ಸಿ‌ಎನ್‌ಜಿ ಕಿಟ್'ನೊಂದಿಗೆ ಮಾಡಿಫೈಗೊಂಡ ಹೊಸ ಹ್ಯುಂಡೈ ಐ 20 ಕಾರು

ಭಾರತದಲ್ಲಿ ಹೆಚ್ಚು ಮಾರಾಟವಾಗುವ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಹ್ಯುಂಡೈ ಐ 20 ಕೂಡ ಒಂದು. ಹ್ಯುಂಡೈ ಐ 20 ಕಾರು ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಬಲೆನೊ, ಟಾಟಾ ಆಲ್ಟ್ರೋಜ್, ಫೋಕ್ಸ್‌ವ್ಯಾಗನ್ ಪೊಲೊ ಹಾಗೂ ಹೋಂಡಾ ಜಾಝ್'‌ನಂತಹ ಇತರ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಸಿ‌ಎನ್‌ಜಿ ಕಿಟ್'ನೊಂದಿಗೆ ಮಾಡಿಫೈಗೊಂಡ ಹೊಸ ಹ್ಯುಂಡೈ ಐ 20 ಕಾರು

ಆದರೂ ಐ 20 ಕಾರು ಗಮನಾರ್ಹ ಸಂಖ್ಯೆಯ ಗ್ರಾಹಕರನ್ನು ಹೊಂದಿದೆ. ಹೊಸ ತಲೆಮಾರಿನ ಹ್ಯುಂಡೈ ಐ 20 ಕಾರ್ ಅನ್ನು ಕಳೆದ ವರ್ಷ ಭಾರತದಲ್ಲಿ ಬಿಡುಗಡೆಗೊಳಿಸಲಾಯಿತು. ಭಾರತದ ಬಹುತೇಕ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ರೂ.100 ಗಡಿ ದಾಟಿದೆ. ಈ ಕಾರಣಕ್ಕೆ ಬಹುತೇಕ ಗ್ರಾಹಕರು ಹೊಸ ಕಾರು ಖರೀದಿಸುವಾಗ ಆ ಕಾರಿನ ಮೈಲೇಜ್ ಅನ್ನು ಪರಿಗಣಿಸುತ್ತಾರೆ.

ಸಿ‌ಎನ್‌ಜಿ ಕಿಟ್'ನೊಂದಿಗೆ ಮಾಡಿಫೈಗೊಂಡ ಹೊಸ ಹ್ಯುಂಡೈ ಐ 20 ಕಾರು

ಪೆಟ್ರೋಲ್ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಕೆಲವು ಕಾರು ಮಾಲೀಕರು ತಮ್ಮ ಕಾರುಗಳಲ್ಲಿ ಸಿಎನ್‌ಜಿ ಕಿಟ್ ಅಳವಡಿಸಿಕೊಳ್ಳುತ್ತಿದ್ದಾರೆ. ಈಗ ಹ್ಯುಂಡೈ ಐ 20 ಕಾರೊಂದನ್ನು ಸಿಎನ್‌ಜಿ ಕಿಟ್'ನೊಂದಿಗೆ ಮಾಡಿಫೈ ಮಾಡಲಾಗಿದೆ.

ಸಿ‌ಎನ್‌ಜಿ ಕಿಟ್'ನೊಂದಿಗೆ ಮಾಡಿಫೈಗೊಂಡ ಹೊಸ ಹ್ಯುಂಡೈ ಐ 20 ಕಾರು

ಈ ಕಾರಿಗೆ ಸಂಬಂಧಿಸಿದ ವೀಡಿಯೊವನ್ನು ಸಿಎನ್‌ಜಿ ಮಾರುತಿ ಆಟೋಗ್ಯಾಸ್ ಸಿಎನ್‌ಜಿ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಮಾರುತಿ ಆಟೋ ಗ್ಯಾಸ್ ಕಾರು ಗ್ಯಾರೇಜ್ ಆಗಿದ್ದು ಸಿಎನ್‌ಜಿ ಕಿಟ್'ಗಳನ್ನು ಕಾರುಗಳಲ್ಲಿ ಅಳವಡಿಸುತ್ತದೆ.

ಸಿ‌ಎನ್‌ಜಿ ಕಿಟ್'ನೊಂದಿಗೆ ಮಾಡಿಫೈಗೊಂಡ ಹೊಸ ಹ್ಯುಂಡೈ ಐ 20 ಕಾರು

ಈ ಗ್ಯಾರೇಜ್ ಭಾರತದಲ್ಲಿ ಇಟಲಿಯ ಸಾವೊಲಿ ಸಿಎನ್‌ಜಿ ಪ್ಯಾಕೇಜ್'ಗಳನ್ನು ಅಧಿಕೃತವಾಗಿ ವಿತರಿಸುತ್ತದೆ. ಹ್ಯುಂಡೈ ಐ 20 ಮಾದರಿಯನ್ನು ಪೆಟ್ರೋಲ್ ಎಂಜಿನ್ ಹಾಗೂ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ.

ಸಿ‌ಎನ್‌ಜಿ ಕಿಟ್'ನೊಂದಿಗೆ ಮಾಡಿಫೈಗೊಂಡ ಹೊಸ ಹ್ಯುಂಡೈ ಐ 20 ಕಾರು

ಆದರೆ ಈ ಕಾರ್ ಅನ್ನು ಸಿಎನ್‌ಜಿ ಆಯ್ಕೆಯಲ್ಲಿ ಮಾರಾಟ ಮಾಡುವುದಿಲ್ಲ. ಸಿಎನ್‌ಜಿ ಕಿಟ್ ಅಳವಡಿಸಲಾದ ಈ ಐ 20 ಕಾರು ಸ್ಪೋರ್ಟ್ಸ್ ಮಾದರಿಯಾಗಿದೆ.ಈ ಕಾರಿನಲ್ಲಿ ಸಾವೊಲಿ ಬೋರಾ ಎಸ್ 32 ಸ್ಕ್ವೇರ್ ಸಿಎನ್‌ಜಿ ಪ್ಯಾಕೇಜ್ ಅಳವಡಿಸಲಾಗಿದೆ.

ಸಿ‌ಎನ್‌ಜಿ ಕಿಟ್'ನೊಂದಿಗೆ ಮಾಡಿಫೈಗೊಂಡ ಹೊಸ ಹ್ಯುಂಡೈ ಐ 20 ಕಾರು

ಈ ಕಾರಿನಲ್ಲಿ ವೈರ್, ಗ್ಯಾಸ್ ಪೈಪ್‌, ಇಂಜೆಕ್ಟರ್‌ಗಳನ್ನು ಒಳಗೊಂಡಿರುವ ಕಿಟ್ ಅನ್ನು ಕಾರಿನ ಬಾನೆಟ್ ಅಡಿಯಲ್ಲಿ ಆಕರ್ಷಕವಾಗಿ ಅಳವಡಿಸಿರುವುದನ್ನು ವೀಡಿಯೊದಲ್ಲಿ ಕಾಣಬಹುದು.

ಈ ಸಿಎನ್‌ಜಿ ಕಿಟ್ ಒಟ್ಟು 8 ಇಂಜೆಕ್ಟರ್‌ಗಳನ್ನು ಹೊಂದಿದೆ. 4 ಸಿಲಿಂಡರ್ ಎಂಜಿನ್ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ 4 ಇಂಜೆಕ್ಟರ್‌ಗಳನ್ನು ಸರಬರಾಜು ಮಾಡಲಾಗುತ್ತದೆ. ಆದರೆ ಈ ಕಾರಿನಲ್ಲಿ 8 ಇಂಜೆಕ್ಟರ್‌ಗಳನ್ನು ಅಳವಡಿಸಿರುವುದು ವಿಶೇಷ.

ಸಿ‌ಎನ್‌ಜಿ ಕಿಟ್'ನೊಂದಿಗೆ ಮಾಡಿಫೈಗೊಂಡ ಹೊಸ ಹ್ಯುಂಡೈ ಐ 20 ಕಾರು

ಇದರಿಂದ ಈ ಸಿಎನ್‌ಜಿ ಕಾರಿನಲ್ಲಿ ಎಲೆಕ್ಟ್ರಿಕ್ ಸಪ್ಲೈ ಸಹ ಉತ್ತಮವಾಗಿರುತ್ತದೆ. ಪೆಟ್ರೋಲ್ ವಾಹನಗಳಿಗೆ ಹೋಲಿಸಿದರೆ ಸಿಎನ್‌ಜಿ ವಾಹನಗಳು ಸ್ವಲ್ಪ ಹೆಚ್ಚು ಟ್ರಾಕ್ಷನ್ ಹೊಂದಿರುತ್ತವೆ. ಇಷ್ಟು ದೊಡ್ಡ ಸಂಖ್ಯೆಯ ಇಂಜೆಕ್ಟರ್‌ಗಳನ್ನು ನೀಡುವ ಮೂಲಕ ಇದನ್ನು ತಪ್ಪಿಸಬಹುದು.

ಚಿತ್ರ ಕೃಪೆ: ಸಿ‌ಎನ್‌ಜಿಮಾರುತಿಆಟೋಗ್ಯಾಸ್ ಸಿ‌ಎನ್‌ಜಿ

Most Read Articles

Kannada
English summary
New Hyundai i20 car fitted with CNG kit. Read in Kannada.
Story first published: Wednesday, June 16, 2021, 19:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X