ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

ಕೋವಿಡ್ ಪರಿಣಾಮ ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದ ಭಾರತೀಯ ಆಟೋ ಉದ್ಯಮವು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ವೈರಸ್ ಪರಿಣಾಮ ಬಿಡುಗಡೆಯಿಂದ ಹಿಂದೆ ಸರಿದಿದ್ದ ಹಲವು ಹೊಸ ವಾಹನಗಳು ಇದೀಗ ಮಾರುಕಟ್ಟೆ ಪ್ರವೇಶಿಸುತ್ತಿವೆ.

ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮಖ ಹತ್ತು ಕಾರುಗಳಿವು!

ಪ್ರಸ್ತುತ ಸನ್ನಿವೇಶದಲ್ಲಿ ಆರ್ಥಿಕ ಪರಿಸ್ಥಿತಿಯು ಸಾಕಷ್ಟು ಕುಸಿತ ಕಂಡಿದ್ದರೂ ಸೋಂಕಿನ ಭೀತಿಯಿಂದಾಗಿ ಸ್ವಂತ ವಾಹನ ಬಳಕೆ ಹೆಚ್ಚುತ್ತಿರುವುದೇ ಹೊಸ ವಾಹನ ಮಾರಾಟದಲ್ಲಿ ತ್ವರಿತವಾಗಿ ಹೆಚ್ಚಳ ಕಂಡುಬರುತ್ತಿದ್ದು, ಜುಲೈ ತಿಂಗಳಿನಲ್ಲಿ ವಿವಿಧ ಕಾರು ಉತ್ಪಾದನಾ ಕಂಪನಿಗಳು ತಮ್ಮ ಬಹುನೀರಿಕ್ಷಿತ ಕಾರುಗಳನ್ನು ರಸ್ತೆಗಿಳಿಸಿವೆ. ಹಾಗಾದ್ರೆ ಜುಲೈನಲ್ಲಿ ಬಿಡುಗಡೆಯಾದ ಕಾರುಗಳ ವಿಶೇಷತೆ ಏನು? ಬೆಲೆ ಎಷ್ಟು? ಮತ್ತು ಎಂಜಿನ್ ಮಾಹಿತಿ ತಿಳಿಯೋಣ.

ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮಖ ಹತ್ತು ಕಾರುಗಳಿವು!

ಮಹೀಂದ್ರಾ ಬೊಲೆರೊ ನಿಯೋ

ಹೊಸ ಎಮಿಷನ್ ಜಾರಿ ನಂತರ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಎಸ್‌ಯುವಿ ಸರಣಿಯಲ್ಲಿ ಸಾಕಷ್ಟು ಬದಲಾವಣೆ ತಂದಿರುವ ಮಹೀಂದ್ರಾ ಕಂಪನಿಯು ಟಿಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಮಾರಾಟವನ್ನು ಸ್ಥಗಿತಗೊಳಿಸಿದ್ದು, ಕಂಪನಿಯು ಟಿವಿಯುವಿ300 ಫೇಸ್‌ಲಿಫ್ಟ್ ಮಾದರಿಯನ್ನೇ ಇದೀಗ ವಿನೂತನ ವಿನ್ಯಾಸದೊಂದಿಗೆ ಬೊಲೆರೊ ನಿಯೋ ಹೆಸರಿನಲ್ಲಿ ಬಿಡುಗಡೆ ಮಾಡಿದೆ.

ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮಖ ಹತ್ತು ಕಾರುಗಳಿವು!

7 ಸೀಟರ್ ಸೌಲಭ್ಯದೊಂದಿಗೆ ಎನ್4, ಎನ್8, ಎನ್10 ಮತ್ತು ಎನ್10 ಆಪ್ಷನ್ ಎನ್ನುವ ನಾಲ್ಕು ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿರುವ ಹೊಸ ಕಾರು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಹಲವಾರು ಪ್ರೀಮಿಯಂ ಸೌಲಭ್ಯಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. ರೂ.8.48 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.99 ಲಕ್ಷ ಬೆಲೆ ಹೊಂದಿದೆ.

ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮಖ ಹತ್ತು ಕಾರುಗಳಿವು!

ಟಾಟಾ ಡಾರ್ಕ್ ಎಡಿಷನ್‌ಗಳು

ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಆಲ್‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್, ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ನೆಕ್ಸಾನ್ ಇವಿ ಮತ್ತು ಹ್ಯಾರಿಯರ್ ಮಾದರಿಗಳ ಡಾರ್ಕ್ ಎಡಿಷನ್‌ಗಳನ್ನು ಬಿಡುಗಡೆಗೊಳಿಸಿದೆ.

ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮಖ ಹತ್ತು ಕಾರುಗಳಿವು!

ಟಾಟಾ ಡಾರ್ಕ್ ಎಡಿಷನ್‌ಗಳು ಬಿಡುಗಡೆ ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಆಲ್‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್, ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ನೆಕ್ಸಾನ್ ಇವಿ ಮತ್ತು ಹ್ಯಾರಿಯರ್ ಮಾದರಿಗಳ ಡಾರ್ಕ್ ಎಡಿಷನ್‌ಗಳನ್ನು ಬಿಡುಗಡೆಗೊಳಿಸಿದೆ.

ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮಖ ಹತ್ತು ಕಾರುಗಳಿವು!

ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ

ಆಡಿ ಇಂಡಿಯಾ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾದ ಇ-ಟ್ರಾನ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಗೂ ಪರಿಚಯಿಸಿದ್ದು, ಹೊಸ ಕಾರು ಹಲವಾರು ಹೊಸ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಿದೆ. ಹೊಸ ಇ-ಟ್ರಾನ್ ಕಾರು ಗ್ರಾಹಕರ ಬೇಡಿಕೆಯೆಂತೆ ಇ-ಟ್ರಾನ್ 50, ಇ-ಟ್ರಾನ್ 55 ಮತ್ತು ಇ-ಟ್ರಾನ್ 55 ಸ್ಪೋರ್ಟ್‌ಬ್ಯಾಕ್ ಎನ್ನುವ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮಖ ಹತ್ತು ಕಾರುಗಳಿವು!

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ಇ-ಟ್ರಾನ್ 50 ಮಾದರಿಗೆ ರೂ.99.99 ಲಕ್ಷ, ಇ-ಟ್ರಾನ್ 55 ಮಾದರಿಗೆ ರೂ. 1.16 ಕೋಟಿ ಮತ್ತು ಇ-ಟ್ರಾನ 55 ಸ್ಪೋರ್ಟ್‌ಬ್ಯಾಕ್ ಮಾದರಿಗೆ ರೂ. 1.17 ಕೋಟಿ ಬೆಲೆ ನಿಗದಿಪಡಿಸಲಾಗಿದೆ.

ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮಖ ಹತ್ತು ಕಾರುಗಳಿವು!

ಫೋರ್ಡ್ ಫಿಗೊ ಪೆಟ್ರೋಲ್ ಆಟೋಮ್ಯಾಟಿಕ್

ಫಿಗೊ ಹ್ಯಾಚ್‌ಬ್ಯಾಕ್ 1.2 ಲೀಟರ್ ಪೆಟ್ರೋಲ್ ಮಾದರಿಯಲ್ಲಿ ಮ್ಯಾನುವಲ್ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದ ಫೋರ್ಡ್ ಕಂಪನಿಯು ಇದೀಗ ಹೊಸದಾಗಿ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಆಟೋಮ್ಯಾಟಿಕ್ ಆವೃತ್ತಿಯು ಫಿಗೊ ಪೆಟ್ರೋಲ್ ಮಾದರಿಯ ಮಧ್ಯಮ ಕ್ರಮಾಂಕದ ಆವೃತ್ತಿಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದೆ.

ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮಖ ಹತ್ತು ಕಾರುಗಳಿವು!

ಫಿಗೊ ಪೆಟ್ರೋಲ್ ಆವೃತ್ತಿಗಳಾದ ಟೈಟಾನಿಯಂ ಮತ್ತು ಟೈಟಾನಿಯಂ ಪ್ಲಸ್‌ನಲ್ಲಿ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಣೆ ಮಾಡಲಾಗಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 7.75 ಲಕ್ಷಕ್ಕೆ ಮತ್ತು ರೂ.8.20 ಲಕ್ಷ ಬೆಲೆ ಹೊಂದಿದೆ.

ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮಖ ಹತ್ತು ಕಾರುಗಳಿವು!

ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಜನಪ್ರಿಯ ಪರ್ಫಾಮೆನ್ಸ್ ಸೆಡಾನ್ ಕಾರು ಮಾದರಿಗಳಾದ ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್ ಆವೃತ್ತಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರುಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.02 ಕೋಟಿ ಬೆಲೆ ನಿಗದಿಪಡಿಸಲಾಗಿದೆ.

ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮಖ ಹತ್ತು ಕಾರುಗಳಿವು!

ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಆರಂಭಿಕ ಆವೃತ್ತಿಯಾದ ಇ53 ಮಾದರಿಯ ಎಕ್ಸ್‌ಶೋರೂಂ ಪ್ರಕಾರ ರೂ. 1.02 ಕೋಟಿ ಮತ್ತು ಇ63 ಎಸ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.70 ಕೋಟಿ ಬೆಲೆ ಹೊಂದಿವೆ.

ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮಖ ಹತ್ತು ಕಾರುಗಳಿವು!

ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್

ಜರ್ಮನ್ ಮೂಲದ ವಾಹನ ತಯಾರಾಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಹೊಸ ಎಕ್ಸ್1 20ಐ ಟೆಕ್ ಎಡಿಷನ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ಬೆಲೆಯು ರೂ.43 ಲಕ್ಷಗಳಾಗಿದೆ.

ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮಖ ಹತ್ತು ಕಾರುಗಳಿವು!

ಹೊಸ ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ಖರೀದಿಗೆ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಇನ್ನು ಈ ಮಾದರಿಯು ಆಲ್ಪೈನ್ ವೈಟ್ ಮತ್ತು ಫೈಟೋನಿಕ್ ಬ್ಲೂ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ಮಾದರಿಯಲ್ಲಿ 2.0-ಲೀಟರ್ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 192 ಬಿಹೆಚ್‌ಪಿ ಪವರ್ ಮತ್ತು 280 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮಖ ಹತ್ತು ಕಾರುಗಳಿವು!

2021ರ ರೇಂಜ್ ರೋವರ್ ಇವೋಕ್

ಜೆಎಲ್ಆರ್ ಕಂಪನಿಯು ತನ್ನ ಜನಪ್ರಿಯ ಐಷಾರಾಮಿ ಎಸ್‌ಯುವಿ ಮಾದರಿಯಾದ ಇವೋಕ್ 2021ರ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 64.12 ಲಕ್ಷ ಬೆಲೆ ಹೊಂದಿದೆ.

ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮಖ ಹತ್ತು ಕಾರುಗಳಿವು!

ರೇಂಜ್ ರೋವರ್ ಇವೋಕ್ ಹೊಸ ಆವೃತ್ತಿಯಲ್ಲಿ ಈ ಹಿಂದಿನ ಎರಡು ಎಂಜಿನ್ ಮಾದರಿಗಳನ್ನು ಉನ್ನತೀಕರಿಸಲಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆ ಹೊಂದಿರುವ ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಎರಡು ಮಾದರಿಯಲ್ಲೂ ಆರ್ ಡೈಮಾನಿಕ್ ವೆರಿಯೆಂಟ್‌ನೊಂದಿಗೆ ಎಸ್ ವೆರಿಯೆಂಟ್ ಹೊಂದಿವೆ.

ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮಖ ಹತ್ತು ಕಾರುಗಳಿವು!

3 ಡೋರ್ ಡಿಫೆಂಡರ್ 90 ಎಸ್‌ಯುವಿ

ಲ್ಯಾಂಡ್ ರೋವರ್ ಡಿಫೆಂಡರ್‌ನ 5 ಡೋರುಗಳ ಆವೃತ್ತಿಯಾದ ಡಿಫೆಂಡರ್ 110 ಎಸ್‌ಯುವಿಯನ್ನು ಕಳೆದ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈಗ ಲ್ಯಾಂಡ್ ರೋವರ್ ಡಿಫೆಂಡರ್‌ನ 3 ಡೋರುಗಳ ಆವೃತ್ತಿಯಾದ ಡಿಫೆಂಡರ್ 90 ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮಖ ಹತ್ತು ಕಾರುಗಳಿವು!

ಲ್ಯಾಂಡ್ ರೋವರ್ ಡಿಫೆಂಡರ್ 90 ಎಸ್‌ಯುವಿಯ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.76.57 ಲಕ್ಷಗಳಾಗಿದೆ. ಕಂಪನಿಯು ಈ ಎಸ್‌ಯುವಿಯನ್ನು ಎಕ್ಸ್-ಡೈನಾಮಿಕ್ ಹಾಗೂ ಡಿಫೆಂಡರ್ ಎಕ್ಸ್ ಸೇರಿದಂತೆ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಿದೆ. ಈ ಎರಡೂ ಮಾದರಿಗಳು ಎಸ್, ಎಸ್‌ಇ ಹಾಗೂ ಹೆಚ್‌ಎಸ್‌ಇ ಸ್ಪೆಸಿಫಿಕೇಶನ್ ಪ್ಯಾಕ್‌ಗಳನ್ನು ಹೊಂದಿವೆ.

ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮಖ ಹತ್ತು ಕಾರುಗಳಿವು!

ಬಿಎಂಡಬ್ಲ್ಯು ಎಂ5 ಕಾಂಪಿಟೇಶನ್

ಜರ್ಮನ್ ಮೂಲದ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಎಂ5 ಕಾಂಪಿಟೇಶನ್ ಫೇಸ್‌ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಎಂ5 ಕಾಂಪಿಟೇಶನ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.62 ಕೋಟಿಯಾಗಿದೆ.

ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮಖ ಹತ್ತು ಕಾರುಗಳಿವು!

ಎಂ5 ಕಾರು ನವೀಕರಿಸಿದ ವಿನ್ಯಾಸ, ಸುಧಾರಿತ ಕಾರ್ಯಕ್ಷಮತೆ, ಡೈನಾಮಿಕ್ಸ್ ಮತ್ತು ಇತರ ಅಂಶಗಳನ್ನು ಒಳಗೊಂಡಿದ್ದು, 4.4-ಲೀಟರ್, ಟ್ವಿನ್-ಟರ್ಬೊ ವಿ8 ಎಂಜಿನ್ ಮೂಲಕ 625 ಹೆಚ್‌ಪಿ ಪವರ್ ಮತ್ತು 750 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮಖ ಹತ್ತು ಕಾರುಗಳಿವು!

ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ

ಇಟಲಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ತನ್ನ ಹೊಸ ಹುರಾಕನ್ ಎಸ್‌ಟಿಒ ಸುಪರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ (ಸೂಪರ್ ಟ್ರೋಫಿಯೋ ಓಮೊಲೊಗಾಟಾ) ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.99 ಕೋಟಿಯಾಗಿದೆ.

ಜುಲೈ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮಖ ಹತ್ತು ಕಾರುಗಳಿವು!

5.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರು ಮಾದರಿಯು ಹುರಾಕನ್ ಪರ್ಫಾರ್ಮೆಂಟೆ ಮತ್ತು ಹುರಾಕನ್ ಇವೊ ಮಾದರಿಗಳಂತೆಯೇ ಒಂದೇ ರೀತಿಯ ಎಂಜಿನ್ ಅನ್ನು ಬಳಸುತ್ತದೆ. ಕಡಿಮೆ ಟಾರ್ಕ್ ಅನ್ನು ಸರಿದೂಗಿಸಲು ಹುರಾಕನ್ ಎಸ್‌ಟಿಒ ಹುರಾಕನ್ ಪರ್ಫಾರ್ಮೆಂಟೆಗಿಂತ 43 ಕಿ.ಗ್ರಾಂ ಹಗುರವಾಗಿರುತ್ತದೆ. ಟ್ರ್ಯಾಕ್ ಕಾರ್ಯಕ್ಷಮತೆಗೆ ಮತ್ತಷ್ಟು ಸಹಾಯ ಮಾಡಲು, ಹುರಾಕನ್ ರೋಡೈನಾನಿಕ್ ಅನ್ನು ಮತ್ತಷ್ಟು ತಿರುಚಲಾಗಿದೆ. ಇದು ಕ್ರಮವಾಗಿ ಶೇ.37 ಮತ್ತು ಶೇ.53 ಏರೋಡೈನಾನಿಕ್ ದಕ್ಷತೆ ಮತ್ತು ಡೌನ್‌ಫೋರ್ಸ್‌ನಲ್ಲಿ ಹೆಚ್ಚಾಗುತ್ತದೆ.

Most Read Articles

Kannada
English summary
New cars launched in India in July 2021. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X