ಈ ಮಾಡಿಫಿಕೇಶನ್'ಗಳಿಗೆ ಮಾತ್ರ ಅನುಮತಿ ನೀಡುತ್ತದೆ ಮೋಟಾರು ವಾಹನ ಕಾಯ್ದೆ ನಿಯಮ

ಸಾಕಷ್ಟು ಜನರು ತಮ್ಮ ವಾಹನಗಳನ್ನು ಹೆಚ್ಚು ಆಕರ್ಷಕವಾಗಿಸಲು ಹಾಗೂ ಹೆಚ್ಚು ಐಷಾರಾಮಿತನವನ್ನು ನೀಡಲು ವಾಹನಗಳನ್ನು ಮಾಡಿಫೈಗೊಳಿಸುತ್ತಾರೆ. ಕೆಲವರಂತೂ ತಮಗೆ ಇಷ್ಟ ಬಂದ ರೀತಿಯಲ್ಲಿ ವಾಹನಗಳನ್ನು ಮಾಡಿಫೈ ಮಾಡುತ್ತಾರೆ.

ಈ ಮಾಡಿಫಿಕೇಶನ್'ಗಳಿಗೆ ಮಾತ್ರ ಅನುಮತಿ ನೀಡುತ್ತದೆ ಮೋಟಾರು ವಾಹನ ಕಾಯ್ದೆ ನಿಯಮ

ಆದರೆ ಭಾರತದ ಮೋಟಾರು ವಾಹನ ಕಾಯ್ದೆಯನ್ವಯ ವಾಹನಗಳನ್ನು ಮಾಡಿಫೈಗೊಳಿಸುವುದು ಅಪರಾಧ. ಆದರೂ ಸಹ ಮೋಟಾರು ವಾಹನ ಕಾಯ್ದೆಯು ವಾಹನಗಳಲ್ಲಿ ಕೆಲವು ಮಾಡಿಫಿಕೇಶನ್'ಗಳನ್ನು ಮಾಡಲು ಅನುಮತಿ ನೀಡುತ್ತದೆ. ವಾಹನಗಳಲ್ಲಿ ಯಾವ ರೀತಿಯ ಮಾಡಿಫಿಕೇಶನ್'ಗಳು ಕಾನೂನು ಬದ್ದ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಈ ಮಾಡಿಫಿಕೇಶನ್'ಗಳಿಗೆ ಮಾತ್ರ ಅನುಮತಿ ನೀಡುತ್ತದೆ ಮೋಟಾರು ವಾಹನ ಕಾಯ್ದೆ ನಿಯಮ

1. ವಾಹನಗಳ ಬಾಡಿಯನ್ನು ಕವರ್ ಮಾಡುವುದು:

ಇತ್ತೀಚಿನ ದಿನಗಳಲ್ಲಿ ಚಿತ್ರ ವಿಚಿತ್ರ ಬಣ್ಣದ ಸ್ಟಿಕ್ಕರ್‌ಗಳಿಂದ ವಾಹನಗಳನ್ನು ಕವರ್ ಮಾಡುವುದು ಸಾಮಾನ್ಯವಾಗಿದೆ. ವಾಹನದ ನೋಟವನ್ನು ಬದಲಿಸದೆಸ್ಟಿಕ್ಕರ್‌ಗಳಿಂದ ವಾಹನಗಳನ್ನು ಕವರ್ ಮಾಡುವುದಕ್ಕೆ ಮೋಟಾರು ವಾಹನ ಕಾಯ್ದೆಯು ಅನುಮತಿ ನೀಡುತ್ತದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಮಾಡಿಫಿಕೇಶನ್'ಗಳಿಗೆ ಮಾತ್ರ ಅನುಮತಿ ನೀಡುತ್ತದೆ ಮೋಟಾರು ವಾಹನ ಕಾಯ್ದೆ ನಿಯಮ

ಬಾನೆಟ್ ಹಾಗೂ ರೂಫ್'ನಂತಹ ಭಾಗಗಳನ್ನು ಕವರ್ ಮಾಡಲು ಕೆಲವು ನಿಯಮಗಳಿವೆ. ವಾಹನದ ನಿಜವಾದ ಬಣ್ಣವನ್ನು ಬದಲಿಸಬೇಕಾದರೆ ಈ ಬಗ್ಗೆ ಆರ್‌ಸಿ ಬುಕ್'ನಲ್ಲಿ ಬದಲಾವಣೆ ಮಾಡಬೇಕು. ಇಲ್ಲದಿದ್ದರೆ ಪೊಲೀಸರು ಇಲ್ಲವೇ ಆರ್ ಟಿಒ ಅಧಿಕಾರಿಗಳು ಕ್ರಮ ಕೈಗೂಳ್ಳುವುದು ಖಚಿತ.

ಈ ಮಾಡಿಫಿಕೇಶನ್'ಗಳಿಗೆ ಮಾತ್ರ ಅನುಮತಿ ನೀಡುತ್ತದೆ ಮೋಟಾರು ವಾಹನ ಕಾಯ್ದೆ ನಿಯಮ

2. ಟಯರ್ ಹಾಗೂ ಅಲಾಯ್ ವ್ಹೀಲ್:

ಮೋಟಾರು ವಾಹನ ಕಾಯ್ದೆಯನ್ವಯ ವಾಹನದ ಎತ್ತರವನ್ನು ಹೆಚ್ಚಿಸಲು ಟಯರ್‌ ಹಾಗೂ ಅಲಾಯ್ ವ್ಹೀಲ್'ಗಳನ್ನು ಬದಲಿಸಬಹುದು ಎಂದು ನಿಯಮಗಳು ಹೇಳುತ್ತವೆ. ಈ ಮೊದಲು ಈ ರೀತಿ ಬದಲಾವಣೆ ಮಾಡುವುದನ್ನು ನಿಷೇಧಿಸಲಾಗಿತ್ತು. ಆದರೆ ಈಗ ನಿಯಮಗಳನ್ನು ಬದಲಿಸಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ಮಾಡಿಫಿಕೇಶನ್'ಗಳಿಗೆ ಮಾತ್ರ ಅನುಮತಿ ನೀಡುತ್ತದೆ ಮೋಟಾರು ವಾಹನ ಕಾಯ್ದೆ ನಿಯಮ

ಆದರೆ ಪದೇ ಪದೇ ವಾಹನದ ಟಯರ್ ಹಾಗೂ ಅಲಾಯ್ ವ್ಹೀಲ್'ಗಳನ್ನು ಬದಲಿಸುವುದರಿಂದ ವಾಹನಗಳ ಕಾರ್ಯಾಚರಣೆಗೆ ತೊಂದರೆಯಾಗಬಹುದು. ಈ ಕಾರಣಕ್ಕೆ ಇವುಗಳನ್ನು ಬದಲಿಸುವ ಮುನ್ನ ಹೆಚ್ಚಿನ ಜಾಗೃತೆ ವಹಿಸಬೇಕಾಗುತ್ತದೆ.

ಈ ಮಾಡಿಫಿಕೇಶನ್'ಗಳಿಗೆ ಮಾತ್ರ ಅನುಮತಿ ನೀಡುತ್ತದೆ ಮೋಟಾರು ವಾಹನ ಕಾಯ್ದೆ ನಿಯಮ

3. ಹೆಚ್ಚುವರಿ ಬಾಡಿ ಆಕ್ಸೆಸರಿಸ್'ಗಳು:

ವಾಹನ ತಯಾರಕ ಕಂಪನಿಗಳು ವಾಹನಗಳ ಕೆಲವು ಬಿಡಿಭಾಗಗಳನ್ನು ಹೆಚ್ಚುವರಿ ಶುಲ್ಕ ಪಡೆದು ಅಳವಡಿಸುತ್ತಿವೆ. ಆದರೆ ವಾಹನ ಮಾಲೀಕರು ತಮ್ಮ ವಾಹನವನ್ನು ಹೆಚ್ಚು ಸ್ಪೋರ್ಟಿಯಾಗಿಸಲು ಹೆಚ್ಚುವರಿ ಬಾಡಿ ಕಿಟ್‌ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮಾಡಿಫೈ

ಅದರಂತೆ, ಸೈಡ್ ಪ್ಯಾನಲ್, ಫ್ರಂಟ್ ಸ್ಪ್ಲಿಟರ್, ಡಿಫ್ಯೂಸರ್, ಬಾಡಿ ಕ್ಲಾಡಿಂಗ್'ಗಳನ್ನು ಹೆಚ್ಚುವರಿಯಾಗಿ ಅಳವಡಿಸಿಕೊಳ್ಳಲು ಮೋಟಾರು ವಾಹನ ಕಾಯ್ದೆಯು ಅನುಮತಿ ನೀಡುತ್ತದೆ.

ಈ ಮಾಡಿಫಿಕೇಶನ್'ಗಳಿಗೆ ಮಾತ್ರ ಅನುಮತಿ ನೀಡುತ್ತದೆ ಮೋಟಾರು ವಾಹನ ಕಾಯ್ದೆ ನಿಯಮ

4. ಆಫ್ಟರ್ ಮಾರ್ಕೆಟ್ ಸಿಎನ್‌ಜಿ ಯಂತ್ರ:

ವಾಹನಗಳಲ್ಲಿ ಅಳವಡಿಸಲಾಗುವ ಆಫ್ಟರ್ ಮಾರ್ಕೆಟ್ ಬಿಡಿಭಾಗಗಳ ಬಗ್ಗೆ ಬಹುತೇಕ ವಾಹನ ಸವಾರರು ಗೊಂದಲಕ್ಕೊಳಗಾಗುತ್ತಾರೆ. ಈ ಕಾರಣಕ್ಕೆ ಕೆಲವರು ಈ ಬಿಡಿಭಾಗಗಳನ್ನು ಅಳವಡಿಸಿಕೊಳ್ಳಲು ಹಿಂದೆ ಮುಂದೆ ನೋಡುತ್ತಾರೆ. ಮೋಟಾರು ವಾಹನ ಕಾಯ್ದೆ ನಿಯಮಗಳ ಅನ್ವಯ ಆಫ್ಟರ್ ಮಾರ್ಕೆಟ್ ಸಿಎನ್‌ಜಿ ಕಿಟ್‌ಗಳನ್ನು ಅಳವಡಿಸಿಕೊಳ್ಳಬಹುದು.

ಈ ಮಾಡಿಫಿಕೇಶನ್'ಗಳಿಗೆ ಮಾತ್ರ ಅನುಮತಿ ನೀಡುತ್ತದೆ ಮೋಟಾರು ವಾಹನ ಕಾಯ್ದೆ ನಿಯಮ

5. ಎಲ್ಇಡಿ ಡಿಆರ್‌ಎಲ್‌ಗಳು:

ಹಳೆಯ ಹ್ಯಾಲೊಜೆನ್ ಲೈಟ್ ಬಲ್ಬ್‌ಗಳನ್ನು ಬದಲಿಸಿ ಎಲ್‌ಇಡಿ ಲೈಟ್ ಬಲ್ಬ್‌ ಹಾಗೂ ಡಿಆರ್‌ಎಲ್‌ಗಳನ್ನು ಅಳವಡಿಸಿಕೊಳ್ಳಲು ಮೋಟಾರು ವಾಹನ ಕಾಯ್ದೆಯು ಅನುಮತಿ ನೀಡುತ್ತದೆ. ಮಳೆ ಹಾಗೂ ಹಿಮಪಾತದ ಸಂದರ್ಭಗಳಲ್ಲಿ ಇವುಗಳು ಹೆಚ್ಚು ಬೆಳಕು ನೀಡುತ್ತವೆ ಎಂಬ ಕಾರಣಕ್ಕೆ ಅನುಮತಿ ನೀಡಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಮಾಡಿಫಿಕೇಶನ್'ಗಳಿಗೆ ಮಾತ್ರ ಅನುಮತಿ ನೀಡುತ್ತದೆ ಮೋಟಾರು ವಾಹನ ಕಾಯ್ದೆ ನಿಯಮ

ಮೋಟಾರು ವಾಹನ ಕಾಯ್ದೆಯ ನಿಯಮಗಳು ಮೇಲೆ ತಿಳಿಸಿದ ಐದು ರೀತಿಯ ಮಾರ್ಪಾಡುಗಳಿಗೆ ಮಾತ್ರ ಅವಕಾಶ ನೀಡುತ್ತವೆ. ಟೈಮ್ಸ್ ನೌ ನ್ಯೂಸ್ ಈ ಬಗ್ಗೆ ವರದಿ ಪ್ರಕಟಿಸಿದೆ.

ಈ ಮಾಡಿಫಿಕೇಶನ್'ಗಳಿಗೆ ಮಾತ್ರ ಅನುಮತಿ ನೀಡುತ್ತದೆ ಮೋಟಾರು ವಾಹನ ಕಾಯ್ದೆ ನಿಯಮ

ಇನ್ನು ಕಾರು ಮಾಲೀಕರು ಕೇವಲ ಆಕರ್ಷಕಣೆಯ ಉದ್ದೇಶದಿಂದ ಮಾಡಿಫೈ ಮಾಡಿಸುವ ಮೊದಲು ಯಾವೆಲ್ಲಾ ಮಾಡಿಫೈ ಸೌಲಭ್ಯಗಳು ಕಾನೂನಾತ್ಮಕವಾಗಿವೆ ಮತ್ತು ಯಾವೆಲ್ಲಾ ಮಾಡಿಫೈ ಸೌಲಭ್ಯಗಳು ಕಾನೂನುಬಾಹಿರವಾಗಿವೆ ಎಂಬುವುದನ್ನು ಅರಿತು ಮಾಡಿಫೈ ಸೌಲಭ್ಯ ಅಳವಡಿಸಿಕೊಳ್ಳುವುದು ತುಂಬಾ ಮುಖ್ಯವಾದ ವಿಚಾರ.

ಈ ಮಾಡಿಫಿಕೇಶನ್'ಗಳಿಗೆ ಮಾತ್ರ ಅನುಮತಿ ನೀಡುತ್ತದೆ ಮೋಟಾರು ವಾಹನ ಕಾಯ್ದೆ ನಿಯಮ

ಇಲ್ಲವಾದರೆ ಮಾಡಿಫೈ ಸೌಲಭ್ಯಗಳಿಗಾಗಿ ಲಕ್ಷಾಂತರ ಖರ್ಚು ಮಾಡುವುದಲ್ಲದೆ ಅದು ಸಾರಿಗೆ ನಿಯಮಗಳಿಗೆ ವಿರುದ್ಧವಾಗಿದ್ದಲ್ಲಿ ದಂಡ ಕೂಡಾ ಪಾವತಿಸಿಬಹುದಾದ ಪರಿಸ್ಥಿತಿ ಎದುರಾಗಬಹುದು.

ಈ ಮಾಡಿಫಿಕೇಶನ್'ಗಳಿಗೆ ಮಾತ್ರ ಅನುಮತಿ ನೀಡುತ್ತದೆ ಮೋಟಾರು ವಾಹನ ಕಾಯ್ದೆ ನಿಯಮ

ಅದಕ್ಕಾಗಿ ಮಾಡಿಫೈ ಸೌಲಭ್ಯಗಳನ್ನು ಪಡೆದುಕೊಳ್ಳುವಾಗ ಸಾಕಷ್ಟು ಎಚ್ಚರಿಕೆ ವಹಿಸಿಬೇಕಿದ್ದು, ಆದಷ್ಟು ಸ್ಟ್ಯಾಂಡರ್ಡ್ ಮಾಡಿಫೈ ಸೌಲಭ್ಯಗಳನ್ನು ಮಾತ್ರ ಬಳಕೆಗೆ ಮಾಡಿ.

ಈ ಮಾಡಿಫಿಕೇಶನ್'ಗಳಿಗೆ ಮಾತ್ರ ಅನುಮತಿ ನೀಡುತ್ತದೆ ಮೋಟಾರು ವಾಹನ ಕಾಯ್ದೆ ನಿಯಮ

ವಾಹನ ಮಾಲೀಕರು ಗಮನಿಸಬೇಕಾದ ಮತ್ತೊಂದು ಪ್ರಮುಖ ವಿಚಾರವೆಂದರೆ ಅತಿಯಾದ ಮಾಡಿಫೈ ಸೌಲಭ್ಯಗಳು ಕಾರುಗಳಿಗೆ ಆಕರ್ಷಣೆ ನೀಡಬಹುದಾದರೂ ವಾಹನಗಳ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತಲ್ಲದೆ ಸುರಕ್ಷಾ ಸೌಲಭ್ಯಗಳ ಕಾರ್ಯನಿರ್ವಹಣೆಗೂ ಅಡಚಣೆ ಉಂಟು ಮಾಡಬಹುದು.

ಈ ಮಾಡಿಫಿಕೇಶನ್'ಗಳಿಗೆ ಮಾತ್ರ ಅನುಮತಿ ನೀಡುತ್ತದೆ ಮೋಟಾರು ವಾಹನ ಕಾಯ್ದೆ ನಿಯಮ

ಈ ಹಿನ್ನಲೆ ವಾಹನ ಮಾಲೀಕರು ತಮ್ಮ ಇಷ್ಟದ ವಾಹನಗಳನ್ನು ಸಂಚಾರಿ ನಿಯಮಗಳ ಅಡಿಯಲ್ಲೇ ಉತ್ತಮ ಮಾದರಿಯ ಮಾಡಿಫೈ ಸೌಲಭ್ಯಗಳನ್ನು ಪಡೆದುಕೊಳ್ಳುವುದರ ಜೊತೆಗೆ ನಿಮ್ಮ ವಾಹನದ ಮಾಡಿಫೈ ಸೌಲಭ್ಯದಿಂದ ಮತ್ತೊಬ್ಬರಿ ಕಿರಿಕಿರಿ ಉಂಟು ಮಾಡುವಂತೆ ಇರಬಾರದು.

Most Read Articles

Kannada
English summary
Motor vehicle act allows only these modifications in vehicles. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X