ ಉತ್ಪಾದನೆಯಲ್ಲಿ ಗುಣಮಟ್ಟ ಸುಧಾರಿಸುವುದರ ಜೊತೆಗೆ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ತಡೆಗೆ ಹೊಸ ಟೈರ್ ತಂತ್ರಜ್ಞಾನವು ಸಹಕಾರಿಯಾಗಲಿದೆ.

ಸುಧಾರಿತ ಬ್ರೇಕಿಂಗ್ ಸೌಲಭ್ಯಕ್ಕಾಗಿ ಜಾರಿಯಾಗಲಿದೆ ಹೊಸ ನಿಯಮ

ಟೈರ್ ಉತ್ಪಾದನೆಗೆ ಹೊಸ ಮಾನದಂಡಗಳು ಕಡ್ಡಾಯಗೊಂಡ ನಂತರ ರೋಲಿಂಗ್ ರೆಸಿಸ್ಟೆನ್ಸ್, ವೆಟ್ ಗ್ರಿಪ್ ಮತ್ತು ಟೈರ್ ಪ್ರೆಷರ್ ಮಟ್ಟವನ್ನು ನಿಯಂತ್ರಣದಲ್ಲಿಡಲಿದ್ದು, ಹೊಸ ಟೈರ್ ಮಾನದಂಡಳನ್ನು ಯುರೋಪ್ ಮಾರುಕಟ್ಟೆಗಳಲ್ಲಿ ಅನುಸರಿಸಲಾಗುತ್ತಿರುವ ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟ ಮಾನದಂಡಗಳಿಗೆ ಸಮವಾಗಿರುತ್ತದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಸುಧಾರಿತ ಬ್ರೇಕಿಂಗ್ ಸೌಲಭ್ಯಕ್ಕಾಗಿ ಜಾರಿಯಾಗಲಿದೆ ಹೊಸ ನಿಯಮ

ಹೊಸ ಮಾನದಂಡವನ್ನು ಕಡ್ಡಾಯಗೊಳಿಸಿದ ನಂತರ ದೇಶದ ಎಲ್ಲಾ ಟೈರ್ ಕಂಪನಿಗಳು ಕಡ್ಡಾಯವಾಗಿ ಜಾರಿಗೆ ತರಬೇಕಿದ್ದು, ಹೊಸ ನಿಯಮವು ದ್ವಿಚಕ್ರ ವಾಹನಗಳು, ಕಾರುಗಳು, ಬಸ್ ಮತ್ತು ಭಾರೀ ಗಾತ್ರದ ವಾಣಿಜ್ಯ ವಾಹನ ಸೇರಿ ಎಲ್ಲಾ ಮಾದರಿಯ ವಾಹನಗಳು ಹೊಸ ಮಾನದಂಡವನ್ನು ಅನುಸರಿಸಬೇಕಾಗುತ್ತದೆ.

ಸುಧಾರಿತ ಬ್ರೇಕಿಂಗ್ ಸೌಲಭ್ಯಕ್ಕಾಗಿ ಜಾರಿಯಾಗಲಿದೆ ಹೊಸ ನಿಯಮ

ಹೊಸ ನಿಯಮ ಕಡ್ಡಾಯದ ನಂತರ ಗುಣಮಟ್ಟದ ಟೈರ್‌ನೊಂದಿಗೆ ಹೊಸ ವಾಹನಗಳ ಬೆಲೆಯಲ್ಲಿ ಹೆಚ್ಚಳವಾದರೂ ಕೂಡಾ ಧೀರ್ಘಕಾಲಿಕ ಬಾಳ್ವಿಕೆ ಮತ್ತು ಉತ್ತಮ ಬ್ರೇಕಿಂಗ್ ಮೂಲಕ ಸುರಕ್ಷತೆಯಲ್ಲೂ ಗಮನಸೆಳೆಯಲಿದ್ದು, ಹೊಸ ಟೈರ್ ಪ್ರೇರಿತ ವಾಹನಗಳು ಮುಂಬರುವ ಅಕ್ಟೋಬರ್ ಹೊತ್ತಿಗೆ ಕಡ್ಡಾಯವಾಗಲಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಸುಧಾರಿತ ಬ್ರೇಕಿಂಗ್ ಸೌಲಭ್ಯಕ್ಕಾಗಿ ಜಾರಿಯಾಗಲಿದೆ ಹೊಸ ನಿಯಮ

ಹೊಸ ಮಾನದಂಡ ಜಾರಿಗೆ ತರುವುದಕ್ಕೂ ಉತ್ಪಾದನಾ ಕಂಪನಿಗಳಿಗೆ ಹೊಸ ತಂತ್ರಜ್ಞಾನ ಅಳವಡಿಕೆಗೆ ಸಮಯಾವಕಾಶ ನೀಡಲಾಗಿದ್ದು, ವಾಹನಗಳ ಗುಣಮಟ್ಟ ಮತ್ತು ಸುರಕ್ಷತೆಗಾಗಿ ಹೊಸ ನಿಯಮಗಳನ್ನು ಕಡ್ಡಾಯಗೊಳಿಸುತ್ತಿರುವುದು ಉತ್ತಮ ಕ್ರಮವಾಗಿದೆ ಎನ್ನಬಹುದು.

Most Read Articles

Kannada
English summary
MoRTH Proposes New Mandatory Tyre Norms In India. Read in Kannada. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X