ಕೋವಿಡ್ ಅಬ್ಬರದ ನಡುವೆ ಜೂನ್‌ನಲ್ಲಿ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

ಭಾರತೀಯ ಆಟೋಉದ್ಯಮವು ಕೋವಿಡ್ ಪರಿಣಾಮ ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದು, ಹೊಸ ವಾಹನಗಳಿಗೆ ಬೇಡಿಕೆ ಸಂದರ್ಭದಲ್ಲೇ ಲಾಕ್‌ಡೌನ್ ಕ್ರಮವು ವಾಹನ ಮಾರಾಟವನ್ನು ನೆಲಕಚ್ಚುವಂತೆ ಮಾಡಿತು. ಆದರೆ ಪರಿಸ್ಥಿತಿಗೆ ಅನುಗುಣವಾಗಿ ಲಾಕ್‌ಡೌನ್ ನಿಯಮ ಪಾಲನೆಯೊಂದಿಗೆ ಕನಿಷ್ಠ ಪ್ರಮಾಣದ ಬೇಡಿಕೆ ಪಡೆದುಕೊಂಡ ಕಾರು ಕಂಪನಿಗಳು ಇದೀಗ ಹೊಸ ಕಾರು ಮಾದರಿಗಳೊಂದಿಗೆ ಮತ್ತೆ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿವೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಪರಿಸ್ಥಿತಿ ಸಾಕಷ್ಟು ಕುಸಿತ ಕಂಡಿದ್ದರೂ ಸೋಂಕಿನ ಭೀತಿಯಿಂದಾಗಿ ಸ್ವಂತ ವಾಹನ ಬಳಕೆಗೆ ಆದ್ಯತೆ ನೀಡುತ್ತಿರುವುದು ವಾಹನ ಮಾರಾಟದಲ್ಲಿ ಹೆಚ್ಚಳ ಕಂಡುಬರುತ್ತಿದೆ. ಇದೇ ಕಾರಣಕ್ಕೆ ವಿವಿಧ ಕಾರು ಕಂಪನಿಗಳು ಲಾಕ್‌ಡೌನ್ ಸಂದರ್ಭದಲ್ಲಿ ಆರ್ಥಿಕ ಹಿಂಜರಿತ ನಡುವೆಯೂ ಹೊಸ ವಾಹನಗಳ ಬಿಡುಗಡೆಯ ಧೈರ್ಯ ತೋರಿದ್ದು, ಜೂನ್ ತಿಂಗಳು ಸುಮಾರು 11 ಹೊಸ ಕಾರುಗಳು ರಸ್ತೆಗಿಳಿದಿವೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

01. ಹ್ಯುಂಡೈ ಅಲ್ಕಾಜರ್ ಎಸ್‌ಯುವಿ

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಅಲ್ಕಾಜರ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಿದ್ದು, 6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿರುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.30 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.19.99 ಲಕ್ಷ ಬೆಲೆ ಹೊಂದಿದೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

ಪ್ಲ್ಯಾಟಿನಂ, ಪ್ರೆಸ್ಟೀಜ್, ಸಿಗ್ನೆಚೆರ್, ಪ್ಲ್ಯಾಟಿನಂ ಆಪ್ಷನ್, ಪ್ರೆಸ್ಟೀಜ್ ಆಪ್ಷನ್ ಮತ್ತು ಸಿಗ್ನೆಚೆರ್ ಆಪ್ಷನ್ ಎನ್ನುವ ಆರು ವೆರಿಯೆಂಟ್‌ಗಳೊಂದಿಗೆ ಹೊಸ ಅಲ್ಕಾಜರ್ ಕಾರು ಅತ್ಯುತ್ತಮ ಫೀಚರ್ಸ್‌, ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಆಕರ್ಷಕ ಬೆಲೆ ಹೊಂದಿದ್ದು, ಹೈ ಎಂಡ್ ಮಾದರಿಗಳಲ್ಲಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಆರಂಭಿಕ ಮಾದರಿಗಳಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಜೋಡಣೆ ಮಾಡಲಾಗಿದೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

02. ಸ್ಕೋಡಾ ಕುಶಾಕ್

ಸ್ಕೋಡಾ ಇಂಡಿಯಾ ಕಂಪನಿಯು ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೊಸ್‌ಗೆ ಪೈಪೋಟಿಯಾಗಿ ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10.49 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.17.59 ಲಕ್ಷ ಬೆಲೆ ಹೊಂದಿದೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

ಹೊಸ ಕುಶಾಕ್ ಕಾರಿನಲ್ಲಿ ಸ್ಕೋಡಾ ಕಂಪನಿಯು ಆರಂಭಿಕವಾಗಿ 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಪ್ರತಿ ವೆರಿಯೆಂಟ್‌ನಲ್ಲೂ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

03. ಮರ್ಸಿಡಿಸ್-ಮೇಬ್ಯಾಚ್ ಜಿಎಲ್ಎಸ್600

ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಬಹುನೀರಿಕ್ಷಿತ ಮರ್ಸಿಡಿಸ್-ಮೇಬ್ಯಾಚ್ ಜಿಎಲ್ಎಸ್600 ಅಲ್ಟ್ರಾ ಲಗ್ಷುರಿ ಎಸ್‌ಯುವಿ ಬಿಡುಗಡೆ ಮಾಡಿದ್ದು, ಹೊಸ ಕಾರು ದುಬಾರಿ ಬೆಲೆಯೊಂದಿಗೆ ಹಲವಾರು ಆಧುನಿಕ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

ಮರ್ಸಿಡಿಸ್-ಮೇಬ್ಯಾಚ್ ಜಿಎಲ್ಎಸ್600 ಅಲ್ಟ್ರಾ ಲಗ್ಷುರಿ ಎಸ್‌ಯುವಿ ಮಾದರಿಯು 4 ಮ್ಯಾಟಿಕ್ ಎನ್ನುವ ಒಂದೇ ಒಂದು ವೆರಿಯೆಂಟ್ ಹೊಂದಿದ್ದು, ಕಾರಿನ ಬೆಲೆಯನ್ನು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 2.43 ಕೋಟಿಗೆ ನಿಗದಿಪಡಿಸಲಾಗಿದೆ. ಹೊಸ ಕಾರಿನಲ್ಲಿ 4.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಜೋಡಿಸಿದ್ದು, ಇದು 9 ಜಿ-ಟ್ರಾನಿಕ್ ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ 550ಬಿಎಚ್‌ಪಿ ಮತ್ತು 730ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

04. 2021ರ ಬಿಎಂಡಬ್ಲ್ಯು 5 ಸೀರಿಸ್

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ ಜನಪ್ರಿಯ 5 ಸೀರಿಸ್ ಸೆಡಾನ್ ಮಾದರಿಯನ್ನು ಹಲವು ಹೊಸ ಬದಲಾವಣೆಗಳೊಂದಿಗೆ 2021ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 62.90 ಲಕ್ಷ ಬೆಲೆ ಹೊಂದಿದೆ. ತಾಂತ್ರಿಕ ಸೌಲಭ್ಯಗಳು ಮತ್ತು ಎಂಜಿನ್ ಆಯ್ಕೆಗೆ ಅನುಗುಣವಾಗಿ 530ಐ ಎಂ ಸ್ಪೋರ್ಟ್ ಮಾದರಿಯು ರೂ. 62.90 ಲಕ್ಷ ಬೆಲೆ ಹೊಂದಿದ್ದರೆ 520ಡಿ ಮಾದರಿಯು ರೂ. 63.90 ಲಕ್ಷ ಮತ್ತು 530ಡಿ ಎಂ ಸ್ಪೋರ್ಟ್ ಮಾದರಿಯು ರೂ. 71.90 ಲಕ್ಷ ಬೆಲೆ ಹೊಂದಿವೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

5 ಸೀರಿಸ್ ಕಾರು ಮಾದರಿಯಲ್ಲಿ 2.0-ಲೀಟರ್ ಇನ್ ಲೈನ್, ನಾಲ್ಕು-ಸಿಲಿಂಡರ್ ಪೆಟ್ರೋಲ್ ಎಂಜಿನ್, 2.0-ಲೀಟರ್ ಇನ್ ಲೈನ್ ಡೀಸೆಲ್ ಎಂಜಿನ್ ಮತ್ತು 3.0-ಲೀಟರ್ ಆರು ಸಿಲಿಂಡರ್ ಹೊಂದಿರುವ ಡಿಸೇಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

05. ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

ಮರ್ಸಿಡಿಸ್ ಬೆಂಝ್ ತನ್ನ ಜನಪ್ರಿಯ ಎಸ್-ಕ್ಲಾಸ್ ಸೆಡಾನ್ ಮಾದರಿಯನ್ನು ಭಾರತದಲ್ಲಿ ನ್ಯೂ ಜನರೇಷನ್ ಆವೃತ್ತಿಯೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 2.17 ಕೋಟಿ ಬೆಲೆ ಹೊಂದಿದೆ. ಹೊಸ ಕಾರು ಎಸ್ 400ಡಿ ಲಾಂಚ್ ಎಡಿಷನ್ (ರೂ. 2.17 ಕೋಟಿ) ಮತ್ತು ಎಸ್ 450 ಲಾಂಚ್ ಎಡಿಷನ್ (ರೂ. 2.19 ಕೋಟಿ) ಎನ್ನುವ ವೆರಿಯೆಂಟ್‌ ಹೊಂದಿದೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

ಎಸ್ 450 ಪೆಟ್ರೋಲ್ ಮಾದರಿಯು 3.0-ಲೀಟರ್(2,999 ಸಿಸಿ) 6 ಸಿಲಿಂಡರ್ ಎಂಜಿನ್‌ನೊಂದಿಗೆ 362-ಬಿಎಚ್‌ಪಿ, 500-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಎಸ್ 400ಡಿ ಡೀಸೆಲ್ ಮಾದರಿಯು 3.0-ಲೀಟರ್(2,925 ಸಿಸಿ) 6 ಸಿಲಿಂಡರ್ ಎಂಜಿನ್‌ನೊಂದಿಗೆ 362-ಬಿಎಚ್‌ಪಿ, 700-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

06. ನ್ಯೂ ಜನರೇಷನ್ ಸ್ಕೋಡಾ ಆಕ್ಟೀವಿಯಾ

ಸ್ಕೋಡಾ ಇಂಡಿಯಾ ಕಂಪನಿಯು ಆಕ್ಟೀವಿಯಾ ಆವೃತ್ತಿಯ 2021ರ ಮಾದರಿಯನ್ನು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಸ್ಟೈಲ್ ಮತ್ತು ಲೊರಿನ್ ಅಂಡ್ ಕ್ಲೆಮೆಂಟ್ ಎನ್ನುವ ಪ್ರಮುಖ ಎರಡು ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಸ್ಟೈಲ್ ಮಾದರಿಯು ರೂ. 25.99 ಲಕ್ಷ ಮತ್ತು ಲೊರಿನ್ ಅಂಡ್ ಕ್ಲೆಮೆಂಟ್ ಮಾದರಿಯು ರೂ. 28.99 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರು 2.0 ಲೀಟರ್ ಟಿಎಫ್‌ಎಸ್‌ಐ ಪೆಟ್ರೋಲ್ ಎಂಜಿನ್‌ ಆಯ್ಕೆಯೊಂದಿಗೆ ಶಿಫ್ಟ್-ಬೈ-ವೈರ್ ಟೆಕ್ನಾಲಜಿ ಜೋಡಣೆ ಹೊಂದಿದೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

07. ಹ್ಯುಂಡೈ ಕ್ರೆಟಾ ಎಸ್ಎಕ್ಸ್ ಎಕ್ಸಿಕ್ಯೂಟಿವ್

ಹ್ಯುಂಡೈ ಇಂಡಿಯಾ ಕಂಪನಿಯು ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲಿ ಹೊಸ ಆವೃತ್ತಿಯೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಎಸ್ಎಕ್ಸ್ ಎಕ್ಸಿಕ್ಯೂಟಿವ್ ಮಾದರಿಯು ಕ್ರೆಟಾ ಕಾರಿನ ಮಧ್ಯಮ ಕ್ರಮಾಂಕದಲ್ಲಿ ಮಾರಾಟಗೊಳ್ಳಲಿದೆ. ಎಸ್ಎಕ್ಸ್ ಮಾದರಿಗಿಂತಲೂ ಕೆಳಸ್ಥಾನದಲ್ಲಿ ಮಾರಾಟಗೊಳ್ಳಲಿರುವ ಎಸ್ಎಕ್ಸ್ ಎಕ್ಸಿಕ್ಯೂಟಿವ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 13.18 ಲಕ್ಷ ಬೆಲೆ ಹೊಂದಿದ್ದು, ಇದು ಸ್ಟ್ಯಾಂಡರ್ಡ್ ಎಸ್ಎಕ್ಸ್ ಮಾದರಿಗಿಂತಲೂ ರೂ.78 ಸಾವಿರದಷ್ಟು ಕಡಿಮೆ ಬೆಲೆ ಹೊಂದಿದೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

ಮಧ್ಯಮ ಕ್ರಮಾಂಕದಲ್ಲಿ ಮಾರಾಟಗೊಳ್ಳಲಿರುವ ಎಸ್ಎಕ್ಸ್ ವೆರಿಯೆಂಟ್‌ನ ಬೇಡಿಕೆ ಹೆಚ್ಚಿಸಲು ಕೆಲವು ಬದಲಾವಣೆಗಳೊಂದಿಗೆ ಎಸ್ಎಕ್ಸ್ ಎಕ್ಸಿಕ್ಯೂಟಿವ್ ಬಿಡುಗಡೆ ಮಾಡಲಾಗಿದ್ದು, ಹೊಸ ಆವೃತ್ತಿಯು ಪೆಟ್ರೋಲ್(ರೂ. 13.18 ಲಕ್ಷ) ಮತ್ತು ಡೀಸೆಲ್( ರೂ. 14.18 ಲಕ್ಷ) ಆವೃತ್ತಿಗಳಲ್ಲಿ ಖರೀದಿ ಮಾಡಬಹುದಾಗಿದೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

08. 2021ರ ರೇಂಜ್ ರೋವರ್ ವೆಲಾರ್

ಜೆಎಲ್ಆರ್ ಕಂಪನಿಯು ತನ್ನ ಜನಪ್ರಿಯ ಐಷಾರಾಮಿ ಎಸ್‌ಯುವಿ ಮಾದರಿಯಾದ ವೆಲಾರ್ 2021ರ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 79.87 ಲಕ್ಷ ಬೆಲೆ ಹೊಂದಿದೆ. ಭಾರತದಲ್ಲಿ 2017ರಿಂದ ಮಾರಾಟಗೊಳ್ಳುತ್ತಿರುವ ಹೊಸ ಕಾರು ಈಗಾಗಲೇ ಹಲವಾರು ಬಾರಿ ಉನ್ನತೀಕರಣಗೊಂಡಿದ್ದು, 2019ರಿಂದ ಭಾರತದಲ್ಲೇ ನಿರ್ಮಾಣಗೊಳ್ಳುತ್ತಿದೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

ಅತ್ಯಾಧುನಿಕ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನಗಳ ಪರಿಪೂರ್ಣ ಸಮತೋಲನವನ್ನು ನೀಡುವ ಹೊಸ ಕಾರಿನಲ್ಲಿ ನಾಲ್ಕು ಸಿಲಿಂಡರ್ ಹೊಂದಿರುವ ಇಂಜಿನಿಯಮ್ 2.0 ಲೀಟರ್ ಪೆಟ್ರೋಲ್ ಮತ್ತು 2.0 ಲೀಟರ್ ಡೀಸೆಲ್ ಪವರ್ ಟ್ರೈನ್‍ ಆಯ್ಕೆಗಳು ಲಭ್ಯವಿವೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

09. 2021ರ ಜಾಗ್ವಾರ್ ಎಫ್-ಪೇಸ್ ಎಸ್‌ಯುವಿ

ಜಾಗ್ವಾರ್ ಎಫ್-ಪೇಸ್ 2021ರ ಆವೃತ್ತಿಯು ಭಾರತದಲ್ಲಿ ಬಿಡುಗಡೆಯಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.69.99 ಲಕ್ಷ ಬೆಲೆ ಹೊಂದಿದೆ. 2021ರ ಎಫ್‌-ಪೇಸ್ ಮಾದರಿಯಲ್ಲಿ ಕಂಪನಿಯು ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಗಳಲ್ಲೂ ಆರ್ ಡೈನಾಮಿಕ್ ಆವೃತ್ತಿಯನ್ನು ಪರಿಚಯಿಸಿದ್ದು, ಹೊಸ ಆವೃತ್ತಿಯೊಂದಿಗೆ ಪರ್ಫಾಮೆನ್ಸ್ ಮೇಲೆ ಹೆಚ್ಚಿನ ಗಮನಹರಿಸಲಾಗಿದೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

2021ರ ಎಫ್‌-ಪೇಸ್ ಕಾರು 2.0-ಲೀಟರ್ ಪೆಟ್ರೋಲ್ ಟರ್ಬೊ ಮತ್ತು 2.0-ಲೀಟರ್ ಟರ್ಬೊಚಾಜ್ಡ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಪೆಟ್ರೋಲ್ ಕಾರು 201 ಬಿಎಚ್‌ಪಿ, 430 ಎನ್ಎಂ ಟಾರ್ಕ್ ಮತ್ತು ಡೀಸೆಲ್ ಕಾರು 246 ಬಿಎಚ್‌ಪಿ, 365 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

10. ರೇಂಜ್ ರೋವರ್ ಸ್ಪೋರ್ಟ್ ಎಸ್‌ವಿಆರ್

ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಕಂಪನಿಯು ತನ್ನ ಹೊಸ ರೇಂಜ್ ರೋವರ್ ಸ್ಪೋರ್ಟ್ ಎಸ್‌ವಿಆರ್ ಎಸ್‍ಯುವಿಯನ್ನು ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ.2.19 ಕೋಟಿ ಬೆಲೆ ಹೊಂದಿದೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

ಹೊಸ ಕಾರಿನಲ್ಲಿ 5.0-ಲೀಟರ್(4,998 ಸಿಸಿ) ಸೂಪರ್ ಚಾರ್ಜ್ಡ್ ವಿ8 ಎಂಜಿನ್ ಅನ್ನು ಅಳವಡಿಸಲಾಗಿದ್ದು, ರೇಂಜ್ ರೋವರ್ ಇತರೆ ಮಾದರಿಗೆ ಹೋಲಿಸಿದರೆ ಎಸ್‌ವಿಆರ್ ವೆರಿಯೆಂಟ್‌ಗಳು ಹೆಚ್ಚಿನ ಮಟ್ಟದ ಎಂಜಿನ್ ಆಯ್ಕೆಯೊಂದಿಗೆ ಸ್ಪೋರ್ಟಿ ಲುಕ್ ಅನ್ನು ಹೊಂದಿವೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

11. 2021ರ ಮಿನಿ ಹ್ಯಾಚ್‌ಬ್ಯಾಕ್, ಕನ್ವರ್ಟಿಬಲ್ ಮತ್ತು ಜಾನ್ ಕೂಪರ್ ವರ್ಕ್ಸ್

ಐಷಾರಾಮಿ ಕಾರು ಉತ್ಪಾದನಾ ಕಂಪನಿ ಮಿನಿ ತನ್ನ ಜನಪ್ರಿಯ ಕಾರು ಮಾದರಿಗಳಾದ ತ್ರಿ ಡೋರ್ ಹ್ಯಾಚ್‌ಬ್ಯಾಕ್, ಕನ್ವರ್ಟಿಬಲ್ ಮತ್ತು ಜಾನ್ ಕೂಪರ್ ವರ್ಕ್ಸ್(ಜೆಸಿಡಬ್ಲ್ಯು) ಆವೃತ್ತಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಕೋವಿಡ್ 2ನೇ ಅಲೆ ಲಾಕ್‌ಡೌನ್ ಸಂದರ್ಭದಲ್ಲೇ ಬಿಡುಗಡೆಗೊಂಡ ಟಾಪ್ 10 ಕಾರುಗಳಿವು!

ತ್ರಿ ಡೋರ್ ಹ್ಯಾಚ್‌ಬ್ಯಾಕ್, ಕನ್ವರ್ಟಿಬಲ್ ಮತ್ತು ಜಾನ್ ಕೂಪರ್ ವರ್ಕ್ಸ್(ಜೆಸಿಡಬ್ಲ್ಯು) ಆವೃತ್ತಿಗಳ ಬಿಡುಗಡೆಯೊಂದಿಗೆ ಹೊಸ ಕಾರುಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 38 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 45.50 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರುಗಳು 2.0-ಲೀಟರ್ ಟ್ವಿನ್ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದೆ.

Most Read Articles

Kannada
English summary
New car launched in India in June 2021. Read in Kannada.
Story first published: Thursday, July 1, 2021, 0:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X