ಎಕ್ಸ್‌ಯುವಿ700 ಎಸ್‌ಯುವಿ ಕಾರಿನ ಮತ್ತಷ್ಟು ಹೊಸ ಮಾಹಿತಿ ಹಂಚಿಕೊಂಡ ಮಹೀಂದ್ರಾ

ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ ಸರಣಿ ಕಾರು ಮಾರಾಟದಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಕಂಪನಿಯು ಹೊಚ್ಚ ಹೊಸ ಎಕ್ಸ್‌ಯುವಿ700 ಮಾದರಿಯನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಎಕ್ಸ್‌ಯುವಿ700 ಎಸ್‌ಯುವಿ ಕಾರಿನ ಮತ್ತಷ್ಟು ಹೊಸ ಮಾಹಿತಿ ಹಂಚಿಕೊಂಡ ಮಹೀಂದ್ರಾ

ಸ್ಯಾಂಗ್‌ಯಾಂಗ್ ಕಂಪನಿಯ ಜೊತೆಗಿನ ಮಹೀಂದ್ರಾ ಸಹಭಾಗಿತ್ವ ಯೋಜನೆ ಸ್ಥಗಿತದ ನಂತರ ಅಲ್ಟುರಾಸ್ ಜಿ4 ಮಾದರಿಯ ಉತ್ಪಾದನೆ ಸ್ಥಗಿತಗೊಳಿಸಲಾಗಿದ್ದು, ಅಲ್ಟುರಾಸ್ ಜಿ4 ಸ್ಥಾನಕ್ಕಾಗಿ ಮಹೀಂದ್ರಾ ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಮತ್ತೊಂದು ಫುಲ್ ಸೈಜ್ ಎಸ್‌ಯವಿ ಮಾದರಿಯನ್ನು ಅಭಿವೃದ್ದಿಗೊಳಿಸುತ್ತಿದೆ. ಹೊಸ ಎಸ್‌ಯುವಿ ಕಾರು ಮಾದರಿಯು ಅಲ್ಟುರಾಸ್ ಜಿ4 ಮಾದರಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳಲನ್ನು ಪಡೆದುಕೊಳ್ಳಲಿದ್ದು, 7 ಸೀಟರ್ ಸೌಲಭ್ಯದೊಂದಿಗೆ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಎಕ್ಸ್‌ಯುವಿ700 ಎಸ್‌ಯುವಿ ಕಾರಿನ ಮತ್ತಷ್ಟು ಹೊಸ ಮಾಹಿತಿ ಹಂಚಿಕೊಂಡ ಮಹೀಂದ್ರಾ

ಮಹೀಂದ್ರಾ ಹೊಸ ಎಕ್ಸ್‌ಯುವಿ700 ಮಾದರಿಯ ಉತ್ಪಾದನಾ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಿರುವ ಮಹೀಂದ್ರಾ ಕಂಪನಿಯು ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿದ್ದು, 2022ರ ಮಧ್ಯಂತರದಲ್ಲಿ ಹೊಸ ಕಾರು ರಸ್ತೆಗಿಳಿಯಲಿದೆ.

ಎಕ್ಸ್‌ಯುವಿ700 ಎಸ್‌ಯುವಿ ಕಾರಿನ ಮತ್ತಷ್ಟು ಹೊಸ ಮಾಹಿತಿ ಹಂಚಿಕೊಂಡ ಮಹೀಂದ್ರಾ

ಮಹೀಂದ್ರಾ ಕಂಪನಿಯು ಹೊಸ ಕಾರನ್ನು ಕಂಪನಿಯ ವಿನೂತನ ಡಬ್ಯು601 ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಹೊಸ ಕಾರನ್ನು ಅಭಿವೃದ್ದಿಪಡಿಸುತ್ತಿದ್ದು, ಪ್ರತಿಸ್ಪರ್ಧಿ ಕಾರುಗಳಿಂತಲೂ ಅತ್ಯುತ್ತಮ ಎಂಜಿನ್ ಆಯ್ಕೆ ಮತ್ತು ಟೆಕ್ನಾಲಜಿ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.

ಎಕ್ಸ್‌ಯುವಿ700 ಎಸ್‌ಯುವಿ ಕಾರಿನ ಮತ್ತಷ್ಟು ಹೊಸ ಮಾಹಿತಿ ಹಂಚಿಕೊಂಡ ಮಹೀಂದ್ರಾ

ಹೊಸ ಕಾರಿನಲ್ಲಿ ಮಹೀಂದ್ರಾ ಕಂಪನಿಯು ಆಟೊನಮಸ್ ಲೆವಲ್ 1 ಟೆಕ್ನಾಲಜಿ ಸೌಲಭ್ಯಗಳನ್ನು ನೀಡಬಹುದು ಎನ್ನಲಾಗಿದ್ದು, ಆಟೊನಮಸ್ ಲೆವಲ್ 1ರಲ್ಲಿ ಆಟೋಮ್ಯಾಟಿಕ್ ಪಾರ್ಕಿಂಗ್ ಅಸಿಸ್ಟ್, ಲೈನ್ ಚೆಂಜ್ ಅಸಿಸ್ಟ್ ಮತ್ತು ಅಂತರಾಷ್ಟ್ರೀಯ ಗುಣಮಟ್ಟದ ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳನ್ನು ಒಳಗೊಳ್ಳುವ ಮೂಲಕ ಹೊಸ ಕಾರು ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಡುವ ಸುಳಿವು ನೀಡಿದೆ.

ಎಕ್ಸ್‌ಯುವಿ700 ಎಸ್‌ಯುವಿ ಕಾರಿನ ಮತ್ತಷ್ಟು ಹೊಸ ಮಾಹಿತಿ ಹಂಚಿಕೊಂಡ ಮಹೀಂದ್ರಾ

ಎಕ್ಸ್‌ಯುವಿ700 ಮಾದರಿಯಲ್ಲಿ ಮಹೀಂದ್ರಾ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲಿ ಎಂಜಿನ್ ಆಯ್ಕೆ ನೀಡುವುದಾಗಿ ಮಾಹಿತಿ ನೀಡಿದ್ದು, ಹೊಸ ಕಾರಿಗಾಗಿ ಸಂಪೂರ್ಣವಾಗಿ ಹೊಸ ಎಂಜಿನ್ ಆವೃತ್ತಿಗಳನ್ನು ನಿರ್ಮಾಣ ಮಾಡಲಿದೆ.

ಎಕ್ಸ್‌ಯುವಿ700 ಎಸ್‌ಯುವಿ ಕಾರಿನ ಮತ್ತಷ್ಟು ಹೊಸ ಮಾಹಿತಿ ಹಂಚಿಕೊಂಡ ಮಹೀಂದ್ರಾ

ಹೊಸ ಕಾರು ಸದ್ಯ ಚೆನ್ನೈನಲ್ಲಿ ಸಂಶೋಧನಾ ಮತ್ತು ಅಭಿವೃದ್ದಿ ಕೇಂದ್ರದಲ್ಲಿ ಅಂತಿಮ ರೂಪ ಪಡೆದುಕೊಳ್ಳುತ್ತಿದ್ದು, ಪುಣೆಯಲ್ಲಿರುವ ಚಾಕನ್ ಕಾರು ಉತ್ಪಾದನಾ ಘಟಕದಲ್ಲಿ ಉತ್ಪಾದನೆಗೊಳ್ಳಲಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯ ಜೊತೆಗೆ ಹೊಸ ಕಾರಿನ ಹೈ ಎಂಡ್ ಮಾದರಿಗಳಲ್ಲಿ 4x4 ಡ್ರೈವ್ ಸಿಸ್ಟಂ ಜೋಡಣೆ ಹೊಂದಿಲಿದ್ದು, ಐಷಾರಾಮಿ ಸೌಲಭ್ಯಗಳೊಂದಿಗೆ ಪರ್ಫಾಮೆನ್ಸ್ ಮಾದರಿಯಾಗಿಯೂ ಗುರುತಿಸಿಕೊಳ್ಳಲಿದೆ.

ಎಕ್ಸ್‌ಯುವಿ700 ಎಸ್‌ಯುವಿ ಕಾರಿನ ಮತ್ತಷ್ಟು ಹೊಸ ಮಾಹಿತಿ ಹಂಚಿಕೊಂಡ ಮಹೀಂದ್ರಾ

ಈ ಮೂಲಕ ಅಲ್ಟುರಾಸ್ ಜಿ4 ಸ್ಥಾನಕ್ಕೆ ಹೊಸ ಕಾರಿನೊಂದಿಗೆ ಎಂಟ್ರಿ ನೀಡಲು ಸಿದ್ದವಾಗಿರುವ ಮಹೀಂದ್ರಾ ಕಂಪನಿಯು ಫಾರ್ಚೂನರ್, ಎಂಡೀವರ್ ಮತ್ತು ಗ್ಲೊಸ್ಟರ್ ಕಾರುಗಳಿಗೆ ಪೈಪೋಟಿ ನೀಡುವ ತವಕದಲ್ಲಿ ಹೊಸ ಕಾರಿನ ಎಂಜಿನ್ ಆಯ್ಕೆ ಕೂಡಾ ಗಮನಸೆಳೆಯಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಎಕ್ಸ್‌ಯುವಿ700 ಎಸ್‌ಯುವಿ ಕಾರಿನ ಮತ್ತಷ್ಟು ಹೊಸ ಮಾಹಿತಿ ಹಂಚಿಕೊಂಡ ಮಹೀಂದ್ರಾ

ಎಕ್ಸ್‌ಯವಿ700 ಮಾದರಿಯು ಸಂಪೂರ್ಣವಾಗಿ ಹೊಸ ಮಾದರಿಯಾಗಿರುವುದರಿಂದ ಹೊಸ ಕಾರಿನ ತಾಂತ್ರಿಕ ಅಂಶಗಳ ಜೋಡಣೆ ಕುರಿತಾಗಿ ಅಧಿಕೃತ ಮಾಹಿತಿ ಇಲ್ಲವಾದರೂ ಪ್ರತಿಸ್ಪರ್ಧಿ ಮಾದರಿಗಳಿಂತ ಉತ್ತಮ ಬೆಲೆ ಆಯ್ಕೆ ಹೊಂದಿರಲಿದ್ದು, 2.0 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 2.0 ಲೀಟರ್ ಡೀಸೆಲ್ ಎಂಜಿನ್ ಹೊಂದುವ ನಿರೀಕ್ಷೆಯಿದೆ.

Most Read Articles

Kannada
English summary
Here are some important details of all new Mahindra XUV700 SUV.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X