ಶೀಘ್ರದಲ್ಲೇ ಆರಂಭವಾಗಲಿದೆ ಹೊಸ ಬಿಎಂಡಬ್ಲ್ಯು3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಕಾರಿನ ಬುಕ್ಕಿಂಗ್

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಕಾರನ್ನು ಬಿಡುಗಡೆಗೆ ಸಜ್ಜಾಗಿದೆ. ಬಿಎಂಡಬ್ಲ್ಯು ಕಂಪನಿಯು ಈ ಹೊಸ 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಕಾರಿನ ಬಿಡುಗಡೆ ದಿನಾಂಕವನ್ನು ಇತ್ತೀಚೆಗೆ ಬಹಿರಂಗಪಡಿಸಿತ್ತು.

ಶೀಘ್ರದಲ್ಲೇ ಆರಂಭವಾಗಲಿದೆ ಹೊಸ ಬಿಎಂಡಬ್ಲ್ಯು3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಕಾರಿನ ಬುಕ್ಕಿಂಗ್

ಈ ಹೊಸ ಬಿಎಂಡಬ್ಲ್ಯು 3 ಸೀರಿಸ್ ಹೊಸ ಲಾಂಗ್-ವ್ಹೀಲ್‌ಬೇಸ್ ಆವೃತ್ತಿಯು 2021ರ ಜನವರಿ 21 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಇದೀಗ ಹೊಸ ಬಿಎಂಡಬ್ಲ್ಯು 3 ಸೀರಿಸ್ ಕಾರಿಗಾಗಿ ಬುಕ್ಕಿಂಗ್ ಅನ್ನು ಇದೇ ತಿಂಗಳ 11 ರಂದು ಆರಂಭಿಸಲಿದೆ ಎಂದು ಕಂಪನಿ ತಿಳಿಸಿದೆ. ಈ ಕಾರು ಬಿಡುಗಡೆಯಾದ ಬಳಿಕ ಅತಿ ಉದ್ದ ಮತ್ತು ವಿಶಾಲವಾದ ಎಂಟ್ರಿ ಲೆವೆಲ್ ಐಷಾರಾಮಿ ಸೆಡಾನ್ ಆಗಲಿದೆ. ಪ್ರಯಾಣಿಕರಿಗೆ ಹೆಚ್ಚುವರಿ ಸ್ಪೇಸ್ ಅನ್ನು ಒದಗಿಸಲು ಸೆಡಾನ್‌ಗೆ ಹೆಚ್ಚುವರಿ ಉದ್ದವನ್ನು ಹತೋಟಿಯಲ್ಲಿಡಲಾಗುತ್ತದೆ.

ಶೀಘ್ರದಲ್ಲೇ ಆರಂಭವಾಗಲಿದೆ ಹೊಸ ಬಿಎಂಡಬ್ಲ್ಯು3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಕಾರಿನ ಬುಕ್ಕಿಂಗ್

ಲಾಂಗ್-ವ್ಹೀಲ್‌ಬೇಸ್ ಅನ್ನು ಹೊರತುಪಡಿಸಿ, ಗ್ರ್ಯಾನ್ ಲಿಮೋಸಿನ್ ಆವೃತ್ತಿಯು ಎಲ್ಲಾ ಇತರ ಅಂಶಗಳಲ್ಲಿ ಸ್ಟ್ಯಾಂಡರ್ಡ್ ರೂಪಾಂತರಕ್ಕೆ ಹೋಲುತ್ತದೆ. ಹೊಸ ಬಿಎಂಡಬ್ಲ್ಯು 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಸಹ ಬ್ರ್ಯಾಂಡ್‌ನ ಸಿಎಲ್ಎಆರ್ ಆರ್ಕಿಟಿಕ್ಚೆರ್ ಭಾಗವಾಗಲಿದೆ.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಶೀಘ್ರದಲ್ಲೇ ಆರಂಭವಾಗಲಿದೆ ಹೊಸ ಬಿಎಂಡಬ್ಲ್ಯು3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಕಾರಿನ ಬುಕ್ಕಿಂಗ್

ಸ್ಟ್ಯಾಂಡರ್ಡ್ ಆವೃತ್ತಿಗಳಲ್ಲಿರುವಂತೆ ಈ ಕಾರು ಹೊರಭಾಗ ಮತ್ತು ಇಂಟಿರಿಯರ್ ವಿನ್ಯಾಸ ಹೆಚ್ಚು ಒಂದೇ ಮಾದರಿಯಲ್ಲಿದೆ. ಹೊಸ ಬಿಎಂಡಬ್ಲ್ಯು 3 ಸೀರಿಸ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಶೀಘ್ರದಲ್ಲೇ ಆರಂಭವಾಗಲಿದೆ ಹೊಸ ಬಿಎಂಡಬ್ಲ್ಯು3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಕಾರಿನ ಬುಕ್ಕಿಂಗ್

ಇದರಲ್ಲಿ ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಟೈಲ್ ಲೈಟ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್, 12.3 ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, 10.25 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ, 3ಡಿ ನ್ಯಾವಿಗೇಷನ್, ರಿಯರ್ ಪಾರ್ಕ್ ಅಸಿಸ್ಟ್, ಬಿಎಂಡಬ್ಲ್ಯು ಕನೆಕ್ಟಿವಿಟಿ ಕಾರು ತಂತ್ರಜ್ಞಾನ, ವೈರ್‌ಲೆಸ್ ಚಾರ್ಜಿಂಗ್ ಮತ್ತು ಇತರ ಫೀಚರ್ ಗಳನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಶೀಘ್ರದಲ್ಲೇ ಆರಂಭವಾಗಲಿದೆ ಹೊಸ ಬಿಎಂಡಬ್ಲ್ಯು3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಕಾರಿನ ಬುಕ್ಕಿಂಗ್

ಹೊಸ ಬಿಎಂಡಬ್ಲ್ಯು 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಮೆಕ್ಯಾನಿಕಲ್‌ಗಳ ವಿಷಯದ ಬಗ್ಗೆ ಹೇಳುವುದಾದರೆ, ಇದರಲ್ಲಿ 2.0-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಶೀಘ್ರದಲ್ಲೇ ಆರಂಭವಾಗಲಿದೆ ಹೊಸ ಬಿಎಂಡಬ್ಲ್ಯು3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಕಾರಿನ ಬುಕ್ಕಿಂಗ್

ಈ ಎಂಜಿನ್ 255 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಇನ್ನು ಹೊಸ ಬಿಎಂಡಬ್ಲುಇ 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಕಾರಿನಲ್ಲಿ ಡೀಸೆಲ್ ಆಯ್ಕೆಯೂ ಇರಬಹುದು.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಶೀಘ್ರದಲ್ಲೇ ಆರಂಭವಾಗಲಿದೆ ಹೊಸ ಬಿಎಂಡಬ್ಲ್ಯು3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಕಾರಿನ ಬುಕ್ಕಿಂಗ್

ಇದು ಲೀಟರ್ ನಾಲ್ಕು ಸಿಲಿಂಡರ್ ಆಯಿಲ್-ಬರ್ನರ್ ಎಂಜಿನ್‌ ಅನ್ನು ನೀಡಬಹುದು. ಈ ಎಂಜಿನ್ 188 ಬಿಹೆಚ್‍ಫಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಶೀಘ್ರದಲ್ಲೇ ಆರಂಭವಾಗಲಿದೆ ಹೊಸ ಬಿಎಂಡಬ್ಲ್ಯು3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಕಾರಿನ ಬುಕ್ಕಿಂಗ್

ಈ ಹೊಸ 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಬಿಡುಗಡೆಯಾದ ಬಳಿಕ ಅತಿ ಉದ್ದ ಮತ್ತು ವಿಶಾಲವಾದ ಎಂಟ್ರಿ ಲೆವೆಲ್ ಐಷಾರಾಮಿ ಸೆಡಾನ್ ಆಗಲಿದೆ. ಈ ಹೊಸ ಬಿಎಂಡಬ್ಲ್ಯು 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಮತ್ತು ಜಾಗ್ವಾರ್ ಎಕ್ಸ್‌ಇ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
BMW 3 Series Gran Limousine Pre-Bookings To Begin From January 11. Read In Kannada.
Story first published: Thursday, January 7, 2021, 20:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X