2021ರ ಕ್ರೆಟಾ ಬೆಸ್ ವೆರಿಯೆಂಟ್‌ನಲ್ಲಿ ಹಲವಾರು ಫೀಚರ್ಸ್‌ಗಳನ್ನು ಕಡಿತ ಮಾಡಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಶೀಘ್ರದಲ್ಲೇ ತನ್ನ ಜನಪ್ರಿಯ ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು 2021ರ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಆವೃತ್ತಿಯ ಬೆಸ್ ವೆರಿಯೆಂಟ್‌ನಲ್ಲಿ ಕಂಪನಿಯು ಹಲವಾರು ಫೀಚರ್ಸ್‌ಗಳನ್ನು ಕಡಿತಗೊಳಿಸಿದೆ.

2021ರ ಕ್ರೆಟಾ ಬೆಸ್ ವೆರಿಯೆಂಟ್‌ನಲ್ಲಿ ಹಲವಾರು ಫೀಚರ್ಸ್‌ಗಳನ್ನು ಕಡಿತ ಮಾಡಿದ ಹ್ಯುಂಡೈ

ಕ್ರೆಟಾ ಕಾರಿನ ಬೆಸ್ ವೆರಿಯೆಂಟ್ ಬೆಲೆಯನ್ನು ರೂ.10 ಲಕ್ಷ ದಾಟದಂತೆ ಮಾಡಲು ಬೆಸ್ ವೆರಿಯೆಂಟ್‌ನಲ್ಲಿ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಕಡಿತಗೊಳಿಸಲಾಗಿದ್ದರೆ ಮಧ್ಯಮ ಕ್ರಮಾಂಕದ ಮಾದರಿಗಳಲ್ಲಿ ಕಂಪನಿಯು ಹಲವು ಪ್ರೀಮಿಯಂ ಫೀಚರ್ಸ್‌ಗಳ ಜೊತೆಗೆ ಕಾರ್ ಕನೆಕ್ಟ್ ಟೆಕ್ನಾಲಜಿಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದ್ದು, ಶೀಘ್ರದಲ್ಲೇ ಹೊಸ ಕಾರು ಮಾರುಕಟ್ಟೆ ಪ್ರವೇಶಿಸಲು ಸಿದ್ದಗೊಳ್ಳುತ್ತಿದೆ.

2021ರ ಕ್ರೆಟಾ ಬೆಸ್ ವೆರಿಯೆಂಟ್‌ನಲ್ಲಿ ಹಲವಾರು ಫೀಚರ್ಸ್‌ಗಳನ್ನು ಕಡಿತ ಮಾಡಿದ ಹ್ಯುಂಡೈ

2020ರ ಮಾರ್ಚ್‌ನಲ್ಲಿ ಬಿಡುಗಡೆಯಾಗಿದ್ದ ನ್ಯೂ ಜನರೇಷನ್ ಕ್ರೆಟಾ ಮಾದರಿಯು ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ನ್ಯೂ ಜನರೇಷನ್ ಮಾದರಿಯ ಫೇಸ್‌ಲಿಫ್ಟ್ ಮಾದರಿಯು ಕೂಡಾ ಭಾರೀ ಬೇಡಿಕೆ ಪಡೆದುಕೊಳ್ಳಲಿದೆ.

2021ರ ಕ್ರೆಟಾ ಬೆಸ್ ವೆರಿಯೆಂಟ್‌ನಲ್ಲಿ ಹಲವಾರು ಫೀಚರ್ಸ್‌ಗಳನ್ನು ಕಡಿತ ಮಾಡಿದ ಹ್ಯುಂಡೈ

ಕ್ರೆಟಾ ಬೆಸ್ ವೆರಿಯೆಂಟ್‌ ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.99 ಲಕ್ಷ ಬೆಲೆ ಹೊಂದಿದ್ದು, ಇದೀಗ ಬಿಡುಗಡೆಯಾಗಲಿರುವ 2021ರ ಮಾದರಿಯು ಕೂಡಾ ಸದ್ಯ ಮಾರುಕಟ್ಟೆಯಲ್ಲಿರುವ ಬೆಲೆ ಮಾದರಿಯಲ್ಲೇ ಬಿಡುಗಡೆಯಾಗಲಿದ್ದರೂ ಕೆಲವು ಪ್ರೀಮಿಯಂ ಫೀಚರ್ಸ್ ಕಳೆದುಕೊಳ್ಳಲಿದೆ.

2021ರ ಕ್ರೆಟಾ ಬೆಸ್ ವೆರಿಯೆಂಟ್‌ನಲ್ಲಿ ಹಲವಾರು ಫೀಚರ್ಸ್‌ಗಳನ್ನು ಕಡಿತ ಮಾಡಿದ ಹ್ಯುಂಡೈ

ಬೆಸ್ ವೆರಿಯೆಂಟ್‌ನಲ್ಲಿ ಹ್ಯುಂಡೈ ಕಂಪನಿಯು ಆಟೋಮ್ಯಾಟಿಕ್ ಬದಲಾಗಿ ಮ್ಯಾನುವಲ್ ಆಗಿ ಹೊಂದಾಣಿಕೆ ಮಾಡಬಹುದಾದ ರಿಯರ್ ವ್ಯೂ ಮಿರರ್ ನೀಡಲಾಗಿದ್ದು, ಇದರ ಜೊತೆಗೆ ರಿಯರ್ ವ್ಯೂ ಮಿರರ್ ನೀಡಲಾಗಿದ್ದ ಟರ್ನ್ ಇಂಡಿಕೇಟರ್ ಸೌಲಭ್ಯ ಸೇರಿದಂತೆ ಕ್ಯಾಬಿನ್‌ನಲ್ಲೂ ಕೂಡಾ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ಆಟೋಮ್ಯಾಟಿಕ್ ಬದಲಾಗಿ ಮ್ಯಾನುವಲ್ ಫೀಚರ್ಸ್ ಸೇರಿಸಲಾಗಿದೆ.

2021ರ ಕ್ರೆಟಾ ಬೆಸ್ ವೆರಿಯೆಂಟ್‌ನಲ್ಲಿ ಹಲವಾರು ಫೀಚರ್ಸ್‌ಗಳನ್ನು ಕಡಿತ ಮಾಡಿದ ಹ್ಯುಂಡೈ

ಆದರೆ ಕ್ರೆಟಾ ಕಾರಿನ ಮಧ್ಯಂತರ ವೆರಿಯೆಂಟ್‌ಗಳು ಗ್ರಾಹಕರ ಬೇಡಿಕೆಯೆಂತೆ ಹೊಸ ಮಾದರಿಯಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದ್ದು, ಹೊಸ ಕ್ರೆಟಾ ಕಾರು ಪ್ರಸ್ತುತ ಮಾದರಿಗಿಂತಲೂ 2021ರ ಮಾದರಿಯೊಂದಿಗೆ ಮತ್ತಷ್ಟು ದುಬಾರಿ ಬೆಲೆ ಪಡೆದುಕೊಳ್ಳಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

2021ರ ಕ್ರೆಟಾ ಬೆಸ್ ವೆರಿಯೆಂಟ್‌ನಲ್ಲಿ ಹಲವಾರು ಫೀಚರ್ಸ್‌ಗಳನ್ನು ಕಡಿತ ಮಾಡಿದ ಹ್ಯುಂಡೈ

ಕ್ರೆಟಾ ಕಂಪ್ಯಾಕ್ಟ್ ಎಸ್‌ಯವಿ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಬೆಲೆಯು ರೂ. 9.99 ಲಕ್ಷದಿಂದ ಟಾಪ್ ಎಂಡ್ ಕಾರಿನ ಬೆಲೆಯು ರೂ.17.62 ಲಕ್ಷ ಬೆಲೆ ಹೊಂದಿದ್ದು, ನ್ಯೂ ಜನರೇಷನ್ ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಕಾರು ಗ್ರಾಹಕರ ಬೇಡಿಕೆಯೆಂತೆ ಒಟ್ಟು 5 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

2021ರ ಕ್ರೆಟಾ ಬೆಸ್ ವೆರಿಯೆಂಟ್‌ನಲ್ಲಿ ಹಲವಾರು ಫೀಚರ್ಸ್‌ಗಳನ್ನು ಕಡಿತ ಮಾಡಿದ ಹ್ಯುಂಡೈ

ಹೊಸ ಎಮಿಷನ್ ವೈಶಿಷ್ಟ್ಯತೆಯ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಹೊಂದಿದ್ದು, ಆಕರ್ಷಕ ಬೆಲೆ, ಬಲಿಷ್ಠ ಎಂಜಿನ್ ಆಯ್ಕೆ ಮತ್ತು ವಿನೂತನ ವಿನ್ಯಾಸದೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

2021ರ ಕ್ರೆಟಾ ಬೆಸ್ ವೆರಿಯೆಂಟ್‌ನಲ್ಲಿ ಹಲವಾರು ಫೀಚರ್ಸ್‌ಗಳನ್ನು ಕಡಿತ ಮಾಡಿದ ಹ್ಯುಂಡೈ

ಕ್ರೆಟಾ ಕಾರು ಭಾರತದಲ್ಲಿ ಇದುವರೆಗೆ ಬರೋಬ್ಬರಿ 5 ಲಕ್ಷ ಯುನಿಟ್ ಮಾರಾಟಗೊಳ್ಳುವ ಮೂಲಕ ಹ್ಯುಂಡೈ ಕಂಪನಿಗೆ ಭಾರೀ ಪ್ರಮಾಣದ ಆದಾಯ ತಂದುಕೊಟ್ಟಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ 2021ರ ಮಾದರಿಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Hyundai Creta E Variant With Manual ORVM Arrives At Dealer. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X