ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ತನ್ನ ಹೊಸ ಹೆಚ್‌ಆರ್-ವಿ ಎಸ್‍ಯುವಿಯನ್ನು ನವೀಕರಿಸಲಾಗುತ್ತಿದೆ. ಈ ಹೋಂಡಾ ಹೆಚ್‌ಆರ್-ವಿ ಕ್ರಾಸ್ಒವರ್ ಎಸ್‍ಯುವಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ.

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಈ ಹೊಸ ಹೋಂಡಾ ಹೆಚ್‌ಆರ್-ವಿ ಕ್ರಾಸ್ಒವರ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಇತ್ತೀಚೆಗೆ ವರದಿಗಳು ಪ್ರಕಟವಾಗಿದೆ. ಇನ್ನು ನವೀಕರಿಸಿದ ಹೊಸ ಹೆಚ್‌ಆರ್-ವಿ ಮಾದರಿಯನ್ನು ಹೋಂಡಾ ಕಂಪನಿಯು ಇದೇ ತಿಂಗಳ 18ರಂದು ಜಾಗತಿಕವಾಗಿ ಅನಾವರಣಗೊಳಿಸಲಿದೆ. ಈ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯು ಮುಂದಿನ ತಿಂಗಳಲ್ಲಿ ಅಧಿಕೃತವಾಗಿ ತನ್ನ ತಾಯಿನಾಡು ಜಪಾನ್ ನಲ್ಲಿ ಬಿಡುಗಡೆಯಾಗಲಿದೆ.

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಹೊಸ ಹೋಂಡಾ ಹೆಚ್‌ಆರ್-ವಿಯ ಪೇಟೆಂಟ್ ಚಿತ್ರಗಳು ಬಹಿರಂಗವಾಗಿವೆ. ಈ ಪೇಟೆಂಟ್ ಚಿತ್ರದಲ್ಲಿ ಹೋಂಡಾ ಹೆಚ್‌ಆರ್-ವಿಯ ವಿನ್ಯಾಸ ಮಾಹಿತಿಗಳು ಬಹಿರಂಗವಾಗಿದೆ. ಹೋಂಡಾ ತನ್ನ ಹೆಚ್‌ಆರ್-ವಿ ಎಸ್ ಎಸ್‍ಯುವಿಯನ್ನು ಮೊದಲ ಬಾರಿಗೆ 2013ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯು ಹಲವಾರು ಬಾರಿ ವಿದೇಶಗಳಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಅದೇ ರೀತಿ ಈ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯು ಭಾರತೀಯ ರಸ್ತೆಗಳಲ್ಲಿಯು ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಹೊಸ ಹೆಚ್‌ಆರ್-ವಿ ಮಾದರಿಯು ಹೋಂಡಾ ಇ: ಕಾನ್ಸೆಪ್ಟ್ ಎಸ್‍ಯುವಿಯಿಂದ ಹೊರಭಾಗದ ಸ್ಟೈಲಿಂಗ್ ಅನ್ನು ಎರವಲು ಪಡೆಯುವ ಸಾಧ್ಯತೆಗಳಿದೆ. ಈ ಹೊಸ ಎಸ್‍ಯುವಿಯು ಮುಂಭಾಗದಲ್ಲಿ ಅಗ್ರೇಸಿವ್ ಬಂಪರ್ ಜೊತೆಗೆ ಮುಂಭಾಗದಲ್ಲಿ ಭವ್ಯವಾದ ಗ್ರಿಲ್ ಅನ್ನು ಅಳವಡಿಸಬಹುದು.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಇನ್ನು ಇ ಹೆಚ್‌ಆರ್-ವಿ ಮಾದರಿಯು ಹೊಸ ಸಂಯೋಜನೆಯ ಎಲ್ಇಡಿ ಹೆಡ್‌ಲೈಟ್‌ಗಳನ್ನು ಸಹ ಪಡೆಯುವ ನಿರೀಕ್ಷೆಯಿದೆ. ಒಟ್ಟಾರೆಯಾಗಿ, ಈ ಎಸ್‍ಯುವಿಯ ಗಾತ್ರವನ್ನು ಹೆಚ್ಚಿಸುವ ಸಾಧ್ಯತೆಗಳಿದೆ.

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಹೊಸ ಹೆಚ್‌ಆರ್-ವಿ ಮಾದರಿಯು 4,450 ಎಂಎಂ ಉದ್ದ, 1,780 ಎಂಎಂ ಅಗಲ ಮತ್ತು 1,600 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಹೆಚ್‌ಆರ್-ವಿ ಮಾದರಿಯ ಹೆಚ್ಚುವರಿ ಲಗೇಜ್ ಸ್ಥಳಾವಕಾಶ ನೀಡಲು ವ್ಹೀಲ್‌ಬೇಸ್ ಅನ್ನು ಹೆಚ್ಚಿಸಬಹುದು.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯಲ್ಲಿ ಇ:ಹೆಚ್‌ಇವಿ ಯುನಿಟ್ 1.5-ಲೀಟರ್ (ಇಂಟೆಲಿಜೆಂಟ್-ಮಲ್ಟಿ ಮೋಡ್ ಡ್ರೈವ್) ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಇದರೊಂದಿಗೆ ಕಾಂಪ್ಯಾಕ್ಟ್, ಪವರ್ ಫುಲ್ ಎರಡು ಎಲೆಕ್ಟ್ರಿಕ್ ಮೋಟರ್‌ಗಳು ಮತ್ತು ಲಿಥಿಯಂ-ಐಯಾನ್ ಬ್ಯಾಟರಿಯನ್ನು ಒಳಗೊಂಡಿರುತ್ತದೆ.

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಈ ಹೈಬ್ರಿಡ್ ಸಿಸ್ಟಂ ಒಟ್ಟು 109 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯು ಕೇವಲ 9.5 ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಹೋಂಡಾ ಸಿಟಿ ಹೈಬ್ರಿಡ್ 27.8 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ. ಕೆಲವು ವರದಿಗಳ ಪ್ರಕಾರ, ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯು 24.39 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯಲ್ಲಿ ಎಲೆಕ್ಟ್ರಿಕ್ ಡ್ರೈವ್, ಹೈಬ್ರಿಡ್ ಡ್ರೈವ್ ಮತ್ತು ಎಂಜಿನ್ ಡ್ರೈವ್ ಎಂಬ ಡ್ರೈವಿಂಗ್ ಮೋಡ್‌ಗಳನ್ನು ಒಳಗೊಂಡಿರುತ್ತದೆ. ಇನ್ನು ಈ ಹೊಸ ಹೆಚ್‌ಆರ್-ವಿ ಎಸ್‍ಯುವಿಯು ನಾಲ್ಕು ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

Most Read Articles

Kannada
Read more on ಹೋಂಡಾ honda
English summary
2021 Honda HRV Patent Images Leak. Read In Kannada.
Story first published: Wednesday, February 10, 2021, 17:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X