ಸುರಕ್ಷತಾ ಕಾರಣಗಳಿಗಾಗಿ ಈ ಎಸ್‍ಯುವಿಯನ್ನು ಒಂದು ವರ್ಷ ರಿಸೇಲ್ ಮಾಡುವಂತಿಲ್ಲ

ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ತನ್ನ ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್ ಎಸ್‍ಯುವಿಯನ್ನು ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸಿತ್ತು. ಈ ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಹಲವಾರು ಬದಲಾವಣೆಗಳೊಂದಿಗೆ ಜಾಗತಿಕವಾಗಿ ಬಿಡುಗಡೆಯಾಗಲಿದೆ.

ಸುರಕ್ಷತಾ ಕಾರಣಗಳಿಗಾಗಿ ಈ ಎಸ್‍ಯುವಿಯನ್ನು ಒಂದು ವರ್ಷ ರಿಸೇಲ್ ಮಾಡುವಂತಿಲ್ಲ

ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್ ಭರವಸೆಯ ಮತ್ತು ಸಮರ್ಥ ಎಸ್‍ಯುವಿಯಂತೆ ಕಾಣುತ್ತದೆ. ಯುಎಸ್ಎಯಂತಹ ಕೆಲವು ಪ್ರಮುಖ ಯುವಿ ಮಾರುಕಟ್ಟೆಗಳಲ್ಲಿ ಇದು ಮಾರಾಟದಲ್ಲಿಲ್ಲದಿದ್ದರೂ, ಇದು ಜಾಗತಿಕವಾಗಿ ಯಾವಾಗಲೂ ಬ್ರಾಂಡ್‌ಗೆ ದೊಡ್ಡ ಮಟ್ಟದ ಯಶಸ್ಸನ್ನು ನೀಡುತ್ತದೆ. ಟೊಯೊಟಾ ಈಗಾಗಲೇ ಜಪಾನ್‌ನಲ್ಲಿಯೇ 22,000 ಪ್ರಿ-ಬುಕ್ಕಿಂಗ್ ಪಡೆದಿದೆ. ಜಪಾನ್‌ನಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳ ಸಂಖ್ಯೆಯು ಮಾರುಕಟ್ಟೆಯಲ್ಲಿ ಹೆಚ್ಚಿಳವಾಗಿದೆ.

ಸುರಕ್ಷತಾ ಕಾರಣಗಳಿಗಾಗಿ ಈ ಎಸ್‍ಯುವಿಯನ್ನು ಒಂದು ವರ್ಷ ರಿಸೇಲ್ ಮಾಡುವಂತಿಲ್ಲ

ಜಪಾನಿನ ಬ್ರ್ಯಾಂಡ್ ಖರೀದಿದಾರರಿಗೆ ವಿತರಣೆಯ ದಿನಾಂಕದಿಂದ 12 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 2022ರ ಲ್ಯಾಂಡ್ ಕ್ರೂಸರ್ ಅನ್ನು ರಿಸೇಲ್ ಮಾಡುವುದನ್ನು ನಿಷೇಧಿಸಲಾಗಿದೆ. ಈ ನಿಯಮ ಮೀರಿದರೆ ಮಾಲೀಕರು ಕೆಲವು ಪರಿಣಾಮವನ್ನು ಎದುರಿಸಬೇಕಾಗುತ್ತದೆ.

ಸುರಕ್ಷತಾ ಕಾರಣಗಳಿಗಾಗಿ ಈ ಎಸ್‍ಯುವಿಯನ್ನು ಒಂದು ವರ್ಷ ರಿಸೇಲ್ ಮಾಡುವಂತಿಲ್ಲ

ಖರೀದಿದಾರರು ತಮ್ಮ ಹೊಚ್ಚ ಹೊಸ ಲ್ಯಾಂಡ್ ಕ್ರೂಸರ್ ಎಸ್‍ಯುವಿಯನ್ನು 12 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಮಾರಾಟ ಮಾಡುವುದನ್ನು ತಡೆಯಲು ಕಂಪನಿ ಕೆಲವು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಬ್ರ್ಯಾಂಡ್ ವಾಹನವನ್ನು ಮಾರಾಟ ಮಾಡುವ ಬಗ್ಗೆ ಗಂಭೀರವಾಗಿರುವುದರ ಹಿಂದೆ ಅನೇಕ ಕಾರಣಗಳಿವೆ.

ಸುರಕ್ಷತಾ ಕಾರಣಗಳಿಗಾಗಿ ಈ ಎಸ್‍ಯುವಿಯನ್ನು ಒಂದು ವರ್ಷ ರಿಸೇಲ್ ಮಾಡುವಂತಿಲ್ಲ

ಬೇರೆ ದೇಶಕ್ಕೆ ಖಾಸಗಿ ರಫ್ತು ಮಾಡುವುದು ಭದ್ರತಾ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಬ್ರ್ಯಾಂಡ್ ಕಳವಳ ವ್ಯಕ್ತಪಡಿಸುತ್ತಿದೆ, ರಫ್ತು ಅವಲಂಬಿಸಿ ವಿದೇಶಿ ವಿನಿಮಯ ಕಾನೂನನ್ನು ಉಲ್ಲಂಘಿಸುವ ಅಪಾಯವಿದೆ ಮತ್ತು ಇದು ಜಾಗತಿಕ ಭದ್ರತೆಗೆ ಧಕ್ಕೆ ತರುವ ಪ್ರಮುಖ ಸಮಸ್ಯೆಗಳಿಗೆ ಕಾರಣವಾಗಬಹುದು"ಎಂದು ಉಲ್ಲೇಖಿಸಿದೆ. ಇದರ ಜೊತೆ ಇತರೆ ಕಾರಣಗಳು ಕೂಡ ಇರಬಹುದು.

ಸುರಕ್ಷತಾ ಕಾರಣಗಳಿಗಾಗಿ ಈ ಎಸ್‍ಯುವಿಯನ್ನು ಒಂದು ವರ್ಷ ರಿಸೇಲ್ ಮಾಡುವಂತಿಲ್ಲ

ಟೊಯೊಟಾ ಹೇಳುವಂತೆ ಖರೀದಿದಾರರು ಬ್ರಾಂಡ್‌ನ ಕಾಳಜಿಗೆ ವಿರುದ್ಧವಾಗಿ ಹೋದರೆ ಮತ್ತೆ ಮತ್ತೆ ಟೊಯೊಟಾ ಕಾರುಗಳನ್ನು ಖರೀದಿಸುವುದನ್ನು ನಿಷೇಧಿಸುತ್ತದೆ. ಸ್ಥಳೀಯ ಮಾಧ್ಯಮಗಳು ಹೇಳುವಂತೆ, ನಿರ್ದಿಷ್ಟ ಕಾರನ್ನು ಮಾರಾಟ ಮಾಡಿದ ಡೀಲರುಗಳು ಕೂಡ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಸುರಕ್ಷತಾ ಕಾರಣಗಳಿಗಾಗಿ ಈ ಎಸ್‍ಯುವಿಯನ್ನು ಒಂದು ವರ್ಷ ರಿಸೇಲ್ ಮಾಡುವಂತಿಲ್ಲ

ಟೊಯೊಟಾ ಕಂಪನಿಯು ಲ್ಯಾಂಡ್ ಕ್ರೂಸರ್ ಎಸ್‍ಯುವಿಯನ್ನು 1951 ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತು. ಇದುವರೆಗೂ 170 ದೇಶಗಳಲ್ಲಿ ಲ್ಯಾಂಡ್ ಕ್ರೂಸರ್ ಎಸ್‍ಯುವಿ ಮಾದರಿಯ 1.04 ಕೋಟಿ ಯೂನಿಟ್‌ಗಳನ್ನು ಮಾರಾಟ ಮಾಡಲಾಗಿದೆ.

ಸುರಕ್ಷತಾ ಕಾರಣಗಳಿಗಾಗಿ ಈ ಎಸ್‍ಯುವಿಯನ್ನು ಒಂದು ವರ್ಷ ರಿಸೇಲ್ ಮಾಡುವಂತಿಲ್ಲ

ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಹೊಸ ಟಿಎನ್‌ಜಿಎ (ಟೊಯೋಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್) ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುವ ಟೊಯೊಟಾದ ಮೊದಲ ಬಾಡಿ-ಆನ್-ಫ್ರೇಮ್ ವಾಹನ ಇದಾಗಿದೆ.

ಸುರಕ್ಷತಾ ಕಾರಣಗಳಿಗಾಗಿ ಈ ಎಸ್‍ಯುವಿಯನ್ನು ಒಂದು ವರ್ಷ ರಿಸೇಲ್ ಮಾಡುವಂತಿಲ್ಲ

ಈ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇದು 3.5ಎಲ್ ವಿ6 ಟ್ವಿನ್-ಟರ್ಬೊ ಪೆಟ್ರೋಲ್ ಮತ್ತು 3.3ಎಲ್ ವಿ6 ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಾಗಿದೆ.

ಸುರಕ್ಷತಾ ಕಾರಣಗಳಿಗಾಗಿ ಈ ಎಸ್‍ಯುವಿಯನ್ನು ಒಂದು ವರ್ಷ ರಿಸೇಲ್ ಮಾಡುವಂತಿಲ್ಲ

ಇದರಲ್ಲಿ 3.5-ಲೀಟರ್ ವಿ6 ಟ್ವಿನ್-ಟರ್ಬೊ ಎಂಜಿನ್ ಅನ್ನು 409 ಬಿಹೆಚ್‍ಪಿ ಪವರ್ ಮತ್ತು 650 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 3.3-ಲೀಟರ್ ಟ್ವಿನ್-ಟರ್ಬೊ ವಿ6 ಂಜಿನ್ 304 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಗಳೊಂದಿಗೆ 10-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

Most Read Articles

Kannada
Read more on ಟೊಯೊಟಾ toyota
English summary
New Toyota Land Cruiser Cannot Be Sold As Used Car. Read In Kannada.
Story first published: Tuesday, July 27, 2021, 10:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X