ಸನ್‌ರೂಫ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ 2022ರ ಮಹೀಂದ್ರಾ ಸ್ಕಾರ್ಪಿಯೋ

ಮಹೀಂದ್ರಾ ಕಂಪನಿಯು(Mahindra) ತನ್ನ ನ್ಯೂ ಜನರೇಷನ್ ಕಾರು ಮಾದರಿಗಳಾದ ಥಾರ್ ಮತ್ತು ಎಕ್ಸ್‌ಯುವಿ700 ಬಿಡುಗಡೆಯ ನಂತರ ಸ್ಕಾರ್ಪಿಯೋ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, ಹೊಸ ಕಾರು ಮಾದರಿಯು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ.

ಸನ್‌ರೂಫ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ 2022ರ ಮಹೀಂದ್ರಾ ಸ್ಕಾರ್ಪಿಯೋ

ನ್ಯೂ ಜನರೇಷನ್ ಸ್ಕಾರ್ಪಿಯೋ ಎಸ್‌ಯುವಿ ಮಾದರಿಯ ಬಿಡುಗಡೆಗಾಗಿ ಮಹೀಂದ್ರಾ ಕಂಪನಿಯು ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದು, ಹೊಸ ತಲೆಮಾರಿನ ಆವೃತ್ತಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಮಾದರಿಗಿಂತಲೂ ಹಲವು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಗೆ ಸಿದ್ದವಾಗುತ್ತಿದೆ.

ಸನ್‌ರೂಫ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ 2022ರ ಮಹೀಂದ್ರಾ ಸ್ಕಾರ್ಪಿಯೋ

ಸ್ಕಾರ್ಪಿಯೋ ಹೊಸ ತಲೆಮಾರಿನ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿರುವ ಮಹೀಂದ್ರಾ ಹೊಸ ಬದಲಾವಣೆಯೊಂದಿಗೆ ಎಸ್‌‌ಯುವಿ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿರುವ ಕಂಪನಿಯು ಈ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಸನ್‌ರೂಫ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ 2022ರ ಮಹೀಂದ್ರಾ ಸ್ಕಾರ್ಪಿಯೋ

ಹೊಸ ಸ್ಕಾರ್ಪಿಯೋ ಕಾರು ಮಾದರಿಯ ಮಾರಾಜೋ ಎಂಪಿವಿ ಹೊಸ ಆವೃತ್ತಿಯಿಂದಲೂ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಎರವಲು ಪಡೆದುಕೊಂಡಿದ್ದು, ಹೊಸ ಫೀಚರ್ಸ್‌ಗಳಿಂದಾಗಿ ಸ್ಕಾರ್ಪಿಯೋ ಕಾರು ಮತ್ತಷ್ಟು ಬಲಿಷ್ಠ ವಿನ್ಯಾಸದೊಂದಿಗೆ ವಿಸ್ತರಿತ ವೀಲ್ಹ್ ಬೆಸ್ ಮೂಲಕ ಅರಾಮದಾಯಕ ಕ್ಯಾಬಿನ್ ಸ್ಪೆಸ್ ಹೊಂದಿದೆ.

ಸನ್‌ರೂಫ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ 2022ರ ಮಹೀಂದ್ರಾ ಸ್ಕಾರ್ಪಿಯೋ

ಹೊಸ ಕಾರಿನಲ್ಲಿ ಆಕರ್ಷಕವಾದ ಪ್ರೀಮಿಯಂ ಫೀಚರ್ಸ್ ಜೊತೆಗೆ ಹೆಚ್ಚಿನ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದ್ದು, ಆರಾಮದಾಯಕವಾದ ಆಸನ ಸೌಲಭ್ಯದೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್ ಪ್ಲೇ ಸರ್ಪೊಟ್ ಮಾಡುವ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ವಿವಿಧ ಡ್ರೈವ್ ಮೋಡ್ ಕಂಟ್ರೋಲ್ ಸೇರಿದಂತೆ ಹಲವು ಹೊಸ ಸೌಲಭ್ಯಗಳಿವೆ.

ಸನ್‌ರೂಫ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ 2022ರ ಮಹೀಂದ್ರಾ ಸ್ಕಾರ್ಪಿಯೋ

ಹಾಗೆಯೇ ಹೊಸ ಕಾರಿನಲ್ಲಿ ಈ ಬಾರಿ ಮಲ್ಟಿ ಏರ್‌ಬ್ಯಾಗ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಯ್ದ ವೆರಿಯೆಂಟ್‌ಗಳಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಕ್ರೂಸ್ ಕಂಟ್ರೋಲ್, ಸನ್‌ರೂಫ್, ಪುಶ್ ಬಟನ್ ಆನ್/ಆಫ್, ಕೀ ಲೆಸ್ ಎಂಟ್ರಿ, ರೂಫ್ ರೈಲ್ಸ್, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್, ಟರ್ನ್ ಇಂಡಿಕೇಟಕ್ ಲೈಟ್, ಸಿಲ್ವರ್ ಸ್ಕೀಡ್ ಪ್ಲೇಟ್ ಸೌಲಭ್ಯಗಳಿರಲಿವೆ.

ಸನ್‌ರೂಫ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ 2022ರ ಮಹೀಂದ್ರಾ ಸ್ಕಾರ್ಪಿಯೋ

ಹಾಗೆಯ ಹೊಸ ವಿನ್ಯಾಸದ 17 ಇಂಚಿನ ಅಲಾಯ್ ವೀಲ್ಹ್‌ಗಳು, ಹೊಸ ವಿನ್ಯಾಸದ ಫ್ರಂಟ್ ಅಂಡ್ ರಿಯರ್ ಬಂಪರ್ ಮತ್ತು ವಿಸ್ತರಿತ ವೀಲ್ಹ್‌ಬೆಸ್‌ನಿಂದಾಗಿ ಮೂರನೇ ಸಾಲಿನ ಪ್ರಯಾಣಿಕರಿಗೆ ಹೆಚ್ಚಿನ ಮಟ್ಟದ ಸ್ಥಳಾವಕಾಶ ನೀಡಲಿದೆ.

ಸನ್‌ರೂಫ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ 2022ರ ಮಹೀಂದ್ರಾ ಸ್ಕಾರ್ಪಿಯೋ

ಇದಲ್ಲದೆ ಹೊಸ ಕಾರಿನಲ್ಲಿ ರಿಯರ್ ಎಸಿ ವೆಂಟ್ಸ್, ಲೆದರ್ ಸೀಟುಗಳು, 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್ ಸೇರಿದಂತೆ ಹೊಸ ಕಾರಿನಲ್ಲಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ.

ಸನ್‌ರೂಫ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ 2022ರ ಮಹೀಂದ್ರಾ ಸ್ಕಾರ್ಪಿಯೋ

ಸದ್ಯ ಮಾರುಕಟ್ಟೆಯಲ್ಲಿರುವ ಸ್ಕಾರ್ಪಿಯೋ ಎಸ್‌ಯುವಿ ಕಾರು ಮಾದರಿಯು ಪ್ರಮುಖ ಐದು ವೆರಿಯೆಂಟ್‌ಗಳೊಂದಿಗೆ 2.2-ಲೀಟರ್ ಡೀಸೆಲ್ ಎಂಜಿನ್‌ ಆಯ್ಕೆಯೊಂದಿಗೆ ಮಾರಾಟಕ್ಕೆ ಲಭ್ಯವಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.81 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.66 ಲಕ್ಷ ಬೆಲೆ ಹೊಂದಿದೆ.

ಸನ್‌ರೂಫ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ 2022ರ ಮಹೀಂದ್ರಾ ಸ್ಕಾರ್ಪಿಯೋ

ಹೊಸ ತಲೆಮಾರಿನ ಆವೃತ್ತಿಯು ಪ್ರಸ್ತುತ ಮಾದರಿಗಿಂತಲೂ ರೂ.1 ಲಕ್ಷದಿಂದ 1.50 ಲಕ್ಷದ ತನಕ ಹೆಚ್ಚುವರಿ ಬೆಲೆ ಪಡೆದುಕೊಳ್ಳಬಹುದಾಗಿದ್ದು, ಹೊಸ ಕಾರಿನಲ್ಲಿ ಹೊಸ ವಿನ್ಯಾಸ, ವಿಸ್ತರಿತ ಕ್ಯಾಬಿನ್ ಸ್ಥಳಾವಕಾಶ, ವಿವಿಧ ಎಂಜಿನ್ ಆಯ್ಕೆಯು ಸ್ಕಾರ್ಪಿಯೋ ಕಾರು ಬೇಡಿಕೆ ಹೆಚ್ಚಿಸಲಿದೆ.

ಸನ್‌ರೂಫ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ 2022ರ ಮಹೀಂದ್ರಾ ಸ್ಕಾರ್ಪಿಯೋ

ಮಹೀಂದ್ರಾ ಕಂಪನಿಯ ಯೋಜನೆಯ ಪ್ರಕಾರ ಕಳೆದ ನವೆಂಬರ್‌ನಲ್ಲಿಯೇ ಬಿಡುಗಡೆಯಾಗಬೇಕಿದ್ದ ಸ್ಕಾರ್ಪಿಯೋ ಹೊಸ ಮಾದರಿಯು ಸೆಮಿಕಂಡಕ್ಟರ್ ಕೊರತೆಯ ಪರಿಣಾಮ ಬಿಡುಗಡೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿದೆ.

ಸನ್‌ರೂಫ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ 2022ರ ಮಹೀಂದ್ರಾ ಸ್ಕಾರ್ಪಿಯೋ

ಹೊಸ ತಂತ್ರಜ್ಞಾನ ಪ್ರೇರಿತ ವಾಹನಗಳ ಉತ್ಪಾದನೆಗೆ ಅವಶ್ಯವಾಗಿರುವ ಎಲೆಕ್ಟ್ರಾನಿಕ್ ಚಿಪ್(ಸೆಮಿಕಂಡಕ್ಟರ್) ಕೊರತೆಯು ಜಾಗತಿಕ ಆಟೋ ಉದ್ಯಮದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದೆ. ಎಲೆಕ್ಟ್ರಾನಿಕ್ ಚಿಪ್ ಕೊರತೆಯಿಂದಾಗಿ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳಿಗೂ ಬಿಸಿ ತಟ್ಟಿದ್ದು, ಪ್ರಮುಖ ವಾಹನಗಳ ಉತ್ಪಾದನಾ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿರುವುದು ಆಟೋ ಉತ್ಪಾದನಾ ಕಂಪನಿಗಳ ಆದಾಯಕ್ಕೆ ಹೊಡೆತ ನೀಡುತ್ತದೆ.

ಸನ್‌ರೂಫ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ 2022ರ ಮಹೀಂದ್ರಾ ಸ್ಕಾರ್ಪಿಯೋ

ಚೀನಿ ಮಾರುಕಟ್ಟೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದುಗೊಳ್ಳುತ್ತಿದ್ದ ಎಲೆಕ್ಟ್ರಾನಿಕ್ ಚಿಪ್ ಪ್ರಮಾಣವನ್ನು ಕಡಿತಗೊಳಿಸುತ್ತಿರುವುದರಿಂದ ಇತರೆ ದೇಶಗಳಲ್ಲಿನ ಉತ್ಪಾದನಾ ಲಭ್ಯತೆ ಆಧರಿಸಿ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆಯೂ ಹೆಚ್ಚಳವಾಗುತ್ತಿದ್ದು, ಎಲೆಕ್ಟ್ರಾನಿಕ್ ಚಿಪ್‌ಗಳಿಲ್ಲದೆ ಪ್ರಮುಖ ಕಾರು ಕಂಪನಿಯು ಉತ್ಪಾದನೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿವೆ.

ಸನ್‌ರೂಫ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ 2022ರ ಮಹೀಂದ್ರಾ ಸ್ಕಾರ್ಪಿಯೋ

ಎಲೆಕ್ಟ್ರಾನಿಕ್ ಚಿಪ್ ಇಲ್ಲದೆ ಕಾರಿನ ಪ್ರಮುಖ ಎಲೆಕ್ಟ್ರಾನಿಕ್ ಸಾಧನಗಳನ್ನು ಜೋಡಿಸಲು ಸಾಧ್ಯವಿಲ್ಲ ಎನ್ನಬಹುದು. ಹೊಸ ಕಾರಿನಲ್ಲಿರುವ ಡಿಸ್ ಪ್ಲೇ, ಸ್ಪೀಕರ್, ಸ್ಟ್ಯಾಬಿಲಿಟಿ ಕಂಟ್ರೋಲ್, ಲೈಟಿಂಗ್, ಕಾರ್ ಕನೆಕ್ಟ್ ಫೀಚರ್ಸ್ ಸೇರಿ ಪ್ರಮುಖ ತಾಂತ್ರಿಕ ಸಾಧನಗಳ ಕಾರ್ಯನಿರ್ವಹಣೆಗೆ ಸೆಮಿ ಕಂಡಕ್ಟರ್ ಅವಶ್ಯವಾಗಿದ್ದು, ಸೆಮಿಕಂಡಕ್ಟರ್ ಪೂರೈಕೆಯು ಮುಂದಿನ ಕೆಲ ದಿನಗಳ ನಂತರ ಸಹಜ ಸ್ಥಿತಿಯತ್ತ ಮರಳುವ ನೀರಿಕ್ಷೆಯಿದೆ.

Most Read Articles

Kannada
English summary
New gen mahindra scorpio will get panoramic sunroof and more premium features
Story first published: Friday, December 31, 2021, 22:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X