ಬಿಡುಗಡೆ ಸನಿಹದಲ್ಲಿ ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್

ಅಮೆರಿಕಾ ಮೂಲದ ವಾಹನ ತಯಾರಕ ಕಂಪನಿಯಾದ ಫೋರ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಇತ್ತೀಚೆಗೆ ಭಾರತದಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿತ್ತು.

ಬಿಡುಗಡೆ ಸನಿಹದಲ್ಲಿ ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್

ವರದಿಗಳ ಪ್ರಕಾರ, ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಮುಂದಿನ ವಾರ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇದು ಟೈಟಾನಿಯಂ ಮತ್ತು ಸ್ಪೋರ್ಟ್ ಟ್ರಿಮ್‌ಗಳ ಕೆಳಗಿನ ಸ್ಥಾನದಲ್ಲಿರುತ್ತದೆ. ಇನ್ನು ಈ ಹೊಸ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸಲಾಗುತ್ತದೆ.

ಬಿಡುಗಡೆ ಸನಿಹದಲ್ಲಿ ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್

2021ರ ಫೋರ್ಡ್ ಇಕೋಸ್ಪೋರ್ಟ್ ಎಸ್‌ಯುವಿಯು 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. ಇದರಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ 123 ಬಿಹೆಚ್‍ಪಿ ಪವರ್ ಮತ್ತು 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ 100 ಬಿಹೆಚ್‍ಪಿ ಪವರ್ ಮತ್ತು 215 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಬಿಡುಗಡೆ ಸನಿಹದಲ್ಲಿ ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್

ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ. ಆದರೆ ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್ ನಲ್ಲಿ ಹೊಸ ಎಂಜಿನ್ ಆಯ್ಕೆಯ ಬಗ್ಗೆ ಮಾಹಿತಿಗಳು ಬಹಿರಂಗವಾಗಿಲ್ಲ.

ಬಿಡುಗಡೆ ಸನಿಹದಲ್ಲಿ ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್

ಹೊಸ ಫೋರ್ಡ್ ಇಕೊಸ್ಪೋರ್ಟ್ ಎಸ್ಇ ಎಸ್‌ಯುವಿಯು ಗ್ಲೋಬಲ್-ಸ್ಪೆಕ್ ಮಾದರಿಯಿಂದ ಸ್ಫೂರ್ತಿ ಪಡೆದ ಹಿಂದಿನ ಸ್ಟೈಲಿಂಗ್ ಆಗಿರುತ್ತದೆ. ಹೊಸ ವೆರಿಯೆಂಟ್ ಟೈಲ್‌ಗೇಟ್ ಮೌಂಟಡ್ ಸ್ಪೇರ್ ಟೈರ್ ಅನ್ನು ಹೊಂದಿರುವುದಿಲ್ಲ.

MOST READ: ಜನವರಿ ತಿಂಗಳಿನಲ್ಲಿ ಮಾರುತಿ ಎಕ್ಸ್‌ಎಲ್6 ಕಾರು ಮಾರಾಟದಲ್ಲಿ ಶೇ.305ರಷ್ಟು ಹೆಚ್ಚಳ

ಬಿಡುಗಡೆ ಸನಿಹದಲ್ಲಿ ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್

ಹೊಸದಾಗಿ ವಿನ್ಯಾಸಗೊಳಿಸಲಾದ ಹಿಂಭಾಗದ ಸ್ಕಿಡ್ ಪ್ಲೇಟ್ ಮತ್ತು ದಪ್ಪ ಕ್ರೋಮ್‌ ನೊಂದಿಗೆ ಟೈಲ್‌ಗೇಟ್ ಅದರ ಪೋರ್ಟ್ಫೋಲಿಯೊಗೆ ಮತ್ತಷ್ಟು ವ್ಯತ್ಯಾಸವನ್ನು ಸೂಚಿಸುತ್ತದೆ. ಹೊಸ ಮಾದರಿಯು ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ಪಂಕ್ಚರ್ ರಿಪೇರಿ ಕಿಟ್‌ನೊಂದಿಗೆ ಬರಬಹುದು.

ಬಿಡುಗಡೆ ಸನಿಹದಲ್ಲಿ ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್

ಫೋರ್ಡ್ ಮೋಟಾರ್ ಕಂಪನಿ ಮತ್ತು ಮಹೀಂದ್ರಾ ಇತ್ತೀಚೆಗೆ ತಮ್ಮ ಜಂಟಿ ಉದ್ಯಮವನ್ನು ರದ್ದುಗೊಳಿಸಿದ್ದು, ಇದನ್ನು ಅಕ್ಟೋಬರ್ 2019 ರಲ್ಲಿ ಘೋಷಿಸಲಾಯಿತು. ಈ ಸಹಭಾಗಿತ್ವದಲ್ಲಿ ಹಲವಾರು ಕಾರು ತಯಾರಕರು ಹೊಸ ಫೋರ್ಡ್ ಸಿ-ಎಸ್‌ಯುವಿ ಮತ್ತು ಇಕೋಸ್ಪೋರ್ಟ್ ಟರ್ಬೊ ಪೆಟ್ರೋಲ್ ಅನ್ನು ಒಳಗೊಂಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬಿಡುಗಡೆ ಸನಿಹದಲ್ಲಿ ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್

ಈಗ ಫೋರ್ಡ್ ಈ ಜಂಟಿ ಉದ್ಯಮದಡಿಯಲ್ಲಿ ಯೋಜಿಸಲಾದ ಎಲ್ಲಾ ಯೋಜನೆಗಳನ್ನು ನಿಲ್ಲಿಸಿದೆ ಮತ್ತು ಭಾರತೀಯ ಮಾರುಕಟ್ಟೆಗೆ ಹೊಸ ತಂತ್ರವನ್ನು ರೂಪಿಸಿದೆ. ಫೋರ್ಡ್ ಕಂಪನಿಯು ನ್ಯೂ ಜನರೇಷನ್ ಎಂಡೀವರ್ ಎಸ್‍ಯುವಿಯನ್ನು ಅಭಿವೃದ್ಧಿಪಡಿಸುವುದರಲ್ಲಿ ನಿರತರಾಗಿದ್ದಾರೆ.

ಬಿಡುಗಡೆ ಸನಿಹದಲ್ಲಿ ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್

2021ರ ಫೋರ್ಡ್ ಇಕೋಸ್ಪೋರ್ಟ್ ಎಸ್‌ಯುವಿಯು ಐದು ರೂಪಾಂತರಗಳಲ್ಲಿ ಲಭ್ಯವಿದೆ. ಇದು ಆಂಬಿಡೆಂಟ್, ಟ್ರೆಂಡ್, ಟೈಟಾನಿಯಂ, ಟೈಟಾನಿಯಂ ಪ್ಲಸ್ ಮತ್ತು ಸ್ಪೋರ್ಟ್ಸ್ ಆಗಿದೆ. ಟಿಟಾನಿಯಂ ಪ್ಲಸ್ ರೂಪಾಂತರವನ್ನು ಹೊರತುಪಡಿಸಿ ಉಳಿದವೆಲ್ಲಾ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

ಬಿಡುಗಡೆ ಸನಿಹದಲ್ಲಿ ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ವೆರಿಯೆಂಟ್

2021ರ ಫೋರ್ಡ್ ಇಕೋಸ್ಪೋರ್ಟ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300, ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಕಾಂಪ್ಯಾಕ್ಟ್‍ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಫೋರ್ಡ್ ford
English summary
Ford EcoSport SE Variant Launch Next Week. Read In Kannada.
Story first published: Monday, March 1, 2021, 11:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X