Just In
Don't Miss!
- News
ಪೊಲೀಸ್ ಆಯುಕ್ತರ ಕಚೇರಿಯಿಂದ ಕಾಲ್ ಬರುತ್ತೆ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Sports
ಕೋಲ್ಕತ್ತಾ, ಅಹ್ಮದಾಬಾದ್ ಸೇರಿ 5 ತಾಣಗಳಲ್ಲಿ 2021ರ ಐಪಿಎಲ್
- Finance
30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಕ್ಯಾಪ್ಜೆಮಿನಿ
- Movies
ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯಾಗಲಿದೆ 27 ಕಿ.ಮೀಗಿಂತ ಹೆಚ್ಚು ಮೈಲೇಜ್ ನೀಡುವ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿ
ಜಪಾನ್ ಮೂಲದ ಹೋಂಡಾ ಕಂಪನಿಯು ತನ್ನ ಹೊಸ ಸಿಟಿ ಸೆಡಾನ್ನ ಹೈಬ್ರಿಡ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಾಗಿ ಹೇಳಿದೆ ಈ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿಯು ಈಗಾಗಲೇ ಥೈಲ್ಯಾಂಡ್ನಲ್ಲಿ ಮಾರಾಟದಲ್ಲಿದೆ.

ಹೊಸ ಹೋಂಡಾ ಸಿಟಿ ಹೈಬ್ರಿಡ್ 2021ರ ಮಧ್ಯಾಂತರ ಅವಧಿಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಹೊಸ ಸಿಟಿ ಮಾದರಿಯು ಪೆಟ್ರೋಲ್-ಎಲೆಕ್ಟ್ರಿಕ್ ಹೈಬ್ರಿಡ್ ಆಯ್ಕೆಯನ್ನು ಸ್ವೀಕರಿಸಲಿದೆ. ಹೈಬ್ರಿಡ್ ಯುನಿಟ್ 98 ಬಿಹೆಚ್ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5 ಲೀಟರ್ ಅಟ್ಕಿನ್ಸನ್ ಕಲ್ ಪೆಟ್ರೋಲ್ ಎಂಜಿನ್ ಅನ್ನು ಸಂಯೋಜಿತ ಸ್ಟಾರ್ಟರ್(ಐಎಸ್ಜಿ) ಮತ್ತು 109 ಬಿಹೆಚ್ಪಿ ಪವರ್ ಉತ್ಪಾದಿಸುವ ಎರಡನೇ ಎಲೆಕ್ಟ್ರಿಕ್ ಮೋಟರ್ ಅನ್ನು ಒಳಗೊಂಡಿದೆ.

ಹೊಸ ಹೋಂಡಾ ಸಿಟಿ ಇ:ಹೆಚ್ಇವಿ ಎಲೆಕ್ಟ್ರಿಕ್ ಡ್ರೈವ್, ಹೈಬ್ರಿಡ್ ಡ್ರೈವ್ ಮತ್ತು ಎಂಜಿನ್ ಡ್ರೈವ್ ಎಂಬ ಮೂರು ಡ್ರೈವಿಂಗ್ ಮೋಡ್ ಗಳನ್ನು ಹೊಂದಿರುತ್ತದೆ. ಹೊಸ ಸಿಟಿ ಕಾರು ಕಡಿಮೆ ವೇಗದಲ್ಲಿ ಎಲೆಕ್ಟ್ರಿಕ್ ಪವರ್ ಮೇಲೆ ಸಂಪೂರ್ಣವಾಗಿ ಚಲಿಸುತ್ತದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300

ಹೈಬ್ರಿಡ್ ಡ್ರೈವ್ ಮೋಡ್ನಲ್ಲಿ, ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟರ್ ಅತ್ಯುತ್ತಮ ಪವರ್ ಅನ್ನು ಉತ್ಪಾದಿಸುತ್ತದೆ. ಅಲ್ಲದೇ ಉತ್ತಮ ಮೈಲೇಜ್ ಅನ್ನು ನೀಡುತ್ತದೆ. ಹೆಚ್ಚಿನ ವೇಗದಲ್ಲಿ ವಾಹನವು ಪೆಟ್ರೋಲ್ ಎಂಜಿನ್ನಲ್ಲಿ ಚಲಿಸುತ್ತದೆ.

ಹೈಬ್ರಿಡ್ ಪವರ್ಟ್ರೇನ್ ಹೊಂದಿರುವ ಹೊಸ ಸಿಟಿ ತನ್ನ ವಿಭಾಗದಲ್ಲಿ ಹೆಚ್ಚು ಮೈಲೇಜ್ ನೀಡುವ ಮಾದರಿಗಳಾಗಿರಲಿದೆ. ಈ ಹೊಸ ಸಿಟಿ ಹೈಬ್ರಿಡ್ ಆವೃತ್ತಿಯು 27 ಕಿ.ಮೀ.ಗಿಂತ ಹೆಚ್ಚಿನ ಮೈಲೇಜ್ ನೀಡುವ ಸಾಧ್ಯತೆಯಿದೆ. ಥಾಯ್-ಸ್ಪೆಕ್ ಸಿಟಿಯಂತೆಯೇ, ಹೊಸ ಮಾದರಿಯನ್ನು ಸಿಟಿ ಆರ್ಎಸ್ ಹೈಬ್ರಿಡ್ ಎಂದು ಬ್ರ್ಯಾಂಡ್ ಮಾಡಬಹುದು.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ

ಹೊಸ ಹೋಂಡಾ ಸಿಟಿ ಹೈಬ್ರಿಡ್ ಕಾರಿನಲ್ಲಿ 7-ಇಂಚಿನ ಇನ್ಸ್ ಟ್ರೂಮೆಂಟ್ ಕನ್ಸೋಲ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಇತ್ಯಾದಿಗಳನ್ನು ಅಳವಡಿಸಲಾಗಿದೆ. ಇನ್ನು ಇದು ಅಟೋನೊಮಸ್ ಎಮರ್ಜನ್ಸಿ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪಿಂಗ್ ಅಸಿಸ್ಟ್, ಲೇನ್ ಸೆಂಟರಿಂಗ್ ಅಸಿಸ್ಟ್ ಮತ್ತು ಹೈ ಬೀಮ್ ಅನ್ನು ಹೊಂದಿದೆ.

ಇನ್ನು ಸಿಟಿ ಸೆಡಾನ್ ಹೋಂಡಾದ ಲೇನ್ ವಾಚ್ ಬ್ಲೈಂಡ್ ಸ್ಪಾಟ್ ಕ್ಯಾಮೆರಾವನ್ನು ಸಹ ಪಡೆಯಲಿದೆ. ಈ ಹೊಸ ಸಿಟಿ ಹೈಬ್ರಿಡ್ ಆವೃತ್ತಿಯಲ್ಲಿ ಹಲವಾರು ಫೀಚರ್ ಗಳನ್ನು ಹೊಂದಿರಲಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಈ ಹೊಸ ಹೋಂಡಾ ಸಿಟಿ ಸೆಡಾನ್ ಹಾನಿಕಾಬ್ ಗ್ರಿಲ್, ಕಾರ್ಬನ್ ಫೈಬರ್-ಲುಕ್ ಫ್ರಂಟ್ ಬಂಪರ್ ಲಿಪ್ ಮತ್ತು ಸ್ಟೈಲಿಂಗ್ ಫಾಗ್ ಲ್ಯಾಂಪ್ ಎನ್ಕ್ಲೋಸರ್, ರಿಯರ್ ಡಿಫ್ಯೂಸರ್, ಬ್ಲ್ಯಾಕ್ ಬೂಟ್ ಲಿಡ್ ಸ್ಪಾಯ್ಲರ್ ಮತ್ತು ಹೊಸ 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಗಳನ್ನು ಹೊಂದಿರಲಿದೆ.

ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದು ಖಚಿತವಾಗಿದೆ. ಇದೇ ವರ್ಷದ ಮಧ್ಯಾಂತರ ಅವಧಿಯಲ್ಲಿ ಈ ಹೋಂಡಾ ಟಿ ಹೈಬ್ರಿಡ್ ಆವೃತ್ತಿಯು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗುತ್ತಿದೆ.