ಭಾರತದಲ್ಲಿ ಬಿಡುಗಡೆಯಾಗಲಿದೆ 444 ಬಿಹೆಚ್‌ಪಿ ಪವರ್ ಉತ್ಪಾದಿಸುವ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ತನ್ನ ಆರ್‌ಎಸ್5 ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಆಡಿ ಆರ್‌ಎಸ್5 ಪವರ್ ಫುಲ್ ಸ್ಪೋರ್ಟ್‌ಬ್ಯಾಕ್ ಮಾದರಿಯಾಗಿದ್ದು, ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ 444 ಬಿಹೆಚ್‌ಪಿ ಪವರ್ ಉತ್ಪಾದಿಸುವ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್

ಆಡಿ ಕಂಪನಿಯು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಆಡಿ ಎಸ್5 ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಇದೀಗ ಆರ್‌ಎಸ್5 ಮಾದರಿಯನ್ನು ಹೆಚ್ಚಿನ ಸ್ಟೈಲಿಂಗ್ ಸೂಚನೆಗಳನ್ನು ಹೊಂದಿರುತ್ತದೆ. ಈ ಹೊಸ ಕಾರಿನ ಮುಂಭಾಗ ಅಗ್ರೇಸಿವ್ ಆಗಿ ಕಾಣುವ ಮುಂಭಾಗದ ಗ್ರಿಲ್ ಅನ್ನು ಪಡೆಯುತ್ತದೆ. ಇದು ಎಸ್5 ಗಿಂತ ಸ್ವಲ್ಪ ಅಗಲವಾಗಿರುತ್ತದೆ. ಇನ್ನು ಮುಂಭಾಗದ ಗ್ರಿಲ್ ಕೆಳಗೆ ಹೊಸ ಏರ್ ವೆಂಟ್ ಗಳಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ 444 ಬಿಹೆಚ್‌ಪಿ ಪವರ್ ಉತ್ಪಾದಿಸುವ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್

ಹೊಸ ಆಡಿ ಆರ್‌ಎಸ್5 ಕಾರು ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್ ಲೈಟ್ ಗಳ ಒಂದು ಸೆಟ್ ಆಗಿದೆ. ಇತರ ಪ್ರಮುಖ ಬದಲಾವಣೆಗಳಲ್ಲಿ ಮರುವಿನ್ಯಾಸಗೊಳಿಸಲಾದ ಸೈಡ್ ಸಿಲ್ಸ್, ಹೊಸ ಡಿಫ್ಯೂಸರ್ ಮತ್ತು 19 ಇಂಚಿನ ವ್ಹೀಲ್ ಗಳ ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ 444 ಬಿಹೆಚ್‌ಪಿ ಪವರ್ ಉತ್ಪಾದಿಸುವ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್

ಈ ಆಡಿ ಆರ್‌ಎಸ್5 ಕಾರಿನಲ್ಲಿ ಅತ್ಯಂತ ಪರಿಚಿತ 2.9-ಲೀಟರ್ ಟಿಎಫ್‌ಎಸ್‌ಐ ಟ್ವಿನ್-ಟರ್ಬೋಚಾರ್ಜ್ಡ್ ವಿ6 ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 444 ಬಿಹೆಚ್‌ಪಿ ಪವರ್ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ 444 ಬಿಹೆಚ್‌ಪಿ ಪವರ್ ಉತ್ಪಾದಿಸುವ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್

ಈ ಎಂಜಿನ್ ಅನ್ನು 8-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದು ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಮತ್ತು ಟಾರ್ಕ್ ಅನ್ನು ಕಳುಹಿಸಲಾಗುತ್ತದೆ. ಈ ಆಡಿ ಆರ್‌ಎಸ್5 ಕಾರು ಕೇವಲ 3.9 ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ 444 ಬಿಹೆಚ್‌ಪಿ ಪವರ್ ಉತ್ಪಾದಿಸುವ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್

ಇನ್ನು ಈ ಆಡಿ ಆರ್‌ಎಸ್5 ಕಾರು 280 ಕಿ,ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಆಡಿ ಆರ್‌ಎಸ್5 ಕಾರು ಟರ್ಬೊ ಬ್ಲೂ ಅಥವಾ ಟ್ಯಾಂಗೋ ರೆಡ್‌ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ 444 ಬಿಹೆಚ್‌ಪಿ ಪವರ್ ಉತ್ಪಾದಿಸುವ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್

ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಸ್ಪೋರ್ಟ್ ಸಸ್ಪೆಂಕ್ಷನ್ ಅನ್ನು ಹೊಂದಿದೆ. ಇನ್ನು ಈ ಹೊಸ ಸ್ಪೋರ್ಟ್‌ಬ್ಯಾಕ್ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಆಡಿ ಡ್ರೈವ್ ಸೆಲೆಕ್ಟ್ ಜೊತೆಗೆ ಕಂಫರ್ಟ್, ಆಟೋ, ಡೈನಾಮಿಕ್ ಮತ್ತು ಇಂಡಿವಿಚ್ಯೂಯಲ್ ಎಂಬ ನಾಲ್ಕು ವಿಭಿನ್ನ ಮೋಡ್ ಗಳನ್ನು ಒಳಗೊಂಡಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ 444 ಬಿಹೆಚ್‌ಪಿ ಪವರ್ ಉತ್ಪಾದಿಸುವ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್

ಆಡಿ ಎಸ್5 ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳೊಂದಿಗೆ ನಯವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳಿಂದ ಸುತ್ತುವರೆದಿದೆ. ಇದಲ್ಲದೆ ಹೆಡ್‌ಲ್ಯಾಂಪ್‌ಗಳು ಬ್ಲೂ ಸಿಗ್ನೇಚರ್ ಅಂಶಗಳನ್ನು ಒಳಗೊಂಡಿದೆ. ಇದರೊಂದಿಗೆ 19 ಇಂಚಿನ 5-ಆರ್ಮ್-ಪೈಲಾನ್ ವಿನ್ಯಾಸ ವ್ಹೀಲ್ ಗಳೊಂದಿಗೆ ರೂಫ್ ರೈಲ್ ನೋಡಿದಾಗ ಎಸ್5 ಸ್ಪೋರ್ಟ್‌ಬ್ಯಾಕ್ ಮಾದರಿ ಎಂದು ಖಚಿತವಾಗುತ್ತದೆ. ಬ್ಲ್ಯಾಕ್ ಒ‍ಆರ್‍‍ವಿ‍ಎಂ ಕೂಡ ಒಳಗೊಂಡಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ 444 ಬಿಹೆಚ್‌ಪಿ ಪವರ್ ಉತ್ಪಾದಿಸುವ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್

ಇನ್ನು ಆಡಿ ತನ್ನ ಆರ್‌ಎಸ್3 ಮಾದರಿಗಳನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಹೊಸ ಆಡಿ ಆರ್‌ಎಸ್3 ಪರ್ಪಾಮೆನ್ಸ್ ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್ ಮಾದರಿಯ ಬಾಡಿ ಶೈಲಿಯ ವಿನ್ಯಾಸದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದು ಟಾರ್ಕ್-ವೆಕ್ಟರಿಂಗ್ ಕ್ವಾಟ್ರೋ ಆಲ್-ವೀಲ್-ಡ್ರೈವ್ ಸಿಸ್ಟಂ ಅನ್ನು ಹೊಂದಿದೆ. ಕೇವಲ 3.8 ಸೆಕೆಂಡುಗಳಲ್ಲಿ 0 ದಿಂದ 100 ಸ್ಪೀಡ್ ವೇಗವನ್ನು ಪಡೆದುಕೊಳ್ಳುತ್ತದೆ,

ಭಾರತದಲ್ಲಿ ಬಿಡುಗಡೆಯಾಗಲಿದೆ 444 ಬಿಹೆಚ್‌ಪಿ ಪವರ್ ಉತ್ಪಾದಿಸುವ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್

ಹೊಸ ಆಡಿ ಆರ್‌ಎಸ್5 ಸ್ಪೋರ್ಟ್‌ಬ್ಯಾಕ್ ಬೆಲೆಯನ್ನು ಆಡಿ ಇನ್ನೂ ಅಧಿಕೃತವಾಗಿ ಬಹಿರಂಗಪಡಿಸದಿದ್ದರೂ, ಅದು ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ಇರಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಆಡಿ ಆರ್‌ಎಸ್5 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮರ್ಸಿಡಿಸ್ ಬೆಂಝ್ ಸಿ 63 ಎಎಂಜಿ ಮತ್ತು ಬಿಎಂಡಬ್ಲ್ಯು ಎಂ3 ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಆಡಿ audi
English summary
Audi RS5 Launching In India. Read In Kannada.
Story first published: Saturday, July 31, 2021, 15:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X