ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಹೋಂಡಾ ಹೆಚ್‌ಆರ್-ವಿ ಎಸ್‌ಯುವಿ

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ ತನ್ನ ಹೆಚ್‌ಆರ್-ವಿ ಎಸ್‌ಯುವಿಯ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಜಪಾನ್ ಮಾರುಕಟ್ಟೆಯಲ್ಲಿ ಹೆಚ್‌ಆರ್-ವಿ ಎಸ್‌ಯುವಿಯನ್ನು ವೆಜೆಲ್ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗುತ್ತದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಹೋಂಡಾ ಹೆಚ್‌ಆರ್-ವಿ ಎಸ್‌ಯುವಿ

ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್‌ಆರ್-ವಿ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಹೊಸ ಹೆಚ್‌ಆರ್-ವಿ ಎಸ್‌ಯುವಿ ಹೈಬ್ರಿಡ್ ಎಂಜಿನ್‌ನೊಂದಿಗೆ ಬರಲಿದೆ ಎಂದು ಹೋಂಡಾ ಯುರೋಪ್ ಖಚಿತಪಡಿಸಿದೆ. ಯುರೋಪಿನ ಮಾರುಕಟ್ಟೆಗಳಲ್ಲಿ ನಿಯಮಿತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಸ್ಥಗಿತಗೊಳಿಸುವುದಾಗಿ ಹೋಂಡಾ ಈಗಾಗಲೇ ಹೇಳಿಕೊಂಡಿದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಹೋಂಡಾ ಹೆಚ್‌ಆರ್-ವಿ ಎಸ್‌ಯುವಿ

ಯುರೋಪಿನ ಮಾರುಕಟ್ಟೆಗಳಲ್ಲಿ ಹೋಂಡಾ ಕಂಪನಿಯು ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರ ಪರಿಚಯಿಸುತ್ತದೆ. ಹೊಸ ಹೆಚ್‌ಆರ್-ವಿ ಹೈಬ್ರಿಡ್ ಮಾದರಿಯು ಹೋಂಡಾ ಇ ಬ್ರ್ಯಾಂಡ್‌ನ ಮೊದಲ ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ ಆಗಲಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಹೋಂಡಾ ಹೆಚ್‌ಆರ್-ವಿ ಎಸ್‌ಯುವಿ

ನಂತರ ಇದೇ ಸಾಲಿಗೆ ಹೋಂಡಾ ಕಂಪನಿಯ ಸರಣಿಯಲ್ಲಿರುವ ಸಿಆರ್-ವಿ ಮತ್ತು ಜಾಝ್ ಕ್ರಾಸ್‌ಸ್ಟಾರ್ ಸೇರಲಿದೆ. 2021ರ ಹೆಚ್‌ಆರ್-ವಿ ಎಸ್‌ಯುವಿ ಇ:ಹೆಚ್‌ಇವಿಎಂದು ಕರೆಯಲ್ಪಡುವ ಹೈಬ್ರಿಡ್ ಸಿಸ್ಟಂ ಅನ್ನು ಹೊಂದಿರಲಿದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಹೋಂಡಾ ಹೆಚ್‌ಆರ್-ವಿ ಎಸ್‌ಯುವಿ

ಇದೇ ಹೈಬ್ರಿಡ್ ಸಿಸ್ಟಂ ಅನ್ನು ಹೋಂಡಾ ಸಿಆರ್-ವಿ ಮತ್ತು ಜಾಝ್ ಕ್ರಾಸ್‌ಸ್ಟಾರ್ ಮಾದರಿಗಳಿಗೆ ಅಳವಡಿಸಲಾಗುತ್ತದೆ. ಇನ್ನು ಹೋಂಡಾ ಸಿಟಿ ಹೈಬ್ರಿಡ್ ಅನ್ನು ಇದೇ ವರ್ಷದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಹೋಂಡಾ ಹೆಚ್‌ಆರ್-ವಿ ಎಸ್‌ಯುವಿ

ಹೋಂಡಾ ಭಾರತದಲ್ಲಿ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಹೆಚ್‌ಆರ್-ವಿ ಅನ್ನು ಪರಿಚಯಿಸಬಹುದೆಂದು ನಿರೀಕ್ಷಿಸಲಾಗಿದೆ. ಹೋಂಡಾ ಜಾಝ್ ಮತ್ತು ಸಿಟಿ ಹೈಬ್ರಿಡ್‌ಗಳು ಲೀಟರ್ ಐಎಂಎಂಡಿ (ಇಂಟೆಲಿಜೆಂಟ್-ಮಲ್ಟಿ ಮೋಡ್ ಡ್ರೈವ್) ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ,

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಹೋಂಡಾ ಹೆಚ್‌ಆರ್-ವಿ ಎಸ್‌ಯುವಿ

ಇದರೊಂದಿಗೆ ಪವರ್ ಫುಲ್ ಎಲೆಕ್ಟ್ರಿಕ್ ಮೋಟರ್ ಮತ್ತು ಲಿಥಿಯಂ-ಐಯಾನ್ ಬ್ಯಾಟರಿ ಅನ್ನು ಹೊಂದಿದೆ. ಈ ಹೈಬ್ರಿಡ್ ಸಿಸ್ಟಂ 109 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದು 26.7 ಕಿ.ಮೀ ನಷ್ಟು ಮೈಲೇಜ್ ನೀಡುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಹೋಂಡಾ ಹೆಚ್‌ಆರ್-ವಿ ಎಸ್‌ಯುವಿ

ಜಾಝ್ ಹೈಬ್ರಿಡ್‌ನಂತೆಯೇ, ಹೋಂಡಾ ಹೆಚ್‌ಆರ್-ವಿ ಎಸ್‍ಯುವಿಯು ಎಲೆಕ್ಟ್ರಿಕ್ ಡ್ರೈವ್, ಹೈಬ್ರಿಡ್ ಡ್ರೈವ್ ಮತ್ತು ಎಂಜಿನ್ ಡ್ರೈವ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿರುತ್ತದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಹೋಂಡಾ ಹೆಚ್‌ಆರ್-ವಿ ಎಸ್‌ಯುವಿ

ಹೊಸ ಹೋಂಡಾ ಹೆಚ್‌ಆರ್-ವಿ ಎಸ್‌ಯುವಿ ಯುರೋಪ್‌ ಮತ್ತು ಜಪಾನ್‌ ಮಾರುಕಟ್ಟೆಗಳಿಗಾಗಿ 2021ರ ಫೆಬ್ರವರಿ 18ರಂದು ಅನಾವರಣವಾಗಲಿದೆ. ಹೋಂಡಾ ಹೆಚ್‌ಆರ್-ವಿ ಹೈಬ್ರಿಡ್ ಮಾದರಿ ಕೂಪ್-ಕ್ರಾಸ್ಒವರ್ ಸ್ಟೈಲಿಂಗ್ ಅನ್ನು ಹೊಂದಿರುತ್ತದೆ.

ಬಿಡುಗಡೆಯಾಗಲಿದೆ ಅಧಿಕ ಮೈಲೇಜ್ ನೀಡುವ ಹೋಂಡಾ ಹೆಚ್‌ಆರ್-ವಿ ಎಸ್‌ಯುವಿ

ಇನ್ನು ಈ ಹೊಸ ಹೋಂಡಾ ಹೆಚ್‌ಆರ್-ವಿ ಮಾದರಿಯಲ್ಲಿ ಫ್ರೀಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಕನೆಕ್ಟಿವಿಟಿ ಕಾರು ತಂತ್ರಜ್ಞಾನ ಮತ್ತು ಸನ್‌ರೂಫ್ ಸೇರಿದಂತೆ ಹಲವಾರು ಪೀಚರ್ ಗಳನ್ನು ಹೊಂದಿರಲಿವೆ.

Most Read Articles

Kannada
Read more on ಹೋಂಡಾ honda
English summary
Honda HR-V 2021 To Get City’s Hybrid Engine. Read In Kannada.
Story first published: Wednesday, January 20, 2021, 20:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X