Just In
- 37 min ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- 41 min ago 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- 43 min ago Honda: ಭಾರತ ನಿರ್ಮಿಸಿದ ಹೋಂಡಾ ಕಾರಿಗೆ ಮುಗಿಬಿದ್ದ ಜಪಾನ್ ಜನ!
- 53 min ago ಮತ್ತೆ ಅಖಾಡಕ್ಕೆ ಅಮೇರಿಕನ್ ಆಫ್ರೋಡ್ ಕಿಂಗ್: 2024 ಜೀಪ್ ರಾಂಗ್ಲರ್ ಫೇಸ್ಲಿಫ್ಟ್ ರಿವ್ಯೂ!
Don't Miss!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಹೋಂಡಾ ಅಮೇಜ್ ಫೇಸ್ಲಿಫ್ಟ್ ಕಾರು ಖರೀದಿಗಾಗಿ ಬುಕ್ಕಿಂಗ್ ಆರಂಭ
ಹೋಂಡಾ ಕಾರ್ಸ್ ಇಂಡಿಯಾ(ಎಚ್ಸಿಐ) ತನ್ನ ಹೊಸ 2021ರ ಹೋಂಡಾ ಅಮೇಜ್ ಫೇಸ್ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಹೋಂಡಾ ಕಂಪನಿಯು ಈ ಹೊಸ ಅಮೇಜ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ.
ಈ ಹೊಸ ಹೋಂಡಾ ಅಮೇಜ್ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಯಾವುದೇ ಅಧಿಕೃತ ಹೋಂಡಾ ಡೀಲರ್ಶಿಪ್ ಬಳಿ ವಾಹನವನ್ನು ಮುಂಗಡವಾಗಿ ಕಾಯ್ದಿರಿಸಬಹುದು. ಈ ಕಾರಿನ ಖರೀದಿಗಾಗಿ ಟೋಕನ್ ಮೊತ್ತ ರೂ.5,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. 2021ರ ಹೋಂಡಾ ಅಮೇಜ್ ಕಾರಿನ ಅಧಿಕೃತ ವಿವರಗಳನ್ನು ಒಂದೆರಡು ವಾರಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮಾದರಿಯು ಕ್ಯಾಬಿನ್ನ ಒಳಭಾಗ ಮತ್ತು ಫೀಚರ್ ಅಪ್ಗ್ರೇಡ್ಗಳಲ್ಲಿ ಗಮನಾರ್ಹ ಬದಲಾವಣೆಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ನ ಮಾರ್ಕೆಟಿಂಗ್ ಮತ್ತು ಸೇಲ್ಸ್ನ ಹಿರಿಯ ಉಪಾಧ್ಯಕ್ಷ ಮತ್ತು ನಿರ್ದೇಶಕರಾದ ರಾಜೇಶ್ ಗೋಯೆಲ್ ಅವರು ಮಾತನಾಡಿ, ಹೊಸ ಅಮೇಜ್ "ಹೆಚ್ಚು ಪ್ರೀಮಿಯಂ, ಸ್ಟೈಲಿಶ್ ಮತ್ತು ಅತ್ಯಾಧುನಿಕವಾಗಿದೆ" ಎಂದು ಹೇಳಿದರು. ನಾವು ಮುಂಬರುವ ಹಬ್ಬದ ಸೀಸನ್ ನಲ್ಲಿ ಸಂಪೂರ್ಣವಾಗಿ ರಿಫ್ರೆಶ್ ಲೈನ್ಅಪ್ನೊಂದಿಗೆ ಸಮೀಪಿಸುತ್ತಿದ್ದೇವೆ ಮತ್ತು ಮಾರುಕಟ್ಟೆಯಲ್ಲಿ ಹೊಸ ಉತ್ಸಾಹವನ್ನು ಸೃಷ್ಟಿಸುವ ಭರವಸೆ ಹೊಂದಿದ್ದೇವೆ. ಎಂದು ಹೇಳಿದರು.
ಅಮೇಜ್ ಮಾದರಿಯು ಬಹುದೀರ್ಘಕಾಲದಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕಾಂಫ್ಯಾಕ್ಟ್ ಸೆಡಾನ್ ಮಾದರಿಯಾಗಿದೆ. ಇದರ ಎರಡನೇ ತಲೆಮಾರಿನವರು 2018 ರ ಆರಂಭದಲ್ಲಿ ಆಟೋ ಎಕ್ಸ್ಪೋದಲ್ಲಿ ಮಾರಾಟಕ್ಕೆ ಬರುವ ಮೊದಲು ಪರಿಚಯಿಸಲಾಯಿತು.
ಇನ್ನು ಹೊಸ ಹೋಂಡಾ ಅಮೇಜ್ ಫೇಸ್ಲಿಫ್ಟ್ ಕಾಂಪ್ಯಾಕ್ಟ್ ಸೆಡಾನ್ ಹೊಸ ಬಣ್ಣದ ಆಯ್ಕೆಗಳನ್ನು ಕೂಡ ಪಡೆಯಬಹುದು. ಈ ಹೊಸ ಕಾರು ಪ್ಲಾಟಿನಂ ವೈಟ್ ಪರ್ಲ್, ಗೋಲ್ಡನ್ ಬ್ರೌನ್ ಮೆಟಾಲಿಕ್, ರೇಡಿಯಂಟ್ ರೆಡ್, ಲೂನಾರ್ ಸಿಲ್ವರ್ ಮೆಟಾಲಿಕ್ ಮತ್ತು ಮಾಡರ್ನ್ ಸ್ಟೀಲ್ ಮೆಟಾಲಿಕ್ ಎಂಬ ಐದು ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ.
ಈ ಹೊಸ ಅಮೇಜ್ ಕಾರಿನ ಒಳಭಾಗದಲ್ಲಿ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂನೊಂದಿಗೆ ಸ ಅಪ್ಹೋಲ್ಸ್ಟರಿ ಮತ್ತು ನವೀಕರಿಸಿದ ಡ್ಯಾಶ್ಬೋರ್ಡ್ನೊಂದಿಗೆ ಪರಿಷ್ಕರಿಸುವ ಸಾಧ್ಯತೆಯಿದೆ. ಇದರಲ್ಲಿ 7 ಇಂಚಿನ ಮಲ್ಟಿ ಇನ್ಫೋ ಡಿಸ್ ಪ್ಲೇಯನ್ನು ಹೊಂದಿರಲಿದೆ.
ಇನ್ನು ಈ ಕಾರಿನಲ್ಲಿ ಸ್ಟೀರಿಂಗ್ ಮೌಂಟೆಡ್ ವಾಯ್ಸ್ ಕಂಟ್ರೋಲ್, ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವೀಂಗ್ ಸೀಟ್, ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್, ರಿವರ್ಸ್ ಕ್ಯಾಮೆರಾ, ಕೀ ಲೆಸ್ ಎಂಟ್ರಿ, ಸ್ಟಾರ್ಟ್, ಸ್ಟಾಪ್ ಬಟನ್ ಕಂಟ್ರೋಲ್ ಮತ್ತು ಹೆಚ್ಚಿನ ಫೀಚರ್ಸ್ ಗಳನ್ನು ಒಳಗೊಂಡಿರುತ್ತದೆ. ಇದರೊಂದಿಗೆ ಪ್ರಸ್ತುತ ಮಾದರಿಯಲ್ಲಿರುವ ಫೀಚರ್ಸ್ ಗಳನ್ನು ಕೂಡ ಮುಂದಕ್ಕೆ ಸಾಗಿಸಲಾಗುತ್ತದೆ.
ಇತ್ತೀಚೆಗೆ ಪ್ರಯಾಣಿಕರಿಗೂ ಗರಿಷ್ಠ ಸುರಕ್ಷತೆ ಖಾತ್ರಿಪಡಿಸಲು ಹೋಂಡಾ ಕಂಪನಿಯು ಸಿಟಿ ಸೆಡಾನ್ ಮಾದರಿಗಾಗಿ ಗೂಗಲ್ ಅಸಿಸ್ಟೆನ್ಸ್ ಅಲೆಕ್ಸಾ ಫೀಚರ್ಸ್ ನೀಡಲಾಗಿದೆ. ಕಾರು ಚಾಲನೆ ಮಾಡುತ್ತಲೇ ವಾಯ್ಸ್ ಕಾಮೆಂಡ್ ಮೂಲಕ ವಿವಿಧ ಫೀಚರ್ಸ್ಗಳನ್ನು ನಿಯಂತ್ರಣ ಮಾಡಬಹುದು. ಈ ಫೀಚರ್ ಅನ್ನು ಅಮೇಜ್ ಅನ್ನು ಪಡೆಯುವ ಸಾಧ್ಯತೆಗಳಿದೆ.
ಹೊಸ ಹೋಂಡಾ ಅಮೇಜ್ ಕಾಂಪ್ಯಾಕ್ಟ್ ಸೆಡಾನ್ ಹೃದಯ ಭಾಗ ಎಂದೇ ಹೇಳಬಹುದಾದ ಎಂಜಿನ್ ಬಗ್ಗೆ ಹೇಳುವುದಾದರೆ, ಇದರಲ್ಲಿ 1.2ಎಲ್ ಪೆಟ್ರೋಲ್ ಮತ್ತು 1.5ಎಲ್ ಡೀಸೆಲ್ ಎಂಬ ಎರಡು ಎಂಜಿನ್ ಗಳನ್ನು ನೀಡಲಾಗಿದೆ.
ಇದರಲ್ಲಿ 1.2ಎಲ್ ಪೆಟ್ರೋಲ್ ಎಂಜಿನ್ 89 ಬಿಹೆಚ್ಪಿ ಪವರ್ ಮತ್ತು 110 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.5ಎಲ್ ಡೀಸೆಲ್ ಎಂಜಿನ್ 99 ಬಿಹೆಚ್ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಗಳೊಂದಿಗೆ ಅಪ್ಡೇಟ್ ಮಾಡಲಾಗಿದೆ. ಈ ಹೊಸ ಹೋಂಡಾ ಅಮೇಜ್ ಫೇಸ್ಲಿಫ್ಟ್ ಕಾಂಪ್ಯಾಕ್ಟ್ ಸೆಡಾನ್ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.