Just In
- 5 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 7 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 8 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 9 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Maruti Celerio ಕಾರು
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ನ್ಯೂ ಜನರೇಷನ್ ಸೆಲೆರಿಯೊ ಕಾರನ್ನು ಸಜ್ಜಾಗುತ್ತಿದೆ. ಈ ನ್ಯೂ ಜನರೇಷನ್ ಮಾರುತಿ ಸುಜುಕಿ ಸೆಲೆರಿಯೊ ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸುವಾಗ ಕಾಣಿಕೊಂಡಿದೆ.
ವರದಿಗಳ ಪ್ರಕಾರ, ನ್ಯೂ ಜನರೇಷನ್ ಮಾರುತಿ ಸುಜುಕಿ ಸೆಲೆರಿಯೊ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಆಯ್ದ ಮಾರುತಿ ಅರೆನಾ ಡೀಲರ್ ಶಿಪ್ ಗಳು ಈಗಾಗಲೇ ಹ್ಯಾಚ್ ಬ್ಯಾಕ್ ಗಾಗಿ ಅನಧಿಕೃತ ಬುಕ್ಕಿಂಗ್ ಆರಂಭಿಸಿವೆ. ಈ ಹೊಸ ಮಾರುತಿ ಸೆಲೆರಿಯೊ ಮಾದರಿಯು ಪ್ರಮುಖ ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ಈ ಸೆಲೆರಿಯೊ ಹ್ಯಾಚ್ಬ್ಯಾಕ್ ಅನ್ನು ಮೊದಲ ಬಾರಿಗೆ 2014ರಲ್ಲಿ ಬಿಡುಗಡೆಗೊಳಿಸಿದ್ದರು.
ಆದರೆ ಇತರ ಮಾದರಿಗಳ ಮಾದರಿಯಂತೆ ದೊಡ್ಡ ಯಶ್ವಸಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಇದೀಗ ಹೊಸ ವಿನ್ಯಾಸದ ಅಥವಾ ಹೊಸ ರೂಪದಲ್ಲಿ ನ್ಯೂ ಜನರೇಷನ್ ಸೆಲೆರಿಯೊ ಕಾರನ್ನು ಮಾರುತಿ ಸುಜುಕಿ ಕಂಪನಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇತ್ತೀಚೆಗೆ ಈ ಹೊಸ ಮಾರುತಿ ಸೆಲೆರಿಯೊ ಕಾರು ಇತ್ತೀಚೆಗೆ ಟಿವಿಸಿ ಚಿತ್ರೀಕರಣದ ವೇಳೆ ಕಾಣಿಸಿಕೊಂಡಿದ್ದು, ಇದರ ಸ್ಪೈ ಚಿತ್ರಗಳು ಬಹಿರಂಗವಾಗಿತ್ತು.
ನ್ಯೂ ಜನರೇಷನ್ ಸೆಲೆರಿಯೊ ಕಾರಿನ ಮುಂಭಾಗ ಅಂಡಾಕಾರದ ಗ್ರಿಲ್ ಮತ್ತು ರಿಫ್ರೆಶ್ ಫ್ರಂಟ್ ಫಾಸಿಯಾವನ್ನು ಹೊಂದಿದೆ. ಈ ಕಾರಿನಲಿ ಪರಿಷ್ಕೃತ ಮುಂಭಾಗದ ಬಂಪರ್, ದುಂಡಾದ ಹೊಸದಾಗಿ ವಿನ್ಯಾಸಗೊಳಿಸಲಾದ ಹೆಡ್ಲ್ಯಾಂಪ್ಗಳು ಕ್ರೋಮ್ ಸ್ಟ್ರಿಪ್ ಮೂಲಕ ಸಂಪರ್ಕ ಹೊಂದಿದ್ದು, ಸಿಗ್ನೇಚರ್ ಲೋಗೋದೊಂದಿಗೆ ಮಧ್ಯದಲ್ಲಿ ವಿಲೀನಗೊಳ್ಳುತ್ತವೆ.
ಇದರ ಫಾಗ್ ಲ್ಯಾಂಪ್ ಸುತ್ತುವರಿದಿದೆ ಮತ್ತು ಫ್ರಂಟ್ ಏಪ್ರನ್ ಕಾಂಟ್ರಾಸ್ಟ್ ಬ್ಲ್ಯಾಕ್ ಜೊತೆಗೆ ಅದರ ಸ್ಪೋರ್ಟಿಯರ್ ಫ್ರಂಟ್ ಲುಕ್ ಅನ್ನು ಹೆಚ್ಚು ಸೇರಿಸುತ್ತದೆ. ಇನ್ನು ಸೆಲೆರಿಯೊ ಕಾರಿನ ಲೋ ಟ್ರಿಮ್ಗಳು ಅಲಾಯ್ ವ್ಹೀಲ್ ಗಳನ್ನು ಪಡೆಯುತ್ತವೆ. ಹೆಚ್ಚಿನ ರೂಪಾಂತರಗಳನ್ನು ಬ್ಲ್ಯಾಕ್ 14-ಇಂಚಿನ ಅಲಾಯ್ ವ್ಹೀಲ್ ಗಳನ್ನು ಪ್ರತ್ಯೇಕವಾಗಿ ನೀಡಬಹುದು.
ಈ ನ್ಯೂ ಜನರೇಷನ್ ಸೆಲೆರಿಯೊ ಹ್ಯಾಚ್ಬ್ಯಾಕ್ ಅನ್ನು 2020 ಬಿಡುಗಡೆಗೊಳಿಸಲು ಯೋಜಿಸಲಾಗಿತ್ತು. ಆದರೆ ನಂತರ ಹಲವು ಕಾರಣಗಳಿಂದ ಬಿಡುಗಡೆಯನ್ನು ಮುಂದೂಡಿದ್ದರು. ಬಳಿಕ ಕಂಪನಿಯು 2021ರ ಏಪ್ರಿಲ್-ಮೇ ತಿಂಗಳುಗಳ ಅವಧಿಯ ನಡುವೆ ಬಿಡುಗಡೆಗೊಳಿಸಲು ಯೋಜಿಸಲಾಗಿತ್ತು. ಆದರೆ ಕರೋನಾ ಸೋಂಕಿನ ಆರ್ಭಟ ಹೆಚ್ಚಳದಿಂದಾಗಿ ಮತ್ತೊಮ್ಮೆ ಮುಂದೂಡಿಕೆ ಮಾಡಿದ್ದರು.
ಇನ್ನು ಮಾರುತಿ ಸುಜುಕಿ ಕಂಪನಿಯು ಈ ಹೊಸ ಸೆಲೆರಿಯೊ ಕಾರಿನ ಬಿಡುಗಡೆಯ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಮುಂದಿನ ತಿಂಗಳು ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ. ನ್ಯೂ ಜನರೇಷನ್ ಮಾರುತಿ ಸೆಲೆರಿಯೊ ಒಂದು ಪ್ರಮುಖ ಬದಲಾವಣೆಯೆಂದರೆ ಹೊಸ ಹಿಯರ್ಟೆಕ್ಟ್ ಪ್ಲಾಟ್ಫಾರ್ಮ್ ಅಡಿಯಲ್ಲಿ ಇದನ್ನು ತಯಾರಿಸಲಾಗಿದೆ. ಈ ಮಾರುತಿ ಸೆಲೆರಿಯೊ ಹೊಸದಾಗಿ ವಿನ್ಯಾಸಗೊಳಿಸಿದೆ.
ಈ ಹೊಸ ಸೆಲೆರಿಯೊ ಹ್ಯಾಚ್ಬ್ಯಾಕ್ ಒಳಭಾಗದಲ್ಲಿ 7.0-ಇಂಚಿನ ಸ್ಮಾರ್ಟ್ಪ್ಲೇ ಸ್ಟುಡಿಯೋ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆಯುತ್ತದೆ. ಈ ಸಿಸ್ಟಂ ಆಪಲ್ ಕಾರ್ ಪ್ಲೇ ಮತ್ತು ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಫೀಚರ್ ಅನ್ನು ಕೂಡ ಒಳಗೊಂಡಿರುತ್ತದೆ.
ಇನ್ನು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಬದಲಾಯಿಸಲಾಗುವುದಿಲ್ಲ. ಆದರೆ ಡ್ಯಾಶ್ಬೋರ್ಡ್, ಸ್ಟೀಯರಿಂಗ್ ವೀಲ್ ಮತ್ತು ಸೆಂಟರ್ ಕನ್ಸೋಲ್ ಅನ್ನು ಪರಿಷ್ಕರಿಸಲಾಗುತ್ತದೆ. 2021ರ ಮಾರುತಿ ಸೆಲೆರಿಯೊ ಕಾರಿನಲ್ಲಿ ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್, ಸ್ಟೀಯರಿಂಗ್ ಮೌಂಟಡ್ ಕಂಟ್ರೋಲ್ ಮತ್ತು ಇತರ ಪ್ರೀಮಿಯಂ ಫೀಚರ್ ಗಳನ್ನು ಕೂಡ ಒಳಗೊಂಡಿರುತ್ತದೆ. ಆದರೆ ಫೀಚರ್ಸ್ ಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿಲ್ಲ.
ಇನ್ನು ಈ ನ್ಯೂ ಜನರೇಷನ್ ಮಾರುತಿ ಸೆಲೆರಿಯೊ ಕಾರಿನಲ್ಲಿ ಸುರಕ್ಷತೆಗಾಗಿ, ಸ್ಟ್ಯಾಂಡರ್ಡ್ ಸೀಟ್ಬೆಲ್ಟ್ ಅಲರ್ಟ್, ಎಲೆಕ್ಟ್ರಾನಿಕ್ ಬ್ರೇಕ್-ಫೋರ್ಸ್ ಡೆಲವೆರಿಯೊಂದಿಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಸೆನ್ಸರ್ಗಳು ಮತ್ತು ರಿವರ್ಸ್ ಕ್ಯಾಮೆರಾ ಜೊತೆಗೆ ಡ್ಯುಯಲ್ ಫ್ರಂಟ್ ಏರ್ಬ್ಯಾಗ್ ಅನ್ನು ಕೂಡ ನೀಡಬಹುದು.
ನ್ಯೂ ಜನರೇಷನ್ ಸೆಲೆರಿಯೊ ಕಾರಿನಲ್ಲಿ ಎಂಜಿನ್ ಅನ್ನು ಬದಲಾಯಿಸಬಹುದು, ಇದರಲ್ಲಿ ಹೊಸ 1.2ಎಲ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು, ಈ ಎಂಜಿನ್ 83 ಬಿಹೆಚ್ಪಿ ಪವರ್ ಮತ್ತು 113 ಎನ್ಎಂ ಟಾರ್ಜ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರೊಂದಿಗೆ 1.0ಎಲ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ನೀಡಬಹುದು. ಈ ಎಂಜಿನ್ 68 ಬಿಹೆಚ್ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಲ್ಲಾ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ಬಾಕ್ಸ್ ಆಯ್ಕೆಯನ್ನು ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ,
ನ್ಯೂ ಜನರೇಷನ್ ಮಾರುತಿ ಸುಜುಕಿ ಸೆಲೆರಿಯೊ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಲ್ಲಿ ಒಂದಾಗಿದೆ. ಹೊಸ ತಲೆಮಾರಿನ ಮಾರುತಿ ಸುಜುಕಿ ಸೆಲೆರಿಯೊ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟಾಟಾ ಟಿಯಾಗೋ, ಹ್ಯುಂಡೈ ಸ್ಯಾಂಟ್ರೊ ಮತ್ತು ರೆನಾಲ್ಟ್ ಕ್ವಿಡ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.