ಅತಿ ಹೆಚ್ಚು ಮೈಲೇಜ್ ನೀಡುವ ಮತ್ತು ಕೈಗೆಟುಕುವ ದರದ ಟಾಪ್-10 ಕಾರುಗಳಿವು

ದೇಶದಲ್ಲಿ ಪ್ರತಿನಿತ್ಯ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಹೊಸ ದರದ ದಾಖಲೆ ಸೃಷ್ಟಿಯಾಗುತ್ತಿದೆ. ಇದರಿಂದ ಸಾಮಾನ್ಯ ಜನರಿಗೆ ವಾಹನಗಳನ್ನು ನಿಭಾಯಿಸುವುದು ಕಷ್ಟವಾಗಿದೆ. ಇದರಿಂದ ಜನರು ಕೂಡ ಹೆಚ್ಚು ಮೈಲೇಜ್ ನೀಡುವ ಕಾರುಗಳ ಬಗ್ಗೆ ಒಲವನ್ನು ವ್ಯಕ್ತಪಡಿಸುತ್ತಿದ್ದಾರೆ.

ಅತಿ ಹೆಚ್ಚು ಮೈಲೇಜ್ ನೀಡುವ ಮತ್ತು ಕೈಗೆಡುಕುವ ದರದ ಟಾಪ್-10 ಕಾರುಗಳಿವು

ಅಲ್ಲದೇ ಹೆಚ್ಚು ಮೈಲೇಜ್ ನೀಡುವ ಕಾರುಗಳನ್ನು ಆಯ್ಕೆ ಮಾಡಿಕೊಂಡರೆ ಇಂಧನ ಉಳಿತಾಯ ಮಾಡಿ ಬೆಲೆ ಏರಿಕೆಯ ಹೊರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಮೈಲೇಜ್ ವಿಷಯ ಬಂದಾಗ ಮಾರುತಿ ಸುಜುಕಿ ಕಾರುಗಳು ಅಗ್ರಸ್ಥಾನದಲ್ಲಿರುತ್ತದೆ. ಜೊತೆಗೆ ಇತರ ಬ್ರ್ಯಾಂಡ್ ಗಳು ಕೂಡ ಉತ್ತಮ ಮೈಲೇಜ್ ನೀಡುವ ಕಾರುಗಳನ್ನು ಹೊಂದಿವೆ. ಇನ್ನು ಬಿಎಸ್-6 ಮಾಲಿನ್ಯ ನಿಯಮ ಜಾರಿಯಾದ ಬಳಿಕ ಪೆಟ್ರೋಲ್ ಕಾರುಗಳು ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮತ್ತು ಕೈಗೆಡುಕುವ ದರದ ಟಾಪ್-10 ಕಾರುಗಳಿವು

ನೀವು ಕೂಡ ಹೆಚ್ಚಿನ ಮೈಲೇಜ್ ನೀಡುವ ಪೆಟ್ರೋಲ್ ಕಾರುಗಳನ್ನು ಖರೀದಿಸಲು ಬಯಸಿದ್ದರೆ, ನಿಮಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಮತ್ತು ಕೈಗೆಟುಕುವ ದರದಲ್ಲಿ ಲಭ್ಯವಿರುವ ಟಾಪ್ 10 ಪೆಟ್ರೋಲ್ ಕಾರುಗಳ ಬಗ್ಗೆ ಇಲ್ಲಿ ತಿಳಿಸುತ್ತೇವೆ. ಓದುಗರ ಗಮನಕ್ಕೆ, ಇಲ್ಲಿ ನೀಡಿರುವ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮತ್ತು ಕೈಗೆಡುಕುವ ದರದ ಟಾಪ್-10 ಕಾರುಗಳಿವು

ಮಾರುತಿ ಸುಜುಕಿ ಡಿಜೈರ್

ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಅತಿ ಹೆಚ್ಚು ಮೈಲೇಜ್ ನೀಡುವ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಡಿಜೈರ್ ಅಗ್ರಸ್ಥಾನದಲ್ಲಿದೆ, ಎಆರ್‌ಎಐ ಪ್ರಕಾರ, ಡಿಜೈರ್ ಎಎಂಟಿ ವೆರಿಯೆಂಟ್ ಪ್ರತಿ ಲೀಟರ್‌ಗೆ 24.12 ಕಿಮೀ ಮೈಲೇಜ್ ನೀಡಿದರೆ, ಮ್ಯಾನುವಲ್ ವೆರಿಯೆಂಟ್ 23.26 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಮಾರುತಿ ಸುಜುಕಿ ಡಿಜೈರ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.5.94 - ರೂ.8.90 ಲಕ್ಷಗಳಾಗಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮತ್ತು ಕೈಗೆಡುಕುವ ದರದ ಟಾಪ್-10 ಕಾರುಗಳಿವು

ಮಾರುತಿ ಸುಜುಕಿ ಬಲೆನೊ ಮತ್ತು ಟೊಯೊಟಾ ಗ್ಲಾಂಝಾ

ಮಾರುತಿ ಸುಜುಕಿ ಬಲೆನೊ ಮತ್ತು ಅದರ ರಿಬ್ಯಾಡ್ಜ್ ಆವೃತ್ತಿಯಾದ ಟೊಯೊಟಾ ಗ್ಲಾಂಝಾ ಎರಡನೇ ಸ್ಥಾನದಲ್ಲಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಪ್ರತಿ ಲೀಟರ್‌ಗೆ 23.87 ಕಿಮೀ ಮೈಲೇಜ್ ನೀಡುತ್ತದೆ. ಪ್ರಸ್ತುತ ಮಾರುತಿ ಸುಜುಕಿ ಬಲೆನೊ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.5.90 ಲಕ್ಷದಿಂದ ರೂ.9.10 ಲಕ್ಷಗಳಾಗಿದೆ. ಇನ್ನು ಟೊಯೊಟಾ ಗ್ಲಾಂಝಾ ಆರಂಬಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.18 ಲಕ್ಷಗಳಾಗಿದೆ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಅತಿ ಹೆಚ್ಚು ಮೈಲೇಜ್ ನೀಡುವ ಮತ್ತು ಕೈಗೆಡುಕುವ ದರದ ಟಾಪ್-10 ಕಾರುಗಳಿವು

ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿ ಸುಜುಕಿ ಸ್ವಿಫ್ಟ್ ಇತ್ತೀಚೆಗೆ ಫೇಸ್‌ಲಿಫ್ಟೆಡ್ ಸ್ವಿಫ್ಟ್ ಐಡಲ್ ಸ್ಟಾರ್ಟ್/ಸ್ಟಾಪ್ ಫಂಕ್ಷನ್‌ನೊಂದಿಗೆ ಹೊಸ 1.2-ಲೀಟರ್ ಡ್ಯುಯಲ್ ಜೆಟ್ ಎಂಜಿನ್ ಅನ್ನು ಪಡೆದಿದೆ. ಎಆರ್‌ಎಐ ಪ್ರಕಾರ ಸ್ವಿಫ್ಟ್ ಎಎಂಟಿ ವೆರಿಯೆಂಟ್ ಪ್ರತಿ ಲೀಟರ್‌ಗೆ 23.76 ಕಿಮೀ ಮೈಲೇಜ್ ನೀಡಿದರೆ ಎಂಟಿ ವೆರಿಯೆಂಟ್ 23.20 ಕಿ.ಮೀ ಮೈಲೇಜ್ ಒದಗಿಸುತ್ತದೆ. ಈ ಹೊಸ ಸ್ವಿಫ್ಟ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.5.73 - 8.41 ಲಕ್ಷಗಳಾಗಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮತ್ತು ಕೈಗೆಡುಕುವ ದರದ ಟಾಪ್-10 ಕಾರುಗಳಿವು

ಮಾರುತಿ ಸುಜುಕಿ ಆಲ್ಟೋ

ಜನಪ್ರಿಯ ಮಾರುತಿ ಸುಜುಕಿ ಆಲ್ಟೊ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿದೆ, ಪ್ರಸ್ತುತ ಈ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.99 ಲಕ್ಷಗಳಾಗಿದೆ. ಈ ಆಲ್ಟೋ ಕಾರು ಪ್ರತಿ ಲೀಟರ್‌ಗೆ 22.05 ಕಿ.ಮೀ.ನಷ್ಟು ಮೈಲೇಜ್ ನೀಡುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಅತಿ ಹೆಚ್ಚು ಮೈಲೇಜ್ ನೀಡುವ ಮತ್ತು ಕೈಗೆಡುಕುವ ದರದ ಟಾಪ್-10 ಕಾರುಗಳಿವು

ರೆನಾಲ್ಟ್ ಕ್ವಿಡ್

ಮಾರುತಿ ಸುಜುಕಿ ಆಲ್ಟೋ ಕಾರಿನ ಪ್ರತಿಸ್ಪರ್ಧಿಯಾದ ರೆನಾಲ್ಟ್ ಕ್ವಿಡ್ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.3.12 ಲಕ್ಷಗಳಾಗಿದೆ. ರೆನಾಲ್ಟ್ ಕ್ವಿಡ್ 0.8-ಲೀಟರ್ ಮತ್ತು 1.0-ಲೀಟರ್ 3-ಸಿಲ್ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. 0.8-ಲೀಟರ್ ಎಂಜಿನ್ ಪ್ರತಿ ಲೀಟರ್‌ಗೆ 20.71 ಕಿ.ಮೀ ಮೈಲೇಜ್ ನೀಡುತ್ತದೆ. ಇನ್ನು 1.0-ಲೀಟರ್ ಎಂಜಿನ್'ನ ಆಟೋಮ್ಯಾಟಿಕ್ ಗೇರ್ ಬಾಕ್ಸ್ 22 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಮತ್ತು ಎಂಟಿ ವೆರಿಯೆಂಟ್ 21.74 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮತ್ತು ಕೈಗೆಡುಕುವ ದರದ ಟಾಪ್-10 ಕಾರುಗಳಿವು

ಮಾರುತಿ ಸುಜುಕಿ ವ್ಯಾಗನ್ಆರ್

ಮಾರುತಿ ಸುಜುಕಿ ಟಾಲ್‌ಬಾಯ್ ವ್ಯಾಗನ್ಆರ್ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.65 ಲಕ್ಷಗಳಾಗಿದೆ. ಎರಡು ಪೆಟ್ರೋಲ್ ಎಂಜಿನ್‌ ಆಯ್ಕೆಗಳೊಂದಿಗೆ ಈ ಕಾರು ಲಭ್ಯವಿದೆ. ಇದರಲ್ಲಿ 1.0-ಲೀಟರ್ ಎಂಜಿನ್ 21.79 ಕಿ.ಮೀ ಮೈಲೇಜ್ ನೀಡಿದರೆ, 1.2-ಲೀಟರ್ ಎಂಜಿನ್ 20.52 ಕಿ.ಮೀ.ಮೈಲೇಜ್ ಅನ್ನು ಒದಗಿಸುತ್ತದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮತ್ತು ಕೈಗೆಡುಕುವ ದರದ ಟಾಪ್-10 ಕಾರುಗಳಿವು

ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಮಾರುತಿ ಸುಜುಕಿ ಎಸ್-ಪ್ರೆಸ್ಸೊದ 1.0-ಲೀಟರ್ 3-ಸಿಲ್ ಎನ್ಎ ಪೆಟ್ರೋಲ್ ಎಂಜಿನ್ ಎಜಿಎಸ್ ಗೇರ್ ಬಾಕ್ಸ್ ನೊಂದಿಗೆ 21.7 ಕಿ.ಮೀ.ನಷ್ಟು ಮೈಲೇಜ್ ನೀಡಿದರೆ, 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆವೃತ್ತಿಯು 21.4 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,3.70 ಲಕ್ಷಗಳಾಗಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮತ್ತು ಕೈಗೆಡುಕುವ ದರದ ಟಾಪ್-10 ಕಾರುಗಳಿವು

ಮಾರುತಿ ಸುಜುಕಿ ಸೆಲೆರಿಯೊ

ಈ ಮಾರುತಿ ಸುಜುಕಿ ಸೆಲೆರಿಯೊ ಕಾರಿನ ಮ್ಯಾನುವಲ್ ಮತ್ತ್ ಎಎಂಟಿ ವೆರಿಯೆಂಟ್ ಗಳು 21.63 ಕಿ.ಮೀ. ಮೈಲೇಜ್ ನೀಡುತ್ತದೆ. ಇನ್ನು ಈ ಮಾರುತಿ ಸುಜುಕಿ ಸೆಲೆರಿಯೊ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.53 ಲಕ್ಷಗಳಾಗಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮತ್ತು ಕೈಗೆಡುಕುವ ದರದ ಟಾಪ್-10 ಕಾರುಗಳಿವು

ಮಾರುತಿ ಸುಜುಕಿ ಇಗ್ನಿಸ್

ಮಾರುತಿ ಸುಜುಕಿ ಇಗ್ನಿಸ್ 1.2-ಲೀಟರ್ ಪೆಟ್ರೋಲ್ ಎಂಜಿನ್ ಪಡೆಯುತ್ತದೆ, ಇಗ್ನಿಸ್ ಕಾರು ಮಾರುತಿ ಸುಜುಕಿ ಕಂಪನಿಯ ಪ್ರಕಾರ ಪ್ರತಿ ಲೀಟರ್‌ಗೆ 20.89 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ. ಮಾರುತಿ ಸುಜುಕಿ ಇಗ್ನಿಸ್ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.89 ಲಕ್ಷಗಳಾಗಿದೆ.

ಅತಿ ಹೆಚ್ಚು ಮೈಲೇಜ್ ನೀಡುವ ಮತ್ತು ಕೈಗೆಡುಕುವ ದರದ ಟಾಪ್-10 ಕಾರುಗಳಿವು

ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್

ಹ್ಯುಂಡೈ ಕಂಪನಿಯ ಗ್ರ್ಯಾಂಡ್ ಐ10 ನಿಯೋಸ್ ಕಾರು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದು 1.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.2-ಲೀಟರ್ ಎನ್‌ಎ ಪೆಟ್ರೋಲ್ ಎಂಜಿನ್ ಗಳಾಗಿದೆ. ಇದರಲ್ಲಿ 1.2-ಲೀಟರ್ ಮ್ಯಾನುವಲ್ ವೆರಿಯೆಂಟ್ 20.7 ಕಿ.ಮೀ ಮೈಲೇಜ್ ನೀಡಿದರೆ, ಆಟೋಮ್ಯಾಟಿಕ್ ವೆರಿಯೆಂಟ್ 20.5 ಕಿ.ಮೀ.ಮೈಲೇಜ್ ಅನ್ನು ನೀಡುತ್ತದೆ. ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.8.40 ಲಕ್ಷಗಳಾಗಿದೆ.

Most Read Articles

Kannada
English summary
Most Fuel-Efficient Petrol Cars Under Rs 10 Lakh In India. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X