ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು 6 ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು

ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ 5 ಸೀರಿಸ್ ಮತ್ತು 6 ಸೀರಿಸ್ ಜಿಟಿ ಕಾರುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ನವೀಕರಿಸಿದೆ. ದೇಶಿಯ ಮಾರುಕಟ್ಟೆಗಾಗಿ ಬಿಎಂಡಬ್ಲ್ಯು ಕಂಪನಿಯು ತನ್ನ 6 ಸೀರಿಸ್ ಜಿಟಿ ಕಾರನ್ನು ನವೀಕರಿಸಿ ಬಿಡುಗಡೆಗೊಳಿಸಲು ಸಜ್ಜಾಗಿದೆ.

ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು 6 ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು

ಈ ಹೊಸ ಬಿಎಂಡಬ್ಲ್ಯು 6 ಸೀರಿಸ್ ಜಿಟಿ ಕಾರು ಏಪ್ರಿಲ್ 8 ರಂದು ಬಿಡುಗಡೆಯಾಗಲಿದೆ. ನವೀಕರಿಸಿದ ಬಿಎಂಡಬ್ಲ್ಯು 6 ಸೀರಿಸ್ ಜಿಟಿ ಕಾರು ಮೊದಲಿಗಿಂತ ಸ್ಪೋರ್ಟಿಯರ್ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದೆ. ಈ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿರುವ ಕಿಡ್ನಿ ಗ್ರಿಲ್ ಅನ್ನು ಪರಿಷ್ಕರಿಸಲಾಗಿದೆ, ಇನ್ನು ಬಿಎಂಡಬ್ಲ್ಯು ಲೇಸರ್ ಲೈಟ್ ಟೆಕ್ನಾಲಜಿ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ.

ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು 6 ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು

ಈ ಬಿಎಂಡಬ್ಲ್ಯು 6 ಸೀರಿಸ್ ಜಿಟಿ ಕಾರು ಸ್ಪೋರ್ಟಿಯರ್ ಎಂ ಸ್ಪೋರ್ಟ್ ರೂಪಾಂತರದಲ್ಲಿ ಬೋಲ್ಡರ್ ಸ್ಟೈಲಿಂಗ್ ಪ್ಯಾಕೇಜ್‌ ಅನ್ನು ಪಡೆಯುತ್ತದೆ. ಒಟ್ಟಾರೆಯಾಗಿ ಈ ಐಷಾರಾಮಿ ಕಾರು ಆಕರ್ಷಕ ಲುಕ್ ಅನ್ನು ಹೊಂದಿರುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು 6 ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು

ಇನ್ನು ಈ 6 ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರಿನ ಒಳಭಾಗದ ಬಗ್ಗೆ ಹೇಳುವುದಾದರೆ, ಒಳಭಾಗದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಕಂಡುಬಂದಿಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ ಮಾದರಿಯಂತಿದೆ.

ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು 6 ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು

ಈ ಐಷಾರಾಮಿ ಕಾರಿನಲ್ಲಿ 12.3-ಇಂಚಿನ ಆಲ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಹೊಸ ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಇತ್ತೀಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಮತ್ತು ಆಪಲ್ ಕಾರ್‌ಪ್ಲೇ ನೀಡುವ ಐಡ್ರೈವ್ ಸಿಸ್ಟಮ್ ಮತ್ತು ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಪ್ಯಾಡ್ ಅನ್ನು ಪಡೆಯಲಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು 6 ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು

ಇನ್ನು 2021ರ ಬಿಎಂಡಬ್ಲ್ಯು 6 ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರಿನ ಎಂಜಿನ್ ನಲ್ಲಿಯು ಯಾವುದೇ ಬದಲಾವಣೆಗಳು ಇರುವುದಿಲ್ಲವೆಂದು ಹೇಳಲಾಗುತ್ತಿದೆ. ಇದರಲ್ಲಿ ಅದೇ ಲೀಟರ್, 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ.

ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು 6 ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು

ಈ ಎಂಜಿನ್ 255 ಬಿಹೆಚ್‌ಪಿ ಪವರ್ ಮತ್ತು 400 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರೊಂದಿಗೆ ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಸಹ ಪಡೆಯಲಿದ್ದು , ಇದು 187 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು 6 ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು

ಇನ್ನು ದೊಡ್ಡದಾದ 3.0-ಲೀಟರ್, 6-ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಸಹ ಪಡೆಯುತ್ತದೆ. ಈ ಎಂಜಿನ್ 263 ಬಿಹೆಚ್‌ಪಿ ಪವರ್ ಮತ್ತು 620 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಎಲ್ಲಾ ಎಂಜಿನ್ ಗಳನ್ನು 8-ಸ್ಪೀಡ್ ಆಟೋಮ್ಯಾಟಿಕ್ ಜೊತೆಗೆ 2-ಆಕ್ಸಲ್ ಏರ್ ಸಸ್ಪೆಂಕ್ಷನ್ ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗುತ್ತದೆ.

ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು 6 ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು

ಬಿಎಂಡಬ್ಲ್ಯು ಇಂಡಿಯಾ ತನ್ನ ಹೊಸ ಎಂ340ಐ ಎಕ್ಸ್‌ಡ್ರೈವ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.62.90 ಲಕ್ಷಗಳಾಗಿದೆ. ಹೊಸ ಬಿಎಂಡಬ್ಲ್ಯು ಎಂ340ಐ ಎಕ್ಸ್‌ಡ್ರೈವ್ ಕಾರು ದ್ರಾವಿಟ್ ಗ್ರೇ, ಸನ್ಸೆಟ್ ಆರೆಂಜ್ ಮತ್ತು ಟಾಂಜಾನೈಟ್ ಬ್ಲೂ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ.

ಬಿಡುಗಡೆಗೆ ಸಜ್ಜಾದ ಬಿಎಂಡಬ್ಲ್ಯು 6 ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು

ಬಿಎಂಡಬ್ಲ್ಯು 6 ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು ಭಾರತದಲ್ಲಿ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಇದು ಕೆಲವು ನೂತನ ಫೀಚರ್ ಮತ್ತು ತಂತ್ರಜ್ಙಾನಗಳನ್ನು ಪಡೆಯಬಹುದು. ಈ ಕಾರು ಹಿಂದಿನ ಮಾದರಿಗಿಂತ ತುಸು ದುಬಾರಿಯಾಗಿರುತ್ತದೆ.

Most Read Articles

Kannada
English summary
Bmw Expected To launch The 2021 6 Series GT Facelift On April 8th. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X