ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಐಷಾರಾಮಿ ಆಡಿ ಕ್ಯೂ5 ಫೇಸ್‌ಲಿಫ್ಟ್

ಆಡಿ ಇಂಡಿಯಾ ಕಂಪನಿಯು ತನ್ನ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ಸಲುವಾಗಿ ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯು ಭಾರತದಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಐಷಾರಾಮಿ ಆಡಿ ಕ್ಯೂ5 ಫೇಸ್‌ಲಿಫ್ಟ್

ಆಡಿ ಕಂಪನಿಯು ಈ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಕಳೆದ ವರ್ಷ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಇನ್ನು ಈ ನವೀಕರಿಸಿದ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯು ಪುಣೆಯಲ್ಲಿ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಇದರ ಇಂದಿನ ಮಾದರಿಗೆ ಹೋಲಿಸಿದರೆ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಐಷಾರಾಮಿ ಆಡಿ ಕ್ಯೂ5 ಫೇಸ್‌ಲಿಫ್ಟ್

ಐಷಾರಾಮಿ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಹೊಸ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಸಣ್ಣ ಗ್ರಿಲ್ ಮತ್ತು ನವೀಕರಿಸಿದ ಬಂಪರ್ ಹೆಚ್ಚು ಸ್ಪೋರ್ಟಿ ಲುಕ್ ನಿಂದ ಕೂಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಐಷಾರಾಮಿ ಆಡಿ ಕ್ಯೂ5 ಫೇಸ್‌ಲಿಫ್ಟ್

ಇದರ ಪ್ರೊಫೈಲ್‌ನ ಬದಲಾವಣೆಗಳು ಮರುವಿನ್ಯಾಸಗೊಳಿಸಲಾದ ಸೈಡ್ ಸ್ಕರ್ಟ್‌ಗಳಿಗೆ ಸೀಮಿತವಾಗಿರುತ್ತದೆ ಎಂದು ನಿರೀಕ್ಷಿಸುತ್ತೇವೆ. ಈ ಎಸ್‍ಯುವಿಯ ಹಿಂಭಾಗದಲ್ಲಿ ಹೊಸ ಡಿಫ್ಯೂಸರ್ ಮತ್ತು ಸೂಕ್ಷ್ಮವಾಗಿ ನವೀಕರಿಸಿದ ಟೈಲ್‌ಗೇಟ್‌ನೊಂದಿಗೆ ಹೊಸ ಬಂಪರ್ ಅನ್ನು ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಐಷಾರಾಮಿ ಆಡಿ ಕ್ಯೂ5 ಫೇಸ್‌ಲಿಫ್ಟ್

ಇನ್ನು ಭಾರತದಲ್ಲಿ ಈ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಳಿಸಬಹುದು. ಈ ಐಷಾರಾಮಿ ಕಾರಿನ ಡ್ಯಾಶ್‌ಬೋರ್ಡ್‌ನ ವಿನ್ಯಾಸವು ಬಹುತೇಕ ಒಂದೇ ಆಗಿದ್ದರೆ, ದೊಡ್ಡ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯುವ ಸಾಧ್ಯತೆ ಇದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಐಷಾರಾಮಿ ಆಡಿ ಕ್ಯೂ5 ಫೇಸ್‌ಲಿಫ್ಟ್

ಇದರೊಂದಿಗೆ 12.3-ಇಂಚಿನ ಕಾನ್ಫಿಗರ್ ಮಾಡಬಹುದಾದ ಕಲರ್ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್(ವರ್ಚುವಲ್ ಕಾಕ್‌ಪಿಟ್) ಹೊಂದಿರಲಿದೆ. ಇದು ಹಿಂದಿನದಕ್ಕಿಂತ 10 ಪಟ್ಟು ಹೆಚ್ಚು ಕಂಪ್ಯೂಟಿಂಗ್ ಶಕ್ತಿಯನ್ನು ಹೊಂದಿದೆ. ಇನ್ನು ಹೆಡ್-ಅಪ್ ಡಿಸ್ ಪ್ಲೇ ಮತ್ತು ಆಂಬಿಯೆಂಟ್ ಲೈಟಿಂಗ್ ಒಳಗೊಂಡಿರುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಐಷಾರಾಮಿ ಆಡಿ ಕ್ಯೂ5 ಫೇಸ್‌ಲಿಫ್ಟ್

ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿ 360 ಡಿಗ್ರಿ ಪಾರ್ಕಿಂಗ್ ಸೆನ್ಸರ್‌ಗಳು, 18 ಇಂಚಿನ ಅಲಾಯ್ ವ್ಹೀಲ್ ಗಳು, ಕೀ ಲೆಸ್ ಎಂಟ್ರಿ, ಡ್ಯುಯಲ್ ಏರ್‌ಬ್ಯಾಗ್‌ಗಳು, ಎಬಿಎಸ್, ಇಬಿಡಿ, ಇಎಸ್‌ಪಿ, ಟಿಸಿ ಮತ್ತು ಮುಂತಾದ ಸ್ಟ್ಯಾಂಡರ್ಡ್ ಫೀಚರ್ ಗಳನ್ನು ಹೊಂದಿರುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಐಷಾರಾಮಿ ಆಡಿ ಕ್ಯೂ5 ಫೇಸ್‌ಲಿಫ್ಟ್

ಪುಣೆಯಲ್ಲಿ ಕಾಣಿಸಿಕೊಂಡ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 2.0 ಲೀಟರ್ ಟಿಎಫ್ಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 261 ಬಿಹೆಚ್‍ಪಿ ಪವರ್ ಮತ್ತು 370 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮ್ಯರ್ಥ ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಐಷಾರಾಮಿ ಆಡಿ ಕ್ಯೂ5 ಫೇಸ್‌ಲಿಫ್ಟ್

ಇನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾದ ಮಾದರಿಯಲ್ಲಿ 2.0-ಲೀಟರ್ ಟಿಡಿಐ ಡೀಸೆಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಆದರೆ ಇದು ಭಾರತದಲ್ಲಿ ಪರಿಚಯವಾಗುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
Read more on ಆಡಿ audi
English summary
2021 Audi Q5 Facelift Spotted Testing In Pune Details. Read In Kannada.
Story first published: Wednesday, January 20, 2021, 16:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X