ಹೊಸ ಚಿರೋನ್ ಸೂಪರ್ ಸ್ಪೋರ್ಟ್ ಕಾರಿನ ಟಾಪ್ ಸ್ಪೀಡ್ ಪರೀಕ್ಷಿಸಿದ ಬುಗಾಟಿ

ಐಷಾರಾಮಿ ಸ್ಪೋರ್ಟ್ಸ್ ಕಾರುಗಳ ತಯಾರಿಕೆಗೆ ಹೆಸರುವಾಸಿಯಾಗಿರುವ ಬುಗಾಟಿ ಕಂಪನಿಯು ತನ್ನ ಚಿರೋನ್ ಸೂಪರ್ ಸ್ಪೋರ್ಟ್ ಕಾರನ್ನು ಟೆಸ್ಟ್ ಮಾಡಲಾಗುತ್ತಿದೆ. ಈ ಬುಗಾಟಿ ಚಿರೋನ್ ಸೂಪರ್ ಸ್ಪೋರ್ಟ್ ಕಾರು ಟೆಸ್ಟ್ ಮಾಡುತ್ತಿರುವ ಸ್ಪೈ ಚಿತ್ರಗಳು ಮತ್ತು ಮಾಹಿತಿಗಳು ಬಹಿರಂಗವಾಗಿವೆ.

ಹೊಸ ಚಿರೋನ್ ಸೂಪರ್ ಸ್ಪೋರ್ಟ್ ಕಾರಿನ ಟಾಪ್ ಸ್ಪೀಡ್ ಪರೀಕ್ಷಿಸಿದ ಬುಗಾಟಿ

ಫೋಕ್ಸ್‌ವ್ಯಾಗನ್‌ ಎಹ್ರಾ-ಲೆಸ್ಸಿಯನ್ ಘಟಕದ ಟ್ರ್ಯಾಕ್ ನಲ್ಲಿ ಬುಗಾಟಿ ಚಿರೋನ್ ಸೂಪರ್ ಸ್ಪೋರ್ಟ್ ಕಾರನ್ನು ಟೆಸ್ಟ್ ಮಾಡಿದೆ. ಬುಗಾಟಿ ತನ್ನ ಅಂತಿಮ ಪರೀಕ್ಷಾ ಹಂತದ ಮಾಹಿತಿಯನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ. ಚಿರೋನ್ ಸೂಪರ್ ಸ್ಪೋರ್ಟ್ ಕಾರು ಇತ್ತೀಚೆಹೆ ಟೆಸ್ಟಿಂಗ್ ವೇಳೆ 440 ಕಿ.ಮೀ ವೇಗವನ್ನು ಕ್ರಮಿಸಿದೆ. ನಿಖರವಾದ ಟಾಪ್ ಸ್ಪೀಡ್ ಅನ್ನು ಪರೀಕ್ಷಿಸುತ್ತಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಲು, ಫ್ರೆಂಚ್ ತಯಾರಕರು 100 ಹೆಚ್ಚುವರಿ ಸೆನ್ಸರ್ ಗಳನ್ನು ಬಳಸಿದ್ದಾರೆ

ಹೊಸ ಚಿರೋನ್ ಸೂಪರ್ ಸ್ಪೋರ್ಟ್ ಕಾರಿನ ಟಾಪ್ ಸ್ಪೀಡ್ ಪರೀಕ್ಷಿಸಿದ ಬುಗಾಟಿ

ಬುಗಾಟಿ ಚಿರೋನ್ ಸೂಪರ್ ಸ್ಪೋರ್ಟ್ ಕಾರಿನಲ್ಲಿ 8.0-ಲೀಟರ್ ಕ್ವಾಡ್-ಟರ್ಬೊ ಡಬ್ಲ್ಯು 16 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 1,578 ಬಿಹೆಚ್‌ಪಿ ಪವರ್ ಮತ್ತು 1600 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಚಿರೋನ್ ಸೂಪರ್ ಸ್ಪೋರ್ಟ್ ಕಾರಿನ ಟಾಪ್ ಸ್ಪೀಡ್ ಪರೀಕ್ಷಿಸಿದ ಬುಗಾಟಿ

ಚಿರೋನ್ ಸೂಪರ್ ಸ್ಪೋರ್ಟ್ 403 ಕಿ.ಮೀ ವೇಗವನ್ನು ತಲುಪುವವರೆಗೆ ಏಳನೇ ಗೇರ್‌ಗೆ ಬದಲಾಗದಂತೆ ಸಂವಹನಕ್ಕೆ ಪರಿಷ್ಕರಣೆ ಮಾಡಲಾಯಿತು. ಬುಗಾಟಿ ಚಾಸಿಸ್ ಅಭಿವೃದ್ಧಿಯ ಮುಖ್ಯಸ್ಥ ಜಾಚಿನ್ ಶ್ವಾಲ್ಬೆ ತನ್ನ ಎಂಜಿನಿಯರ್‌ಗಳು ಸೂಪರ್ ಸ್ಪೋರ್ಟ್‌ನ ಟಾಪ್ಪ ಸ್ಪೀಡ್ ಅನ್ನು 440 ಕಿ.ಮೀ ವೇಗದಲ್ಲಿ ಪರಿಷ್ಕರಿಸುತ್ತಿದ್ದಾರೆ,

ಹೊಸ ಚಿರೋನ್ ಸೂಪರ್ ಸ್ಪೋರ್ಟ್ ಕಾರಿನ ಟಾಪ್ ಸ್ಪೀಡ್ ಪರೀಕ್ಷಿಸಿದ ಬುಗಾಟಿ

ಅದು ಹೆಚ್ಚಿನ ವೇಗದಲ್ಲಿಯೂ ಸಹ ಸುರಕ್ಷತೆಯೊಂದಿಗೆ ಕಾರ್ಯನಿರ್ವಹಿಸಬಲ್ಲದು ಎಂದು ಹೇಳಿದ್ದಾರೆ. ಬುಗಾಟಿ ಚಿರೋನ್ ಸ್ಪೋರ್ಟ್ ಮತ್ತೊಂದು ಅಲ್ಟ್ರಾ-ಎಕ್ಸ್‌ಕ್ಲೂಸಿವ್ ಮಾದರಿಯಾಗಿದ್ದು, ಅದರ ಉತ್ಪಾದನೆಯನ್ನು ಕೇವಲ 60 ಯೂನಿಟ್‌ಗಳಿಗೆ ಸೀಮಿತಗೊಳಿಸಲಾಗಿದೆ.

ಹೊಸ ಚಿರೋನ್ ಸೂಪರ್ ಸ್ಪೋರ್ಟ್ ಕಾರಿನ ಟಾಪ್ ಸ್ಪೀಡ್ ಪರೀಕ್ಷಿಸಿದ ಬುಗಾಟಿ

ಇತ್ತೀಚೆಗೆ ಬುಗಾಟಿ ಕಂಪನಿಯು ಚಿರೋನ್ ಸೂಪರ್ ಸ್ಪೋರ್ಟ್ ಕಾರು ಇಟಲಿಯಲ್ಲಿ ನಡೆದ ಮಿಲಾನೊ ಮೊನ್ಜಾ ಓಪನ್ ಏರ್ ಮೋಟಾರ್ ಶೋದಲ್ಲಿ ಸಾರ್ವಜನಿಕವಾಗಿ ಪ್ರದರ್ಶನಗೊಂಡಿದೆ. ಚಿರೋನ್ ಕಾರಿನ ಜೊತೆಗೆ ಕಳೆದ ವರ್ಷ ಅನಾವರಣಗೊಂಡ ಬುಗಾಟಿ ಬೋಲೈಡ್ ಎಂಬ ಟ್ರ್ಯಾಕ್ ಮಾದರಿಯನ್ನು ಸಹ ಪ್ರದರ್ಶಿಸಲಾಗಿತ್ತು.

ಹೊಸ ಚಿರೋನ್ ಸೂಪರ್ ಸ್ಪೋರ್ಟ್ ಕಾರಿನ ಟಾಪ್ ಸ್ಪೀಡ್ ಪರೀಕ್ಷಿಸಿದ ಬುಗಾಟಿ

ಓಪನ್ ಏರ್ ಮೋಟಾರ್ ಶೋದಲ್ಲಿ ಈ ಎರಡು ಐಷಾರಾಮಿ ಕಾರುಗಳು ಮಿಲನ್ ನಗರದ ಬೀದಿಗಳಲ್ಲಿ ಸಂಚರಿಸಿವೆ. ಕೆಲವು ದಿನಗಳ ಹಿಂದೆ ಬುಗಾಟಿ ಕಂಪನಿಯ ಅಧ್ಯಕ್ಷ ಸ್ಟೀಫನ್ ವಿಂಕೆಲ್ಮನ್ ಹೊಸ ಚಿರೋನ್ ಸೂಪರ್ ಸ್ಪೋರ್ಟ್‌ ಕಾರ್ ಅನ್ನು ಚಾಲನೆ ಮಾಡಿದ್ದರು.

ಹೊಸ ಚಿರೋನ್ ಸೂಪರ್ ಸ್ಪೋರ್ಟ್ ಕಾರಿನ ಟಾಪ್ ಸ್ಪೀಡ್ ಪರೀಕ್ಷಿಸಿದ ಬುಗಾಟಿ

ಈ ಕಾರಿನಲ್ಲಿ ಕಂಪನಿಯು ಕಂಪ್ರೆಸರ್ ವ್ಹೀಲ್ ಹೊಂದಿರುವ ದೊಡ್ಡ ಟರ್ಬೋಚಾರ್ಜರ್‌ಗಳನ್ನು ಹಾಗೂ ಹೆಚ್ಚಿನ ವೇಗಕ್ಕಾಗಿ ವಿನ್ಯಾಸಗೊಳಿಸಲಾದ ಹೊಸ ಚಾಸಿಸ್ ಅನ್ನು ಅಳವಡಿಸಿದೆ. ಈ ಕಾರಿನ ತೂಕವನ್ನು 23 ಕೆ.ಜಿಯಷ್ಟು ಕಡಿಮೆ ಮಾಡಲಾಗಿದೆ.

ಹೊಸ ಚಿರೋನ್ ಸೂಪರ್ ಸ್ಪೋರ್ಟ್ ಕಾರಿನ ಟಾಪ್ ಸ್ಪೀಡ್ ಪರೀಕ್ಷಿಸಿದ ಬುಗಾಟಿ

ಈ ಕಾರಿನ ಮುಂಭಾಗದಲ್ಲಿರುವ ಲೋ ಸ್ಲಂಗ್ ಕಾರ್ ಅನ್ನು ಏರೋಡೈನಾಮಿಕ್ ಆಗಿ ಪರಿಣಾಮಕಾರಿಯಾಗಿಸುತ್ತದೆ. ಚಿರೋನ್ ಸೂಪರ್ ಸ್ಪೋರ್ಟ್‌ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 440 ಕಿ.ಮೀಗಳಾಗಿದೆ.

Most Read Articles

Kannada
English summary
Bugatti Chiron Super Sport Tested To Staggering 440 Kmph Top Speed. Read In Kannada.
Story first published: Thursday, June 24, 2021, 21:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X