Just In
- 11 hrs ago ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- 12 hrs ago ಭಾರತದ ನಂ.1 ಕಾರು... ದಾಖಲೆಯ ಮಾರಾಟ... 5.5 ಲಕ್ಷ ಬೆಲೆ... 34 ಕಿ.ಮೀ ಮೈಲೇಜ್
- 12 hrs ago ಈ ಹ್ಯುಂಡೈ ಕಾರಿಗೆ ಭಾರತದಲ್ಲಿ ಭರ್ಜರಿ ಬೇಡಿಕೆ: ಇದು ನಿಮಗೆ ಬೇಕು ಅಂದ್ರೆ ಕಾಯಲೇಬೇಕು!
- 13 hrs ago ಈ ತಿಂಗಳಲ್ಲಿ ಕೈಗೆಟಕುವ ಬೆಲೆಯ ಎಸ್ಯುವಿಗಳು: ಮಿಸ್ ಮಾಡಬೇಡಿ, ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
Don't Miss!
- News Congress Candidate List: ಟಿಕೆಟ್ ಹಂಚಿಕೆ ನಿರ್ಣಾಯಕ ಸಭೆ, ದೆಹಲಿಗೆ ಸಿದ್ದರಾಮಯ್ಯ
- Technology Best Coolers: ಭಾರತದಲ್ಲಿ 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕೂಲರ್ಗಳು! ಫೀಚರ್ಸ್ ಏನಿದೆ?
- Sports IPL 2024: ಮುಂಬೈ ಇಂಡಿಯನ್ಸ್ಗೆ ಆಘಾತದ ಮೇಲೆ ಆಘಾತ; ಸ್ಟಾರ್ ಬೌಲರ್ ಔಟ್
- Movies 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಅಂತ್ಯ: ಪ್ರೋತ್ಸಾಹ ನೀಡಿದ ವೀಕ್ಷಕರಿಗೆ ಧನ್ಯವಾದ ಎಂದ ನಟಿ ರಜಿನಿ
- Lifestyle ಫ್ಲ್ಯಾಟ್ನಲ್ಲಿ ವಾಸಿಸಲು ಹೋಗುವಾಗ ಸಮೃದ್ಧಿ, ಆರೋಗ್ಯಕ್ಕಾಗಿ ವಾಸ್ತು ಹೀಗಿದೆಯೇ ಎಂದು ನೋಡಬೇಕು
- Finance ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಬಿಎಂಡಬ್ಲ್ಯು 5-ಸೀರಿಸ್ ಫೇಸ್ಲಿಫ್ಟ್ ಕಾರು ಬಿಡುಗಡೆ ದಿನಾಂಕ ಬಹಿರಂಗ
ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಹೊಸ 5-ಸೀರಿಸ್ ಫೇಸ್ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಬಿಎಂಡಬ್ಲ್ಯು ಕಂಪನಿಯು ಇದೀಗ ಬಹುನಿರೀಕ್ಷಿತ ಬಿಎಂಡಬ್ಲ್ಯು 5-ಸೀರಿಸ್ ಫೇಸ್ಲಿಫ್ಟ್ ಕಾರಿನ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿದೆ.
ಈ ಬಿಎಂಡಬ್ಲ್ಯು 5-ಸೀರಿಸ್ ಫೇಸ್ಲಿಫ್ಟ್ ಕಾರು ಇದೇ ತಿಂಗಳ 24 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹೊಸ ಬಿಎಂಡಬ್ಲ್ಯು 5-ಸೀರಿಸ್ ಫೇಸ್ಲಿಫ್ಟ್ ಕಾರು ಹೊಸ ಫೀಚರ್ಸ್ ಗಳನ್ನು ಮತ್ತು ತಾಂತ್ರಿಕ ನವೀಕರಣಗಳ ಜೊತೆಗೆ ಅದರ ಸ್ಟೈಲಿಂಗ್ನಲ್ಲಿ ಸ್ವಲ್ಪ ಬದಲಾವಣೆಗಳನ್ನು ಪಡೆಯಲು ಸಿದ್ಧವಾಗಿದೆ. ಆದರೆ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇನ್ನು ಈ ಐಷಾರಾಮಿ ಕಾರು ಹಿಂದಿನ ಮಾದರಿಗಿಂತ ತುಸು ದುಬಾರಿಯಾಗಿರಲಿದೆ.
ಬಿಎಂಡಬ್ಲ್ಯು 5-ಸೀರೀಸ್ ಫೇಸ್ಲಿಫ್ಟ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರ ಮುಂಭಾಗ ಗ್ರಿಲ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಹೊಸ ಗ್ರಿಲ್ ಮತ್ತು ಹೊಸ ಸ್ಲೀಕ್ ಹೆಡ್ ಲೈಟ್ ಅನ್ನು ಅಳವಡಿಸಿದ್ದಾರೆ. ಈ ಹೊಸ ಬಿಎಂಡಬ್ಲ್ಯೂ 5-ಸೀರಿಸ್ ಫೇಸ್ಲಿಫ್ಟ್ ಕಾರು ಹಿಂದಿನ ಮಾದರಿಗಿಂತ ಆಕರ್ಷಕವಾಗಿದೆ.
ಈ ಹೊಸ ಬಿಎಂಡಬ್ಲ್ಯು 5-ಸೀರಿಸ್ ಕಾರಿನ ಬಂಪರ್ ಗಳೊಂದಿಗೆ ಆಗ್ರೆಸಿವ್ ವಿನ್ಯಾಸಗೊಳಿಸಿದ ಏರ್ ಡ್ಯಮ್ ಗಳನ್ನು ಹೊಂದಿದೆ, ಇನ್ನು ಈ ಕಾರಿನಲ್ಲಿ ಮರುವಿನ್ಯಾಸಗೊಳಿಸಿದ ಡ್ಯುಯಲ್ ಟೋನ್ ಅಲಾಯ್ ವ್ಜೀಲ್ ಗಳನ್ನು ಅಳವಡಿಸಲಾಗಿದೆ.
ಈ ಐಷಾರಾಮಿ ಕಾರಿನ ಮುಂಭಾಗ ಹೊಸ ಆಕಾರದ ಎಲ್ಇಡಿ ಡಿಆರ್ಎಲ್ಗಳೊಂದಿಗೆ ಹೊಸ ತೆಳ್ಳನೆಯ ಹೆಡ್ಲ್ಯಾಂಪ್ಗಳನ್ನು ಹೊಂದಿದೆ. ಇದನ್ನು ಹೊರತುಪಡಿಸಿದರೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗೆ ಹೋಲುತ್ತದೆ.
ಈ ಕಾರಿನ ಹಿಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಟೇಲ್ ಲ್ಯಾಂಪ್ ಮತ್ತು ಕ್ವಾಡ್-ಎಕ್ಸಾಸ್ಟ್ ಗಳೊಂದಿಗೆ ಸ್ಪೋರ್ಟಿಯರ್ ಬಂಪರ್ ಅನ್ನು ಹೊಂದಿದೆ. ಹೊಸ ಬಿಎಂಡಬ್ಲ್ಯು 5-ಸೀರಿಸ್ ಕಾರಿನ ಇಂಟಿರಿಯರ್ ನಲ್ಲಿ ಹೆಚ್ಚಿನ ಬದಲಾವಣೆಗಳನ್ನು ಹೊಂದಿರುವುದಿಲ್ಲ ಎಂದು ನಿರೀಕ್ಷಿಸುತ್ತೇವೆ.
ಬಿಎಂಡಬ್ಲ್ಯು 5-ಸೀರಿಸ್ ಫೇಸ್ಲಿಫ್ಟ್ ಕಾರು ಡಿಜಿಟಲ್ ಇನ್ಸ್ ಟ್ರೂಮೆಂಟ್ ಪ್ಯಾನೆಲ್, ಆಂಬಿಯೆಂಟ್ ಲೈಟಿಂಗ್, ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಂ, ಸನ್ರೂಫ್, ಹೆಡ್ಸ್-ಅಪ್ ಡಿಸ್ಪ್ಲೇ ಮತ್ತು ವೈರ್ಲೆಸ್ ಆಪಲ್ ಕಾರ್ಪ್ಲೇಯೊಂದಿಗೆ ಬಿಎಂಡಬ್ಲ್ಯು ಐ-ಡ್ರೈವ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಒಳಗೊಂಡಿರುತ್ತದೆ.
ಈ 5-ಸೀರಿಸ್ ಫೇಸ್ಲಿಫ್ಟ್ ಕಾರಿನಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಇದರಲ್ಲಿ ಸುರಕ್ಷತೆಗಾಗಿ 8 ಏರ್ಬ್ಯಾಗ್ಗಳು, ಎಬಿಎಸ್ ಜೊತೆ ಇಬಿಡಿ, ಪಾರ್ಕಿಂಗ್ ಸೆನ್ಸರ್ಗಳು, ರಿಯರ್ ವ್ಯೂ ಕ್ಯಾಮೆರಾ, ಜೊತೆಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಹೊಂದಿರುತ್ತದೆ.
ಬಿಎಂಡಬ್ಲ್ಯು 5-ಸೀರಿಸ್ ಫೇಸ್ಲಿಫ್ಟ್ ಕಾರಿನ ಲ್ಲಿ2.0-ಲೀಟರ್, ಇನ್ ಲೈನ್-ನಾಲ್ಕು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 248 ಬಿಹೆಚ್ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಇದರೊಂದಿಗೆ 2.0-ಲೀಟರ್ ಇನ್ ಲೈನ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 187.7 ಬಿಹೆಚ್ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 3.0-ಲೀಟರ್, ಡಿಸೇಲ್ ಎಂಜಿನ್ ಆಯ್ಕೆಯನ್ನು ನೀಡಲಾಗುತ್ತದೆ.
ಈ ಹೊಸ ಬಿಎಂಡಬ್ಲ್ಯು 5-ಸೀರಿಸ್ ಫೇಸ್ಲಿಫ್ಟ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಆಡಿ ಎ6, ಮರ್ಸಿಡಿಸ್ ಬೆಂಝ್ ಇ-ಕ್ಲಾಸ್, ಜಾಗ್ವಾರ್ ಎಕ್ಸ್ಎಫ್ ಮತ್ತು ವೋಲ್ವೋ ಎಸ್90 ಕಾರುಗಳಿಗೆ ಪೈಪೋಟಿ ನೀಡುತ್ತದೆ,