ಕೈಗೆಟುಕುವ ದರದಲ್ಲಿ ಪನೋರಮಿಕ್ ಸನ್‌ರೂಫ್ ಸೌಲಭ್ಯವುಳ್ಳ ಕಾರುಗಳಿವು

ಸನ್‌ರೂಫ್ ಇಂದು ಕಾರಿನಲ್ಲಿ ನೀಡಲಾಗುವ ಅತ್ಯಂತ ಅಗತ್ಯ ಫೀಚರ್‌ಗಳಲ್ಲಿ ಒಂದಾಗಿದೆ. ಈ ಪೀಚರ್ ಜನಪ್ರಿಯತೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರತೀಯರು ಹೆಚ್ಚಾಗಿ ಸನ್‌ರೂಫ್ ಸೌಲಭ್ಯವುಳ್ಳ ಕಾರುಗಳನ್ನು ಇಷ್ಟಪಡುತ್ತಾರೆ.

ಕೈಗೆಟುಕುವ ದರದಲ್ಲಿ ಪನೋರಮಿಕ್ ಸನ್‌ರೂಫ್ ಸೌಲಭ್ಯವುಳ್ಳ ಕಾರುಗಳಿವು

ಮೊದಲು ಐಷಾರಾಮಿ ಕಾರುಗಳಲ್ಲಿ ಮಾತ್ರ ಪನೋರಮಿಕ್ ಸನ್‌ರೂಫ್ ಅನ್ನು ನೀಡಲಾಗುತ್ತಿತ್ತು. ಆದರೆ ಇಂದು ಹೆಚ್ಚಿನ ಕಾರುಗಳು ಸನ್‌ರೂಫ್ ಸೌಲಭ್ಯವನ್ನು ಪಡೆದುಕೊಳ್ಳುತ್ತಿದೆ. ಎಲ್ಲಾ ವಯೋಮಾನವರು ಕೂಡ ಸನ್‌ರೂಫ್ ಪೀಚರ್ ಅನ್ನು ಇಷ್ಟಪಡುತ್ತಾರೆ. ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಕಾರು ಖರೀದಿಸುವಾಗ ಸನ್‌ರೂಫ್ ಫೀಚರ್‌ಗೆ ಹೆಚ್ಚಿನ ಅಧ್ಯತೆಯನ್ನು ನೀಡುತ್ತಾರೆ. ಕೆಲವು ಹೊಸ ಕಾರುಗಳಲ್ಲಿ ದೊಡ್ಡ ಡ್ಯುಯಲ್-ಪೇನ್ ಪನೋರಮಿಕ್ ಸನ್‌ರೂಫ್ ಅನ್ನು ನೀಡುತ್ತಾರೆ.

ಕೈಗೆಟುಕುವ ದರದಲ್ಲಿ ಪನೋರಮಿಕ್ ಸನ್‌ರೂಫ್ ಸೌಲಭ್ಯವುಳ್ಳ ಕಾರುಗಳಿವು

ಹಲವು ಜನಪ್ರಿಯ ಎಸ್‍ಯುವಿ ಮತ್ತು ಎಂಪಿವಿಗಳಲ್ಲಿ ಸನ್‌ರೂಫ್ ಸೌಲಭ್ಯವನ್ನು ಹೊಂದಿಲ್ಲ, ಆದರೆ ಮಧ್ಯಮವರ್ಗದ ಜನರಿಗೆ ಪನೋರಮಿಕ್ ಸನ್‌ರೂಫ್ ಸೌಲಭ್ಯವುಳ್ಳ ಕಾರುಗಳ ಆಯ್ಕೆಗಳು ಲಭ್ಯವಿದೆ. ಭಾರತದಲ್ಲಿ ಕೈಗೆಟುಕುವ ದರದಲ್ಲಿ ಪನೋರಮಿಕ್ ಸನ್‌ರೂಫ್ ಸೌಲಭ್ಯವುಳ್ಳ ಕಾರುಗಳ ಬಗ್ಗೆ ಮಾಹಿತಿ ಇಲ್ಲಿವೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಕೈಗೆಟುಕುವ ದರದಲ್ಲಿ ಪನೋರಮಿಕ್ ಸನ್‌ರೂಫ್ ಸೌಲಭ್ಯವುಳ್ಳ ಕಾರುಗಳಿವು

ಹ್ಯುಂಡೈ ಕ್ರೆಟಾ

ಪ್ರಸ್ತುತ ಭಾರತದಲ್ಲಿ ಪನೋರಮಿಕ್ ಸನ್‌ರೂಫ್‌ನೊಂದಿಗೆ ನೀಡಲಾಗುವ ಅತ್ಯಂತ ಉತ್ತಮ ಕಾರುಗಳಲ್ಲಿ ಇದು ಒಂದಾಗಿದೆ. ಹ್ಯುಂಡೈ ಕ್ರೆಟಾ ಮಿಡ್ ಎಸ್‍ಯುವಿಯ ಎಸ್‌ಎಕ್ಸ್ ಮತ್ತು ಎಸ್‌ಎಕ್ಸ್ (ಒ) ವೆರಿಯೆಂಟ್ ಗಳಲ್ಲಿ ಪನೋರಮಿಕ್ ಸನ್‌ರೂಫ್ ಫೀಚರ್ ಗಳನ್ನು ನೀಡಲಾಗಿದೆ.

ಕೈಗೆಟುಕುವ ದರದಲ್ಲಿ ಪನೋರಮಿಕ್ ಸನ್‌ರೂಫ್ ಸೌಲಭ್ಯವುಳ್ಳ ಕಾರುಗಳಿವು

ಈ ಹ್ಯುಂಡೈ ಕ್ರೆಟಾ ಮಿಡ್ ಎಸ್‍ಯುವಿಯ ಕಾರಿನ ಬೆಲೆಯು ರೂ.13.79 ಲಕ್ಷಗಳಿಂದ ರೂ.17.53 ಲಕ್ಷಗಳಾಗಿದೆ. ಈ ಹ್ಯುಂಡೈ ಎಸ್‍ಯುವಿಯಲ್ಲಿ ಸನ್‌ರೂಫ್ ಫಿಚರ್ ನೊಂದಿಗೆ ಹಲವು ಅತ್ಯಾಧುನಿಕ ಫೀಚರ್ ಗಳೊಂದಿಗೆ ಲಭ್ಯವಿದೆ.

ಕೈಗೆಟುಕುವ ದರದಲ್ಲಿ ಪನೋರಮಿಕ್ ಸನ್‌ರೂಫ್ ಸೌಲಭ್ಯವುಳ್ಳ ಕಾರುಗಳಿವು

ಎಂಜಿ ಹೆಕ್ಟರ್

ಎಂಜಿ ಹೆಕ್ಟರ್‌ನ ರೇಂಜ್-ಟಾಪಿಂಗ್ ಶಾರ್ಪ್ ಟ್ರಿಮ್‌ನೊಂದಿಗೆ ಮಾತ್ರ ಪನೋರಮಿಕ್ ಸನ್‌ರೂಫ್ ಅನ್ನು ನೀಡುತ್ತದೆ. ಈ ವೆರಿಯೆಂಟ್ 1.5-ಲೀಟರ್ ಟರ್ಬೊ-ಪೆಟ್ರೋಲ್ ಹೈಬ್ರಿಡ್ ಎಂಟಿ ಕಾನ್ಫಿಗರೇಶನ್ ಬೆಲೆಯು ರೂ.17.10 ಲಕ್ಷ, ಟರ್ಬೊ-ಪೆಟ್ರೋಲ್ ಡಿಸಿಟಿ ಅಥವಾ ಸಿವಿಟಿಗೆ ರೂ.18.10 ಲಕ್ಷ ಮತ್ತು 2.0-ಲೀಟರ್‌ ಮಾದರಿಯ ಬೆಲೆಯು ರೂ.18.43 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಕೈಗೆಟುಕುವ ದರದಲ್ಲಿ ಪನೋರಮಿಕ್ ಸನ್‌ರೂಫ್ ಸೌಲಭ್ಯವುಳ್ಳ ಕಾರುಗಳಿವು

ಎಂಜಿ ಹೆಕ್ಟರ್ ಪ್ಲಸ್

ಹೆಕ್ಟರ್‌ನ ಮೂರು-ಸಾಲಿನ ಆವೃತ್ತಿಯಾದ ಹೆಕ್ಟರ್ ಪ್ಲಸ್ ಅನ್ನು ಪನೋರಮಿಕ್ ಸನ್‌ರೂಫ್‌ನೊಂದಿಗೆ ಸಹ ನೀಡಲಾಗುತ್ತದೆ. 6 ಸೀಟುಗಳ ಆವೃತ್ತಿಯಲ್ಲಿ ಶಾರ್ಪ್ ಟ್ರಿಮ್ ಮತ್ತು 7 ಆಸನಗಳ ಮಾದರಿಯಲ್ಲಿ ಸೆಲೆಕ್ಟ್ ಟ್ರಿಮ್ ಈ ಪನೋರಮಿಕ್ ಫಿಚರ್ ಅನ್ನು ಪಡೆಯುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಕೈಗೆಟುಕುವ ದರದಲ್ಲಿ ಪನೋರಮಿಕ್ ಸನ್‌ರೂಫ್ ಸೌಲಭ್ಯವುಳ್ಳ ಕಾರುಗಳಿವು

ಎಂಜಿ ಹೆಕ್ಟರ್ ಪ್ಲಸ್ ಪೆಟ್ರೋಲ್-ಹೈಬ್ರಿಡ್ ಎಂಟಿ, ಪೆಟ್ರೋಲ್ ಸಿವಿಟಿ, ಪೆಟ್ರೋಲ್ ಡಿಸಿಟಿ ಮತ್ತು ಡೀಸೆಲ್ ಎಂಟಿ ಸಂರಚನೆಗಳೊಂದಿಗೆ ಲಭ್ಯವಿದೆ, ಇದರ ಬೆಲೆ ರೂ.17.85 ದಿಂದ ರೂ.19.23 ಲಕ್ಷಗಳಾಗಿದೆ. 7-ಆಸನಗಳ ಆವೃತ್ತಿಯಲ್ಲಿನ ಸೆಲೆಕ್ಟ್ ಟ್ರಿಮ್ 2.0-ಲೀಟರ್ ಆಯಿಲ್ ಬರ್ನರ್ ಅನ್ನು ಮಾತ್ರ ಪಡೆಯುತ್ತದೆ,

ಕೈಗೆಟುಕುವ ದರದಲ್ಲಿ ಪನೋರಮಿಕ್ ಸನ್‌ರೂಫ್ ಸೌಲಭ್ಯವುಳ್ಳ ಕಾರುಗಳಿವು

ಟಾಟಾ ಹ್ಯಾರಿಯರ್

ಟಾಟಾ ಹ್ಯಾರಿಯರ್ ಅನ್ನು ಎಕ್ಸ್‌ಝಡ್‌ ಪ್ಲಸ್ ಮತ್ತು ಎಕ್ಸ್‌ಝಡ್‌ಎ ಪ್ಲಸ್ ವೆರಿಯೆಂಟ್ ಗಳಲ್ಲಿ ಡ್ಯುಯಲ್-ಪೇನ್ ಸನ್‌ರೂಫ್‌ನೊಂದಿಗೆ ನೀಡಲಾಗುತ್ತದೆ, ಜೊತೆಗೆ ಎರಡರ ಸ್ಪೆಷಲ್ ಎಡಿಷನ್ ಆದ ಕ್ಯಾಮೊ ಮತ್ತು ಡಾರ್ಕ್ ಎಡಿಷನ್ ಗಳಲ್ಲಿಯು ನೀಡಲಾಗುತ್ತದೆ. ಪನೋರಮಿಕ್ ಸನ್‌ರೂಫ್ ಹೊಂದಿದ ವೆರಿಯೆಂಟ್ ಗಳ ಬೆಲೆಗಳು ಎಕ್ಸ್ ಶೋರೂಂ ಪ್ರಕಾರ ರೂ.19.05 ಲಕ್ಷಗಳಿಂದ ರೂ.20.45 ಲಕ್ಷಗಳಾಗಿದೆ.

ಕೈಗೆಟುಕುವ ದರದಲ್ಲಿ ಪನೋರಮಿಕ್ ಸನ್‌ರೂಫ್ ಸೌಲಭ್ಯವುಳ್ಳ ಕಾರುಗಳಿವು

ಇತ್ತೀಚೆಗೆ ಪ್ರಾರಂಭಿಸಲಾದ ಹೊಸ-ಜನ್ ಸಫಾರಿ ಮೇಲೆ ತಿಳಿಸಿದ ಹ್ಯಾರಿಯರ್‌ನ ಮೂರು-ಸಾಲಿನ ಆವೃತ್ತಿಯಾಗಿದೆ ಎಂದು ನಮಗೆ ಈಗಾಗಲೇ ತಿಳಿದಿದೆ ಮತ್ತು ಆದ್ದರಿಂದ, ಐದು ಆಸನಗಳ ಎಸ್ಯುವಿಯ ವೈಶಿಷ್ಟ್ಯ ಪಟ್ಟಿಯನ್ನು ಸಹ ಎರವಲು ಪಡೆಯುತ್ತದೆ. ಎಸ್‌ಯುವಿಯ ಎಕ್ಸ್‌ಟಿ +, ಎಕ್ಸ್‌ Z ಡ್ + ಮತ್ತು ಎಕ್ಸ್‌ Z ಡ್ಎ + ರೂಪಾಂತರಗಳು ವಿಹಂಗಮ ಸನ್‌ರೂಫ್ ಪಡೆಯುತ್ತವೆ, ಇದರ ಬೆಲೆ 18.25 ಲಕ್ಷ ರೂ.ಗಳಿಂದ 21.45 ಲಕ್ಷ ರೂ. (ಎಕ್ಸ್ ಶೋರೂಮ್).

ಕೈಗೆಟುಕುವ ದರದಲ್ಲಿ ಪನೋರಮಿಕ್ ಸನ್‌ರೂಫ್ ಸೌಲಭ್ಯವುಳ್ಳ ಕಾರುಗಳಿವು

ಟಾಟಾ ಸಫಾರಿ

ಇತ್ತೀಚೆಗೆ ಬಿಡುಗಡೆಗೊಳಿಸಲಾದ ನ್ಯೂ ಜನರೇಷನ್ ಸಫಾರಿ ಮೇಲೆ ತಿಳಿಸಿದ ಹ್ಯಾರಿಯರ್‌ನ ಮೂರು-ಸಾಲಿನ ಆವೃತ್ತಿ ಎಂದು ಹೇಳಲಾಗುತ್ತದೆ. ಹ್ಯಾರಿಯರ್ ಫೀಚರ್ ಗಳನ್ನು ಸಪಾರಿ ಎಸ್‍ಯುವಿಯು ಕೂಡ ಎರವಲು ಪಡೆಯುತ್ತದೆ. ಸಫಾರಿ ಎಸ್‍ಯುವಿಯ ಎಕ್ಸ್‌ಟಿ, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ಎ ಪ್ಲಸ್ ವೆರಿಯೆಂಟ್ ಗಳಲ್ಲಿ ಪನೋರಮಿಕ್ ಸನ್‌ರೂಫ್ ಪಡೆಯುತದೆ. ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.18.25 ಲಕ್ಷಗಳಿಂದ ರೂ.21.45 ಲಕ್ಷಗಳಾಗಿದೆ.

Most Read Articles

Kannada
English summary
Most Affordable Cars With Panoramic Sunroof. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X