ಸಾರ್ವಜನಿಕವಾಗಿ ಪ್ರದರ್ಶನಗೊಂಡ ಹೊಸ ಬುಗಾಟಿ ಸ್ಪೋರ್ಟ್ಸ್ ಕಾರು

ಇತ್ತೀಚೆಗೆ ಅನಾವರಣಗೊಂಡ ಬುಗಾಟಿ ಕಂಪನಿಯ ಚಿರೋನ್ ಸೂಪರ್ ಸ್ಪೋರ್ಟ್ ಕಾರು ಇಟಲಿಯಲ್ಲಿ ನಡೆದ ಮಿಲಾನೊ ಮೊನ್ಜಾ ಓಪನ್ ಏರ್ ಮೋಟಾರ್ ಶೋದಲ್ಲಿ ಸಾರ್ವಜನಿಕವಾಗಿ ಪ್ರದರ್ಶನಗೊಂಡಿದೆ.

ಸಾರ್ವಜನಿಕವಾಗಿ ಪ್ರದರ್ಶನಗೊಂಡ ಹೊಸ ಬುಗಾಟಿ ಸ್ಪೋರ್ಟ್ಸ್ ಕಾರು

ಚಿರೋನ್ ಕಾರಿನ ಜೊತೆಗೆ ಕಳೆದ ವರ್ಷ ಅನಾವರಣಗೊಂಡ ಬುಗಾಟಿ ಬೋಲೈಡ್ ಎಂಬ ಟ್ರ್ಯಾಕ್ ಮಾದರಿಯನ್ನು ಸಹ ಪ್ರದರ್ಶಿಸಲಾಗಿದೆ. ಓಪನ್ ಏರ್ ಮೋಟಾರ್ ಶೋದಲ್ಲಿ ಈ ಎರಡು ಐಷಾರಾಮಿ ಕಾರುಗಳು ಮಿಲನ್ ನಗರದ ಬೀದಿಗಳಲ್ಲಿ ಸಂಚರಿಸಿವೆ.

ಸಾರ್ವಜನಿಕವಾಗಿ ಪ್ರದರ್ಶನಗೊಂಡ ಹೊಸ ಬುಗಾಟಿ ಸ್ಪೋರ್ಟ್ಸ್ ಕಾರು

ಕೆಲವು ದಿನಗಳ ಹಿಂದೆ ಬುಗಾಟಿ ಕಂಪನಿಯ ಅಧ್ಯಕ್ಷ ಸ್ಟೀಫನ್ ವಿಂಕೆಲ್ಮನ್ ಹೊಸ ಚಿರೋನ್ ಸೂಪರ್ ಸ್ಪೋರ್ಟ್‌ ಕಾರ್ ಅನ್ನು ಚಾಲನೆ ಮಾಡಿದ್ದರು. ಈ ಮೂಲಕ ಚಿರೋನ್ ವಿಶ್ವದಾದ್ಯಂತ ಡಿಜಿಟಲ್ ಪ್ರಪಂಚಕ್ಕೆ ಕಾಲಿಟ್ಟಿತು.

ಸಾರ್ವಜನಿಕವಾಗಿ ಪ್ರದರ್ಶನಗೊಂಡ ಹೊಸ ಬುಗಾಟಿ ಸ್ಪೋರ್ಟ್ಸ್ ಕಾರು

ಐಷಾರಾಮಿ ಸ್ಪೋರ್ಟ್ಸ್ ಕಾರುಗಳ ತಯಾರಿಕೆಗೆ ಹೆಸರುವಾಸಿಯಾಗಿರುವ ಬುಗಾಟಿ ಕಂಪನಿಯು, ಹೊಸ ಚಿರೋನ್ ಕಾರು ಐಷಾರಾಮಿ ಸೌಕರ್ಯಗಳ ಜೊತೆಗೆ ಹೆಚ್ಚಿನ ಪರ್ಫಾಮೆನ್ಸ್ ಸಂಯೋಜನೆ ಹೊಂದಿದೆ ಎಂದು ಹೇಳಿಕೊಂಡಿದೆ.

ಸಾರ್ವಜನಿಕವಾಗಿ ಪ್ರದರ್ಶನಗೊಂಡ ಹೊಸ ಬುಗಾಟಿ ಸ್ಪೋರ್ಟ್ಸ್ ಕಾರು

ಈ ಕಾರಿನಲ್ಲಿ ಚಿರೋನ್ ಸೂಪರ್ ಸ್ಪೋರ್ಟ್ 300 ಪ್ಲಸ್ ಮಾದರಿಯಲ್ಲಿರುವಂತಹ 8.0 ಲೀಟರ್ ಡಬ್ಲ್ಯು 16 ನಾಲ್ಕು ಟರ್ಬೊ ಎಂಜಿನ್ ಅಳವಡಿಸಲಾಗಿದ್ದರೂ ಅದನ್ನು ವೇಗಗೊಳಿಸಲು ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.

ಸಾರ್ವಜನಿಕವಾಗಿ ಪ್ರದರ್ಶನಗೊಂಡ ಹೊಸ ಬುಗಾಟಿ ಸ್ಪೋರ್ಟ್ಸ್ ಕಾರು

ಈ ಕಾರಿನಲ್ಲಿ ಕಂಪನಿಯು ಕಂಪ್ರೆಸರ್ ವ್ಹೀಲ್ ಹೊಂದಿರುವ ದೊಡ್ಡ ಟರ್ಬೋಚಾರ್ಜರ್‌ಗಳನ್ನು ಹಾಗೂ ಹೆಚ್ಚಿನ ವೇಗಕ್ಕಾಗಿ ವಿನ್ಯಾಸಗೊಳಿಸಲಾದ ಹೊಸ ಚಾಸಿಸ್ ಅನ್ನು ಅಳವಡಿಸಿದೆ. ಈ ಕಾರಿನ ತೂಕವನ್ನು 23 ಕೆ.ಜಿಯಷ್ಟು ಕಡಿಮೆ ಮಾಡಲಾಗಿದೆ.

ಸಾರ್ವಜನಿಕವಾಗಿ ಪ್ರದರ್ಶನಗೊಂಡ ಹೊಸ ಬುಗಾಟಿ ಸ್ಪೋರ್ಟ್ಸ್ ಕಾರು

ಈ ಕಾರಿನ ಮುಂಭಾಗದಲ್ಲಿರುವ ಲೋ ಸ್ಲಂಗ್ ಕಾರ್ ಅನ್ನು ಏರೋಡೈನಾಮಿಕ್ ಆಗಿ ಪರಿಣಾಮಕಾರಿಯಾಗಿಸುತ್ತದೆ. ಚಿರೋನ್ ಸೂಪರ್ ಸ್ಪೋರ್ಟ್‌ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 440 ಕಿ.ಮೀಗಳಾಗಿದೆ.

ಸಾರ್ವಜನಿಕವಾಗಿ ಪ್ರದರ್ಶನಗೊಂಡ ಹೊಸ ಬುಗಾಟಿ ಸ್ಪೋರ್ಟ್ಸ್ ಕಾರು

ಬುಗಾಟಿ ಕಂಪನಿಯು ಈ ಹೈಪರ್ ಸ್ಪೋರ್ಟ್ಸ್ ಕಾರಿನ ಕೇವಲ 30 ಯುನಿಟ್'ಗಳನ್ನು ಮಾತ್ರ ಉತ್ಪಾದಿಸಲಿದೆ. ಈ ಕಾರಿನ ಬೆಲೆ ಸುಮಾರು 3.2 ಮಿಲಿಯನ್ ಯುರೋ ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ಸುಮಾರು ರೂ.28.50 ಕೋಟಿಗಳಾಗಿದೆ.

ಸಾರ್ವಜನಿಕವಾಗಿ ಪ್ರದರ್ಶನಗೊಂಡ ಹೊಸ ಬುಗಾಟಿ ಸ್ಪೋರ್ಟ್ಸ್ ಕಾರು

ಈ ಕಾರಿನಲ್ಲಿರುವ ಅಳವಡಿಸಿರುವ ಎಂಜಿನ್ 1,825 ಬಿಹೆಚ್‌ಪಿ ಪವರ್ ಹಾಗೂ 1,850 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಚಿರೋನ್ ಸೂಪರ್ ಸ್ಪೋರ್ಟ್ಸ್ ಕಾರು ಕೇವಲ 2.17 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

Most Read Articles

Kannada
English summary
New Bugatti Chiron Super Sport car showcased publicly in Italy. Read in Kannada.
Story first published: Tuesday, June 15, 2021, 14:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X