ಭಾರತದಲ್ಲಿ ಹೊಸ BMW 3 Series Gran Limousine Iconic Edition ಬಿಡುಗಡೆ

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರ ಕಂಪನಿಯಾದ ಬಿಎಂಡಬ್ಲ್ಯು ತನ್ನ 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಐಕಾನಿಕ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಐಕಾನಿಕ್ ಎಡಿಷನ್ (BMW 3 Series Gran Limousine Iconic Edition) ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.53.50 ಲಕ್ಷಗಳಾಗಿದೆ.

ಭಾರತದಲ್ಲಿ ಹೊಸ BMW 3 Series Gran Limousine Iconic Edition ಬಿಡುಗಡೆ

ಹೊಸ 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಐಕಾನಿಕ್ ಎಡಿಷನ್ ಮಾದರಿಯನ್ನು ಚೆನ್ನೈನ ಬಿಎಂಡಬ್ಲ್ಯು ಗ್ರೂಪ್ ಘಟಕದಲ್ಲಿ ಉತ್ಪಾದಿಸಲಾಗಿದೆ. ಲಾಂಗ್-ವೀಲ್‌ಬೇಸ್ ಗ್ರ್ಯಾನ್ ಲಿಮೋಸಿನ್ ಐಕಾನಿಕ್ ಎಡಿಶನ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ವೆರಿಯಂಟ್‌ಗಳಲ್ಲಿ ದೇಶದಲ್ಲಿ ಇಂದಿನಿಂದ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಲಭ್ಯವಾಗಲಿದೆ. ಈ ಐಕಾನಿಕ್ ಸ್ಪೆಷಲ್ ಎಡಿಷನ್ ಮಾದರಿಯು ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ BMW 3 Series Gran Limousine Iconic Edition ಬಿಡುಗಡೆ

ಬಿಡುಗಡೆ ಸಮಾರಂಭದಲ್ಲಿ, ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಅಧ್ಯಕ್ಷರಾದ ವಿಕ್ರಮ್ ಪವಾಹ್ ಅವರು ಮಾತನಾಡಿ, ಈ 'ಐಕಾನಿಕ್ ಎಡಿಷನ್' ಗ್ರ್ಯಾನ್ ಲಿಮೋಸಿನ್'ನ ಸೀಮಿತ ಯುನಿಟ್ ಗಳು ನವೀನ ಪ್ರತಿಪಾದನೆಯೊಂದಿಗೆ ಹೊಂದಿಕೊಂಡಿದ್ದು, ಪ್ರಗತಿಪರ ಭಾರತೀಯರು ಆಕರ್ಷಕ ಸ್ಪೋರ್ಟ್ಸ್ ಪರ್ಫಾಮೆನ್ಸ್ ಮತ್ತು ಉನ್ನತ ಪ್ರಾಯೋಗಿಕತೆಯನ್ನು ಬಯಸುವರಿಗಾಗಿ ಇದನ್ನು ಬಿಡುಗಡೆಗೊಳಿಸಲಾಗಿದ್ ಎಂದು ಹೇಳಿದರು.

ಭಾರತದಲ್ಲಿ ಹೊಸ BMW 3 Series Gran Limousine Iconic Edition ಬಿಡುಗಡೆ

ಈ ಹೊಸ ಬಿಎಂಡಬ್ಲ್ಯು 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಐಕಾನಿಕ್ ಎಡಿಷನ್ ದೊಡ್ಡದಾದ, ಉದ್ದವಾದ ದೇಹ ಮತ್ತು ದೊಡ್ಡ ಹಿಂಭಾಗದ ಡೋರ್ ಗಳನ್ನು ಹೊಂದಿದೆ ಮತ್ತು ಉದ್ದವಾದ ವೀಲ್‌ಬೇಸ್‌ನಿಂದಾಗಿ, ಇದು ಹಿಂಬದಿ ಪ್ರಯಾಣಿಕರಿಗೆ ಹೆಚ್ಚಿನ ಲೆಗ್‌ರೂಮ್ ನೀಡುತ್ತದೆ.

ಭಾರತದಲ್ಲಿ ಹೊಸ BMW 3 Series Gran Limousine Iconic Edition ಬಿಡುಗಡೆ

ಇದರಲ್ಲಿ ಬಿಎಂಡಬ್ಲ್ಯು ಐಕಾನಿಕ್ ಗ್ಲೋ ಕಿಡ್ನಿ ಗ್ರಿಲ್, ಎಕ್ಸ್‌ಕ್ಲೂಸಿವ್ ಕ್ರಿಸ್ಟಲ್ ಗೇರ್ ಶಿಫ್ಟ್ ನಾಬ್, ರಿಯರ್ ಸೀಟ್ ಹೆಡ್‌ರೆಸ್ಟ್ ಕುಶನ್, ಪನೋರಮಾ ಗ್ಲಾಸ್ ಸನ್ ರೂಫ್, ವೆರ್ನಾಸ್ಕಾ ಲೆಥರ್ ಅಪ್‌ಹೋಲ್ಸ್ಟರಿ, ಪಾರ್ಕಿಂಗ್ ಅಸಿಸ್ಟ್ ಜೊತೆ ರಿವರ್ಸ್ ಅಸಿಸ್ಟ್, ಆಂಬಿಯೆಂಟ್ ಲೈಟಿಂಗ್, ಬಿಎಂಡಬ್ಲ್ಯು ಲೈವ್ ಕಾಕ್‌ಪಿಟ್ ವೃತ್ತಿಪರ ಮತ್ತು ವೈರ್‌ಲೆಸ್ ಚಾರ್ಜಿಂಗ್. ಅನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ BMW 3 Series Gran Limousine Iconic Edition ಬಿಡುಗಡೆ

ಈ ಹೊಸ ಐಕಾನಿಕ್ ಎಡಿಷನ್ ನರಲ್ ವೈಟ್, ಕಾರ್ಬನ್ ಬ್ಲ್ಯಾಕ್ ಮತ್ತು ಕ್ಯಾಶ್ಮೀರ್ ಸಿಲ್ವರ್ ಈ ಮೂರು ಬಣ್ನಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ, ಬಿಎಂಡಬ್ಲ್ಯು 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಐಕಾನಿಕ್ ಎಡಿಷನ್ 110 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಪಡೆಯುತ್ತದೆ, ಇದು ದೊಡ್ಡ ಹೊಳೆಯುವ ಮುಂಭಾಗದ ಗ್ರಿಲ್, ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಸಣ್ಣ ಓವರ್‌ಹ್ಯಾಂಗ್‌ಗಳು, ಉದ್ದವಾದ ಬಾನೆಟ್, 3 ಡಿ ಎಲ್-ಆಕಾರದ ಎಲ್‌ಇಡಿ ಟೈಲ್‌ಲೈಟ್‌ಗಳು ಮತ್ತು ಎರಡು ದೊಡ್ಡ ಫ್ರೀಫಾರ್ಮ್ ಟೈಲ್‌ಪೈಪ್‌ಗಳು ಇತ್ಯಾದಿಗಳನ್ನು ಪಡೆಯುತ್ತದೆ.

ಭಾರತದಲ್ಲಿ ಹೊಸ BMW 3 Series Gran Limousine Iconic Edition ಬಿಡುಗಡೆ

ಕ್ಯಾಬಿನ್ ಹೊಸದಾಗಿ ವಿನ್ಯಾಸಗೊಳಿಸಿದ ಹೆಡ್‌ರೆಸ್ಟ್ ಮತ್ತು ಹಿಂಭಾಗದ ಸೀಟುಗಳ ನಡುವೆ ಸೆಂಟ್ರಲ್ ಆರ್ಮ್‌ರೆಸ್ಟ್, ಎಕ್ಸ್‌ಕ್ಲೂಸಿವ್ ಕ್ರಿಸ್ಟಲ್ ಗೇರ್ ಶಿಫ್ಟ್ ನಾಬ್, ಪ್ರಕಾಶಿತ "3" ಮಾದರಿ ಲೋಗೋ, ರೀಟ್ ಸೀಟ್ ಹೆಡ್‌ರೆಸ್ಟ್ ಕುಶನ್, ಬೇಸ್ ಕ್ಯಾರಿಯರ್‌ನೊಂದಿಗೆ ಕೋಟ್ ಹ್ಯಾಂಗರ್, ದೊಡ್ಡ 480 ಲೀಟರ್ ಬೂಟ್‌ಸ್ಪೇಸ್ ಮತ್ತು ಆಟೋಮ್ಯಾಟಿಕ್ ಟೇಲ್-ಗೇಟ್ ಅನ್ನು ಒಳಗೊಂಡಿದೆ,

ಭಾರತದಲ್ಲಿ ಹೊಸ BMW 3 Series Gran Limousine Iconic Edition ಬಿಡುಗಡೆ

ಇದರೊಂದಿಗೆ ವೇಲ್ ಕಮ್ ಲೈಟ್ ಕಾರ್ಪೆಟ್, ಸೆನ್ಸಾಟೆಕ್ ಡೋರ್ ಟ್ರಿಮ್‌ನೊಂದಿಗೆ ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡುವ ಸೀಟುಗಳು, ಸ್ಪೋರ್ಟ್ಸ್ ಲೆದರ್ ಸ್ಟೀರಿಂಗ್ ವೀಲ್, ಗಾಲ್ವನಿಕ್ ಅಲಂಕಾರದೊಂದಿಗೆ ಸೆಂಟರ್ ಕನ್ಸೋಲ್, ಮೂರು-ಜೋನ್ ಕ್ಲೈಮೇಂಟ್ ಕಂಟ್ರೋಲ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ BMW 3 Series Gran Limousine Iconic Edition ಬಿಡುಗಡೆ

ಯಾವುದೇ ಕಾರ್ಯಕ್ಷಮತೆಯ ಬದಲಾವಣೆಗಳಿಲ್ಲ. ಈ ಕಾರಿನಲ್ಲಿ , 2.0-ಲೀಟರ್ ನಾಲ್ಕು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ, ಈ ಎಂಜಿನ್ 258 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಇದು ಕೇವಲ 6.2 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಭಾರತದಲ್ಲಿ ಹೊಸ BMW 3 Series Gran Limousine Iconic Edition ಬಿಡುಗಡೆ

ಇನ್ನು 2.0-ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಕೇವಲ 7.6 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಎರಡೂ ಪವರ್‌ಟ್ರೇನ್‌ಗಳು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ,

ಭಾರತದಲ್ಲಿ ಹೊಸ BMW 3 Series Gran Limousine Iconic Edition ಬಿಡುಗಡೆ

ಇನ್ನು ಬಿಎಂಡಬ್ಲ್ಯು ತನ್ನ 740ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಷನ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿತ್ತು ಈ ಹೊಸ ಬಿಎಂಡಬ್ಲ್ಯು 740ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಷನ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.42 ಕೋಟಿಯಾಗಿದೆ.ಈ ಎಡಿಷನ್ ಟಾಂಜಾನೈಟ್ ಬ್ಲೂ ಮತ್ತು ಡ್ರಾವಿಟ್ ಗ್ರೇ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಬಿಎಂಡಬ್ಲ್ಯು 40ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಶನ್ ಸ್ಪೋರ್ಟ್ಸ್ ಮಾದರಿಯಾಗಿದೆ.

ಭಾರತದಲ್ಲಿ ಹೊಸ BMW 3 Series Gran Limousine Iconic Edition ಬಿಡುಗಡೆ

ಹೊಸ ಬಿಎಂಡಬ್ಲ್ಯು 740ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಷನ್ ಲೇಸರ್‌ಲೈಟ್ ತಂತ್ರಜ್ಞಾನದೊಂದಿಗೆ ಹೊಂದಿಕೊಳ್ಳುವ ಎಲ್ಇಡಿ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ, ಇದು ಸಾಟಿಯಿಲ್ಲದ ರಸ್ತೆ ಉಪಸ್ಥಿತಿಯನ್ನು ನೀಡುತ್ತದೆ. ಈ ಐಷಾರಾಮಿ ಕಾರಿನಲ್ಲಿ ರೇರ್ ಕೊಲೆಷನ್ ಅಲರ್ಟ್, ಕ್ರಾಸಿಂಗ್ ಟ್ರಾಫಿಕ್ ವಾರ್ನಿಂಗ್ಪಾರ್ಕಿಂಗ್ ಅಸಿಸ್ಟ್ (ರಿಮೋಟ್ ಪಾರ್ಕಿಂಗ್ ವೈಶಿಷ್ಟ್ಯದೊಂದಿಗೆ) ಮತ್ತು ಲೇನ್ ಬದಲಾವಣೆ ಅಲರ್ಟ್ ನೊಂದಿಗೆ ವಿವಿಧ ಡೈವಿಂಗ್ ಅಸಿಸ್ಟ್ ಗಳನ್ನು ಹೊಂದಿದೆ. ಇನ್ನು ಹೊಸ ಬಿಎಂಡಬ್ಲ್ಯು 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಐಕಾನಿಕ್ ಎಡಿಷನ್ ಕೂಡ ಅತ್ಯಾಧುನಿಕ ಪೀಚರ್ಸ್ ಗಳನ್ನು ಒಳಗೊಂಡಿದೆ,

Most Read Articles

Kannada
English summary
New bmw 3 series gran limousine iconic edition launched features price details
Story first published: Thursday, October 14, 2021, 18:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X